ಇವತ್ತು ಈ ವರ್ಷದ ಅಕ್ಷಯ ತೃತೀಯ (Akshaya Tritiya) ದಿನ. ಭಾರತೀಯರಿಗೆ, ಅದರಲ್ಲೂ ಹಿಂದೂಗಳಿಗೆ ಬಹಳ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಹೊಸ ಕಾರ್ಯ ಆರಂಭಿಸಲು ಇದು ಶುಭ ದಿನ. ನೀವು ಬಿಸಿನೆಸ್ ಆರಂಭಿಸಬಹುದು. ಈ ದಿನದಂದು ಚಿನ್ನವನ್ನು ಖರೀದಿಸಿದರೆ ದಂತಕಥೆಯಲ್ಲಿರುವ ಅಕ್ಷಯ ಪಾತ್ರೆಯ ರೀತಿ ಸಂಪತ್ತು ವೃದ್ಧಿಸುತ್ತಲೇ ಇರುತ್ತದೆ. ಚಿನ್ನವನ್ನು ಖರೀದಿಸಿದ ಬಳಿಕ ಅದನ್ನು ಲಕ್ಷ್ಮೀ ಮತ್ತು ಕುಬೇರನ ಫೋಟೋಗಳ ಮುಂದಿಟ್ಟು ಪೂಜಿಸುತ್ತಾರೆ. ಮನೆಯಲ್ಲಿ ಸಮೃದ್ಧಿಯಾಗುತ್ತದೆ (prosperity) ಎನ್ನುವ ನಂಬಿಕೆ ಇದೆ. ಅಕ್ಷಯ ತೃತೀಯ ದಿನದಂದು ಚಿನ್ನವಲ್ಲದೇ ಇನ್ನೂ ನಾಲ್ಕು ವಸ್ತುಗಳನ್ನು ಖರೀದಿಸುವುದು ಶುಭಕರ ಎಂಬ ನಂಬಿಕೆ ಇದೆ.
ಅಕ್ಷಯ ತೃತೀಯ ದಿನದಂದು ಹೊಸ ಮನೆ ಖರೀದಿಸುವುದು ಶುಭ ಎನ್ನಲಾಗಿದೆ. ಮನೆ ಎಂಬುದು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಶ್ರಯವಾಗಿರುತ್ತದೆ. ಈ ಆಶ್ರಯ ಶಾಶ್ವತವಾಗಿ ನಿಮಗೆ ಉಳಿಯುತ್ತದೆ ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: ಭೌತಿಕ ಚಿನ್ನವಾ, ಬಾಂಡ್ಗಳಾ? ಅಕ್ಷಯ ತೃತೀಯ ದಿನದಂದು ಬಂಗಾರದಂಥ ತೀರ್ಮಾನ ಕೈಗೊಳ್ಳಿ
ನೀವು ವಾಹನ ಖರೀದಿಸುವ ಇರಾದೆಯಲ್ಲಿದ್ದರೆ ಅಕ್ಷಯ ತೃತೀಯ ದಿನದಂದು ಆ ಕೆಲಸ ಮಾಡಿ. ಒಂದು ವರ್ಷದಲ್ಲಿ ಇರುವ ಅತ್ಯಂತ ಶುಭ ಘಳಿಗೆಗಳಲ್ಲಿ ಅಕ್ಷಯ ತೃತೀಯ ಒಂದು. ಆ ದಿನದಂದು ಹೊಸ ವಾಹನ ಖರೀದಿಸುವುದು ಶುಭಕರ ಎನ್ನಲಾಗಿದೆ.
ಚಿನ್ನದಂತೆ ಬೆಳ್ಳಿಯೂ ಕೂಡ ಲಕ್ಷ್ಮೀ ದೇವರ ಪ್ರತೀಕವಾಗಿದೆ. ಬೆಳ್ಳಿಯನ್ನು ಮನೆಗೆ ತಂದರೆ ಲಕ್ಷ್ಮೀಯನ್ನು ಮನೆಗೆ ಆಹ್ವಾನಿಸಿದಂತೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ಪ್ರಸನ್ನಳಾಗಿ ನಿಮ್ಮ ಮನೆಯಲ್ಲಿ ನೆಲಸಿ ಸಂಪತ್ತು ವೃದ್ಧಿಸುವಂತೆ ಮಾಡುತ್ತಾಳೆ. ಇಂದು ಬೆಳ್ಳಿ ಖರೀದಿಸಿ ತಂದು ಅದನ್ನು ಲಕ್ಷ್ಮೀ ದೇವರ ಪಟದ ಬಳಿ ಇಟ್ಟು ಪೂಜೆ ಮಾಡಿ. ಬಳಿಕ ನೀವು ಹಣ ಇರಿಸುವ ಸ್ಥಳದ ಬಳಿ ಬೆಳ್ಳಿಯನ್ನು ಇಟ್ಟುಕೊಂಡಿರಿ.
ಇದನ್ನೂ ಓದಿ: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು?
ಮಣ್ಣಿನ ಕುಡಿಕೆಯು ಹಣ ಮತ್ತು ಸಂಪತ್ತನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಇದೆ. ಹೀಆಗಿ, ಅಕ್ಷಯ ತೃತೀಯ ದಿನದಂದು ಒಂದು ಪುಟ್ಟ ಮಡಿಕೆ ಖರೀದಿಸಿ ತಂದು, ಅದಕ್ಕೆ ಪೂಜೆ ಮಾಡಿ ಒಂದಿಡಿ ಅಕ್ಷತೆ ಕಾಳು ಅದರೊಳಗೆ ಹಾಕಿ ಒಂದು ವರ್ಷದವರೆಗೂ ಇಟ್ಟಿರಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ