ಆಗಸ್ಟ್​ನಲ್ಲಿ ಗಣೇಶ ಹಬ್ಬ, ಸ್ವಾತಂತ್ರ್ಯ ದಿನಾಚರಣೆ; 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

August 2025 bank holidays: ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟಾರೆ 16 ರಜಾ ದಿನಗಳಿವೆ. ಇದರಲ್ಲಿ ಆರು ಶನಿವಾರ ಮತ್ತು ಭಾನುವಾರದ ರಜೆಗಳು ಒಳಗೊಂಡಿವೆ. ಆ ತಿಂಗಳು ಸ್ವಾತಂತ್ರ್ಯ ದಿನಾಚರಣೆ, ಗಣೇಶ ಹಬ್ಬ, ಕೃಷ್ಣ ಜನ್ಮಾಷ್ಟಮಿ ಇತ್ಯಾದಿ ಹಬ್ಬ ಹರಿದಿನಗಳಿಗೆ ರಜೆ ಇದೆ. ಕರ್ನಾಟಕದಲ್ಲಿ ಎಂಟು ದಿನ ಬ್ಯಾಂಕುಗಳು ಬಂದ್ ಆಗಿರುತ್ತವೆ.

ಆಗಸ್ಟ್​ನಲ್ಲಿ ಗಣೇಶ ಹಬ್ಬ, ಸ್ವಾತಂತ್ರ್ಯ ದಿನಾಚರಣೆ; 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜೆ

Updated on: Jul 27, 2025 | 1:28 PM

ನವದೆಹಲಿ, ಜುಲೈ 27: ಮುಂಬರುವ ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ರಜೆಯ ಸುಗ್ಗಿ ಇದೆ. ಆರ್​​ಬಿಐ (RBI) ಹಾಲಿಡೇ ಕ್ಯಾಲಂಡರ್ ಪ್ರಕಾರ 2025ರ ಆಗಸ್ಟ್ ತಿಂಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಒಟ್ಟು 16 ದಿನಗಳ ರಜೆ (Bank Holidays) ಇದೆ. ಇದರಲ್ಲಿ ಪ್ರಾದೇಶಿಕ ವಿಶೇಷ ರಜೆಗಳೂ ಇವೆ. ಆಗಸ್ಟ್​ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣೇಶ ಹಬ್ಬ, ಕೃಷ್ಣ ಜನ್ಮಾಷ್ಟಮಿ ಮೊದಲಾದ ಹಬ್ಬ ಹರಿದಿನಗಳಿವೆ. ಕೆಲ ಸಾರ್ವತ್ರಿಕ ರಜಾ ದಿನಗಳಿದ್ದರೆ, ಮತ್ತೆ ಕೆಲ ರಜೆಗಳು ಕೆಲ ಪ್ರದೇಶಗಳಿಗೆ ಸೀಮಿತವಾಗಿವೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರವೂ ಸೇರಿ ಎಂಟು ರಜಾದಿನಗಳಿವೆ.

ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ

  • ಆಗಸ್ಟ್ 3: ಭಾನುವಾರದ ರಜೆ
  • ಆಗಸ್ಟ್ 8, ಶುಕ್ರವಾರ: ಟೆಂಡೋಂಗ್ ಲೋ ರುಮ್ ಫಾಟ್, ಝುಲನ್ ಪೂರ್ಣಿಮಾ (ಸಿಕ್ಕಿಂ ಮತ್ತು ಒಡಿಶಾದಲ್ಲಿ ರಜೆ)
  • ಆಗಸ್ಟ್ 9, ಶನಿವಾರ: ರಕ್ಷಾ ಬಂಧನ್ ಮತ್ತು ಎರಡನೇ ಶನಿವಾರ (ಛತ್ತೀಸ್​ಗಡ, ಗುಜರಾತ್, ಹರ್ಯಾಣ, ಮಧ್ಯ ಪ್ರದೇಶ, ರಾಜಸ್ಥಾನ್, ಉತ್ತರಾಖಂಡ್, ಉತ್ತರಪ್ರದೇಶ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 10: ಭಾನುವಾರದ ರಜೆ
  • ಆಗಸ್ಟ್ 13, ಬುಧವಾರ: ದೇಶಪ್ರೇಮಿ ದಿನ (ಮಣಿಪುರದಲ್ಲಿ ರಜೆ)
  • ಆಗಸ್ಟ್ 15, ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ (ದೇಶಾದ್ಯಂತ ರಜೆ)
  • ಆಗಸ್ಟ್ 16, ಶನಿವಾರ: ಕೃಷ್ಣ ಜನ್ಮಾಷ್ಟಮಿ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 17: ಭಾನುವಾರದ ರಜೆ
  • ಆಗಸ್ಟ್ 19, ಮಂಗಳವಾರ: ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹಾದೂರ್ (ತ್ರಿಪುರಾ ರಾಜ್ಯದಲ್ಲಿ ರಜೆ)
  • ಆಗಸ್ಟ್ 23: ನಾಲ್ಕನೇ ಶನಿವಾರದ ರಜೆ
  • ಆಗಸ್ಟ್ 24: ಭಾನುವಾರದ ರಜೆ
  • ಆಗಸ್ಟ್ 25, ಸೋಮವಾರ: ಶ್ರೀಮಂತ ಶಂಕರದೇವರ ತಿರುಭಾವ ತಿಥಿ (ಅಸ್ಸಾಮ್​ನಲ್ಲಿ ರಜೆ)
  • ಆಗಸ್ಟ್ 26, ಮಂಗಳವಾರ: ಹರ್ತಾಲಿಕಾ ತೀಜ್ (ಛತ್ತೀಸ್​ಗಡ, ಸಿಕ್ಕಿಂನಲ್ಲಿ ರಜೆ)
  • ಆಗಸ್ಟ್ 27, ಬುಧವಾರ: ಗಣೇಶ ಹಬ್ಬ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 28, ಗುರುವಾರ: ನುವಾಖೈ (ಒಡಿಶಾ, ಗೋವಾದಲ್ಲಿ ರಜೆ)
  • ಆಗಸ್ಟ್ 31: ಭಾನುವಾರದ ರಜೆ

ಇದನ್ನೂ ಓದಿ: ಆನ್​ಲೈನ್ ಕಾರ್ಡ್ ಟ್ರಾನ್ಸಾಕ್ಷನ್ಸ್​ಗೆ ಬಯೋಮೆಟ್ರಿಕ್ ಅಥೆಂಟಿಕೇಶನ್; ಭಾರತದಲ್ಲಿ ಮೊದಲ ಬಾರಿಗೆ ಜಾರಿ

ಕರ್ನಾಟಕದಲ್ಲಿ ಆಗಸ್ಟ್​ನಲ್ಲಿರುವ ಬ್ಯಾಂಕ್ ರಜೆಗಳು

  • ಆಗಸ್ಟ್ 3: ಭಾನುವಾರದ ರಜೆ
  • ಆಗಸ್ಟ್ 10: ಭಾನುವಾರದ ರಜೆ
  • ಆಗಸ್ಟ್ 15, ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 17: ಭಾನುವಾರದ ರಜೆ
  • ಆಗಸ್ಟ್ 23: ನಾಲ್ಕನೇ ಶನಿವಾರದ ರಜೆ
  • ಆಗಸ್ಟ್ 24: ಭಾನುವಾರದ ರಜೆ
  • ಆಗಸ್ಟ್ 27, ಬುಧವಾರ: ಗಣೇಶ ಹಬ್ಬ
  • ಆಗಸ್ಟ್ 31: ಭಾನುವಾರದ ರಜೆ

ಬ್ಯಾಂಕ್ ರಜಾದಿನಗಳಂದು ಕಚೇರಿ ಬಂದ್ ಆಗಿರುತ್ತವಾದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್​ಲೈನ್​ನಲ್ಲಿ ಲಭ್ಯ ಇರುತ್ತವೆ. ನಗದು ಹಣವು ಎಟಿಎಂನಲ್ಲಿ ದಿನದ 24 ಗಂಟೆಯೂ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ