Rule Change from 1 September 2024: ಸೆಪ್ಟಂಬರ್ ತಿಂಗಳಲ್ಲಿ ಹಣಕಾಸು ವ್ಯತ್ಯಯಕ್ಕೆ ಕಾರಣವಾಗುವ ಆಧಾರ್, ಎಲ್​ಪಿಜಿ, ಡಿಎ ಇತ್ಯಾದಿಯಲ್ಲಿ ಆಗುವ ಬದಲಾವಣೆಗಳು

LPG Cylinder Rate hike to credit card rules, here are few changes: ಪ್ರತೀ ತಿಂಗಳ ಆರಂಭದಲ್ಲಿ ಎಲ್​ಪಿಜಿ ಸಿಲಿಂಡರ್ ಬೆಲೆಗಳ ಪರಿಷ್ಕರಣೆ ಆಗುತ್ತದೆ. ಈ ಬಾರಿ ಸಿಎನ್​ಜಿ, ಎಟಿಎಫ್ ಇಂಧನಗಳ ಬೆಲೆಗಳಲ್ಲಿ ಬದಲಾವಣೆ ಆಗಬಹುದು. ಸೆಪ್ಟಂಬರ್ ತಿಂಗಳಲ್ಲಿ ಡಿಎ ಹೆಚ್ಚಳ ಆಗುವ ನಿರೀಕ್ಷೆ ಇದೆ. ಕೆಲ ಕ್ರೆಡಿಟ್ ಕಾರ್ಡ್ ಕಂಪನಿಗಳು ನಿಯಮ ಬದಲಾಯಿಸುತ್ತಿವೆ. ಈ ಬಗ್ಗೆ ಒಂದು ವರದಿ.

Rule Change from 1 September 2024: ಸೆಪ್ಟಂಬರ್ ತಿಂಗಳಲ್ಲಿ ಹಣಕಾಸು ವ್ಯತ್ಯಯಕ್ಕೆ ಕಾರಣವಾಗುವ ಆಧಾರ್, ಎಲ್​ಪಿಜಿ, ಡಿಎ ಇತ್ಯಾದಿಯಲ್ಲಿ ಆಗುವ ಬದಲಾವಣೆಗಳು
ನಿಯಮ ಬದಲಾವಣೆಗಳು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 26, 2024 | 4:00 PM

ನವದೆಹಲಿ, ಆಗಸ್ಟ್ 26: ಈಗ ತಿಂಗಳ ಕೊನೆಯ ವಾರ ಚಾಲ್ತಿಯಲ್ಲಿದೆ. ಐದಾರು ದಿನಗಳಲ್ಲಿ ಸೆಪ್ಟಂಬರ್ ತಿಂಗಳು ಶುರವಾಗಲಿದೆ. ಬೆಲೆಗಳಲ್ಲಿ ಬದಲಾವಣೆ, ಕೆಲ ನಿಯಮಗಳಲ್ಲಿ ಬದಲಾವಣೆ ಇತ್ಯಾದಿಯನ್ನು ಪ್ರತೀ ತಿಂಗಳೂ ನಿರೀಕ್ಷಿಸಬಹುದು. ಮುಂಬರುವ ತಿಂಗಳಿಗೆ ಪ್ಲಾನಿಂಗ್ ಮಾಡಿಕೊಳ್ಳಲು ಈ ಬದಲಾವಣೆಗಳ ಅರಿವಿರುವುದು ಅಗತ್ಯ ಇರಬಹುದು. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಬರಲಿರುವ ಮತ್ತು ಹಣಕಾಸು ಮೇಲೆ ಪರಿಣಾಮ ಬೀರಲಿರುವ ಕೆಲ ನಿಯಮ ಬದಲಾವಣೆಗಳ ವಿವರ ಇಲ್ಲಿದೆ…

ಎಲ್​ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ

ಐಒಸಿಎಲ್ ಮತ್ತು ಹೆಚ್​ಪಿಸಿಎಲ್ ಸಂಸ್ಥೆಗಳು ಪ್ರತೀ ತಿಂಗಳ ಮೊದಲ ದಿನದಂದು ಎಲ್​ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡುತ್ತವೆ. ಗೃಹಬಳಕೆ ಅನಿಲ ಮತ್ತು ವಾಣಿಜ್ಯ ಬಳಕೆ ಅನಿಲ ಬೆಲೆಯಲ್ಲಿ ಬದಲಾವಣೆ ಮಾಡಬಹುದು. ಕೆಲವೊಮ್ಮೆ ದರ ವ್ಯತ್ಯಯ ಮಾಡದೇ ಹೋಗಬಹುದು. ಜುಲೈನಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 30 ರೂ ಇಳಿದಿತ್ತು. ಆಗಸ್ಟ್​ನಲ್ಲಿ ಎಂಟೂವರೆ ರೂನಷ್ಟು ಹೆಚ್ಚಳ ಆಗಿತ್ತು.

ಎಟಿಎಫ್, ಸಿಎನ್​ಜಿ, ಪಿಎನ್​ಜಿ ಗ್ಯಾಸ್ ದರ

ವಿಮಾನಗಳಿಗೆ ಇಂಧನವಾಗಿ ಬಳಸುವ ಎಟಿಎಫ್ ದರವನ್ನು ಸೆಪ್ಟಂಬರ್ 1ರಂದು ಬದಲಾಯಿಸುವ ಸಾಧ್ಯತೆ ಇದೆ. ಸಿಎನ್​ಜಿ-ಪಿಎನ್​ಜಿ ಗ್ಯಾಸ್ ಬೆಲೆಯ ಪರಿಷ್ಕರಣೆಯೂ ಆಗಲಿದೆ. ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಇಲ್ಲಿಯೂ ಬೆಲೆ ಏರಿಳಿಕೆ ಆಗಲಿದೆ.

ಎಲ್​ಪಿಜಿ, ಎಟಿಎಫ್, ಸಿಎನ್​ಜಿ ಇಂಧನಗಳ ಬಳಕೆ ದೇಶವ್ಯಾಪಿ ಆಗುತ್ತದೆ. ಇವುಗಳ ಬೆಲೆ ವ್ಯತ್ಯಯವು ಜನರ ಬಜೆಟ್ ಮೇಲೆ ಪರಿಣಾಮ ಬೀರಬಹುದು, ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು.

ಇದನ್ನೂ ಓದಿ: 10 ವರ್ಷದಲ್ಲಿ 30 ಪಟ್ಟು ಹೆಚ್ಚಾದ ಭಾರತದ ಡಿಫೆನ್ಸ್ ಎಕ್ಸ್​ಪೋರ್ಟ್; 90 ದೇಶಗಳ ಪೈಕಿ ಇದಕ್ಕೆ ಅತಿಹೆಚ್ಚು ರಫ್ತು; ಬೆಂಗಳೂರಿನ ಕಂಪನಿಯಿಂದಲೂ ದಾಖಲೆ

ಅನಪೇಕ್ಷಿತ ಕರೆಗಳಿಗೆ ಕಡಿವಾಣ

ಮೊಬೈಲ್​ಗಳಿಗೆ ಅನಪೇಕ್ಷಿತ ಕರೆಗಳು, ವಂಚಕ ಕರೆಗಳು ಬಂದು ಕಿರಿಕಿರಿ ಮಾಡುವುದು ಹೆಚ್ಚಿನ ಮಂದಿಯ ಅನುಭವಕ್ಕೆ ಬಂದಿದೆ. ಸಾಮಾನ್ಯ ನಂಬರ್​ಗಳಿಂದಲೇ ಈ ಕರೆಗಳು ಬರುತ್ತವೆ. ಹೀಗಾಗಿ, ಜನರು ಈ ಕರೆ ಸ್ವೀಕರಿಸುವುದುಂಟು. ಸೆಪ್ಟಂಬರ್ 1ರಿಂದ ಟೆಲಿಮಾರ್ಕೆಟಿಂಗ್ ಕರೆಗಳು ಮತ್ತು ಕಮರ್ಷಿಯಲ್ ಮೆಸೇಜಿಂಗ್ ಅನ್ನು ಬ್ಲಾಕ್​ಚೇನ್ ಆಧಾರಿತ ಡಿಎಲ್​ಡಿ ಪ್ಲಾಟ್​ಫಾರ್ಮ್​ಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಮೊಬೈಲ್ ಬಳಕೆದಾರರಿಗೆ ಈ ಕಿರಿಕಿರಿ ಕರೆಗಳು ಕಡಿಮೆ ಆಗಲಿದೆ.

ಸೆಪ್ಟಂಬರ್​ನಲ್ಲಿ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು

ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್​ಗಳು ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ತರುತ್ತಿವೆ. ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ರಿವಾರ್ಡ್ ಪಾಯಿಂಟ್ ಗಳಿಸುವುದಕ್ಕೆ ಮಿತಿ ಹಾಕಿದೆ. ಯುಟಿಲಿಟಿ ಟ್ರಾನ್ಸಾಕ್ಷನ್, ಅಂದರೆ ಮೊಬೈಲ್ ಬಿಲ್ ಪಾವತಿ, ಎಲೆಕ್ಟ್ರಿಸಿಟಿ ಬಿಲ್ ಪಾವತಿ ಇತ್ಯಾದಿಗೆ ಬಳಸಿದಾಗ ರಿವಾರ್ಡ್ ಪಾಯಿಂಟ್ಸ್ ಸಿಗುತ್ತದೆ. ತಿಂಗಳಿಗೆ ಇಂಥ ಪಾಯಿಂಟ್ ಗಳಿಕೆ ಮಿತಿ 2,000 ರೂ ಎಂದು ನಿಗದಿ ಮಾಡಲಾಗಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಕಹಿ ಸುದ್ದಿ ಕೊಟ್ಟರೆ, ಐಡಿಎಫ್​ಸಿ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ಕೊಟ್ಟಿದೆ. ಅದರ ಕ್ರೆಡಿಟ್ ಕಾರ್ಡ್ ಬಿಲ್​ನಲ್ಲಿ ಕಟ್ಟಬೇಕಾದ ಮಿನಿಮಮ್ ಪೇಮೆಂಟ್ ಅನ್ನು ಇಳಿಸುತ್ತಿದೆ. ಆದರೆ, ಪೇಮೆಂಟ್ ಡೆಡ್​ಲೈನ್ ಅನ್ನೂ ಕೂಡ 18 ದಿನದಿಂದ 15 ದಿನಕ್ಕೆ ಇಳಿಸುತ್ತಿದೆ.

ಇದನ್ನೂ ಓದಿ: ಮಕ್ಕಳಿಗೆ ಆಧಾರ್ ಕಾರ್ಡ್; ಯಾವ ವಯಸ್ಸಿನ ಮಕ್ಕಳಿಂದ ಬಯೋಮೆಟ್ರಿಕ್ಸ್ ಪಡೆಯಲಾಗುತ್ತೆ? ಏನಿವೆ ಕ್ರಮ, ಇತ್ಯಾದಿ ಡೀಟೇಲ್ಸ್

ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳವಾಗುವ ನಿರೀಕ್ಷೆ

ಕೇಂದ್ರ ಸರ್ಕಾರಿ ನೌಕರರಿಗೆ ಈ ಸೆಪ್ಟಂಬರ್ ತಿಂಗಳಲ್ಲಿ ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ಈ ಬಾರಿ ಶೇ. 3ರಷ್ಟು ಡಿಎ ಹೆಚ್ಚಳ ಆಗಬಹುದು. ಹಾಗೇನಾದರೂ ಆದರೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೆ. 50ರಿಂದ ಶೇ. 51ಕ್ಕೆ ಏರುತ್ತದೆ.

ಆಧಾರ್ ಕಾರ್ಡ್ ಅಪ್​ಡೇಟ್

ಆಧಾರ್ ಕಾರ್ಡ್​ನಲ್ಲಿ ಈಗ ಆನ್​ಲೈನ್ ಮೂಲಕ ಉಚಿತವಾಗಿ ಕೆಲ ಬದಲಾವಣೆಗಳನ್ನು ಮಾಡಬಹುದು. ಈ ಅವಕಾಶ ಸೆಪ್ಟಂಬರ್ 14ರ ಬಳಿಕ ಮುಗಿದ ಹೋಗುತ್ತದೆ. ಆ ಬಳಿಕವೂ ನೀವು ಆಧಾರ್ ಅಪ್​ಡೇಟ್ ಮಾಡಬಹುದಾದರೂ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ