Aadhaar Card: ಆಧಾರ್​ ಕಾರ್ಡ್​ ಮೊಬೈಲ್ ನಂಬರ್​ ಅಪ್​ಡೇಟ್​ ಮಾಡಿದ್ದೀರಾ? ವಂಚನೆ ತಪ್ಪಿಸಲು ಹೀಗೆ ಮಾಡಿ

ಆಧಾರ್​ ಕಾರ್ಡ್​ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್​ಡೇಟ್​ ಮಾಡುವುದು ಹೇಗೆ ಎಂಬುದರ ಹಂತ ಹಂತವಾದ ವಿವರಣೆ ಇಲ್ಲಿದೆ. ವಂಚನೆಯನ್ನು ತಡೆಗಟ್ಟಲು ಇದು ಬಹಳ ಅತ್ಯಗತ್ಯ ಎಂಬುದರ ಹಂತಹಂತವಾದ ವಿವರ ಇಲ್ಲಿದೆ.

Aadhaar Card: ಆಧಾರ್​ ಕಾರ್ಡ್​ ಮೊಬೈಲ್ ನಂಬರ್​ ಅಪ್​ಡೇಟ್​ ಮಾಡಿದ್ದೀರಾ? ವಂಚನೆ ತಪ್ಪಿಸಲು ಹೀಗೆ ಮಾಡಿ
ಆಧಾರ್ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 07, 2021 | 12:11 PM

ಆಧಾರ್​ ಕಾರ್ಡ್​ ಬಳಕೆದಾರರೇ ನಿಮ್ಮ ಮೊಬೈಲ್ ಫೋನ್​ ಸಂಖ್ಯೆಯನ್ನು ಸದಾ ಅಪ್​ಡೇಟ್​ ಮಾಡಿಟ್ಟುಕೊಳ್ಳಿ ಎಂದು ಯೂನಿಕ್ ಐಡಿಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI) ಎಚ್ಚರಿಕೆ ನೀಡಿದೆ. ವಂಚಕರಿಂದ ಜಾಗ್ರತೆ ವಹಿಸುವಂತೆ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಮನವಿ ಮಾಡಲಾಗಿದೆ. ಆಧಾರ್ ಆನ್​ಲೈನ್ ಸೇವೆಗಳು ಲಭ್ಯ ಆಗುವುದಕ್ಕೆ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆ ಮುಖ್ಯವಾದದ್ದು. ಆದ್ದರಿಂದ ಆ ದಾಖಲೆಯಲ್ಲಿ ಇರುವಂತೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಷ್ಕರಣೆ ಮಾಡಿಟ್ಟುಕೊಳ್ಳಿ. ಒಂದು ವೇಳೆ ಆಧಾರ್ ಜತೆಗೆ ಫೋನ್​ ನಂಬರ್​ ಅನ್ನು ಸಲ್ಲಿಸಿಲ್ಲ ಎಂದಾದಲ್ಲಿ ಹತ್ತಿರದ ಪರ್ಮನೆಂಟ್ ಆಧಾರ್ ಸೆಂಟರ್​ಗೆ ಭೇಟಿ ನೀಡಬಹುದು. ಸೆಪ್ಟೆಂಬರ್ 20ನೇ ತಾರೀಕಿನಂದು ಸಂವಹನ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್​ನಿಂದ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಹೇಳಿರುವಂತೆ, ನಿಮ್ಮ ಆಧಾರ್​ನಲ್ಲಿ ಮೊಬೈಲ್​ ಸಂಖ್ಯೆ ಅಪ್​ಡೇಟ್​ ಆಗಿಟ್ಟುಕೊಳ್ಳಿ. ಸರಿಯಾದ ಮೊಬೈಲ್ ನಂಬರ್ ಅಥವಾ ಇಮೇಲ್ ಅಪ್​ಡೇಟ್ ಆಗಿದೆಯಾ ಎಂಬ ಬಗ್ಗೆ ನಿಮಗೇನಾದರೂ ಅನುಮಾನ ಇದ್ದಲ್ಲಿ ಈ ಲಿಂಕ್: https://resident.uidai.gov.in/verify-email-mobile ಮೂಲಕ ದೃಢಪಡಿಸಿಕೊಳ್ಳಿ ಎನ್ನಲಾಗಿದೆ.

ಆಧಾರ್​ ನೋಂದಣಿ ಸಮಯದಲ್ಲಿ ಬಳಕೆದಾರರು ನೀಡಿದ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಅಥವಾ ಇತ್ತೀಚಿನ ಆಧಾರ್ ಮಾಹಿತಿ ಅಪ್​ಡೇಟ್​ ಅನ್ನು ಆಧಾರ್​ ವೆಬ್​ಸೈಟ್​ನಲ್ಲಿ ದೃಢಪಡಿಸಿಕೊಳ್ಳಬಹುದು.

ಇಮೇಲ್ ಹಾಗೂ ಮೊಬೈಲ್ ಸಂಖ್ಯೆಯನ್ನು ದೃಢಪಡಿಸಿಕೊಳ್ಳುವುದಕ್ಕೆ ಅನುಸರಿಸಬೇಕಾದ ಹಂತಹಂತವಾದ ವಿವರಣೆ ಇಲ್ಲಿದೆ: ಹಂತ 1: UIDAI ಅಧಿಕೃತ ವೆಬ್​ಸೈಟ್ https://uidai.gov.in/ ಅಥವಾ ನೇರವಾಗಿ ಟೈಪ್ ಮಾಡಿ ಮತ್ತು https://resident.uidai.gov.in/verify-email-mobile.

ಹಂತ 2: ಅಧಿಕೃತ UIDAIಗೆ ತೆರಳಿ My Aadhaar ಮೇಲೆ ಕ್ಲಿಕ್ ಮಾಡಿ.

ಹಂತ 3: ಟ್ಯಾಬ್​ಗೆ ತೆರಳಿ ಆಧಾರ್​ ಸೇವೆಗಳನ್ನು ಓದಿಕೊಳ್ಳಿ ಮತ್ತು Verify Email/Mobile Number ಆಯ್ಕೆ ಮಾಡಿಕೊಳ್ಳಿ.

ಹಂತ 4: ಬಹಳ ಎಚ್ಚರಿಕೆಯಿಂದ ಹನ್ನೆರಡು ಆಧಾರ್ ಸಂಖ್ಯೆಯನ್ನು (UID) ನಮೂದಿಸಿ.

ಹಂತ 5: ಸರಿಯಾದ ಸಂಪರ್ಕ ಮಾಹಿತಿಯನ್ನು ಒದಗಿಸಿ (ಮೊಬೈಲ್ ಸಂಖ್ಯೆ ಅಥವಾ ಇಮೇಲ್)

ಹಂತ 6: Captcha ದೃಢೀಕರಣ ಸಂಪೂರ್ಣಗೊಳಿಸಿ.

ಹಂತ 7: ಈಗ ಕ್ಲಿಕ್ ಮಾಡಿ ಮತ್ತು ಒಟಿಪಿ ಆಯ್ಕೆ ಕಳಿಸಿ.

ಆಧಾರ್​ ಸಂಖ್ಯೆಯು 12 ಅಂಕಿಯದ್ದಾಗಿದ್ದು, UIDAIನಿಂದ ಭಾರತ ನಾಗರಿಕರಿಗೆ ವಿತರಿಸಲಾಗುತ್ತದೆ. ಆದರೆ ಅದಕ್ಕೂ ಮುಂಚೆ ಸಂಪೂರ್ಣ ದೃಢೀಕರಣ ಪ್ರಕ್ರಿಯೆಯನ್ನು ಖಾತ್ರಿಪಡಿಸಬೇಕಾಗುತ್ತದೆ. ವಯಸ್ಸು ಮತ್ತು ಲಿಂಗ ಈ ರೀತಿಯ ಭೇದ ಇಲ್ಲದೆ ಭಾರತದ ನಾಗರಿಕರು ಯಾರಾದರೂ ಆಧಾರ್ ಪಡೆದುಕೊಳ್ಳುವುದಕ್ಕೆ ನೋಂದಣಿ ಮಾಡಬಹುದು. ಕನಿಷ್ಠ ಮಟ್ಟದ ಬಯೋಮೆಟ್ರಿಕ್ ಮತ್ತು ಇತರ ಮಾಹಿತಿಯನ್ನು ಒದಗಿಸಿದರೆ ಸಾಕು. ಈ ಪ್ರಕ್ರಿಯೆಗೆ ಯಾವುದೇ ಶುಲ್ಕ ಇರುವುದಿಲ್ಲ.

ಇದನ್ನೂ ಓದಿ: Aadhaar card: ಆಧಾರ್​ ನೋಂದಣಿ, ಅಪ್​ಡೇಟ್​ಗೆ ಮಹತ್ವದ ಘೋಷಣೆ; ಕೇಂದ್ರಗಳ ಸಂಖ್ಯೆ ಹೆಚ್ಚಳ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ