AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI Effect: ಎಐ ಟೆಕ್ನಾಲಜಿಯಿಂದ ಉದ್ಯೋಗನಷ್ಟ; ಮುಂದುವರಿದ ದೇಶಗಳಿಗೆ ಹೆಚ್ಚು ಬಾಧೆ ಎಂದ ಐಎಂಎಫ್ ಮುಖ್ಯಸ್ಥೆ

Artificial Intelligence Technology Effect on Jobs: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ಜಾಗತಿಕವಾಗಿ ಶೇ. 40ರಷ್ಟು ಜನರ ಕೆಲಸಗಳಿಗೆ ಅಪಾಯ ಇರಬಹುದು ಎಂದು ಐಎಂಎಫ್ ಮುಖ್ಯಸ್ಥೆ ಹೇಳಿದ್ದಾರೆ. ಐಐನಿಂದ ಮುಂದುವರಿದ ದೇಶಗಳಲ್ಲಿ ಎಐನಿಂದ ಶೇ. 60ರಷ್ಟು ಉದ್ಯೋಗಗಳು ನಶಿಸಬಹುದು ಎಂದು ಕ್ರಿಸ್ಟಾಲಿನಾ ಜಾರ್ಜಿಯೆವಾ ಅಭಿಪ್ರಾಯಪಟ್ಟಿದ್ದಾರೆ. ಕೃತಕ ಬುದ್ಧಿಮತ್ತೆ ಟೆಕ್ನಾಲಜಿಯಿಂದ ಉದ್ಯೋಗನಷ್ಟವಾದರೂ ಉದ್ಯಮ ವಲಯದ ಉತ್ಪನ್ನಶೀಲತೆ ಮತ್ತು ಆದಾಯಮಟ್ಟ ಹೆಚ್ಚುತ್ತದೆ ಎಂದಿದ್ದಾರೆ.

AI Effect: ಎಐ ಟೆಕ್ನಾಲಜಿಯಿಂದ ಉದ್ಯೋಗನಷ್ಟ; ಮುಂದುವರಿದ ದೇಶಗಳಿಗೆ ಹೆಚ್ಚು ಬಾಧೆ ಎಂದ ಐಎಂಎಫ್ ಮುಖ್ಯಸ್ಥೆ
ಕ್ರಿಸ್ಟಾಲೀನಾ ಜಾರ್ಜಿಯೆವಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 15, 2024 | 1:40 PM

Share

ವಾಷಿಂಗ್ಟನ್, ಜನವರಿ 15: ಬಹಳ ಬೇಗ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಹೆಚ್ಚಿಸುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ಉದ್ಯೋಗನಷ್ಟ (AI effect on Jobs) ಬಹಳ ದೊಡ್ಡ ಮಟ್ಟದಲ್ಲಿ ಆಗಬಹುದು ಎಂಬ ಆತಂಕ ಇದೆ. ಈ ವಿಚಾರದಲ್ಲಿ ಮಿಶ್ರಾಭಿಪ್ರಾಯಗಳಿವೆ. ಉದ್ಯೋಗನಷ್ಟ ಇರಬಹುದಾದರೂ ಎಐ ಟೆಕ್ನಾಲಜಿಯಿಂದ ಅದಕ್ಕಿಂತ ಮಿಗಿಲಾದ ಲಾಭದ ಅವಕಾಶ ಇದೆ ಎನ್ನುವ ಅನಿಸಿಕೆ ಇದೆ. ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಾಲೀನಾ ಜಾರ್ಜಿಯೆವಾ (Kristalina Georgieva) ಕೂಡ ಈ ಅನಿಸಿಕೆಗೆ ಧ್ವನಿಗೂಡಿಸಿದ್ದಾರೆ. ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ (Davos) ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಭೆಗೆ ತೆರಳುವ ಮುನ್ನ ಎಎಫ್​ಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜಾರ್ಜಿಯೆವಾ, ಎಐ ಟೆಕ್ನಾಲಜಿಯಿಂದ ಉದ್ಯೋಗಗಳು ನಶಿಸುವ ಸಾಧ್ಯತೆ ಇದ್ದರೂ ಉತ್ಪಾದನೆ ಮತ್ತು ಜಾಗತಿಕ ಬೆಳವಣಿಗೆ ಹೆಚ್ಚಿಸಲು ಅದು ನೆರವಾಗಬಹುದು ಎಂದಿದ್ದಾರೆ.

ಮುಂದುವರಿದ ದೇಶಗಳಲ್ಲಿ ಹೆಚ್ಚು ಉದ್ಯೋಗನಷ್ಟ…

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜಾಗತಿಕವಾಗಿ ಶೇ. 40ರಷ್ಟು ಉದ್ಯೋಗನಷ್ಟ ಉಂಟು ಮಾಡುವ ಸಾಧ್ಯತೆ ಎಂದಿರುವ ಐಎಂಎಫ್ ಮುಖ್ಯಸ್ಥೆ, ಈ ವಿಚಾರದಲ್ಲಿ ಮುಂದುವರಿದ ದೇಶಗಳಿಗೆ ಹೆಚ್ಚು ಬಾಧೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Rich vs Poor: ಶ್ರೀಮಂತರಿಗೆ ಇನ್ನಷ್ಟು ಶ್ರೀಮಂತಿಕೆ; ಬಡವರಿಗೆ ಇನ್ನಷ್ಟು ಬಡತನ; ಬೆಚ್ಚಿಬೀಳಿಸುತ್ತದೆ ಆಕ್ಸ್​ಫ್ಯಾಮ್ ವರದಿ

ಜಾರ್ಜಿಯೆವಾ ಪ್ರಕಾರ, ಮುಂದುವರಿದ ದೇಶಗಳಲ್ಲಿ ಶೇ. 60ರಷ್ಟು ಉದ್ಯೋಗಗಳು ಎಐ ಟೆಕ್ನಾಲಜಿಯಿಂದಾಗಿ ಅಪಾಯಕ್ಕೆ ಸಿಲುಕಬಹುದು. ಆದರೆ, ಅಭಿವೃದ್ಧಿಶೀಲ ದೇಶಗಳಲ್ಲಿ ಕಡಿಮೆ ಉದ್ಯೋಗನಷ್ಟ ಆಗಬಹುದು.

ಹೆಚ್ಚು ಕೌಶಲ್ಯದ ಉದ್ಯೋಗಗಳು ಇದ್ದಷ್ಟೂ ಎಐ ಪರಿಣಾಮ ಹೆಚ್ಚಿರುತ್ತದೆ. ಹೀಗಾಗಿ, ಮುಂದುವರಿದ ಆರ್ಥಿಕತೆಗಳ ಮೇಲೆ ಪರಿಣಾಮ ಹೆಚ್ಚಿರುತ್ತದೆ. ಆದರೆ, ಇದೇ ಎಐ ಟೆಕ್ನಾಲಜಿಯಿಂದ ಉತ್ಪನ್ನಶೀಲತೆಯೂ ಬಹಳ ಅಧಿಕಗೊಳ್ಳುತ್ತದೆ ಎಂದು ನಿನ್ನೆ ಭಾನುವಾರ (ಜ. 14) ಬಿಡುಗಡೆಯಾದ ಐಎಂಎಫ್​ನ ವರದಿಯೊಂದರಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Share Market: ಭಾರತದ ಷೇರುಪೇಟೆ ಹೊಸ ಎತ್ತರಕ್ಕೆ; ಸೆನ್ಸೆಕ್ಸ್, ನಿಫ್ಟಿ ಎರಡೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ

‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನಿಂದ ನಿಮ್ಮ ಕೆಲಸ ಹೋಗಬಹುದು. ಅಥವಾ ನಿಮ್ಮ ಕೆಲಸದ ಕ್ಷಮತೆಯನ್ನು ಹೆಚ್ಚಿಸಬಹುದು. ನಿಮ್ಮ ಉತ್ಪನ್ನಶೀಲತೆ ಮತ್ತು ಸಂಬಳ ಎಲ್ಲವೂ ಹೆಚ್ಚಾಗಬಹುದು’ ಎಂದು ಜಾರ್ಜಿಯೆವಾ ಅವರು ಎಐನ ಧನಾತ್ಮಕ ಪರಿಣಾಮಗಳನ್ನು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ