
ನವದೆಹಲಿ, ಏಪ್ರಿಲ್ 23: ಭಾರತದ ಖಾಸಗಿ ವಲಯವು ಏಪ್ರಿಲ್ ತಿಂಗಳಿನಲ್ಲಿ ಭರ್ಜರಿ ಬೆಳವಣಿಗೆಯನ್ನು ಸಾಧಿಸಿದೆ. ವಿಶೇಷವಾಗಿ ಉತ್ಪಾದನಾ ವಲಯದಲ್ಲಿ (Manufacturing sector) ಕಂಡುಬಂದ ಚೇತರಿಕೆಯು ಈ ಪ್ರಗತಿಗೆ ಮುಖ್ಯ ಕಾರಣ ಎಂದು ‘ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್’ (PMI) ವರದಿ ತಿಳಿಸಿದೆ. ಸರ್ವಿಸ್ ಸೆಕ್ಟರ್ ಕೂಡ ಏಪ್ರಿಲ್‌ನಲ್ಲಿ ಚುರುಕುಗೊಂಡಿದೆ. ಹಿಂದಿನ ತಿಂಗಳಾದ ಮಾರ್ಚ್ನಲ್ಲಿ ಇವೆರಡೂ ಕೂಡ ಮಂದ ಬೆಳವಣಿಗೆ ಕಂಡಿದ್ದವು.
ಎಸ್ ಅಂಡ್ ಪಿ ಗ್ಲೋಬಲ್ನಿಂದ ಕಲೆಹಾಲಾದ ಎಚ್ಎಸ್ಬಿಸಿ ಫ್ಯಾಶ್ ಇಂಡಿಯಾ ಕಾಂಪೊಸಿಟ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ಮಾರ್ಚ್ನಲ್ಲಿ 57 ಇದ್ದದ್ದು ಏಪ್ರಿಲ್‌ನಲ್ಲಿ 58.3ಕ್ಕೆ ಏರಿದೆ. ಐದು ವರ್ಷಗಳಂದ ಪಿಎಂಐ ಇಂಡೆಕ್ಸ್ ಸಕಾರಾತ್ಮಕವಾದ 50ರ ಮಟ್ಟಕ್ಕಿಂತ ಹೆಚ್ಚು ಇರುವುದು ಗಮನಾರ್ಹ.
ಭಾರತದ ಉತ್ಪಾದನಾ ಮತ್ತು ಸೇವಾ ವಲಯಗಳ ಸಂಯೋಜಿತ (Composite) PMI ಸೂಚ್ಯಂಕವು ಏಪ್ರಿಲ್‌ನಲ್ಲಿ ಸುಮಾರು 14 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ.
ಫ್ಯಾಕ್ಟರಿಗಳಲ್ಲಿ ಉತ್ಪಾದನೆಯು ವೇಗವಾಗಿ ಹೆಚ್ಚಾಗುತ್ತಿದ್ದು, ಹೊಸ ಆರ್ಡರ್‌ಗಳು (New Orders) ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಿಂದ ದೊಡ್ಡ ಪ್ರಮಾಣದಲ್ಲಿ ಬರುತ್ತಿವೆ.
ಉತ್ಪಾದನಾ ಬೇಡಿಕೆ ಹೆಚ್ಚಾದಂತೆ, ಖಾಸಗಿ ವಲಯದ ಕಂಪನಿಗಳು ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ. ಇದು ಕಳೆದ ಕೆಲವು ತಿಂಗಳುಗಳಿಗೆ ಹೋಲಿಸಿದರೆ ಉತ್ತಮ ಪ್ರಗತಿಯಾಗಿದೆ.
ಇದನ್ನೂ ಓದಿ: ವಾಟ್ಸಾಪ್ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್; ಬಂದಿದೆ ಹೊಸ ಫೀಚರ್
ಈ ವರದಿಯ ಪ್ರಕಾರ, ಭಾರತದ ಆರ್ಥಿಕತೆಯು ಮುಂಬರುವ ತಿಂಗಳುಗಳಲ್ಲಿಯೂ ಇದೇ ವೇಗದಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ವ್ಯಾಪಾರ ವಿಶ್ವಾಸಾರ್ಹತೆ (Business Confidence) ಹೆಚ್ಚಾಗಿದ್ದು, ಕಂಪನಿಗಳು ಹೊಸ ಹೂಡಿಕೆಗಳಿಗೆ ಉತ್ಸಾಹ ತೋರುತ್ತಿವೆ. ಇದು ದೇಶದ ಒಟ್ಟಾರೆ ಜಿಡಿಪಿ (GDP) ಬೆಳವಣಿಗೆಗೆ ಪೂರಕವಾಗಲಿದೆ.
ಇದನ್ನೂ ಓದಿ: ಒಂದು ತಿಂಗಳಲ್ಲಿ ಫೋನ್ಪೇನಲ್ಲಿ 1,000 ಕೋಟಿ ಟ್ರಾನ್ಸಾಕ್ಷನ್ಸ್; ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್
ಗಮನಿಸಿ: PMI ಸೂಚ್ಯಂಕವು 50ಕ್ಕಿಂತ ಹೆಚ್ಚಿದ್ದರೆ ಅದನ್ನು ‘ಆರ್ಥಿಕ ವಿಸ್ತರಣೆ’ ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್‌ನಲ್ಲಿ ಈ ಸಂಖ್ಯೆಯು 60ರ ಗಡಿ ದಾಟಿರುವುದು ಭಾರತದ ಆರ್ಥಿಕತೆಯ ಬಲವನ್ನು ತೋರಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ