ಭಾರತದ ಜೊತೆ ಗಟ್ಟಿಸ್ನೇಹ ಹೊಂದಿದವರಿಗೆ ಉಜ್ವಲ ಆರ್ಥಿಕತೆ: ಜಿ20 ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

|

Updated on: Aug 27, 2023 | 2:56 PM

Narendra Modi Speech at B20 Summit: ಭಾರತದ ಜೊತೆ ಸ್ನೇಹ ಬೆಳೆಸುವ ದೇಶಗಳ ಆರ್ಥಿಕತೆ ಉತ್ತಮವಾಗಿ ಬೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿ20 ಸಭೆಯಲ್ಲಿ ಹೇಳಿದ್ದಾರೆ. ಜಿ20 ಶೃಂಗಸಭೆ ನಿಮಿತ್ತ ಮೂರು ದಿನಗಳ ಬಿ20 ಸಭೆ ಆಗಸ್ಟ್ 27ರಂದು ಮುಕ್ತಾಯವಾಗಿದೆ.

ಭಾರತದ ಜೊತೆ ಗಟ್ಟಿಸ್ನೇಹ ಹೊಂದಿದವರಿಗೆ ಉಜ್ವಲ ಆರ್ಥಿಕತೆ: ಜಿ20 ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ
ನರೇಂದ್ರ ಮೋದಿ
Follow us on

ನವದೆಹಲಿ, ಆಗಸ್ಟ್ 27: ಭಾರತದ ಜೊತೆಗಿನ ಸ್ನೇಹವನ್ನು ಗಟ್ಟಿಗೊಳಿಸುವ ದೇಶಗಳಿಗೆ ಆರ್ಥಿಕ ಲಾಭವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಜಿ20 ಶೃಂಗ ಸಭೆ ನಿಮಿತ್ತ ಇಲ್ಲಿ ನಡೆದ ಬಿ20 ಸಭೆಯ ಸಮಾರೋಪದಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ‘ನೀವು ಭಾರತದ ಜೊತೆಗೆ ಗಟ್ಟಿ ಸ್ನೇಹ ಹೊಂದಿದಷ್ಟೂ ನಿಮ್ಮ ಆರ್ಥಿಕತೆ ಉಜ್ವಲಗೊಳ್ಳುತ್ತದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಸಂಕಷ್ಟಗೊಂಡ ದೇಶಗಳ ಜೊತೆ ಭಾರತ ಪರಸ್ಪರ ವಿಶ್ವಾಸ ಬೆಳೆಸುತ್ತಿದೆ’ ಎಂದು ಹೇಳಿದ್ದಾರೆ.

ಜಿ20 ಬ್ಯುಸಿನೆಸ್ ಫೋರಂ ಅಥವಾ ಬಿ20 ಸಮಿಟ್ ಆಗಸ್ಟ್ 25ರಂದು ಆರಂಭವಾಗಿತ್ತು. 3 ದಿನಗಳ ಕಾಲ ನಡೆದ ಶೃಂಗಸಭೆಯಲ್ಲಿ ಜಿ20 ದೇಶಗಳ ಬ್ಯುಸಿನೆಸ್ ಲೀಡರ್​ಗಳು ಪಾಲ್ಗೊಂಡಿದ್ದರು. ಇದು ಜಿ20 ಶೃಂಗಸಭೆಗೆ ಮುನ್ನ ಜಾಗತಿಕ ಉದ್ಯಮ ಸಮುದಾಯದ ಅಭಿಪ್ರಾಯಗಳು ವ್ಯಕ್ತವಾಗುವ ವೇದಿಕೆಯಾಗಿದೆ ಬಿ20 ಸಮಿಟ್.

ಇದನ್ನೂ ಓದಿ: ಭಾರತದ ಜೊತೆ ಗಟ್ಟಿ ಸಂಬಂಧ ಇದ್ದರೆ ಅಮೆರಿಕಕ್ಕೆ ಆಗುವ ಪ್ರಯೋಜನವೇನು? ವಿವೇಕ್ ರಾಮಸ್ವಾಮಿ ಅನಿಸಿಕೆ ಇದು

ಬಿ20 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು

“ನಮ್ಮ ಸರ್ಕಾರದ ಬಡವರ ಪರ ನೀತಿಗಳಿಂದಾಗಿ ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ಅತಿದೊಡ್ಡ ಮಧ್ಯಮವರ್ಗ ಸೃಷ್ಟಿಯಾಗಲಿದೆ.”

“ಚಂದ್ರಯಾನದ ಯಶಸ್ಸಿನಲ್ಲಿ ಇಸ್ರೋ ಜೊತೆ ಭಾರತೀಯ ಉದ್ಯಮ, ಎಂಎಸ್​ಎಂಇಗಳು ಮತ್ತು ಖಾಸಗಿ ಸಂಸ್ಥೆಗಳ ಕೊಡುಗೆಯೂ ಇದೆ. ವಿಜ್ಞಾನ ಮತ್ತು ಉದ್ಯಮ ಎರಡರ ಯಶಸ್ಸು ಇದು” ಎಂಬುದು ಪ್ರಧಾನಿಗಳ ಅನಿಸಿಕೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ಮೀಸಲು ನಿಧಿಯಲ್ಲಿ ಭಾರೀ ಇಳಿಕೆ; 600 ಬಿಲಿಯನ್ ಡಾಲರ್ ಮಟ್ಟಕ್ಕಿಂತ ಕಡಿಮೆ

“ಕ್ರಿಪ್ಟೋಕರೆನ್ಸಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನಂತಹ ವಿಚಾರದಲ್ಲಿ ಉದ್ಯಮ ಮುಖಂಡರುಗಳು ಅವಲೋಕನ ನಡೆಸಬೇಕು. ಕ್ರಿಪ್ಟೋಕರೆನ್ಸಿಗೆ ಜಾಗತಿಕ ಚೌಕಟ್ಟು ರೂಪಿಸುವ ಅವಶ್ಯಕತೆ ಇದೆ. ಶರವೇಗದಲ್ಲಿ ತಂತ್ರಜ್ಞಾನ ಬೆಳವಣಿಗೆ ಆಗುತ್ತಿದೆ. ನೀತಿಬದ್ಧವಾದ ಎಐ ಟೆಕ್ನಾಲಜಿ ಬಗ್ಗೆ ಗಮನ ಕೊಡುವ ಅವಶ್ಯಕತೆ ಇದೆ.”

“ಬೇರೆ ದೇಶಗಳನ್ನು ಒಂದು ಮಾರುಕಟ್ಟೆಯಂತೆ ನೋಡುವುದರಿಂದ ಏನೂ ಪ್ರಯೋಜನ ಇಲ್ಲ. ಎಲ್ಲರನ್ನೂ ಸಹಭಾಗಿಗಳನ್ನಾಗಿಸಿಕೊಂಡರೆ ಪ್ರಗತಿ ಸಾಧ್ಯ. ಉತ್ಪಾದನೆಯ ದೇಶಗಳು ಈ ವಿಧಾನದಿಂದ ಲಾಭ ಪಡೆಯಬಹುದು” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿ20 ಸಮಿಟ್​ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:12 pm, Sun, 27 August 23