Paytm IPO: ಪೇಟಿಎಂ ಷೇರು ವಿತರಣೆ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ? ಇಲ್ಲಿವೆ ವಿವಿಧ ವಿಧಾನಗಳು
Paytm IPO Share Allotment: ಪೇಟಿಎಂ ಐಪಿಒ ಷೇರು ವಿತರಣೆ ಸ್ಥಿತಿಗತಿಯನ್ನು ಪರಿಶೀಲಿಸುವುದು ಹೇಗೆ? ಅದಕ್ಕಾಗಿ ಇರುವ ವಿವಿಧ ವಿಧಾನಗಳ ವಿವರಣೆ ಈ ಲೇಖನದಲ್ಲಿದೆ.
ಪೇಟಿಎಂ (Paytm) ಆಪರೇಟರ್ ಒನ್ 97 ಕಮ್ಯುನಿಕೇಷನ್ಸ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಬುಧವಾರ (ನವೆಂಬರ್ 10, 2021) ಮುಕ್ತಾಯಗೊಂಡಿದೆ. 18,300 ಕೋಟಿ ರೂಪಾಯಿ ಮೌಲ್ಯದ ದೇಶದ ಅತಿದೊಡ್ಡ ಐಪಿಒ 1.89 ಪಟ್ಟು ಸಬ್ಸ್ಕ್ರೈಬ್ ಆಗಿದೆ. ಮುಖ್ಯವಾಗಿ ಅರ್ಹ ಸಾಂಸ್ಥಿಕ ಖರೀದಿದಾರರರಿಗೆ ಮೀಸಲಿಟ್ಟ ಷೇರುಗಳನ್ನು 2.79 ಪಟ್ಟು ಖರೀದಿಸಿದ್ದಾರೆ. ಪೇಟಿಎಂ ಐಪಿಒ ಷೇರು ಹಂಚಿಕೆಯನ್ನು ನವೆಂಬರ್ 15ರಂದು ಘೋಷಿಸಲಾಯಿತು. ರೀಟೇಲ್ ಹೂಡಿಕೆದಾರರ ಕಾಯ್ದಿರಿಸಿದ ಭಾಗವು ಶೇ 1.66ರಷ್ಟು ಸಬ್ಸ್ಕ್ರೈಬ್ ಆಗಿದ್ದು, ಸಾಂಸ್ಥಿಕವಲ್ಲದ ಹೂಡಿಕೆದಾರರು ಶೇ 24ರಷ್ಟು ಸಬ್ಸ್ಕ್ರಿಪ್ಷನ್ ಕಂಡಿದ್ದಾರೆ. ಒನ್ 97 ಕಮ್ಯುನಿಕೇಷನ್ಸ್ ಷೇರು ಹಂಚಿಕೆಯ ಆಧಾರವನ್ನು ಅಂತಿಮಗೊಳಿಸಿದ್ದು, ಷೇರುಗಳನ್ನು ಹಂಚಿಕೆ ಮಾಡಲು ಪ್ರಾರಂಭಿಸಿದೆ. ಹೂಡಿಕೆದಾರರು ತಮ್ಮ ಷೇರು ಹಂಚಿಕೆಯನ್ನು ಆನ್‌ಲೈನ್‌ನಲ್ಲಿ ಬಿಎಸ್‌ಇ, ಎನ್‌ಎಸ್‌ಇ ಅಥವಾ ಐಪಿಒ ರಿಜಿಸ್ಟ್ರಾರ್‌ನ ವೆಬ್‌ಸೈಟ್‌ನಲ್ಲಿ ಸುಲಭವಾಗಿ ಪರಿಶೀಲಿಸಬಹುದು.
ಈ ವಿತರಣೆಯ ರಿಜಿಸ್ಟ್ರಾರ್ ಆಗಿರುವ ಲಿಂಕ್ ಇನ್‌ಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಆನ್‌ಲೈನ್ ಪೋರ್ಟಲ್‌ನಲ್ಲಿ ಹಂಚಿಕೆ ಸ್ಥಿತಿಯನ್ನು ಪರಿಶೀಲಿಸಬಹುದು. ಅಂದಹಾಗೆ ಈ ರಿಜಿಸ್ಟ್ರಾರ್ ಸೆಬಿ ನೋಂದಾಯಿತ ಸಂಸ್ಥೆಯಾಗಿದ್ದು, ಅದರಂತೆ ಕಾರ್ಯ ನಿರ್ವಹಿಸಲು ಅರ್ಹವಾಗಿದೆ. ಇದು ಎಲ್ಲ ಅಪ್ಲಿಕೇಷನ್‌ಗಳನ್ನು ಎಲೆಕ್ಟ್ರಾನಿಕ್ ಆಗಿ ಪ್ರೊಸೆಸ್ ಮಾಡುತ್ತದೆ ಮತ್ತು ಪ್ರಾಸ್ಪೆಕ್ಟಸ್ ಪ್ರಕಾರ ಹಂಚಿಕೆ ಪ್ರಕ್ರಿಯೆಯನ್ನು ನಡೆಸುತ್ತದೆ. ಯಶಸ್ವಿ ಅರ್ಜಿದಾರರಿಗೆ ಷೇರುಗಳ ಎಲೆಕ್ಟ್ರಾನಿಕ್ ಕ್ರೆಡಿಟ್ ಅಪ್ಡೇಟ್, ರವಾನೆ ಮತ್ತು ಮರುಪಾವತಿಗಳನ್ನು ಅಪ್‌ಲೋಡ್ ಮಾಡಲು ಮತ್ತು ಇಶ್ಯೂ ಪೂರ್ಣಗೊಂಡ ನಂತರ ಹೂಡಿಕೆದಾರ ಎಲ್ಲ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಟೈಮ್‌ಲೈನ್‌ಗಳನ್ನು ಅನುಸರಿಸಲು ಇದು ಕಾರಣವಾಗಿದೆ.
ಪೇಟಿಎಂ ಷೇರು ಹಂಚಿಕೆ ಸ್ಥಿತಿಯನ್ನು ಐಪಿಒ ರಿಜಿಸ್ಟ್ರಾರ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸುವುದು ಹೇಗೆ? – ಲಿಂಕ್ ಇನ್‌ಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವೆಬ್ ಪೋರ್ಟಲ್‌ಗೆ ತೆರಳಬೇಕು – ಡ್ರಾಪ್‌ಬಾಕ್ಸ್‌ನಲ್ಲಿ ಐಪಿಒ ಅನ್ನು ಆಯ್ಕೆ ಮಾಡಿ, ಹಂಚಿಕೆಯನ್ನು ಅಂತಿಮಗೊಳಿಸಿದರೆ ಮಾತ್ರ ಹೆಸರು ಕಾಣಿಸುತ್ತದೆ – ಮೂರು ವಿಧಾನಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು: ಅಪ್ಲಿಕೇಷನ್ ಸಂಖ್ಯೆ, ಕ್ಲೈಂಟ್ ಐಡಿ ಅಥವಾ ಪ್ಯಾನ್ ಐಡಿ – ಅಪ್ಲಿಕೇಷನ್ ಪ್ರಕಾರದಲ್ಲಿ ASBA ಮತ್ತು non- ASBA ಮಧ್ಯೆ ಆಯ್ಕೆ ಮಾಡಬೇಕು – ಆಯ್ಕೆ ಮಾಡಿದ ವಿಧಾನದ ವಿವರಗಳನ್ನು ನಮೂದಿಸಬೇಕು. – ಕ್ಯಾಪ್ಚಾವನ್ನು ನಿಖರವಾಗಿ ಭರ್ತಿ ಮಾಡಬೇಕು – Submit ಎಂಬುದರ ಮೇಲೆ ಕ್ಲಿಕ್ ಮಾಡಬೇಕು ಪೇಟಿಎಂ ಹಂಚಿಕೆಯ ಸ್ಥಿತಿಯು ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಪೇಟಿಎಂ ಷೇರು ಹಂಚಿಕೆ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ? – ಬಿಎಸ್‌ಇ ವೆಬ್‌ಸೈಟ್‌ಗೆ ತೆರಳಬೇಕು – ಈಕ್ವಿಟಿ ಮತ್ತು ಇಶ್ಯೂ ಹೆಸರನ್ನು ಆಯ್ಕೆ ಮಾಡಬೇಕು (ಒಂದು 97 ಕಮ್ಯುನಿಕೇಷನ್ಸ್ ಲಿಮಿಟೆಡ್) – ಅಪ್ಲಿಕೇಷನ್ ಸಂಖ್ಯೆ ಮತ್ತು PAN ಸಂಖ್ಯೆಯನ್ನು ನಮೂದಿಸಬೇಕು – ‘ನಾನು ರೋಬೋಟ್ ಅಲ್ಲ’ ಆಯ್ಕೆಯನ್ನು ಪರಿಶೀಲಿಸಿ ಮತ್ತು ಅಪ್ಲಿಕೇಷನ್ ಸ್ಥಿತಿಯನ್ನು ತಿಳಿಯಲು Submit ಎಂಬುದರ ಮೇಲೆ ಕ್ಲಿಕ್ ಮಾಡಬೇಕು
ವಿತರಣೆ ಆದ ಅರ್ಜಿದಾರರು ತಮ್ಮ ಡಿಮ್ಯಾಟ್ ಖಾತೆಯಲ್ಲಿ ಷೇರುಗಳನ್ನು ಲಿಸ್ಟಿಂಗ್ ದಿನಾಂಕದಂದು, ಅಂದರೆ ನವೆಂಬರ್ 18ರಂದು ಪಡೆಯುತ್ತಾರೆ. ಹಂಚಿಕೆಯನ್ನು ಪಡೆಯದವರಿಗೆ ನವೆಂಬರ್ 16ರೊಳಗೆ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಮತ್ತು ಅರ್ಹ ಹೂಡಿಕೆದಾರರು ನವೆಂಬರ್ 17ರೊಳಗೆ ಡಿಮ್ಯಾಟ್ ಖಾತೆಗೆ ಷೇರುಗಳನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಅರ್ಜಿದಾರರಿಗೆ ಷೇರುಗಳನ್ನು ಹಂಚಿಕೆ ಮಾಡಿದರೆ, ಬ್ಯಾಂಕ್ ಖಾತೆಯಲ್ಲಿ ಷೇರುಗಳನ್ನು ಬ್ಲಾಕ್ ಮಾಡಿದಾಗ ಮತ್ತು ಅನ್‌ಬ್ಲಾಕ್ ಮಾಡಿದಾಗ ಸಂದೇಶವನ್ನು ಪಡೆಯುತ್ತಾರೆ. ಹಣವು ಬ್ಲಾಕ್ ಆದಲ್ಲಿ ಕೆಲವು ಷೇರುಗಳನ್ನು ಹಂಚಲಾಗಿದೆ ಎಂದರ್ಥ.
ಅನ್‌ಬ್ಲಾಕ್ ಆದ ಹಣವನ್ನು ಖಾತೆಗೆ ವರ್ಗಾಯಿಸಲಾಗುತ್ತದೆ. ಹೂಡಿಕೆದಾರರ ಖಾತೆಯಲ್ಲಿ ಬ್ಲಾಕ್ ಆದ ಐಪಿಒ ಮೊತ್ತವು ಸಾಮಾನ್ಯವಾಗಿ ಷೇರು ಹಂಚಿಕೆಯ ಒಂದು ದಿನದ ನಂತರ ಅಥವಾ ವ್ಯಾಲಿಡಿಟಿ ಅವಧಿಯ ಅಂತ್ಯದ ಮೊದಲು ಅನ್‌ಬ್ಲಾಕ್ ಆಗುತ್ತದೆ. ಯುಪಿಐ ಐಡಿ ಮೂಲಕ ಐಪಿಒ ಪಾವತಿಯನ್ನು ಕಡ್ಡಾಯಗೊಳಿಸುವಾಗ ಹೂಡಿಕೆದಾರರಿಗೆ ವ್ಯಾಲಿಡಿಟಿ ಅವಧಿಯನ್ನು ನೀಡಲಾಗುತ್ತದೆ, ಅದರ ಮೂಲಕ ಹಣವನ್ನು ವರ್ಗಾಯಿಸಲಾಗುತ್ತದೆ.
ಪೇಟಿಎಂ ಷೇರು ಲಿಸ್ಟಿಂಗ್ ದಿನಾಂಕ: ಪೇಟಿಎಂ ಷೇರುಗಳು ನವೆಂಬರ್ 18ರಿಂದ ಜಾರಿಗೆ ಬಿಎಸ್‌ಇ ಮತ್ತು ಎನ್ಎಸ್ಇನಲ್ಲಿ ವಹಿವಾಟು ಪ್ರಾರಂಭ ಆಗುವ ನಿರೀಕ್ಷೆಯಿದೆ.
ಪೇಟಿಎಂ ಐಪಿಒ ಗ್ರೇ ಮಾರ್ಕೆಟ್ ಪ್ರೀಮಿಯಂ (GMP): ಗ್ರೇ ಮಾರ್ಕೆಟ್ನಲ್ಲಿ ಪೇಟಿಎಂ ಷೇರುಗಳ ಪ್ರೀಮಿಯಂ ಹಿಂದಿನ ಶೇಕಡಾ 2.3 ರಿಂದ ಶೇ 1.4ಕ್ಕೆ ಕುಸಿದಿದೆ. ಐಪಿಒ ವಾಚ್‌ನ ಪ್ರಕಾರ, ಷೇರುಗಳು ಗ್ರೇ ಮಾರುಕಟ್ಟೆಯಲ್ಲಿ ರೂ 2,180ರ ಬೆಲೆಯಲ್ಲಿ ವಹಿವಾಟು ಮಾಡುತ್ತಿದೆ. ಅಂತಿಮ ಇಶ್ಯೂ ಬೆಲೆ 2,150 ರೂಪಾಯಿ.
ಇದನ್ನೂ ಓದಿ: ಪೇಟಿಎಂ ಕಂಪೆನಿಯ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಸೇರಿ 350 ಮಂದಿ ಆಗಲಿದ್ದಾರೆ ಕೋಟ್ಯಧಿಪತಿ