SBI Business Scheme: ಎಸ್​ಬಿಐ​ನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿ ತಿಂಗಳಿಗೆ 70 ಸಾವಿರ ರೂ.ವರೆಗೆ ಗಳಿಸಲು ಹೀಗೆ ಮಾಡಿ

SBI ATM franchise; ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಏನೇನು ಮಾನದಂಡಗಳನ್ನು ಅನುಸರಿಸಬೇಕು? ಹೂಡಿಕೆ ನಂತರ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ? ಇಲ್ಲಿದೆ ಮಾಹಿತಿ;

SBI Business Scheme: ಎಸ್​ಬಿಐ​ನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿ ತಿಂಗಳಿಗೆ 70 ಸಾವಿರ ರೂ.ವರೆಗೆ ಗಳಿಸಲು ಹೀಗೆ ಮಾಡಿ
ಭಾರತೀಯ ಸ್ಟೇಟ್ ಬ್ಯಾಂಕ್ (ಸಂಗ್ರಹ ಚಿತ್ರ)
Follow us
TV9 Web
| Updated By: Ganapathi Sharma

Updated on:Nov 04, 2022 | 10:57 AM

ಬೆಲೆ ಏರಿಕೆ, ಹಣದುಬ್ಬರ (Inflation) ಮಿತಿ ಮೀರಿರುವ ಈ ಕಾಲಘಟ್ಟದಲ್ಲಿ ಎಷ್ಟು ಹಣ ಗಳಿಸಿದರೂ ಉಳಿತಾಯ (Savings) ಮಾಡುವುದು ಕಷ್ಟವೆಂಬ ಪರಿಸ್ಥಿತಿ ಇದೆ. ಅದೇ ರೀತಿ ಸಣ್ಣ-ಪುಟ್ಟ ಉದ್ದಿಮೆಗಳನ್ನು ಸ್ಥಾಪಿಸಿ ಉತ್ತಮ ಆದಾಯ ಗಳಿಸುವುದೂ ಸುಲಭವಲ್ಲ. ಆದರೆ, ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ (SBI) ಎಟಿಎಂ ಫ್ರಾಂಚೈಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬರೋಬ್ಬರಿ ಆದಾಯ ಗಳಿಸಬಹುದು. ಸುಮಾರು 5 ಲಕ್ಷ ರೂ. ಹೂಡಿಕೆ ಮಾಡಿ ತಿಂಗಳಿಗೆ 70,000 ರೂ.ವರೆಗೆ ಗಳಿಸಲೂ ಅವಕಾಶವಿದೆ. ಹಾಗಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಏನೇನು ಮಾನದಂಡಗಳನ್ನು ಅನುಸರಿಸಬೇಕು? ಹೂಡಿಕೆ ನಂತರ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ? ಇಲ್ಲಿದೆ ಮಾಹಿತಿ;

ಗುತ್ತಿಗೆದಾರರ ಮೂಲಕ ಎಸ್​ಬಿಐ ಎಟಿಎಂ ಫ್ರಾಂಚೈಸ್

ಎಟಿಎಂ ಅನ್ನು ಬ್ಯಾಂಕ್​ಗಳೇ ಅಳವಡಿಸುತ್ತವೆ ಹಾಗೂ ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತವೆ ಎಂದು ನೀವಂದುಕೊಂಡಿದ್ದರೆ ಅದು ನಿಜವಲ್ಲ. ಬ್ಯಾಂಕ್​ಗಳು ಎಟಿಎಂ ಇನ್​​ಸ್ಟಾಲ್ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡುತ್ತವೆ. ಎಸ್​ಬಿಐ ಬ್ಯಾಂಕ್​ ಎಟಿಎಂ ಸ್ಥಾಪನೆಗಾಗಿ ಟಾಟಾ ಇಂಡಿಕ್ಯಾಷ್, ಮುತೂಟ್ ಎಟಿಎಂ ಹಾಗೂ ಇಂಡಿಯಾ ವನ್ ಎಟಿಎಂ ಕಂಪನಿಗಳಿಗೆ ಗುತ್ತಿಗೆ ನೀಡಿದೆ. ಹೀಗಾಗಿ ನೀವು ಎಟಿಎಂ ಕೇಂದ್ರ ಸ್ಥಾಪಿಸುವ, ಆ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಒಲವು ಹೊಂದಿದ್ದರೆ ಈ ಕಂಪನಿಗಳ ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಎಟಿಎಂ ಫ್ರಾಂಚೈಸ್ ಹೆಸರಿನಲ್ಲಿ ಅನೇಕ ಅಕ್ರಮಗಳೂ ನಡೆಯುವ ಸಾಧ್ಯತೆ ಇರುವುದರಿಂದ ಕಂಪನಿಗಳ ಅಧಿಕೃತ ವೆಬ್​​ಸೈಟ್ ಮತ್ತು ವ್ಯಕ್ತಿಗಳ ಮೂಲಕವೇ ವ್ಯವಹರಿಸುವುದು ಒಳ್ಳೆಯದು.

ಇದನ್ನೂ ಓದಿ
Image
Petrol Price on November 4: ನಿಮ್ಮ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತವಾಯ್ತಾ?; ಇಂದಿನ ಇಂಧನದ ಬೆಲೆ ಎಷ್ಟು?
Image
ಬೆಂಗಳೂರು ಗಾಂಧಿ ಬಜಾರಿನಲ್ಲಿರುವ ಜಗದ್ವಿಖ್ಯಾತ ವಿದ್ಯಾರ್ಥಿ ಭವನ್ ಹೋಟೆಲ್​ಗೆ ಸ್ಟಾರ್‌ ಬಕ್ಸ್ ಸಂಸ್ಥಾಪಕ ಭೇಟಿ
Image
RBI MPC meet: ಹಣದುಬ್ಬರ ತಡೆಯಲು ವಿಫಲ; ಕರಡು ವರದಿ ಸಿದ್ಧಪಡಿಸಿದ ಆರ್​ಬಿಐ
Image
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಬಾಕಿ ಇರುವ ತುಟ್ಟಿಭತ್ಯೆ 3 ಕಂತಿನಲ್ಲಿ ನೀಡುವ ನಿರೀಕ್ಷೆ

ಎಸ್​ಬಿಐ ಎಟಿಎಂ ಫ್ರಾಂಚೈಸ್ ಪಡೆದುಕೊಳ್ಳಲು ಇರುವ ಷರತ್ತುಗಳು

  1. ಎಟಿಎಂ ಕ್ಯಾಬಿನ್ ಸಿದ್ಧಪಡಿಸುವುದಕ್ಕಾಗಿ ಕನಿಷ್ಠ 50-80 ಚದರ ಅಡಿ ಜಾಗ ಇರಬೇಕು.
  2. ಇತರ ಎಟಿಎಂಗಳಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು ಹಾಗೂ ಸುಲಭವಾಗಿ ಜನರಿಗೆ ಕಾಣಿಸುವಂತಿರಬೇಕು.
  3. ಕನಿಷ್ಠ 1kWನ ವಿದ್ಯುತ್ ಸಂಪರ್ಕ ಇರಬೇಕು. ಹಾಗೂ 24 ಗಂಟೆಗಳ ವಿದ್ಯುತ್ ಪೂರೈಕೆ ಇರಬೇಕು.
  4. ಇಟ್ಟಿಗೆ ಅಥವಾ ಕಲ್ಲಿನ ಗೋಡೆಗಳು ಮತ್ತು ಕಾಂಕ್ರೀಟ್ ಛಾವಣಿಯೊಂದಿಗೆ ಎಟಿಎಂ ಕ್ಯಾಬಿನ್ ಬಲಿಷ್ಠ ಕಟ್ಟಡವಾಗಿರಬೇಕು.
  5. ಎಟಿಎಂ ಕ್ಯಾಬಿನ್ ಅಳವಡಿಸುವುದಕ್ಕಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದಿರಬೇಕು.

ಏನೆಲ್ಲ ದಾಖಲೆಗಳು ಬೇಕಾಗುತ್ತವೆ?

  1. ಗುರುತಿನ ಚೀಟಿಗಳಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಹೊಂದಿರಬೇಕು.
  2. ವಿಳಾಸದ ಗುರುತಿಗಾಗಿ ಪಡಿತರ ಚೀಟಿ, ವಿದ್ಯುತ್ ಬಿಲ್ ಹೊಂದಿರಬೇಕು.
  3. ಬ್ಯಾಂಕ್ ಖಾತೆ ವಿವರ ಹಾಗೂ ಪಾಸ್​ಬುಕ್
  4. ಫೋಟೊಗ್ರಾಫ್, ಇ-ಮೇಲ್, ದೂರವಾಣಿ ಸಂಖ್ಯೆ
  5. ಬೇಕಾಗುವ ಇತರ ದಾಖಲೆಗಳು: ಜಿಎಸ್​ಟಿ ಸಂಖ್ಯೆ, ಕಂಪನಿಗಳು ಕೇಳುವ ಹಣಕಾಸು ದಾಖಲೆಗಳು

ಹೂಡಿಕೆ ಮತ್ತು ಆದಾಯದ ವಿವರ

ಎಟಿಎಂ ಫ್ರಾಂಚೈಸ್​ಗಾಗಿ ಅರ್ಜಿ ಸಲ್ಲಿಸುವಾಗ ಭದ್ರತಾ ಠೇವಣಿಯಾಗಿ 2 ಲಕ್ಷ ರೂ. ನೀಡಬೇಕಾಗುತ್ತದೆ. ಬಳಿಕ 3 ಲಕ್ಷ ರೂ. ಕೆಲಸದ ಬಂಡವಾಳ (working capital) ನೀಡಬೇಕಾಗುತ್ತದೆ. ಹೀಗೆ ಒಟ್ಟು 5 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ. ಎಟಿಎಂ ಇನ್​ಸ್ಟಾಲ್ ಆಗಿ ಜನರು ಹಣ ವಿತ್​ಡ್ರಾ ಮಾಡಲು ಆರಂಭವಾದ ಬಳಿಕ ಪ್ರತಿ ನಗದು ವಿತ್​ಡ್ರಾ ವಹಿವಾಟಿಗೆ 8 ರೂ.ನಂತೆ ನೀವು ಆದಾಯ ಗಳಿಸಬಹುದು. ನಗದಿಗೆ ಸಂಬಂಧಿಸಿರದ, ಅಂದರೆ ಬ್ಯಾಲೆನ್ಸ್ ಪರಿಶೀಲನೆ, ಫಂಡ್​ ಟ್ರಾನ್ಸ್​ಫರ್​ ಇತ್ಯಾದಿ ವಹಿವಾಟಿಗೆ ಪ್ರತಿ ಬಾರಿ 2. ರೂ.ನಂತೆ ಆದಾಯ ಗಳಿಸಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 am, Fri, 4 November 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್