Apple Watch Series 7: ಆಪಲ್ ವಾಚ್ ಸರಣಿ 7 ಭಾರತದಲ್ಲಿ ಅ.15ರಿಂದ ಮಾರಾಟಕ್ಕೆ; ಬೆಲೆ ಮತ್ತಿತರ ವಿವರ ಹೀಗಿದೆ

| Updated By: Srinivas Mata

Updated on: Oct 09, 2021 | 9:08 PM

ಆಪಲ್ ವಾಚ್ ಸರಣಿ 7 ಭಾರತದಲ್ಲಿ ಅಕ್ಟೋಬರ್​ 15ರಿಂದ ಖರೀದಿಗೆ ಲಭ್ಯ ಆಗಲಿದೆ. ಆಪಲ್ ಕಂಪೆನಿ ವಾಚ್​ 7ರ ವೈಶಿಷ್ಟ್ಯ, ಬೆಲೆ ಮತ್ತಿತರ ವಿವರಗಳು ಇಲ್ಲಿವೆ.

Apple Watch Series 7: ಆಪಲ್ ವಾಚ್ ಸರಣಿ 7 ಭಾರತದಲ್ಲಿ ಅ.15ರಿಂದ ಮಾರಾಟಕ್ಕೆ; ಬೆಲೆ ಮತ್ತಿತರ ವಿವರ ಹೀಗಿದೆ
ಆಪಲ್ ವಾಚ್ ಸರಣಿ 7
Follow us on

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಆಪಲ್ ಕಂಪೆನಿಯ ವಾರ್ಷಿಕ ಹಾರ್ಡ್‌ವೇರ್ ಬಿಡುಗಡೆ ಸಮಾರಂಭದಲ್ಲಿ ಐಫೋನ್ 13 ಸರಣಿಯೊಂದಿಗೆ ಆಪಲ್ ವಾಚ್ ಸರಣಿ 7 ಅನಾವರಣಗೊಳಿಸಲಾಯಿತು. ಭಾರತದಲ್ಲಿ ಸ್ಮಾರ್ಟ್ ವಾಚ್‌ಗಾಗಿ ಮುಂಗಡ ಆರ್ಡರ್ ಅಕ್ಟೋಬರ್ 8ರಿಂದ ಆರಂಭವಾಯಿತು. ಈಗ ಈ ವಾಚ್ 7 ಮುಂದಿನ ವಾರದಿಂದ ದೇಶದಲ್ಲಿ ಮಾರಾಟಕ್ಕೆ ಬರಲಿದೆ. ಅಕ್ಟೋಬರ್ 15ರಿಂದ ಆಪಲ್ ವಾಚ್ ಮಾರಾಟ ಆರಂಭವಾಗುತ್ತದೆ. ಆಪಲ್ ವಾಚ್ 7 ಪ್ರಸ್ತುತ ಆಪಲ್ ಇಂಡಿಯಾ ಸ್ಟೋರ್ ಮತ್ತು ಅಧಿಕೃತ ಆಪಲ್ ರೀಟೇಲರ್​ರೊಂದಿಗೆ ಪ್ರೀ ಆರ್ಡರ್​ಗಾಗಿ ಲಭ್ಯವಿದೆ. ಸ್ಮಾರ್ಟ್ ವಾಚ್ 41 ಎಂಎಂ ಮತ್ತು 45 ಎಂಎಂ ಆಯ್ಕೆಗಳಲ್ಲಿ ಲಭ್ಯ ಇದೆ. ಆಪಲ್ ವಾಚ್ 7 ಹಸಿರು, ಮಿಡ್​ನೈಟ್, ನ್ಯೂ ಬ್ಲೂ, ಸ್ಟಾರ್‌ಲೈಟ್ ಮತ್ತು (ಪ್ರಾಡಕ್ಟ್) RED ಬಣ್ಣ ಹೀಗೆ ಐದು ಅಲ್ಯೂಮಿನಿಯಂ ಕೇಸ್‌ಗಳಲ್ಲಿ ಲಭ್ಯವಿದೆ. ಸ್ಟೈನ್​ಲೆಸ್​ ಸ್ಟೀಲ್ ಆಯ್ಕೆಗಳು ಗೋಲ್ಡ್, ಗ್ರ್ಯಾಫೈಟ್ ಮತ್ತು ಸಿಲ್ವರ್ ಕಲರ್ ಫಿನಿಷ್​ಗಳಲ್ಲಿ ಲಭ್ಯ ಇರುತ್ತವೆ. ಇದನ್ನು ಸ್ಪೇಸ್ ಬ್ಲ್ಯಾಕ್ ಟೈಟಾನಿಯಂ ಮತ್ತು ಟೈಟಾನಿಯಂ ಫಿನಿಷಿಂಗ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ವಾಚ್ ಸರಣಿ 7ರ ಬೆಲೆಯು ಫ್ಲಿಪ್‌ಕಾರ್ಟ್ ಪಟ್ಟಿಯ ಪ್ರಕಾರ, ಅಲ್ಯೂಮಿನಿಯಂ ಕೇಸ್‌ನಲ್ಲಿ ಜಿಪಿಎಸ್ ವೇರಿಯಂಟ್​ಗೆ 41,900 ರೂಪಾಯಿಯಿಂದ ಆರಂಭವಾಗುತ್ತದೆ. ಜಿಪಿಎಸ್ ವೇರಿಯಂಟ್ 45 ಎಂಎಂ ವರ್ಷನ್​ ಇ-ಕಾಮರ್ಸ್ ಸೈಟ್‌ನಲ್ಲಿನ ಬೆಲೆ ವಿವರಗಳ ಪ್ರಕಾರ 44,900 ರೂಪಾಯಿಗೆ ಮಾರಾಟ ಆಗುತ್ತದೆ. ಫ್ಲಿಪ್‌ಕಾರ್ಟ್ ಜಿಪಿಎಸ್+ಸೆಲ್ಯುಲಾರ್ ವೇರಿಯಂಟ್ 41 ಎಂಎಂ ವರ್ಷನ್​ಗೆ 50,900 ರೂ. ಮತ್ತು 45 ಎಂಎಂಗೆ ರೂ. 53,900ಕ್ಕೆ ಪಟ್ಟಿ ಮಾಡಿದೆ. ಇ-ಟೇಲರ್ ಸ್ಟೈನ್‌ಲೆಸ್ ಸ್ಟೀಲ್ ಫಿನಿಷ್​ಗಳನ್ನು 41 ಎಂಎಂ ಆವೃತ್ತಿಗೆ ರೂ. 69,900 ಮತ್ತು ದೊಡ್ಡದಾದ 45 ಎಂಎಂ ಆವೃತ್ತಿಗೆ ರೂ. 73,900 ಎಂದು ಪಟ್ಟಿ ಮಾಡಿದೆ.

ಆಪಲ್ ವಾಚ್ 7 ವಿಶೇಷ ಮತ್ತು ವೈಶಿಷ್ಟ್ಯಗಳು
ಆಪಲ್ ವಾಚ್ ಸರಣಿ- 7 ತೆಳ್ಳಗಿನ 1.7 ಎಂಎಂ ಬೆಜೆಲ್‌ಗಳೊಂದಿಗೆ ಯಾವಾಗಲೂ ಆನ್ (Always On) ರೆಟಿನಾ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಈಗಿರುವ ಡಬ್ಲ್ಯೂಆರ್ 50 ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಜೊತೆಗೆ ಧೂಳಿನ ಪ್ರತಿರೋಧಕ್ಕಾಗಿ ಸ್ಮಾರ್ಟ್ ವಾಚ್​ನ ಹೊಸದರಲ್ಲಿ IP6Xನಲ್ಲಿ ಪುನರಾವರ್ತನೆ ಮಾಡಲಾಗಿದೆ. ವಾಚ್ ಸರಣಿ 7ರಲ್ಲಿ SpO2 ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯುವ ಸಾಮರ್ಥ್ಯ, ECG ಮತ್ತು ಎಲೆಕ್ಟ್ರಿಕಲ್ ಹೃದಯ ಸಂವೇದಕಗಳನ್ನು ಹಾಗೇ ಉಳಿಸಿಕೊಂಡಿದೆ. ಅಪ್‌ಗ್ರೇಡ್ ಮಾಡಿದ ವಾಚ್‌ಓಎಸ್ 8 ಮೈಂಡ್‌ಫುಲ್‌ನೆಸ್ ಅಪ್ಲಿಕೇಷನ್ ಅನ್ನು ಧರಿಸುವವರಿಗೆ ತಮ್ಮ ಒತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ದೊಡ್ಡ ಪರದೆಯು ಹೊಸ QWERTY ಕೀಬೋರ್ಡ್ ಮತ್ತು ಎರಡು ವಿಶಿಷ್ಟ ಗಡಿಯಾರ ಮುಖಗಳನ್ನು ಸಹ ನೀಡುತ್ತದೆ – ಕಾಂಟರ್ ಮತ್ತು ಮಾಡ್ಯುಲರ್ ಜೋಡಿ. ಆಪಲ್ ವಾಚ್ 7ರಲ್ಲಿ 18 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ. ಹಿಂದಿನ ಪೀಳಿಗೆಯ ಅಪ್​ಗ್ರೇಡ್​ನಲ್ಲಿ ಹೊಸ ಆಪಲ್ ವಾಚ್ ಶೇಕಡಾ 33ರಷ್ಟು ವೇಗದ ಚಾರ್ಜಿಂಗ್ ಪಡೆಯುತ್ತದೆ.

ಇದನ್ನೂ ಓದಿ: Apple iPhone: ಆಪಲ್​ ಐಫೋನ್​ 13ರ ಸರಣಿಯ ನಾಲ್ಕು ಫೋನ್​ ಬಿಡುಗಡೆ; ಬೆಲೆ, ಫೀಚರ್​ ಮತ್ತಿತರ ವಿವರ ಇಲ್ಲಿದೆ

Published On - 9:07 pm, Sat, 9 October 21