ರೈಲು ಚಾಲಕರ ಸ್ಥಿತಿ ಆಗ ಹೇಗಿತ್ತು, ಈಗ ಹೇಗಿದೆ? ಹತ್ತು ವರ್ಷದ ಹಿಂದಿನ ಪರಿಸ್ಥಿತಿ ಹೋಲಿಸಿದ ಸಚಿವ ವೈಷ್ಣವ್

Indian Railways loco pilots situation comparision: ಲೋಕೋ ಪೈಲಟ್ಸ್ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ಧಾರೆ. ಉತ್ತಮ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಸಾಕಷ್ಟು ಬಾರಿ ಆರೋಪ ಮಾಡಿದ್ದಾರೆ. ಕೇಂದ್ರ ರೈಲ್ವೆ ಸಚಿವ ಎ ವೈಷ್ಣವ್ ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ವೊಂದನ್ನು ಹಾಕಿ ವಿವರಣೆ ನೀಡಿದ್ದಾರೆ. ಹತ್ತು ವರ್ಷದ ಹಿಂದೆ ರೈಲು ಚಾಲಕರಿಗೆ ಇದ್ದ ಪರಿಸ್ಥಿತಿಗೂ ಇವತ್ತಿನ ಪರಿಸ್ಥಿತಿಗೂ ತುಲನೆ ಮಾಡಿದ್ದಾರೆ.

ರೈಲು ಚಾಲಕರ ಸ್ಥಿತಿ ಆಗ ಹೇಗಿತ್ತು, ಈಗ ಹೇಗಿದೆ? ಹತ್ತು ವರ್ಷದ ಹಿಂದಿನ ಪರಿಸ್ಥಿತಿ ಹೋಲಿಸಿದ ಸಚಿವ ವೈಷ್ಣವ್
ಲೋಕೋ ಪೈಲಟ್​ಗಳು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 08, 2024 | 11:14 AM

ನವದೆಹಲಿ, ಆಗಸ್ಟ್ 8: ಲೋಕೋ ಪೈಲಟ್ಸ್ ಅಥವಾ ರೈಲು ಚಾಲಕರಿಗೆ ಸರ್ಕಾರ ಯಾವ ರೀತಿಯ ಸೌಲಭ್ಯಗಳನ್ನು ಕೊಟ್ಟಿದೆ, ಅವರ ಪರಿಸ್ಥಿತಿ ಹೇಗಿದೆ ಎಂಬ ವಿಚಾರವನ್ನು ಕೇಂದ್ರ ರೈಲ್ವೆ ಸಚಿವ ಡಾ. ಎ ವೈಷ್ಣವ್ ಇಂದು ಗುರುವಾರ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ ಅವರು, ಯುಪಿಎ ಅವಧಿಯಲ್ಲಿ ಮತ್ತು ಈಗಿನ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಲೋಕೋ ಪೈಲಟ್​​ಗಳ ಪರಿಸ್ಥಿತಿ ಹೇಗಿದೆ ಎಂದು ತುಲನೆ ಮಾಡಿದ್ದಾರೆ. ಲೋಕೋ ಪೈಲಟ್​ಗಳು ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಧ್ವನಿ ಎತ್ತಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವರು ಈ ಮೂಲಕ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದಾರೆ.

‘ಕಾಂಗ್ರೆಸ್ ಅವಧಿಯಲ್ಲಿದ್ದುದಕ್ಕಿಂತ ಇವತ್ತು ಭಾರತೀಯ ರೈಲ್ವೇಸ್ ಉತ್ತಮ ಸ್ಥಿತಿಯಲ್ಲಿದೆ. ಲೋಕೋ ಪೈಲಟ್​ಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು 2014ರಿಂದಲೂ ಉತ್ತಮಗೊಳ್ಳುತ್ತಿವೆ. ಅವರಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚು ಸೌಲಭ್ಯ ಕೊಡಲು ತಯಾರಿದ್ದೇವೆ’ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಸರ್ಕಾರದಿಂದ ಇಂದು ಲೋಕಸಭೆಯಲ್ಲಿ ವಕ್ಫ್ ಮಸೂದೆ ಮಂಡನೆ

ಲೋಕೋ ಪೈಲಟ್​ಗಳು ರೈಲ್ವೆ ಕುಟುಂಬದ ಪ್ರಮುಖ ಸದಸ್ಯರು. ಕಳೆದ ಹತ್ತು ವರ್ಷದಲ್ಲಿ ಅವರ ಕೆಲಸದ ಪರಿಸ್ಥಿತಿ ಸಾಕಷ್ಟು ಸುಧಾರಿಸಲಾಗಿದೆ. ಟ್ರಿಪ್ ಮುಗಿಸಿ ಬರುವ ಚಾಲಕರು ರನಿಂಗ್ ರೂಮ್​ಗೆ ಬರುತ್ತಾರೆ. 2014ರ ನಂತರ ಈ ರನ್ನಿಂಗ್ ರೂಮ್​ನ ಪರಿಸ್ಥಿತಿ ಸುಧಾರಿಸಲಾಗಿದೆ. ಎಲ್ಲಾ 558 ರನ್ನಿಂಗ್ ರೂಮ್​ಗಳು ಈಗ ಏರ್ ಕಂಡೀಷನ್ ಹೊಂದಿವೆ. ಈ ರೂಮುಗಳಲ್ಲಿ ಫೂಟ್ ಮಸಾಜರ್​ಗಳನ್ನು ಒದಗಿಸಲಾಗಿದೆ ಎಂದು ಈ ಪೋಸ್ಟ್​ನಲ್ಲಿ ವಿವರಿಸಲಾಗಿದೆ.

ಲೋಕೋ ಪೈಲಟ್​ಗಳು ಕಾರ್ಯಾಚರಿಸುವ ಎಲ್ಲಾ 7,075 ಕ್ಯಾಬ್​ಗಳೂ ಎಸಿ ಹೊಂದಿವೆ. 2014ಕ್ಕೆ ಮುಂಚೆ ಒಂದೂ ಎಸಿ ಎಂಜಿನ್ ಕ್ಯಾಬ್​ಗಳಿರಲಿಲ್ಲ. 815 ಲೋಕೋ ಕ್ಯಾಬ್​ಗಳಲ್ಲಿ ವಾಷ್​ರೂಮ್ ಅಳವಡಿಸಲಾಗಿದೆ. ಲೋಕೋ ಕ್ಯಾಬ್​ಗಳಲ್ಲಿ ಚಾಲಕರಿಗೆ 7,286 ಎರ್ಗೋನೋಮಿಕ್ ಸೀಟ್​ಗಳನ್ನು ಹಾಕಲಾಗಿದೆ ಎಂಬ ಮಾಹಿತಿಯನ್ನು ವೈಷ್ಣವ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಶೇ. 6.5ರ ಬಡ್ಡಿದರ ಮುಂದುವರಿಸಲು ಆರ್​ಬಿಐ ನಿರ್ಧಾರ

ಇದೇ ಪೋಸ್ಟ್​ನಲ್ಲಿ ವೈಷ್ಣವ್ ಅವರು ರಾಹುಲ್ ಗಾಂಧಿ ಹಿಂದೆ ಲೋಕೋ ಪೈಲಟ್​ಗಳ ಬಗ್ಗೆ ನೀಡಿದ್ದ ಹೇಳಿಕೆಯ ಸ್ಕ್ರೀನ್​ಶಾಟ್ ಅನ್ನೂ ಲಗತ್ತಿಸಿದ್ದಾರೆ.

‘ಇವತ್ತು ಪಾರ್ಲಿಮೆಂಟ್ ಹೌಸ್​ನಲ್ಲಿ ಲೋಕೋ ಪೈಲಟ್​ಗಳನ್ನು ಭೇಟಿ ಮಾಡಿದೆ. ತಮ್ಮ ಕ್ಯಾಬಿನ್​ಗಳಲ್ಲಿ ಉತ್ತಮ ಸೌಲಭ್ಯ ಕೊಡುವಂತೆ ಅವರು ಮತ್ತೆ ಬೇಡಿಕೆ ಇಟ್ಟರು…’ ಎಂದು ರಾಹುಲ್ ಗಾಂಧಿ ತಮ್ಮ ಆ ಪೋಸ್ಟ್​ನಲ್ಲಿ ಹೇಳಿದ್ದರು. ಅದಕ್ಕೆ ಉತ್ತರವಾಗಿ ರೈಲ್ವೆ ಸಚಿವ ಎ ವೈಷ್ಣವ್ ತಮ್ಮ ಎಕ್ಸ್ ಪೋಸ್ಟ್ ಹಾಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ