Baal Aadhaar: ಮಕ್ಕಳಿಗೆ ಆಧಾರ್ ಕಾರ್ಡ್; ಯಾವ ವಯಸ್ಸಿನ ಮಕ್ಕಳಿಂದ ಬಯೋಮೆಟ್ರಿಕ್ಸ್ ಪಡೆಯಲಾಗುತ್ತೆ? ಏನಿವೆ ಕ್ರಮ, ಇತ್ಯಾದಿ ಡೀಟೇಲ್ಸ್

Baal Aadhaar details: ಐದು ವರ್ಷದೊಳಗಿನ ವಯಸ್ಸಿನ ಮಕ್ಕಳಿಗೂ ಆಧಾರ್ ಕಾರ್ಡ್ ಮಾಡಿಸಬಹುದು. ಬಾಲ್ ಆಧಾರ್ ಕಾರ್ಡ್ ನೀಡಲಾಗುತ್ತದೆ. ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ ಅನ್ನು ಆ ವೇಳೆ ಪಡೆಯಲಾಗುವುದಿಲ್ಲ. ಐದು ವರ್ಷ ದಾಟಿದ ಬಳಿಕ ಅಪ್​ಡೇಟ್ ಮಾಡಬೇಕಾಗುತ್ತದೆ. ಬಾಲ್ ಆಧಾರ್ ಕಾರ್ಡ್ ಮಾಡುವ ಕ್ರಮದ ಬಗ್ಗೆ ಮಾಹಿತಿ ಇಲ್ಲಿದೆ.

Baal Aadhaar: ಮಕ್ಕಳಿಗೆ ಆಧಾರ್ ಕಾರ್ಡ್; ಯಾವ ವಯಸ್ಸಿನ ಮಕ್ಕಳಿಂದ ಬಯೋಮೆಟ್ರಿಕ್ಸ್ ಪಡೆಯಲಾಗುತ್ತೆ? ಏನಿವೆ ಕ್ರಮ, ಇತ್ಯಾದಿ ಡೀಟೇಲ್ಸ್
ಬಾಲ್ ಆಧಾರ್ ಕಾರ್ಡ್
Follow us
|

Updated on: Aug 26, 2024 | 1:25 PM

ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಯಾವುದೇ ವಯಸ್ಸಿನವರೂ ಆಧಾರ್ ಕಾರ್ಡ್ ಮಾಡಿಸಬಹುದು. ಒಂದು ವರ್ಷದೊಳಗಿನ ಮಗುವಿಗೂ ಆಧಾರ್ ಕಾರ್ಡ್ ಮಾಡಿಸಬಹುದು. ಬೇರೆ ಬೇರೆ ವಯೋಮಾನದವರಿಗೆ ಆಧಾರ್ ಎನ್ರೋಲ್ಮೆಂಟ್ ಮತ್ತು ಅಪ್​ಗ್ರೆಡೇಶನ್ ವಿಧಾನದಲ್ಲಿ ಬದಲಾವಣೆ ಇರುತ್ತದೆ. 18 ವರ್ಷ ಮೇಲ್ಪಟ್ಟ ವಯಸ್ಕ ಭಾರತೀಯರಿಗೆ ಬೇರೆ ರೀತಿಯ ಕ್ರಮ ಇರುತ್ತದೆ. 5 ವರ್ಷದೊಳಗಿನವರಿಗೆ ಮತ್ತು 5ರಿಂದ 18 ವರ್ಷ ವಯೋಮಾನದವರಿಗೆ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ.

ಸಣ್ಣ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್ ನೀಡಲಾಗುತ್ತದೆ. ಇದನ್ನು ಉಚಿತವಾಗಿ ಮಾಡಿಸಬಹುದು. ಐದು ವರ್ಷದೊಳಗಿನ ಮಕ್ಕಳಿಗೆ ಬಾಲ್ ಆಧಾರ್ ಮಾಡಿಸಿದಾಗ ಅವರಿಂದ ಫಿಂಗರ್ ಪ್ರಿಂಟ್, ಕಣ್ಣಿನ ಸ್ಕ್ಯಾನ್ (ಐರಿಸ್), ಫೋಟೋ ಇತ್ಯಾದಿ ಪಡೆಯಲಾಗುವುದಿಲ್ಲ. ಅವರ ವಯಸ್ಸು 5 ವರ್ಷದ ದಾಟಿದಾಗ ಆಧಾರ್ ಕಾರ್ಡ್​ಗೆ ಬಯೋಮೆಟ್ರಿಕ್ಸ್ ಡಾಟಾ ಸೇರಿಸಬೇಕಾಗುತ್ತದೆ. ಐದರಿಂದ ಏಳು ವರ್ಷ ವಯಸ್ಸಿನಲ್ಲಿ ಉಚಿತವಾಗಿ ಬಯೋಮೆಟ್ರಿಕ್ ಅಪ್​ಡೇಟ್ ಮಾಡಬಹುದು. ಹಾಗೆಯೇ, 15ರಿಂದ 17 ವರ್ಷ ವಯಸ್ಸಿನಲ್ಲೂ ಉಚಿತವಾಗಿ ಅಪ್​ಡೇಟ್ ಮಾಡಿಸಬಹುದು.

ಇದನ್ನೂ ಓದಿ: ಏಕೀಕೃತ ಪೆನ್ಷನ್ ಸ್ಕೀಮ್; ಯಾವಾಗಿಂದ ಜಾರಿ? 2004ಕ್ಕೆ ಮುಂಚೆ ಇದ್ದ ಒಪಿಎಸ್​ಗಿಂತ ಇದು ಎಷ್ಟು ಭಿನ್ನ?

ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್ ಪಡೆಯುವ ಕ್ರಮಗಳು

  • ಸಮೀಪದ ಆಧಾರ್ ಎನ್​ರೋಲ್ಮೆಂಟ್ ಸೆಂಟರ್​ಗೆ ಹೋಗಿ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಬಹುದು. ಆದರೆ, ಮಗುವಿನ ತಂದೆ ಅಥವಾ ತಾಯಿ ಅಥವಾ ಯಾವುದೇ ಪಾಲಕರು ತಮ್ಮ ಆಧಾರ್ ಕಾರ್ಡ್ ಅನ್ನು ಒದಗಿಸಬೇಕು.
  • ಎನ್​ರೋಲ್ಮೆಂಟ್ ಸೆಂಟರ್​ನಲ್ಲಿ ಬಾಲ್ ಆಧಾರ್ ಕಾರ್ಡ್ ಮಾಡಿಸಲು ಫಾರ್ಮ್ ಕೊಡಲಾಗುತ್ತದೆ. ಅದನ್ನು ಭರ್ತಿ ಮಾಡಬೇಕು.
  • ಮಗುವಿನ ಜನನ ಪ್ರಮಾಣಪತ್ರ ಒದಗಿಸಬೇಕು.
  • ಮಗುವಿನ ಫೋಟೋ ಪಡೆಯಲಾಗುತ್ತದೆ.
  • ಪೋಷಕರ ಆಧಾರ್ ಕಾರ್ಡ್ ಅನ್ನು ಬಾಲ್ ಆಧಾರ್ ಕಾರ್ಡ್​ಗೆ ಲಿಂಕ್ ಮಾಡಲಾಗುತ್ತದೆ.

ಇದನ್ನೂ ಓದಿ: ಮೂವತ್ತು ವರ್ಷ ಮುಗಿಸಿದ ಮ್ಯೂಚುವಲ್ ಫಂಡ್​ಗಳ ಸಾಧನೆ ಹೇಗೆ? ತಿಂಗಳಿಗೆ ಕೇವಲ 1,000 ಹೂಡಿಕೆ ಈಗ ಆಗಿದೆ 2 ಕೋಟಿ ರೂ

ಎನ್​ರೋಲ್ಮೆಂಟ್ ಸೆಂಟರ್​ನಲ್ಲಿ ಈ ಪ್ರಕ್ರಿಯೆ ಮುಗಿದಂತೆ. ಇದಾದ ಬಳಿಕ ನಿಗದಿತ ದಿನದಲ್ಲಿ ಬಾಲ್ ಆಧಾರ್ ಕಾರ್ಡ್ ಅನ್ನು ನೊಂದಾಯಿತ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುತ್ತದೆ.

ಬಾಲ್ ಆಧಾರ್ ಕಾರ್ಡ್​ಗೆ ಲಿಂಕ್ ಆದ ಪೋಷಕರ ಆಧಾರ್ ಕಾರ್ಡ್​ನಲ್ಲಿರುವ ಮೊಬೈಲ್ ನಂಬರ್ ಮತ್ತು ಇಮೇಲ್​ಗೆ ನೋಟಿಫಿಕೇಶನ್ ಬರುತ್ತದೆ.

ಬಾಲ್ ಆಧಾರ್ ಕಾರ್ಡ್​ನಲ್ಲಿ ಆಧಾರ್ ನಂಬರ್, ಹೆಸರು, ವಿಳಾಸ, ಪೋಷಕರ ಹೆಸರು ಇತ್ಯಾದಿ ಡೆಮಾಗ್ರಫಿಕ್ ವಿವರ ಇರುತ್ತದೆ. ಕ್ಯೂಆರ್ ಕೋಡ್ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ