AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್ ಹಣಕಾಸು ಸಚಿವ ಸ್ಮಾಟ್ರಿಚ್ ಭಾರತಕ್ಕೆ ಭೇಟಿ; ಭಾರತ-ಇಸ್ರೇಲ್ ನಡುವೆ ಹೂಡಿಕೆ ಒಪ್ಪಂದ

India and Israel ink bilateral investment treaty: ಭಾರತ ಹಾಗೂ ಇಸ್ರೇಲ್ ಮಧ್ಯೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಏರ್ಪಟ್ಟಿದೆ. ಎರಡೂ ದೇಶಗಳ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಬೆಜಾಲೆಲ್ ಸ್ಮಾಟ್​ರಿಚ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎರಡೂ ದೇಶಗಳ ನಡುವೆ ಹೂಡಿಕೆದಾರರ ಹೂಡಿಕೆಗಳನ್ನು ರಕ್ಷಿಸುವುದು ಮತ್ತು ಉತ್ತೇಜಿಸುವುದು ಈ ಒಪ್ಪಂದದ ಆಶಯ.

ಇಸ್ರೇಲ್ ಹಣಕಾಸು ಸಚಿವ ಸ್ಮಾಟ್ರಿಚ್ ಭಾರತಕ್ಕೆ ಭೇಟಿ; ಭಾರತ-ಇಸ್ರೇಲ್ ನಡುವೆ ಹೂಡಿಕೆ ಒಪ್ಪಂದ
ಭಾರತ ಇಸ್ರೇಲ್ ನಡುವೆ ಒಪ್ಪಂದ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 08, 2025 | 3:59 PM

Share

ನವದೆಹಲಿ, ಸೆಪ್ಟೆಂಬರ್ 8: ಭಾರತ ಸರ್ಕಾರ ಮತ್ತು ಇಸ್ರೇಲ್ ಸರ್ಕಾರದ ಮಧ್ಯೆ ಇಂದು ಸೋಮವಾರ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (Bilateral Investment Treaty) ಏರ್ಪಟ್ಟಿದೆ. ಇದರೊಂದಿಗೆ ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ಭಾರತ ಮತ್ತು ಇಸ್ರೇಲ್​ನ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಬೆಜಾಲೆಲ್ ಸ್ಮಾಟ್ರಿಚ್ (Bezalel Smotrich) ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ದ್ವಿಪಕ್ಷೀಯ ಹೂಡಿಕೆ ಒಪ್ಪಂದವು ಎರಡು ದೇಶಗಳ ಮಧ್ಯೆ ಪರಸ್ಪರರ ಹೂಡಿಕೆ ರಕ್ಷಣೆಗೆ ಬದ್ಧತೆ ತೋರುವ ಒಂದು ಸಹಕಾರ ವ್ಯವಸ್ಥೆಯಾಗಿದೆ. ಅಂದರೆ, ಭಾರತದಲ್ಲಿ ಇಸ್ರೇಲಿನ ಖಾಸಗಿ ಹೂಡಿಕೆದಾರರು ಮಾಡುವ ಹೂಡಿಕೆಗಳನ್ನು ಭಾರತ ರಕ್ಷಿಸಲು ಬದ್ಧವಾಗಿರುತ್ತದೆ. ಹಾಗೆಯೇ, ಇಸ್ರೇಲ್​ನಲ್ಲಿ ಭಾರತೀಯರು ಮಾಡುವ ಹೂಡಿಕೆಗಳನ್ನು ಆ ದೇಶವು ರಕ್ಷಣೆ ಮಾಡುತ್ತದೆ. ಇದು ಭಾರತ ಹಾಗೂ ಇಸ್ರೇಲ್ ನಡುವಿನ ದ್ವಿಪಕ್ಷೀಯ ಒಪ್ಪಂದದಲ್ಲಿ ಮಾಡಲಾಗಿರುವ ವ್ಯವಸ್ಥೆ.

ಇದನ್ನೂ ಓದಿ: ದೇಶಭ್ರಷ್ಟ ವಜ್ರೋದ್ಯಮಿ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಿ, ಈ ಎಲ್ಲಾ ಸೌಲಭ್ಯ ಕೊಡ್ತೀವಿ ಎಂದು ಬೆಲ್ಜಿಯಂಗೆ ಭರವಸೆ ನೀಡಿದ ಭಾರತ

ಎರಡೂ ದೇಶಗಳ ನಡುವೆ ಹೂಡಿಕೆಗಳಿಗೆ ಉತ್ತೇಜಿಸಲು ಮತ್ತು ರಕ್ಷಣೆ ನೀಡಲು ಅಗತ್ಯವಾದ ನಿಯಮ ಚೌಕಟ್ಟುಗಳನ್ನು ಈ ಒಪ್ಪಂದದಲ್ಲಿ ಮಾಡಲಾಗಿದೆ.

ಭಾರತದ ಹೊಸ ಮಾದರಿಯ ಒಪ್ಪಂದ ನಿಯಮಾವಳಿ ಅಡಿಯಲ್ಲಿ ಇಸ್ರೇಲ್ ಸಹಿ ಹಾಕಿದೆ. ಕುತೂಹಲ ಎಂದರೆ ಒಇಸಿಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ಸದಸ್ಯ ರಾಷ್ಟ್ರವೊಂದು ಭಾರತದೊಂದಿಗೆ ಈ ಚೌಕಟ್ಟಿನಲ್ಲಿ ಸಹಿ ಹಾಕಿದ್ದು ಇದೇ ಮೊದಲು.

ಇಸ್ರೇಲ್ ಹಣಕಾಸು ಸಚಿವ ಬೆಜಾಲೆಲ್ ಸ್ಮಾಟ್​ರಿಚ್ ಅವರು ಇಸ್ರೇಲ್​ನ ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಸೆ. 8ರಿಂದ 10ರವರೆಗೂ ಅವರು ಭಾರತದಲ್ಲಿ ಇರಲಿದ್ದಾರೆ. ಇವತ್ತು ನಿರ್ಮಲಾ ಸೀತಾರಾಮನ್ ಜೊತೆ ಸೇರಿ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ.

ಇದನ್ನೂ ಓದಿ: ಭಾರತದ 15 ವರ್ಷದ ಭರ್ಜರಿ ಡಿಫೆನ್ಸ್ ಪ್ಲಾನ್; ಯುದ್ಧವೆಂದರೆ ಬಾಹ್ಯಾಕಾಶಕ್ಕೂ ಸೈ, ಎಐಗೂ ಸೈ

ವಾಣಿಜ್ಯ ಸಚಿವ ಪೀಯೂಶ್ ಗೋಯಲ್, ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನೂ ಸ್ಮಾಟ್​ರಿಚ್ ಭೇಟಿ ಮಾಡಲಿದ್ದಾರೆ. ಗುಜರಾತ್​ನ ಗಾಂಧಿನಗರದಲ್ಲಿರುವ ಗಿಫ್ಟ್ ಸಿಟಿ ಹಾಗೂ ಮುಂಬೈ ನಗರಕ್ಕೂ ಬಾಟ್​ರಿಚ್ ಭೇಟಿ ಮಾಡುವ ಯೋಜನೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ