ಅಂಬುಜಾ ಸಿಮೆಂಟ್ಸ್; ಔದ್ಯಮಿಕ ಕಾರ್ಬನ್ ನಿರ್ಮೂಲನ ಮೈತ್ರಿಕೂಟ ಸೇರಿದ ವಿಶ್ವದ ಮೊದಲ ಸಿಮೆಂಟ್ ಕಂಪನಿ ಅದಾನಿ ಗ್ರೂಪ್​ನದ್ದು

Ambuja Cements world's first cement company to join global decorbanization alliance: ಅದಾನಿ ಗ್ರೂಪ್ ಒಡೆತನದ ಅಂಬುಜಾ ಸಿಮೆಂಟ್ಸ್ ಹೊಸ ಇತಿಹಾಸ ಪುಟ ತೆರೆದಿದೆ. ಜಾಗತಿಕವ ಇಂಡಸ್ಟ್ರಿ ಡೀಕಾರ್ಬನೈಸೇಶನ್ ಕೂಟವಾಗಿರುವ ಎಎಫ್​ಐಡಿ ಸದಸ್ಯನಾದ ವಿಶ್ವದ ಮೊದಲ ಸಿಮೆಂಟ್ ಕಂಪನಿ ಎನಿಸಿದೆ ಅಂಬುಜಾ ಸಿಮೆಂಟ್ಸ್. ಈಗಾಗಲೇ ಉತ್ಪಾದನೆಯಲ್ಲಿ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತಿರುವ ಈ ಸಿಮೆಂಟ್ ಕಂಪನಿ, ತನ್ನ ಉತ್ಪಾದನೆಯಲ್ಲಿ ಪರಿಸರಸ್ನೇಹಿ ಇಂಧನದ ಬಳಕೆ ಹೆಚ್ಚಿಸಲು ಯೋಜನೆಗಳನ್ನು ಹಾಕಿದೆ. ಇದೇ ಹಂತದಲ್ಲಿ ಎಎಫ್​ಐಡಿ ಸೇರ್ಪಡೆಯಾಗಿರುವುದು ಗಮನಾರ್ಹ ಸಂಗತಿ.

ಅಂಬುಜಾ ಸಿಮೆಂಟ್ಸ್; ಔದ್ಯಮಿಕ ಕಾರ್ಬನ್ ನಿರ್ಮೂಲನ ಮೈತ್ರಿಕೂಟ ಸೇರಿದ ವಿಶ್ವದ ಮೊದಲ ಸಿಮೆಂಟ್ ಕಂಪನಿ ಅದಾನಿ ಗ್ರೂಪ್​ನದ್ದು
ಅಂಬುಜಾ ಸಿಮೆಂಟ್ಸ್
Follow us
|

Updated on: Sep 29, 2024 | 6:06 PM

ನವದೆಹಲಿ, ಸೆಪ್ಟೆಂಬರ್ 29: ಗೌತಮ್ ಅದಾನಿ ಮಾಲಕತ್ವದ ಅದಾನಿ ಗ್ರೂಪ್​ಗೆ ಸೇರಿದ ಅಂಬುಜಾ ಸಿಮೆಂಟ್ಸ್ ಕಂಪನಿ ಹೊಸ ಇತಿಹಾಸದ ಪುಟ ತೆರೆದಿದೆ. ಜಾಗತಿಕ ಇಂಗಾಲಮುಕ್ತ ಔದ್ಯಮಿಕ ಮೈತ್ರಿಕೂಟವಾದ ಎಎಫ್​ಐಡಿಗೆ ಅಂಬುಜಾ ಸಿಮೆಂಟ್ಸ್ ಸೇರ್ಪಡೆಯಾಗಿದೆ. ಈ ಸಂಘಟನೆಯ ಸದಸ್ಯರಾದ ವಿಶ್ವದ ಮೊದಲ ಸಿಮೆಂಟ್ ಕಂಪನಿ ಎಂಬ ಶ್ರೇಯಸ್ಸು ಅಂಬುಜಾ ಸಿಮೆಂಟ್ಸ್​ನದ್ದಾಗಿದೆ. ಪ್ಯಾರಿಸ್ ಒಪ್ಪಂದದ ಅನುಸಾರವಾಗಿ ಹಸಿರು ಮನೆ ಅನಿಲವನ್ನು ಹೊರಸೂಸದಂತಹ ವ್ಯವಸ್ಥೆಯನ್ನು ಉದ್ಯಮಗಳು ಪಾಲಿಸಬೇಕು. ಈ ನಿಟ್ಟಿನಲ್ಲಿ ಜಾಗತಿಕವಾಗಿ ಬಹಳಷ್ಟು ಉದ್ದಿಮೆಗಳು ಪರಿಸರಸ್ನೇಹಿ ಉತ್ಪಾದನಾ ವ್ಯವಸ್ಥೆಯನ್ನು ಹಂತ ಹಂತವಾಗಿ ಅಳವಡಿಸುತ್ತಿವೆ. ಪರಿಸರಕ್ಕೆ ಹಾನಿ ಮಾಡುವ ಉತ್ಪಾದನೆಗಳಲ್ಲಿ ಸಿಮೆಂಟ್ ಕ್ಷೇತ್ರವೂ ಒಂದು. ಅಷ್ಟು ಸುಲಭಕ್ಕೆ ಈ ವ್ಯವಸ್ಥೆ ಬದಲಿಸಲು ಸಾಧ್ಯವಿಲ್ಲ. ಹೀಗಾಗಿ, ವಿಶ್ವದ ಯಾವ ಸಿಮೆಂಟ್ ಕಂಪನಿಗಳು ಡೀಕಾರ್ಬನೈಸೇಶನ್ ಮಾಡಲು ಬದ್ಧತೆ ತೋರಲು ಧೈರ್ಯ ಮಾಡಿಲ್ಲ.

ಅದಾನಿ ಗ್ರೂಪ್ ಒಡೆತನದ ಅಂಬುಜಾ ಸಿಮೆಂಟ್ಸ್ ಭಾರತದ ಎರಡನೇ ಅತಿದೊಡ್ಡ ಸಿಮೆಂಟ್ ಕಂಪನಿ. 2050ರಷ್ಟರಲ್ಲಿ ಶೂನ್ಯ ಮಾಲಿನ್ಯ ಹೊರಸೂಸುವಿಕೆಯ ಮಟ್ಟಕ್ಕೆ ಹೋಗುವ ಗುರಿ ಇಟ್ಟಿದೆ. ಈಗಾಗಲೇ ಕಾರ್ಬನ್ ಹೊರಸೂಸುವಿಕೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಗಮನಾರ್ಹ ಎನಸಿವ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ 86 ಲಕ್ಷ ಟನ್​ಗಳಷ್ಟು ತ್ಯಾಜ್ಯ ಸಂಪನ್ಮೂಲಗಳನ್ನು ಸಿಮೆಂಟ್ ಉತ್ಪಾದನೆಗೆ ಅದು ಬಳಸಿಕೊಂಡಿದೆ. ಮುಂಬರುವ ದಿನಗಳಲ್ಲೂ ಹಲವು ಕ್ರಮಗಳಿಗೆ ಯೋಜನೆ ಹಾಕಿದೆ.

ಔದ್ಯಮಿಕ ಉತ್ಪಾದನೆ ವೇಳೆ ನಿರುಪಯುಕ್ತವಾಗಿ ಸೋರಿ ಹೋಗುವ ಉಷ್ಣದಿಂದ 1 ಗಿಗಾವ್ಯಾಟ್ ಮತ್ತು 376 ಮೆಗಾವ್ಯಾಟ್ ಸಾಮರ್ಥ್ಯದ ರಿನಿವಬಲ್ ಎನರ್ಜಿ ತಯಾರಿಸುವ ಯೋಜನೆಗಳನ್ನು ಅಂಬುಜಾ ಸಿಮೆಂಟ್ಸ್ ಹಮ್ಮಿಕೊಂಡಿದೆ. ಅದಕ್ಕಾಗಿ 10,000 ಕೋಟಿ ರೂ ಹೂಡಿಕೆ ಮಾಡಲಿದೆ. 2028ರೊಳಗೆ ತನ್ನ ಸಿಮೆಂಟ್ ಉತ್ಪಾದನಾ ವ್ಯವಸ್ಥೆಯಲ್ಲಿ ಗ್ರೀನ್ ಎನರ್ಜಿ ಬಳಕೆ ಶೇ. 60ರಷ್ಟು ಆಗಬೇಕು ಎಂಬುದು ಅದರ ಗುರಿ.

ಇದನ್ನೂ ಓದಿ: ರೆಡ್ಡಿ ಸರ್ಕಾರದಲ್ಲಿ ಆಂಧ್ರ ಸಾವಾಸ ಬೇಡವೆಂದು ಹೋಗಿದ್ದ ಲುಲು ಗ್ರೂಪ್ ಮತ್ತೆ ವಾಪಸ್

ಜಾಗತಿಕ ಇಂಗಾಲಮುಕ್ತ ಔದ್ಯಮಿಕ ಸಂಘಟನೆಗೆ ಅಂಬುಜಾ ಸಿಮೆಂಟ್ಸ್ ಸದಸ್ಯನಾಗುತ್ತಿರುವುದು ಅದರ ಕಾರ್ಬನ್ ಮುಕ್ತ ವ್ಯವಸ್ಥೆ ನಿರ್ಮಾಣಕ್ಕೆ ಇನ್ನಷ್ಟು ಗಟ್ಟಿ ಹೆಜ್ಜೆ ಇಡಲು ಸಾಧ್ಯವಾಗುತ್ತದೆ. ಇತರ ಜಾಗತಿಕ ಔದ್ಯಮಿಕ ಸಂಸ್ಥೆಗಳ ತಂತ್ರಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಅಂಬುಜಾ ಸಿಮೆಂಟ್ಸ್ ಕಂಪನಿಯ ನಿರ್ದೇಶಕ ಕರಣ್ ಅದಾನಿ ಹೇಳಿದ್ದಾರೆ. ಕರಣ್ ಅದಾನಿ ಅವರು ಗೌತಮ್ ಅದಾನಿಯ ಹಿರಿಯ ಮಗ. ಅಂಬುಜಾ ಸಿಮೆಂಟ್ಸ್ ಮಾತ್ರವಲ್ಲ, ಅದಾನಿ ಪೋರ್ಟ್ಸ್ ಸಂಸ್ಥೆಯ ಜವಾಬ್ದಾರಿಯನ್ನೂ ಅವರು ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು