Amazon Hiring: ಉದ್ಯೋಗಾಕಾಂಕ್ಷಿಗಳಿಗೆ ನಿರಾಸೆ; ನೇಮಕಾತಿ ಮುಂದೂಡಿಕೆ ಘೋಷಿಸಿದ ಅಮೆಜಾನ್

ನೇಮಕಾತಿ ಪ್ರಕ್ರಿಯೆಯನ್ನು ಕೆಲವು ತಿಂಗಳುಗಳ ಮಟ್ಟಿಗೆ ಮುಂದೂಡಿಕೆ ಮಾಡಿರುವುದಾಗಿ ಅಮೆಜಾನ್ ಘೋಷಿಸಿದೆ. ಇದರೊಂದಿಗೆ, ಗೂಗಲ್, ಫೇಸ್​ಬುಕ್, ಮೈಕ್ರೋಸಾಫ್ಟ್ ಹಾಗೂ ಆ್ಯಪಲ್​ ಕಂಪನಿಗ

Amazon Hiring: ಉದ್ಯೋಗಾಕಾಂಕ್ಷಿಗಳಿಗೆ ನಿರಾಸೆ; ನೇಮಕಾತಿ ಮುಂದೂಡಿಕೆ ಘೋಷಿಸಿದ ಅಮೆಜಾನ್
ಅಮೆಜಾನ್
Edited By:

Updated on: Nov 04, 2022 | 12:45 PM

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಉದ್ಯೋಗಾಕಾಂಕ್ಷಿಗಳಿಗೆ ನಿರಾಶಾದಾಯಕವಾಗಿ ಪರಿಣಮಿಸಿದೆ. ಜಾಕತಿಕ ಆರ್ಥಿಕ (Global Economic Crisis) ಬಿಕ್ಕಟ್ಟು, ಐಟಿ ಉದ್ದಿಮೆಗಳ (IT Companies) ವ್ಯವಹಾರದಲ್ಲಿ ಕುಂಠಿತವಾಗಿರುವುದು ನೇಮಕಾತಿ ಪ್ರಕ್ರಿಯೆಗಳನ್ನು ವಿಳಂಬ ಮಾಡಿದೆ. ಗೂಗಲ್ (Google), ಫೇಸ್​ಬುಕ್, ಮೈಕ್ರೋಸಾಫ್ಟ್ ಹಾಗೂ ಆ್ಯಪಲ್​ (Apple) ಕಂಪನಿಗಳು ಉದ್ಯೋಗ ಕಡಿತ ಮಾಡುವುದರ ಜತೆಗೆ, ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುತ್ತಿವೆ. ಇದೀಗ ಅಮೆಜಾನ್ ಕೂಡ ಅದೇ ಸಾಲಿಗೆ ಸೇರಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಕೆಲವು ತಿಂಗಳುಗಳ ಮಟ್ಟಿಗೆ ಮುಂದೂಡಿಕೆ ಮಾಡಿರುವುದಾಗಿ ಘೋಷಿಸಿದೆ.

ಸ್ಥೂಲ ಆರ್ಥಿಕತೆಯ ಪರಿಸ್ಥಿತಿ ಸುಗಮವಾಗಿಲ್ಲದ ಕಾರಣ ನೇಮಕಾತಿ ಮುಂದೂಡಿಕೆ ಮಾಡಲಾಗಿದೆ ಎಂದು ಅಮೆಜಾನ್​ನ ಹಿರಿಯ ಉಪಾಧ್ಯಕ್ಷೆ ಬೆತ್ ಗ್ಯಾಲೆಟ್ಟಿ ತಿಳಿಸಿದ್ದಾರೆ. ಕಂಪನಿಯ ನೇಮಕಾತಿ, ಹೂಡಿಕೆ ಮತ್ತು ಆರ್ಥಿಕತೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಅಮೆಜಾನ್ ಬಯಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Amazon Upgrade Days Sale: ಅಮೆಜಾನ್​ನಲ್ಲಿ ಸ್ಮಾರ್ಟ್​ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌: ಈ ಮೊಬೈಲ್​ಗಳಿಗೆ ಬಂಪರ್ ಡಿಸ್ಕೌಂಟ್

ಇದನ್ನೂ ಓದಿ
Petrol Price on November 4: ನಿಮ್ಮ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತವಾಯ್ತಾ?; ಇಂದಿನ ಇಂಧನದ ಬೆಲೆ ಎಷ್ಟು?
ಬೆಂಗಳೂರು ಗಾಂಧಿ ಬಜಾರಿನಲ್ಲಿರುವ ಜಗದ್ವಿಖ್ಯಾತ ವಿದ್ಯಾರ್ಥಿ ಭವನ್ ಹೋಟೆಲ್​ಗೆ ಸ್ಟಾರ್‌ ಬಕ್ಸ್ ಸಂಸ್ಥಾಪಕ ಭೇಟಿ
RBI MPC meet: ಹಣದುಬ್ಬರ ತಡೆಯಲು ವಿಫಲ; ಕರಡು ವರದಿ ಸಿದ್ಧಪಡಿಸಿದ ಆರ್​ಬಿಐ
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಬಾಕಿ ಇರುವ ತುಟ್ಟಿಭತ್ಯೆ 3 ಕಂತಿನಲ್ಲಿ ನೀಡುವ ನಿರೀಕ್ಷೆ

‘ಮುಂದಿನ ಕೆಲವು ತಿಂಗಳುಗಳ ವರೆಗೆ ನೇಮಕಾತಿಗೆ ತಡೆಹಿಡಿಯಲಾಗಿದೆ. ಆರ್ಥಿಕತೆ ಮತ್ತು ಉದ್ದಿಮೆ ಹೇಗೆ ಸಾಗುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ. ಸದ್ಯ, ಕೆಲಸ ಬಿಟ್ಟು ತೆರಳಿದವರ ಜಾಗಕ್ಕಷ್ಟೇ ನೇಮಕಾತಿ ಮಾಡಿಕೊಂಡು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬಗ್ಗೆ ಮುಂದೆ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಜಗತ್ತಿನಾದ್ಯಂತ ಉದ್ಯೋಗ ಕಡಿತದ ಆತಂಕ

ಜಾಗತಿಕ ಆರ್ಥಿಕ ಹಿನ್ನಡೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಮೈಕ್ರೋಸಾಫ್ಟ್ ಇತ್ತೀಚೆಗಷ್ಟೇ 1,000 ಮಂದಿ ಉದ್ಯೋಗಿಗಳನ್ನು ವಜಾ ಮಾಡಿತ್ತು. ಅದರ ಬೆನ್ನಲ್ಲೇ, 4,000 ಉದ್ಯೋಗ ಕಡಿತ ಮಾಡುವುದಾಗಿ ಜಾಗತಿಕ ವೈದ್ಯಕೀಯ ಸಾಧನ ಉತ್ಪಾದನಾ ಕಂಪನಿ ಫಿಲಿಪ್ಸ್ ಘೋಷಿಸಿತ್ತು. ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಮಾಲೀಕತ್ವ ವಹಿಸಿಕೊಂಡ ಬಳಿಕ ಟ್ವಿಟರ್​ನಲ್ಲೂ ಅನೇಕ ಪ್ರಮುಖ ಹುದ್ದೆಗಳಲ್ಲಿರುವ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಸಿಇಒ ಪರಾಗ್ ಅಗರ್​ವಾಲ್ ಸೇರಿ ಅನೇಕರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಇನ್ನೂ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಭಾರತದಲ್ಲಿಯೂ ನೇಮಕಾತಿ ಮುಂದೂಡಿಕೆ

ಭಾರತದಲ್ಲಿಯೂ ವಿಪ್ರೊ, ಇನ್ಫೊಸಿಸ್​ನಂಥ ಟೆಕ್ ಕಂಪನಿಗಳು ಈ ವರ್ಷ ಉದ್ಯೋಗ ಕಡಿತ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದ್ದವು. ಮುಂದಿನ ತಿಂಗಳುಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವುದಾಗಿ ಆ್ಯಪಲ್, ಒರಾಕಲ್, ಗೂಗಲ್ ಕೂಡ ಇತ್ತೀಚೆಗೆ ಘೋಷಿಸಿದ್ದವು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:43 pm, Fri, 4 November 22