AB-PMJAY Scheme: ಕೇಂದ್ರದ ಆಯುಷ್ಮಾನ್ ಭಾರತ್ ಕಾರ್ಡ್​ದಾರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ಮುಂದೇನು ಕ್ರಮ?

How To Register Complaint Against Hospital: ಐದು ವರ್ಷದ ಹಿಂದೆ ಶುರುವಾದ ಕೇಂದ್ರದ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆಯಲ್ಲಿ ಜೋಡಿತವಾದ ಆಸ್ಪತ್ರೆಗಳು ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ನಿರಾಕರಿಸಿದರೆ, ದೂರು ದಾಖಲಿಸಿವುದು ಹೇಗೆ? ಇಲ್ಲಿದೆ ಡೀಟೇಲ್ಸ್...

AB-PMJAY Scheme: ಕೇಂದ್ರದ ಆಯುಷ್ಮಾನ್ ಭಾರತ್ ಕಾರ್ಡ್​ದಾರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ಮುಂದೇನು ಕ್ರಮ?
ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ
Follow us
|

Updated on:Aug 24, 2023 | 4:54 PM

ಭಾರತದಲ್ಲಿ ಹೆಲ್ತ್ ಇನ್ಷೂರೆನ್ಸ್ ಹೊಂದಿರುವವರ ಪ್ರಮಾಣ ಬಹಳ ಕಡಿಮೆ. ಬಹುಭಾಗದ ಜನರು ವಿಮಾ ಬೆಂಬಲ ಹೊಂದಿಲ್ಲ. ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕಂಪನಿ ವತಿಯಿಂದ ದೊರೆಯುವ ಗ್ರೂಪ್ ಇನ್ಷೂರೆನ್ಸ್ ಸೌಲಭ್ಯ ಇರುತ್ತದೆ. ಅವರಲ್ಲಿ ಹೆಚ್ಚಿನವರು ವೈಯಕ್ತಿಕವಾಗಿ ಹೆಲ್ತ್ ಇನ್ಷೂರೆನ್ಸ್ (Health Insurance) ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಜನರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಆರಂಭಿಸಿದೆ. 2018ರಲ್ಲಿ ಶುರುವಾದ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ (AB- PMJAY) ಗುಣಮಟ್ಟದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯ ಅವಕಾಶ ನೀಡುತ್ತದೆ.

ಈ ಯೋಜನೆಯು ಒಬ್ಬ ಫಲಾನುಭವಿಗೆ 5 ಲಕ್ಷ ರೂವರೆಗೂ ಹೆಲ್ತ್ ಇನ್ಷೂರೆನ್ಸ್ ಕವರೇಜ್ ನೀಡುತ್ತದೆ. ಆಯುಷ್ಮಾನ್ ಭಾರತ್ ಯೋಜನೆಗೆ ಜೋಡಿತವಾಗಿರುವ ಯಾವುದೇ ಆಸ್ಪತ್ರೆಯಲ್ಲೂ ಫಲಾನುಭವಿಗಳು ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆ ದಾಖಲಾಗುವ ಪೂರ್ವದ ವೆಚ್ಚ, ಔಷಧಿ, ತಪಾಸಣೆ ಇತ್ಯಾದಿ ಎಲ್ಲಾ ಖರ್ಚುಗಳನ್ನು ಈ ಸ್ಕೀಮ್ ಇಕವರ್ ಮಾಡುತ್ತದೆ. ಕ್ಯಾಷ್​ಲೆಸ್ ದಾಖಲಾತಿ ಸೌಲಭ್ಯವೂ ಇದೆ.

ಇದನ್ನೂ ಓದಿ: ಚಂದ್ರನ ನೆಲ ಸೇಲ್​ಗೆ; ಎಕರೆಗೆ 5,000 ರೂಗಿಂತ ಕಡಿಮೆ ಬೆಲೆ; ಚಂದ್ರನಲ್ಲಿ ಪ್ರಾಪರ್ಟಿ ಪಡೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಆಯುಷ್ಮಾನ್ ಭಾರತ್ ಕಾರ್ಡ್​ದಾರರಿಗೆ ಚಿಕಿತ್ಸೆ ಕೊಡಲು ಆಸ್ಪತ್ರೆ ನಿರಾಕರಿಸಿದರೆ ಏನು?

ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯೊಂದಿಗೆ ಜೋಡಿತವಾದ ಆಸ್ಪತ್ರೆಯು ಕಾರ್ಡ್​ದಾರರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು ನಿರಾಕರಿಸಿದರೆ, ಆ ಅಸ್ಪತ್ರೆ ವಿರುದ್ಧ ದೂರು ದಾಖಲಿಸುವ ಅವಕಾಶ ಇರುತ್ತದೆ. ಆದರೆ, ಅದಕ್ಕೆ ಸಕಾರಣ ಇರಬೇಕು. ಒಂದು ವೇಳೆ ನಿಮ್ಮ ಅನಾರೋಗ್ಯಕ್ಕೆ ಅಗತ್ಯವಾದ ಚಿಕಿತ್ಸಾ ಸೌಲಭ್ಯ ಆಸ್ಪತ್ರೆಯಲ್ಲಿ ಇಲ್ಲದಿದ್ದಾಗ ದೂರು ಕೊಡಲು ಬರುವುದಿಲ್ಲ. ಬೇಕಾದ ಚಿಕಿತ್ಸಾ ಸೌಲಭ್ಯ ಇದ್ದರೂ ಆಯುಷ್ಮಾನ್ ಭಾರತ್ ಕಾರ್ಡ್​ದಾರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದಾಗ ದೂರು ದಾಖಲಿಸಬಹುದು. ಆಗ ಸರ್ಕಾರದಿಂದ ಆ ಆಸ್ಪತ್ರೆ ಮೇಲೆ ಕ್ರಮ ಜಾರಿಯಾಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ತರಕಾರಿ ಬೆಲೆ ಎಷ್ಟು ಹೆಚ್ಚಿದೆ? ಯಾವಾಗ ಬೆಲೆ ಇಳಿಕೆ ಆಗುತ್ತೆ? ಆರ್​ಬಿಐ ಸಮಾಧಾನ ಇಲ್ಲಿದೆ

ಆಸ್ಪತ್ರೆ ವಿರುದ್ಧ ಹೇಗೆ ದೂರು ದಾಖಲಿಸಿವುದು?

ಆಯುಷ್ಮಾನ್ ಭಾರತ್ ಸ್ಕೀಮ್​ನ ರಾಷ್ಟ್ರೀಯ ಟಾಲ್-ಫ್ರೀ ನಂಬರ್ 14555 ಅಥವಾ 14477, ಅಥವಾ 1800-11-4477 ಗೆ ಕರೆ ಮಾಡಿ ದೂರು ನೀಡಬಹುದು.

grievance.abdm.gov.in/ ಈ ವೆಬ್​ಸೈಟ್​ಗೆ ಹೋಗಿ ದೂರು ಕೊಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Thu, 24 August 23

ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​