AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger: ಕೇವಲ 1 ಲಕ್ಷ ಹೂಡಿಕೆಗೆ 19 ವರ್ಷದಲ್ಲಿ 4 ಕೋಟಿ ರೂ ಲಾಭ; ಮಲ್ಟಿಬ್ಯಾಗರ್ ಆದ ಎಂಕೆ ವೆಂಚರ್ಸ್ ಕ್ಯಾಪಿಟಲ್

MK Ventures Capital Ltd: ಹೈದರಾಬಾದ್ ಮೂಲಕ ಎಂಕೆ ವೆಂಚರ್ಸ್ ಕ್ಯಾಪಿಟಲ್ ಲಿ ಸಂಸ್ಥೆಯ ಷೇರುಬೆಲೆ 2021ರಿಂದ ಅಗಾಧವಾಗಿ ಬೆಳೆದಿದೆ. 2004ರಲ್ಲಿ 2.55 ರೂ ಇದ್ದ ಇದರ ಬೆಲೆ ಇದೀಗ 1,114 ರೂ ತಲುಪಿದೆ. ಆಗ 1 ಲಕ್ಷ ರೂ ಹೂಡಿಕೆಯನ್ನು ಯಾರಾದರೂ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು 4 ಕೋಟಿಗೂ ಅಧಿಕ ಇರುತ್ತಿತ್ತು.

Multibagger: ಕೇವಲ 1 ಲಕ್ಷ ಹೂಡಿಕೆಗೆ 19 ವರ್ಷದಲ್ಲಿ 4 ಕೋಟಿ ರೂ ಲಾಭ; ಮಲ್ಟಿಬ್ಯಾಗರ್ ಆದ ಎಂಕೆ ವೆಂಚರ್ಸ್ ಕ್ಯಾಪಿಟಲ್
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 24, 2023 | 2:24 PM

Share

ಷೇರುಮಾರುಕಟ್ಟೆಯಲ್ಲಿ ಯಾವ ಕಂಪನಿಗಳ ಷೇರು ಬೆಳೆಯುತ್ತದೆ ಎಂದು ಗ್ರಹಿಸುವುದು ತುಸು ಕಷ್ಟ. ಅನಿಶ್ಚಿತತೆಯಲ್ಲೂ ಹಲವು ಷೇರುಗಳು ಬಂಪರ್ ಲಾಭ ತಂದುಕೊಟ್ಟಿವೆ. ಇನ್ನೂ ಹಲವು ಷೇರುಗಳು ಪ್ರಪಾತಕ್ಕೆ ಬಿದ್ದಿದ್ದೂ ಇದೆ. ಸಾಮಾನ್ಯವಾಗಿ ಒಂದು ಷೇರಿನಿಂದ ವರ್ಷಕ್ಕೆ ಶೇ. 20ರಷ್ಟು ಲಾಭ ಬಂದರೂ ಹೂಡಿಕೆದಾರ ಸಂತುಷ್ಟಿಪಡಬಹುದು. ಇನ್ನೂ ಕೆಲ ಷೇರುಗಳು ಬಹಳ ವೇಗವಾಗಿ ಬೆಳೆದು ಮಲ್ಟಿಬ್ಯಾಗರ್ (Multibagger) ಎನಿಸುತ್ತವೆ. ಇಂಥ ಷೇರುಗಳಲ್ಲಿ ಎನ್​ಬಿಎಫ್​ಸಿ ಕಂಪನಿ ಎಂಕೆ ವೆಂಚರ್ಸ್ ಕ್ಯಾಪಿಟಲ್ (MK Ventures Capital Ltd) ಒಂದು. 2004ರಲ್ಲಿ ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆದ ಎಂಕೆ ವೆಂಚರ್ಸ್ ಇವತ್ತು 43,000 ಪ್ರತಿಶತದಷ್ಟು ಲಾಭ ತಂದಿದೆ. ಕೇವಲ ಎರಡೂವರೆ ರೂ ಇದ್ದ ಇದರ ಬೆಲೆ ಇವತ್ತು 1,114 ರೂ ಆಗಿದೆ.

ಆರಂಭದಲ್ಲಿ ಹೂಡಿಕೆ ಮಾಡಿದ್ದವರಿಗೆ ಎಷ್ಟು ಸಿಗುತ್ತಿತ್ತು ಲಾಭ?

ಮೇಲೆ ತಿಳಿಸಿದಂತೆ ಎಂಕೆ ವೆಂಚರ್ಸ್ ಕ್ಯಾಪಿಟಲ್ ಸಂಸ್ಥೆಯ ಷೇರು ಶೇ. 43,000 ದಷ್ಟು ಬೆಳೆದಿದೆ. 2004ರಲ್ಲಿ ಇದರ ಬೆಲೆ 2.55 ರೂ ಇದ್ದಾಗ ಯಾರಾದರೂ 1 ಲಕ್ಷ ರೂನಷ್ಟು ಹೂಡಿಕೆ ಮಾಡಿದ್ದರೆ ಇವತ್ತು 19 ವರ್ಷದಲ್ಲಿ ಅವರ ಷೇರುಸಂಪತ್ತು 4.36 ಕೋಟಿ ರೂ ಆಗುತ್ತಿತ್ತು.

ಇದನ್ನೂ ಓದಿ: Multibagger: ಒಂದು ಲಕ್ಷ ಹೂಡಿಕೆಗೆ ಎರಡು ವರ್ಷದಲ್ಲಿ 34 ಲಕ್ಷ ರೂ ಲಾಭ; ಮಲ್ಟಿಬ್ಯಾಗರ್ ಆದ ಸರ್ವೋಟೆಕ್ ಪವರ್ ಷೇರು

ಎರಡು ವರ್ಷದಲ್ಲಿ ಕ್ಷಿಪ್ರವಾಗಿ ಬೆಳೆದ ಎಂಕೆ ವೆಂಚರ್ಸ್ ಕ್ಯಾಪಿಟಲ್ ಷೇರು

ಕೋಲ್ಕತಾ ಮೂಲದ ಎಂಕೆ ವೆಂಚರ್ಸ್ ಕಂಪನಿಯ ಷೇರುಗಳು ತೀರಾ ವೇಗವಾಗಿ ಹೆಚ್ಚತೊಡಗಿದ್ದು 2021ರಿಂದ. ಸರಿಯಾಗಿ ಎರಡು ವರ್ಷದ ಹಿಂದೆ (2021 ಏಪ್ರಿಲ್ 17) ಅದರ ಷೇರು ಬೆಲೆ 30.95 ರೂ ಇತ್ತು. ಆಗ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಹಣ 36 ಲಕ್ಷ ರೂ ಆಗಿತ್ತು. ಅಂದರೆ ಎರಡು ವರ್ಷದಲ್ಲಿ ಒಂದು ಲಕ್ಷ ರೂ ಹಣ 36 ಲಕ್ಷ ರೂ ಅಗುವುದೆಂದರೆ ಸೋಜಿಗವೇ.

2023ರ ಮೇ ತಿಂಗಳಲ್ಲಿ ಅದರ ಷೇರುಬೆಲೆ 1,726.57 ರೂವರೆಗೂ ಹೋಗಿತ್ತು. ಅದು ಎಂಕೆ ವೆಂಚರ್ಸ್ ಕ್ಯಾಪಿಟಲ್ ಸಂಸ್ಥೆಯ ಗರಿಷ್ಠ ಮಟ್ಟ ಎನಿಸಿದೆ. ಇನ್ನು ಕಳೆದ ಒಂದು ವರ್ಷದಲ್ಲಿ ಅದರ ಕನಿಷ್ಠ ಬೆಲೆ ಮಟ್ಟ ಎಂದರೆ 328.15 ರೂ ಆಗಿದೆ.

ಇದನ್ನೂ ಓದಿ: 3 ವರ್ಷಗಳಿಂದ ಮಲ್ಟಿಬ್ಯಾಗರ್ ಆದ ಬಜಾಬ್ ಫೈನಾನ್ಸ್; ಷೇರುಮೌಲ್ಯದ ಜೊತೆಗೆ ಠೇವಣಿಗಳೂ ಅಗಾಧ ಬೆಳವಣಿಗೆ

2021ರಲ್ಲಿ ಕಂಪನಿ ಆಡಳಿತ ಮಂಡಳಿ ಬದಲಾಗಿದ್ದು ಶುಕ್ರದೆಸೆ?

ಎಂಕೆ ವೆಂಚರ್ಸ್ ಕ್ಯಾಪಿಟಲ್ ಲಿ ಸಂಸ್ಥೆ ಈ ಹಿಂದೆ ಐಕಾಬ್ ಸೆಕ್ಯೂರಿಟೀಸ್ ಅಂಡ್ ಇನ್ವೆಸ್ಟ್​ಮೆಂಟ್ಸ್ ಲಿ ಎಂಬ ಹೆಸರಿನಲ್ಲಿತ್ತು. ಇಂದ್ರಕುಮಾರ್ ಬಾಗ್ರಿ ಮತ್ತಿತರರು ಇದರ ಮಾಲೀಕರಾಗಿದ್ದರು. 2021-22ರಲ್ಲಿ ಮಧುಸೂದನ್ ಕೇಲ ಎಂಬುವವರು ಓಪನ್ ಆಫರ್ ಮೂಲಕ ಶೇ. 83.66ರಷ್ಟು ಈಕ್ವಿಟಿ ಷೇರುಗಳನ್ನು ಖರೀದಿಸಿದ್ದರು. ಅದಾದ ಬಳಿಕ ಎಂಕೆ ವೆಂಚರ್ಸ್ ಕ್ಯಾಪಿಟಲ್ ಸಂಸ್ಥೆಯ ಷೇರುಬೆಲೆ ಗಗನಕ್ಕೇರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ