AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol: ಪೆಟ್ರೋಲ್ ಬೆಲೆ ಇಳಿಸಬೇಕೆಂದಿದ್ದ ಕೇಂದ್ರ ಸರ್ಕಾರಕ್ಕೆ ಈಗ ಇಬ್ಬಂದಿ ಸಂಕಟ ತಂದಿಟ್ಟ ಈ ಉಗ್ರರು; ಭಾರತದಲ್ಲಿ ಬೆಲೆ ಏರಿಕೆ ಸಾಧ್ಯತೆ

Houthi Rebels Disrupt Global Supply Chain: ಆಫ್ರಿಕಾ, ಏಷ್ಯಾ ಕೊಂಡಿಯಂತಿರುವ ಸುಯೆಜ್ ಕಾಲುವೆ ಜಲಮಾರ್ಗದಲ್ಲಿ ಇರಾನ್ ಬೆಂಬಲಿತ ಹೌತಿ ಉಗ್ರರು ಹಡಗುಗಳ ಮೇಲೆ ಸತತವಾಗಿ ದಾಳಿ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಗೆ ಧಕ್ಕೆ ಆಗಿದೆ. ಭಾರತದಂತಹ ಪ್ರಮುಖ ತೈಲ ಆಮದು ದೇಶಗಳಿಗೆ ಹೆಚ್ಚು ಬಾಧೆಯಾಗಿದ್ದು, ಪೆಟ್ರೋಲ್ ಬೆಲೆ ಹೆಚ್ಚುವ ನಿರೀಕ್ಷೆ ಇದೆ.

Petrol: ಪೆಟ್ರೋಲ್ ಬೆಲೆ ಇಳಿಸಬೇಕೆಂದಿದ್ದ ಕೇಂದ್ರ ಸರ್ಕಾರಕ್ಕೆ ಈಗ ಇಬ್ಬಂದಿ ಸಂಕಟ ತಂದಿಟ್ಟ ಈ ಉಗ್ರರು; ಭಾರತದಲ್ಲಿ ಬೆಲೆ ಏರಿಕೆ ಸಾಧ್ಯತೆ
ಸರಕು ಸಾಗಣೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 15, 2024 | 12:36 PM

Share

ನವದೆಹಲಿ, ಜನವರಿ 15: ಜಾಗತಿಕವಾಗಿ ಸತತವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ಇಳಿಸುವ ಮನಸು ಮಾಡಿದ್ದ ಕೇಂದ್ರ ಸರ್ಕಾರಕ್ಕೆ ಈಗ ಯೆಮೆನ್​ನ ಬಂಡುಕೋರರು (Houthi rebels) ತಲೆನೋವಾಗಿದ್ದಾರೆ. ಸಾಗರ ಮಾರ್ಗದಲ್ಲಿ ವರ್ತಕರ ಹಡಗುಗಳ ಮೇಲೆ ಹೌತಿ ಬಂಡುಕೋರರ ಸತತ ದಾಳಿಯಿಂದ ಜಾಗತಿಕ ಸರಬರಾಜು ಸರಪಳಿಗೆ (global supply chain) ಧಕ್ಕೆಯಾಗಿದೆ. ಅದರಲ್ಲೂ ತೈಲ ಸರಬರಾಜಿಗೆ ಹೊಡೆತ ಬಿದ್ದಿದೆ. ಭಾರತದಂತಹ ಪ್ರಮುಖ ತೈಲ ಆಮದು ದೇಶಗಳಿಗೆ ಹೆಚ್ಚು ಬಾಧೆಯಾಗಬಹುದು. ಭಾರತಕ್ಕೆ ತೈಲ ಬೆಲೆ ಒಂದು ಬ್ಯಾರಲ್​ಗೆ 10ರಿಂದ 20 ಡಾಲರ್​ನಷ್ಟು ಬೆಲೆ ಹೆಚ್ಚಳವಾಗಬಹುದು ಎಂದು ವರ್ಲ್ಡ್ ಎಕನಾಮಿಕ್ ಫೋರಂನ ಅಧ್ಯಕ್ಷ ಬೋರ್ಜ್​ ಬ್ರೆಂಡೆ (Borge Brende) ಅಂದಾಜು ಮಾಡಿದ್ದಾರೆ.

ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್ ನಗರದಲ್ಲಿ 54ನೇ ವಾರ್ಷಿಕ ವರ್ಲ್ಡ್ ಎಕನಾಮಿಕ್ ಫೋರಂ ಸಭೆಯ ಹಿನ್ನೆಲೆಯಲ್ಲಿ ಇಂಡಿಯಾ ಟುಡೇ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಬೋರ್ಜ್ ಬ್ರೆಂಡೆ ಅವರು, ಸುಯೆಲ್ ಕಾಲುವೆಯ ಮಾರ್ಗ ನಿಲುಗಡೆ ಆಗುವುದರಿಂದ ವಿಶ್ವಾದ್ಯಂತ ಸರಬರಾಜು ವ್ಯವಸ್ಥೆಗೆ ಧಕ್ಕೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್​​ಗಳು ಬಂದ್, ಲಕ್ಷಾಂತರ ಜನರು ಆಫ್​​ಲೈನ್; ಚೀನಾ ಆಕ್ರಮಣ ಎದುರಿಸಲು ಸಿದ್ಧತೆ ನಡೆಸುತ್ತಿದೆ ತೈವಾನ್

ಆಫ್ರಿಕಾ ಮತ್ತು ಏಷ್ಯಾ (ಅರೇಬಿಯಾ) ನಡುವೆ ಇರುವ ಕಿರಿದಾದ ಸಮುದ್ರ ರೆಡ್ ಸೀ. ಹಿಂದೂ ಮಹಾಸಾಗರದ ಭಾಗವಾಗಿರುವ ಈ ರೆಡ್ ಸೀ ಪ್ರಮುಖ ಸಾಗರ ಮಾರ್ಗವಾಗಿದೆ. ಏಷ್ಯಾ, ಯೂರೋಪ್ ಮತ್ತು ಆಫ್ರಿಕಾ ಮಧ್ಯೆ ಸರಕು ಸಾಗಾಣಿಕೆ ಮಾಡಲು ಇದು ಬಹಳ ಮಹತ್ವದ ಮಾರ್ಗವಾಗಿದೆ. ಸುಮಾರು 2,000 ಕಿಮೀಯಷ್ಟು ಉದ್ದದ ಈ ಸಾಗರ ಮಾರ್ಗದಲ್ಲಿ ಈಗ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಅಮೆರಿಕ, ಬ್ರಿಟನ್ ದೇಶಗಳ ಮಿಲಿಟರಿ ದಾಳಿಗೂ ಜಗ್ಗದ ಇವರನ್ನು ತಡೆಯುವುದು ಬಹಳ ಕಷ್ಟಕರ ಕೆಲಸವಾಗಿದೆ.

ಸರಕು ಸಾಗಣೆಗೆ ಸುಯೆಜ್ ಕೆನಾಲ್​ಗೆ ಸೂಕ್ತ ಪರ್ಯಾಯ ಮಾರ್ಗ ಇಲ್ಲ. ಆಫ್ರಿಕಾದ ದಕ್ಷಿಣ ಭಾಗದ ಕಡೆಯಿಂದ ಹಡಗುಗಳು ಸಾಗಬೇಕಾಗುತ್ತದೆ. ಇದರಿಂದ ಸರಕು ಸಾಗಣೆ ಅವಧಿ 10ರಿಂದ 15 ದಿನಗಳಷ್ಟು ಹೆಚ್ಚಾಗುತ್ತದೆ. ಪರಿಣಾಮವಾಗಿ ಅಂತಾರಾಷ್ಟ್ರೀಯ ವಹಿವಾಟು ಕಷ್ಟಕರವಾಗುತ್ತದೆ. ಸರಕುಗಳ ಬೆಲೆ ಹೆಚ್ಚಾಗುತ್ತದೆ. ಅದರಲ್ಲೂ ತೈಲ ಬೆಲೆ ಹೆಚ್ಚಾಗುವುದು ನಿಶ್ಚಿತ.

ಇದನ್ನೂ ಓದಿ: Rich vs Poor: ಶ್ರೀಮಂತರಿಗೆ ಇನ್ನಷ್ಟು ಶ್ರೀಮಂತಿಕೆ; ಬಡವರಿಗೆ ಇನ್ನಷ್ಟು ಬಡತನ; ಬೆಚ್ಚಿಬೀಳಿಸುತ್ತದೆ ಆಕ್ಸ್​ಫ್ಯಾಮ್ ವರದಿ

ಭಾರತದ ತೈಲ ಮಾರುಕಟ್ಟೆ ಕಂಪನಿಗಳಿಗೆ ಹೆಚ್ಚಿನ ಹೊರೆಯಾಗುತ್ತದೆ. ಪರಿಣಾಮವಾಗಿ ಪೆಟ್ರೋಲ್ ಬೆಲೆ ಹೆಚ್ಚಿಸಲು ಈ ತೈಲ ಸಂಸ್ಥೆಗಳಿಗೆ ಸರ್ಕಾರ ಅನುಮತಿಸಬಹುದು. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಪೆಟ್ರೋಲ್ ಬೆಲೆ ಹೆಚ್ಚಳ ಸಾಧ್ಯತೆ ಇದೆ. ಆದರೆ, ಪೆಟ್ರೋಲ್ ಮೇಲಿನ ಸುಂಕಗಳನ್ನು ಸರ್ಕಾರ ಕಡಿಮೆ ಮಾಡುವುದು ಸದ್ಯಕ್ಕೆ ಇರುವ ಇನ್ನೊಂದು ಪರ್ಯಾಯ ಕ್ರಮವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ