Fake Currency: ಎಟಿಎಂನಲ್ಲಿ ಬಂದ 200 ರೂ. ನಕಲಿ ನೋಟುಗಳು, ಗ್ರಾಹಕರು ತಬ್ಬಿಬ್ಬು
ಹಬ್ಬದ ಶಾಪಿಂಗ್ಗೆ ದುಡ್ಡು ಬೇಕೆಂದು ಎಟಿಎಂಗೆ ಹೋದರೆ ಅಲ್ಲಿ ಬಂದಿದ್ದು 200 ರೂ. ಮುಖಬೆಲೆಯ ನಕಲಿ ನೋಟುಗಳು! ಘಟನೆಗೆ ಸಂಬಂಧಿಸಿದ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಅಮೇಠಿ: ದೀಪಾವಳಿ ಹಬ್ಬದ ಶಾಪಿಂಗ್ಗೆಂದು ಎಟಿಎಂಗೆ (ATM) ತೆರಳಿ ನಗದು ವಿತ್ಡ್ರಾ ಮಾಡಿದ ಉತ್ತರ ಪ್ರದೇಶದ (Uttar Pradesh) ಅಮೇಠಿಯ (Amethi) ಬ್ಯಾಂಕ್ ಗ್ರಾಹಕರಿಗೆ ಆಘಾತ ಕಾದಿತ್ತು. ಹಬ್ಬದ ಶಾಪಿಂಗ್ಗೆ ದುಡ್ಡಿ ಬೇಕೆಂದು ಎಟಿಎಂಗೆ ಹೋದರೆ ಅಲ್ಲಿ ಬಂದಿದ್ದು 200 ರೂ. ಮುಖಬೆಲೆಯ ನಕಲಿ ನೋಟುಗಳು! ಘಟನೆಗೆ ಸಂಬಂಧಿಸಿದ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಎಟಿಎಂನಲ್ಲಿ ಡ್ರಾ ಮಾಡಿದಾಗ ದೊರೆತ ನೋಟು ಮೇಲ್ನೋಟಕ್ಕೆ ತಾಜಾ 200 ರೂ. ಮುಖಬೆಲೆಯ ನೋಟಿನಂತೆಯೇ ಇತ್ತು. ಆದರೆ, ಕೂಲಂಕಷವಾಗಿ ಪರಿಶೀಲಿಸಿದಾಗ ವ್ಯತ್ಯಾಸಗಳಿರುವುದು ಗೊತ್ತಾಯಿತು ಎಂದು ಗ್ರಾಹಕರು ತಿಳಿಸಿರುವುದಾಗಿ ‘ಐಎಎನ್ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಕರೆನ್ಸಿ ನೋಟಿನಲ್ಲಿ ‘ಚಿಲ್ಡ್ರೆನ್ಸ್ ಬ್ಯಾಂಕ್ ಆಫ್ ಇಂಡಿಯಾ’ ಮತ್ತು ‘ಫುಲ್ ಆಫ್ ಫನ್’ ಎಂಬಿತ್ಯಾದಿ ವಾಕ್ಯಗಳನ್ನು ಬರೆದಿರುವುದೂ ಕಂಡುಬಂದಿದೆ.
ಇದನ್ನೂ ಓದಿ: Bank Holidays in November: ನವೆಂಬರ್ನಲ್ಲಿ ಬರೋಬ್ಬರಿ 10 ದಿನ ಬ್ಯಾಂಕ್ ರಜೆ, ಇಲ್ಲಿದೆ ವಿವರ
ಉತ್ತರಪ್ರದೇಶದ ಅಮೇಠಿಯ ಮುನ್ಶಿಗಂಜ್ ರಸ್ತೆಯ ಸಬ್ಜಿ ಮಂಡಿ ಪ್ರದೇಶದ ಎಟಿಎಂನಲ್ಲಿ ನಕಲಿ ಕರೆನ್ಸಿ ದೊರೆತ ಪ್ರಕರಣ ವರದಿಯಾಗಿದೆ. ಬ್ಯಾಂಕೊಂದರ ಎಟಿಎಂನಿಂದ ದೊರೆತ 200 ರೂ. ಮುಖಬೆಲೆಯ ಎರಡು ನೋಟುಗಳು ನಕಲಿ ಎಂದು ತಿಳಿದಾಗ ಗ್ರಾಹಕರು ಆತಂಕಗೊಂಡರು ಎಂದು ಪತ್ರಕರ್ತ ಅಹ್ಮದ್ ಕಬೀರ್ ಎಂಬವರು ಟ್ವೀಟ್ ಮಾಡಿದ್ದಾರೆ.
In Amethi, UP, a case of counterfeit currency withdrawal from an ATM has come to the fore. In fact, there was a ruckus among the customers when two notes of 200-200 were found to be counterfeit from the ATM of a bank near Munshiganj Road Sabzi Mandi in Amethi town. pic.twitter.com/lDUZkqO9wr
— Ahmed Khabeer احمد خبیر (@AhmedKhabeer_) October 25, 2022
ಎಟಿಎಂನಲ್ಲಿ ನಕಲಿ ನೋಟು ದೊರೆಯುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಜನ ಜಮಾಯಿಸಿದರು. ಪ್ರತಿಭಟನೆ ಆರಂಭಿಸಿದರು. ತಕ್ಷಣವೇ ಸ್ಥಳಕ್ಕೆ ಪೊಲೀಸರನ್ನು ಕರೆಸಲಾಯಿತು ಎಂದು ವರದಿ ಹೇಳಿದೆ. ಘಟನೆ ಬಗ್ಗೆ ಸಂಬಂಧಪಟ್ಟ ಬ್ಯಾಂಕ್ಗೆ ಮಾಹಿತಿ ನೀಡಲಾಗುವುದು ಮತ್ತು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಯಾವ ಬ್ಯಾಂಕ್ನ ಎಟಿಎಂನಲ್ಲಿ ನಕಲಿ ನೋಟು ದೊರೆತಿದೆ ಎಂಬ ವಿವರ ತಿಳಿದುಬಂದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Wed, 26 October 22