Aadhaar: ಆಧಾರ್ ಕಾರ್ಡ್​​ನಲ್ಲಿ ಎರಡು ಬಾರಿ ಹೆಸರು ತಿದ್ದುಪಡಿ ಮಾಡಿದ್ರೂ ತಪ್ಪಿದ್ಯಾ? ಹಾಗಾದ್ರೆ ಹೀಗೆ ಮಾಡಿ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಜೀವಿತಾವಧಿಯಲ್ಲಿ ಕೇವಲ ಎರಡು ಬಾರಿ ಮಾತ್ರ ಬದಲಾಯಿಸಲು ಅವಕಾಶ ನೀಡಿದೆ. ಎರಡು ಬಾರಿ ತಿದ್ದುಪಡಿ ಮಾಡಿದ ಬಳಿಕವು ತಪ್ಪು ಕಂಡು ಬಂದರೆ ನೀವು ಮೂರನೇ ಬಾರಿ ಹಸರು ಬದಲಾವಣೆ ಮಾಡಬೇಕೆಂದರೆ ನೀವು ಕಟ್ಟುನಿಟ್ಟಿನ ಪ್ರಕ್ರಿಯೆಯನ್ನು ಅನುಸರಿಸಬೇಕು. ಆಧಾರ್ ಸೇವಾ ಕೇಂದ್ರ ಗೆ ಭೇಟಿ ನೀಡಿ ವಿಶೇಷ ವಿನಂತಿ ಪ್ರಕ್ರಿಯೆಯ ಮೂಲಕ ಪ್ರಾದೇಶಿಕ ಕಚೇರಿಯ ಅನುಮತಿ ಪಡೆದು ಬದಲಾಯಿಸಬೇಕು.

Aadhaar: ಆಧಾರ್ ಕಾರ್ಡ್​​ನಲ್ಲಿ ಎರಡು ಬಾರಿ ಹೆಸರು ತಿದ್ದುಪಡಿ ಮಾಡಿದ್ರೂ ತಪ್ಪಿದ್ಯಾ? ಹಾಗಾದ್ರೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Aug 07, 2026 | 7:51 PM

ಮುಖ್ಯಾಂಶಗಳು

  • ಆಧಾರ್ ಕಾರ್ಡ್ ಭಾರತದಲ್ಲಿ ಪ್ರಮುಖ ಗುರುತಿನ ದಾಖಲೆಯಾಗಿದೆ
  • ಎರಡು ಬಾರಿ ಮಾತ್ರ ಆಧಾರ್‌ನಲ್ಲಿನ ಹೆಸರು ಬದಲಾವಣೆ ಮಾಡಲು ಅವಕಾಶವಿದೆ
  • ವಿನಾಯಿತಿ ನವೀಕರಣ ಪ್ರಕ್ರಿಯೆಯಿಂದ ಮೂರನೇ ಬಾರಿ ಹೆಸರು ಬದಲಾವಣೆ ಸಾಧ್ಯ

ಆಧಾರ್ ಕಾರ್ಡ್ (Aadhaar Card) ಭಾರತದಲ್ಲಿ ಪ್ರಮುಖ ಗುರುತಿನ ದಾಖಲೆಯಾಗಿದೆ. ಸಬ್ಸಿಡಿಗಳು, ಪಿಂಚಣಿಗಳು, ವಿದ್ಯಾರ್ಥಿವೇತನಗಳು ಹಾಗೂ ಸರ್ಕಾರಿ ಸೌಲಭ್ಯಗಳಿಗೆ ಈ ದಾಖಲೆ ಅತ್ಯಗತ್ಯ. ಆದರೆ ಈ ಇತರ ದಾಖಲೆಗಳಲ್ಲಿ ನಿಮ್ಮ ಹೆಸರು ಸರಿಯಿದ್ದು ಈ ದಾಖಲೆಯಲ್ಲಿ ಹೆಸರು ತಪ್ಪಿದ್ದರೆ, ಇದರಿಂದ ನೀವು ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದರೆ ಯುಐಡಿಎಐ ನಿಯಮಗಳ ಪ್ರಕಾರ, ಹೆಸರನ್ನು ಎರಡು ಬಾರಿ ಮಾತ್ರ ಬದಲಾಯಿಸಲು ಅವಕಾಶವಿದೆ. ವಿನಾಯಿತಿ ನವೀಕರಣ ಪ್ರಕ್ರಿಯೆ ಮೂಲಕ ಹೆಸರು ಬದಲಾವಣೆ ಸಾಧ್ಯ. ಈ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಮೂರನೇ ಬಾರಿ ಆಧಾರ್ ಕಾರ್ಡ್‌ನಲ್ಲಿನ ಹೆಸರು ತಿದ್ದುಪಡಿ ಮಾಡುವುದು ಹೇಗೆ?

ಹಂತ 1: ಮೊದಲು ನಿಮ್ಮ ಹತ್ತಿರದ ಅಧಿಕೃತ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.

ಹಂತ 2: ನಿಮ್ಮಲ್ಲಿರುವ ಗೆಜೆಟ್ ನೋಟಿಫಿಕೇಶನ್ ದಾಖಲೆಯನ್ನು ನೀಡಿ, ಹೆಸರು ತಿದ್ದುಪಡಿಗಾಗಿ ನವೀಕರಣ ವಿನಂತಿ ಅರ್ಜಿ ಸಲ್ಲಿಸಿ.

ಹಂತ 3: ಈ ಪ್ರಕ್ರಿಯೆ ಮುಗಿದ ಬಳಿಕ ಯುಆರ್ ಎನ್ ಇರುವ ರಶೀದಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ (ನೀವು ಕಳಿಸಿದ ವಿನಂತಿ ಮೊದಲ ಹಂತದಲ್ಲಿ ರಿಜೆಕ್ಟ್ ಆಗುವುದು ಸಾಮಾನ್ಯ).

ಹಂತ 4: ನಿಮ್ಮ ಈ ವಿನಂತಿ ತಿರಸ್ಕೃತಗೊಂಡರೆ, ನಿಮ್ಮ ರಾಜ್ಯಕ್ಕೆ ಸಂಬಂಧಿಸಿದ UIDAI ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿ.

ಹಂತ 5: ಇಮೇಲ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅಥವಾ ನೇರವಾಗಿ ಆಫೀಸಿಗೆ ಹೋದರೆ ಆಧಾರ್ ನವೀಕರಣ ರಶೀದಿ, ಗೆಜೆಟ್ ನೋಟಿಫಿಕೇಶನ್ ಪ್ರತಿ, ನಿಮ್ಮ ಸಮಸ್ಯೆಯನ್ನು ವಿವರಿಸಿ ಬರೆದ ಪತ್ರ ಈ ದಾಖಲೆಗಳು ತೆಗೆದುಕೊಂಡು ಹೋಗಿ.

ಹಂತ 6: ರೀಜನಲ್ ಆಫೀಸ್‌ನ ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ಹಾಗೂ ಅರ್ಜಿಯನ್ನು ಪರಿಶೀಲಿಸಿ, ಹೆಸರು ಬದಲಾವಣೆಗೆ ವಿಶೇಷ ಅನುಮೋದನೆ ನೀಡುತ್ತಾರೆ.

ಇದನ್ನೂ ಓದಿ: ನಿಮ್ಮ ಆಧಾರ್ ಬಯೋಮೆಟ್ರಿಕ್‌ ಡೇಟಾ ಸುರಕ್ಷಿತವಾಗಿರಲು ಈ ರೀತಿ ಲಾಕ್ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಆಧಾರ್ ಕಾರ್ಡ್ ನಲ್ಲಿನ ಹೆಸರನ್ನು ಎಷ್ಟು ಭಾರಿ ತಿದ್ದುಪಡಿ ಮಾಡಬೇಕು?

ಉತ್ತರ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಜೀವಿತಾವಧಿಯಲ್ಲಿ ಕೇವಲ ಎರಡು ಬಾರಿ ಮಾತ್ರ ಬದಲಾಯಿಸಲು ಅವಕಾಶ ನೀಡಿದೆ.

ಪ್ರಶ್ನೆ: ಆಧಾರ್ ಕಾರ್ಡ್ ನಲ್ಲಿನ ಹೆಸರನ್ನು ಮೂರನೇ ಬಾರಿ ತಿದ್ದುಪಡಿ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಆಧಾರ್ ನವೀಕರಣ ರಶೀದಿ, ಗೆಜೆಟ್ ನೋಟಿಫಿಕೇಶನ್ ಪ್ರತಿ, ನಿಮ್ಮ ಸಮಸ್ಯೆಯನ್ನು ವಿವರಿಸಿ ಬರೆದ ಪತ್ರ ಈ ದಾಖಲೆಗಳು ಬೇಕು.

ಪ್ರಶ್ನೆ: ಆಧಾರ್ ಕಾರ್ಡ್ ಮುಖ್ಯ ಯಾಕೆ?

ಉತ್ತರ: ಸಬ್ಸಿಡಿಗಳು, ಪಿಂಚಣಿಗಳು, ವಿದ್ಯಾರ್ಥಿವೇತನಗಳು ಹಾಗೂ ಸರ್ಕಾರಿ ಸೌಲಭ್ಯ ಸೇರಿದಂತೆ ಇನ್ನಿತ್ತರ ಕೆಲಸಗಳಿಗೆ ಈ ದಾಖಲೆ ಅಗತ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us