Share Market: ಭಾರತದ ಷೇರುಪೇಟೆ ಹೊಸ ಎತ್ತರಕ್ಕೆ; ಸೆನ್ಸೆಕ್ಸ್, ನಿಫ್ಟಿ ಎರಡೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ

Sensex and Nifty New Record Height: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಪ್ರಮುಖ ಸೂಚ್ಯಂಕಗಳು ಹೊಸ ದಾಖಲೆಯ ಎತ್ತರಕ್ಕೆ ಏರಿವೆ. ಬಿಎಸ್​ಇ ಸೆನ್ಸೆಕ್ಸ್-30 ಸೂಚ್ಯಂಕ ಮೊದಲ ಬಾರಿಗೆ 73,000 ಅಂಕಗಳ ಗಡಿ ದಾಟಿದೆ. ಎನ್​ಎಸ್​ಇ ನಿಫ್ಟಿ50 ಸೂಚ್ಯಂಕ ಕೂಡ ಮೊದಲ ಬಾರಿಗೆ 22,000 ಅಂಕಗಳ ಮಟ್ಟ ಮುಟ್ಟಿದೆ.

Share Market: ಭಾರತದ ಷೇರುಪೇಟೆ ಹೊಸ ಎತ್ತರಕ್ಕೆ; ಸೆನ್ಸೆಕ್ಸ್, ನಿಫ್ಟಿ ಎರಡೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ
ಷೇರುಪೇಟೆ
Follow us
|

Updated on:Jan 15, 2024 | 10:38 AM

ನವದೆಹಲಿ, ಜನವರಿ 15: ಭಾರತದ ಷೇರು ಮಾರುಕಟ್ಟೆ (stock market) ಪುಟಿದೆದ್ದು ಉತ್ಸಾಹದಿಂದ ಮಿಂಚುತ್ತಿರುವಂತಿದೆ. ಷೇರುಪೇಟೆಯ ಪ್ರಮುಖ ಸೂಚ್ಯಂಕಗಳು ಹೊಸ ಎತ್ತರಕ್ಕೆ ಏರಿವೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ (BSE Sensex) ಸಂಕ್ರಾಂತಿ ಹಬ್ಬದ ದಿನದಂದು 600 ಅಂಕಗಳಷ್ಟು ವೃದ್ಧಿ ಕಂಡು, 73,168 ಅಂಕಗಳ ಮಟ್ಟಕ್ಕೆ ಏರಿದೆ. ಬಿಎಸ್​ಇ ಇತಿಹಾಸದಲ್ಲಿ 30 ಷೇರುಗಳ ಸೆನ್ಸೆಕ್ಸ್ ಏರಿದ ಗರಿಷ್ಠ ಎತ್ತರ ಇದು. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ ಸೂಚ್ಯಂಕ (NSE Nifty) ಕೂಡ ಇಂದು ಸೋಮವಾರ 22,000 ಅಂಕಗಳ ಗಡಿಯನ್ನು ಮೊದಲ ಬಾರಿಗೆ ಮುಟ್ಟಿದೆ.

50 ಷೇರುಗಳ ನಿಫ್ಟಿ ಸೂಚ್ಯಂಕ ಸಂಕ್ರಾಂತಿ ಹಬ್ಬದ ದಿನದಂದು 150 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ 22,056.10 ಅಂಕಗಳ ಗಡಿ ಮುಟ್ಟಿದೆ. ಎನ್​ಎಸ್​ಇ ಇತಿಹಾಸದಲ್ಲಿ ನಿಫ್ಟಿ ಏರಿದ ಗರಿಷ್ಠ ಎತ್ತರ ಇದು. ನಿಫ್ಟಿ 50 ಸತತ ಐದು ಸೆಷನ್ ಹೆಚ್ಚಳ ಕಂಡಿದೆ.

ಇದನ್ನೂ ಓದಿ: Facts: ಬಜೆಟ್ ಮಂಡನೆ ಫೆಬ್ರುವರಿ ಕೊನೆಯ ದಿನದ ಬದಲು 1ರಂದು ಯಾಕೆ? ಸಂಜೆ 5ರ ಬದಲು ಬೆಳಗ್ಗೆ 11ಗಂಟೆಗೆ ಬದಲಾಗಿದ್ದು ಯಾಕೆ?

ಬಿಎಸ್​ಇ ಮತ್ತು ಎನ್​ಎಸ್​ಇಯ ಬಹುತೇಕ ಎಲ್ಲ ಸೂಚ್ಯಂಕಗಳು ಹಿಗ್ಗಿವೆ. ನಿಫ್ಟಿ ಮಿಡ್​ಕ್ಯಾಪ್, ಸ್ಮಾಲ್ ಕ್ಯಾಪ್ ಮೊದಲಾದ ವಿವಿಧ ಸೂಚ್ಯಂಕಗಳು ಅಂಕ ವೃದ್ಧಿ ಕಂಡಿವೆ.

ಸೆನ್ಸೆಕ್ಸ್ ಮತ್ತು ನಿಫ್ಟಿಯ ಈ ಅಗಾಧ ಬೆಳವಣಿಗೆಗೆ ಕಾರಣವಾಗಿದ್ದು ಐಟಿ ದಿಗ್ಗಜ ಸಂಸ್ಥೆಗಳ ಹಣಕಾಸು ವರದಿ ಇತ್ತೀಚೆಗೆ ಬಿಡುಗಡೆ ಆಗಿದ್ದು, ಈ ಸಂಸ್ಥೆಗಳು ಉತ್ತಮ ಲಾಭ ತೋರಿಸಿವೆ. ಅದರ ಪರಿಣಾಮವು ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕದ ಮೇಲೆ ಪರಿಣಾಮ ಬೀರಿದೆ.

ನಿಫ್ಟಿ ಮತ್ತು ಸೆನ್ಸೆಕ್ಸ್​ನಲ್ಲಿ ಲಿಸ್ಟ್ ಆಗಿರುವ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಎಚ್​ಸಿಎಲ್ ಇತ್ಯಾದಿ ಕಂಪನಿಗಳ ಆದಾಯವು ಮೂರನೇ ತ್ರೈಮಾಸಿಕದಲ್ಲಿ ಉತ್ತಮವಾಗಿದೆ. ಇದರ ಪರಿಣಾಮವಾಗಿ ಈ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಿ ಬೆಲೆ ಹೆಚ್ಚಾಗಿದೆ. ಹೀಗಾಗಿ, ಸೂಚ್ಯಂಕಗಳೂ ವೃದ್ಧಿ ಕಂಡಿವೆ.

ಇದನ್ನೂ ಓದಿ: Forex: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಕಳೆದ ಐದು ವಾರದಲ್ಲಿ ಮೊದಲ ಬಾರಿಗೆ ಇಳಿಕೆ

ಹಿಂದೆಲ್ಲಾ ತುಸು ಮಂದಗತಿಯ ಬೆಳವಣಿಗೆ ಹೊಂದುತ್ತಿದ್ದ ಇನ್ಫೋಸಿಸ್ ಮತ್ತು ವಿಪ್ರೋದ ಷೇರುಗಳು ಈಗ ಚುರುಕು ಕಂಡಿವೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ವಿಪ್ರೋ ಷೇರು ಬೆಲೆ ಶೇ. 11ಕ್ಕಿಂತಲೂ ಹೆಚ್ಚಾಗಿದೆ. ಇನ್ಫೋಸಿಸ್, ಟಿಸಿಎಸ್ ಮತ್ತು ಎಚ್​ಸಿಎಲ್ ಷೇರು ಬೆಲೆ ಶೇ. 2ರಿಂದ 4ರವರೆಗೆ ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:38 am, Mon, 15 January 24

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ