AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲಿಗೆ ಹೂ ಒಯ್ದಿದ್ದಕ್ಕೆ ನಟಿ ನವ್ಯಾಗೆ ದಂಡ; ಆಸ್ಟ್ರೇಲಿಯಾಗೆ ಹೋಗುವ ಮುನ್ನ ಈ ನಿಯಮ ತಿಳಿದಿರಿ

Actress Navya Nair fined in Australia for carrying Jasmine Gajra: ಮಲಯಾಳಿ ನಟಿ ನವ್ಯಾ ನಾಯರ್ ತಮ್ಮ ಬ್ಯಾಗ್​ನಲ್ಲಿ ಮಲ್ಲಿಗೆ ಹೂವು ಇರಿಸಿಕೊಂಡಿದ್ದಕ್ಕೆ ಆಸ್ಟ್ರೇಲಿಯಾದಲ್ಲಿ 1.14 ಲಕ್ಷ ರೂ ದಂಡ ಪಾವತಿಸಿದ್ದಾರೆ. ಸಿಂಗಾಪುರದಿಂದ ಮೆಲ್ಬೋರ್ನ್ ಏರ್​ಪೋರ್ಟ್​ಗೆ ಬಂದಾಗ ಈಕೆಯ ಬ್ಯಾಗನ್ನು ತಪಾಸಣೆ ಮಾಡಲಾಗಿದೆ. ಈ ವೇಳೆ ಅಘೋಷಿತ ಮಲ್ಲಿಗೆ ಹೂ ಪತ್ತೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಜೈವಿಕ ಪರಿಸರ ಸಂರಕ್ಷಣೆಗೆ ಬಹಳ ಕಠಿಣ ಕಾನೂನು ಇದೆ.

ಮಲ್ಲಿಗೆ ಹೂ ಒಯ್ದಿದ್ದಕ್ಕೆ ನಟಿ ನವ್ಯಾಗೆ ದಂಡ; ಆಸ್ಟ್ರೇಲಿಯಾಗೆ ಹೋಗುವ ಮುನ್ನ ಈ ನಿಯಮ ತಿಳಿದಿರಿ
ನವ್ಯಾ ನಾಯರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 08, 2025 | 2:11 PM

Share

ನವದೆಹಲಿ, ಸೆಪ್ಟೆಂಬರ್ 8: ಕನ್ನಡವೂ ಸೇರಿದಂತೆ ವಿವಿಧ ದಕ್ಷಿಣ ಭಾರತೀಯ ಭಾಷಾ ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಿ ನಟಿ ನವ್ಯಾ ನಾಯರ್ (Navya Nair) ಅವರಿಗೆ ಮೆಲ್ಬೋರ್ನ್ ಏರ್​ಪೋರ್ಟ್​ನಲ್ಲಿ ಲಕ್ಷ ರೂಗೂ ಅಧಿಕ ಮೊತ್ತದ ದಂಡ ವಿಧಿಸಿದ ಘಟನೆ ನಡೆದಿದೆ. ಮಲ್ಲಿಗೆ ಹೂವನ್ನು (Jasmine Gajra) ತೆಗೆದುಕೊಂಡು ಹೋಗಿದ್ದು ಈ ನಟಿ ಮಾಡಿದ ತಪ್ಪು. ನವ್ಯಾ ಅವರು ತಮ್ಮ ಹ್ಯಾಂಡ್ ಬ್ಯಾಗ್​ನಲ್ಲಿ ಕೇವಲ 15 ಸೆಂಟಿಮೀಟರ್ ಉದ್ದದ ಮಲ್ಲಿಗೆ ಹೂವಿನ ಪುಟ್ಟ ಹಾರವನ್ನು ಇಟ್ಟುಕೊಂಡಿದ್ದರು. ಏರ್​ಪೋರ್ಟ್ ಅಧಿಕಾರಿಗಳು ಈಕೆಗೆ 1,980 ಆಸ್ಟ್ರೇಲಿಯನ್ ಡಾಲರ್ (ಸುಮಾರು 1.14 ಲಕ್ಷ ರೂ) ದಂಡ ಹಾಕಿದ್ದಾರೆ.

ನವ್ಯಾ ನಾಯರ್ ಅವರು ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ವಿಕ್ರೋರಿಯಾ ಮಲಯಾಳಿ ಸಂಘವೊಂದು ಓನಂ ಆಚರಣೆಗೆ ನವ್ಯಾ ನಾಯರ್ ಅವರನ್ನು ಆಹ್ವಾನಿಸಿತ್ತು. ಇಲ್ಲಿಗೆ ಬರುವ ಮುನ್ನ ನವ್ಯಾ ಸಿಂಗಾಪುರಕ್ಕೆ ಹೋಗಿದ್ದರು. ಸಿಂಗಾಪುರಕ್ಕೆ ಹೋಗುವಾಗ ಮಲ್ಲಿಗೆ ಹಾರವನ್ನು ಇವರ ತಂದೆಯು ಎರಡಾಗಿ ಮಾಡಿ, ಒಂದನ್ನು ತಲೆಗೆ ಮುಡಿದುಕೊಳ್ಳಲು ಹೇಳಿದ್ದರು. ಆಸ್ಟ್ರೇಲಿಯಾಗೆ ಹೋದಾಗ ಮತ್ತೊಂದು ಭಾಗದ ಹಾರವನ್ನು ಮುಡಿದುಕೊಳ್ಳುವಂತೆ ಹೇಳಿದ್ದರು. ನವ್ಯಾ ಹಾಗೇ ಮಾಡಿದ್ದರು.

ಇದನ್ನೂ ಓದಿ: ಕರುಳಿನ ಕ್ಯಾನ್ಸರ್: ರಷ್ಯಾದಿಂದ ಲಸಿಕೆ ಸಿದ್ಧ; ನಿರುಪದ್ರವಿ ವೈರಸ್ ಬಳಸಿ ಕ್ಯಾನ್ಸರ್ ಕೋಶಗಳ ನಾಶ ಮಾಡಬಲ್ಲ ಪ್ರಬಲ ವ್ಯಾಕ್ಸಿನ್

ಸಿಂಗಾಪುರದಿಂದ ನೇರವಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಮಲ್ಲಿಗೆ ಹೂ ಹಾರದ ಒಂದು ಭಾಗವನ್ನು ಹ್ಯಾಂಡ್​ಬ್ಯಾಗ್​ನಲ್ಲಿ ಇರಿಸಿಕೊಂಡಿದ್ದರು. ಅಲ್ಲಿಯ ಅಧಿಕಾರಿಗಳು ಪರಿಶೀಲಿಸಿದಾಗ ಹಾರ ಸಿಕ್ಕಿತು. ಅದಕ್ಕೆ ದಂಡ ವಿಧಿಸಿದ್ದಾರೆ.

ನವ್ಯಾ ನಾಯರ್ ತಮ್ಮ ಇನ್​ಸ್ಟಾದಲ್ಲಿ ಹಾಕಿದ ಪೋಸ್ಟ್

View this post on Instagram

A post shared by Navya Nair (@navyanair143)

ಮಲ್ಲಿಗೆ ಹೂವಿನ ಹಾರ ತರುವುದು ತಪ್ಪಾ? ಏನಿದೆ ಆಸ್ಟ್ರೇಲಿಯಾದ ಕಾನೂನು?

ಆಸ್ಟ್ರೇಲಿಯಾದಲ್ಲಿ ಬಹಳ ಕಠಿಣವಾದ ಜೈವಿಕ ಭದ್ರತೆಯ ನಿಯಮಗಳಿವೆ. ಅಲ್ಲಿರುವ ಸೂಕ್ಷ್ಮ ಜೈವಿಕ ಪರಿಸರವನ್ನು ಸಂರಕ್ಷಿಸಲು ಬಿಗಿ ಕಾನೂನು ರೂಪಿಸಲಾಗಿದೆ. ವಿದೇಶಗಳಿಂದ ಹಾನಿಕಾರಕ ಕೀಟಗಳು ಮತ್ತು ರೋಗಗಳು ಬಂದು ದೇಶದ ಸೂಕ್ಷ್ಮ ಪರಿಸರವನ್ನು ಹಾಳು ಮಾಡಬಹುದು ಎನ್ನುವ ಭಯ ಇದೆ. ಹಾಗಾಗಿ, ವಿದೇಶಗಳಿಂದ ಯಾವುದೇ ಗಿಡ, ಹೂವು, ಬೀಜ, ಹಣ್ಣು, ತರಕಾರಿ, ಮಣ್ಣು, ಜಾನುವಾರು ಉತ್ಪನ್ನಗಳನ್ನು ಹಾಗೆ ಸುಮ್ಮನೆ ತರುವಂತಿಲ್ಲ. ಸಂಪೂರ್ಣ ತಪಾಸಣೆ ನಡೆಸಿ ಕ್ಲಿಯರೆನ್ಸ್ ಕೊಟ್ಟ ಬಳಿಕವಷ್ಟೇ ಅವುಗಳನ್ನು ಆಸ್ಟ್ರೇಲಿಯಾದೊಳಗೆ ತರಲು ಅವಕಾಶ ಇರುತ್ತದೆ.

ಇದನ್ನೂ ಓದಿ: ಗೋಲ್ಡ್ ಇಟಿಎಫ್​ಗಳ ಮೇಲೆ ಹಣದ ಹೊಳೆ; ಭರಪೂರ ಲಾಭ ತರುವ ಇದರ ಮೇಲೆ ಹೂಡಿಕೆ ಹೇಗೆ?

ಆಸ್ಟ್ರೇಲಿಯಾಕ್ಕೆ ಹೋಗುವ ಪ್ರಯಾಣಿಕರು, ತಮ್ಮಲ್ಲಿ ಇಂತಹ ಯಾವುದೇ ವಸ್ತು ಇದ್ದಲ್ಲಿ ಅದನ್ನು ಮೊದಲೇ ಘೋಷಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಬಹಳ ಭಾರೀ ದಂಡ ಹಾಕಲಾಗುತ್ತದೆ.

ಹಿಂದೆ ಸೆಹ್ವಾಗ್, ಭಜ್ಜಿಗೂ ಬಿದ್ದಿತ್ತು ದಂಡ

ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ 2002ರಲ್ಲಿ ವಿರೇಂದ್ರ ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್ ಅವರಿಗೆ ದಂಡ ವಿಧಿಸಿದ ಘಟನೆ ನೆನಪಿರಬಹುದು. ಇವರಿಬ್ಬರು ಕ್ರಿಕೆಟಿಗರು ತಮ್ಮ ಲಗೇಜಿನಲ್ಲಿ ಕೊಳಕಾದ ಶೂಗಳನ್ನು ಇರಿಸಿಕೊಂಡಿದ್ದರು. ಅದನ್ನು ಅವರು ಘೋಷಿಸಿರಲಿಲ್ಲ. ನ್ಯೂಜಿಲೆಂಡ್​ನ ಕಸ್ಟಮ್ಸ್ ಅಧಿಕಾರಿಗಳು ಇವರಿಬ್ಬರಿಗೆ 200 ನ್ಯೂಜಿಲೆಂಡ್ ಡಾಲರ್ ದಂಡ ಹಾಕಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:28 pm, Mon, 8 September 25