Bank Holidays: ಫೆಬ್ರುವರಿಯಲ್ಲಿ ಒಟ್ಟು 14 ದಿನ ಬ್ಯಾಂಕ್ ರಜೆ; ಕರ್ನಾಟಕದಲ್ಲಿ 7 ಮಾತ್ರ; ಇಲ್ಲಿದೆ ಪಟ್ಟಿ
February 2025, Bank Holidays List: 2025ರ ಫೆಬ್ರುವರಿ ತಿಂಗಳಲ್ಲಿ ಮಹಾಶಿವರಾತ್ರಿ, ಶಿವಾಜಿ ಜಯಂತಿ ಇತ್ಯಾದಿ ಸೇರಿ ಒಟ್ಟು 14 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇರುತ್ತದೆ. ಆ ತಿಂಗಳಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಒಳಗೊಂಡಿವೆ. ಕರ್ನಾಟಕದಲ್ಲಿ ಒಟ್ಟು 7 ದಿನ ಮಾತ್ರ ಬ್ಯಾಂಕ್ ರಜೆ ಇದೆ. ಫೆ. 26ರಂದು ಮಹಾಶಿವರಾತ್ರಿಗೆಂದು ಕರ್ನಾಟಕದಲ್ಲಿ ರಜೆ ಇರುತ್ತದೆ.
ನವದೆಹಲಿ, ಜನವರಿ 24: ಮುಂದಿನ ತಿಂಗಳಾದ ಫೆಬ್ರುವರಿಯಲ್ಲಿ ದೇಶದ ವಿವಿಧೆಡೆ ಒಟ್ಟು 14 ದಿನಗಳವರೆಗೆ ಬ್ಯಾಂಕ್ಗಳಿಗೆ ರಜೆ ಇರುತ್ತದೆ. 28 ದಿನಗಳಿರುವ ಫೆಬ್ರುವರಿ ತಿಂಗಳಲ್ಲಿ ವಸಂತ ಪಂಚಮಿ, ತೈಪುಶಮ್, ರವಿದಾಸ್ ಜಯಂತಿ, ಲುಯ್ ನಗಾರ್ ನೀ, ಶಿವಾಜಿ ಜಯಂತಿ, ಮಹಾಶಿವರಾತ್ರಿ ಇತ್ಯಾದಿ ಹಬ್ಬಗಳಿವೆ. ಜೊತೆಗೆ ಆರು ಭಾನುವಾರ ಮತ್ತು ಶನಿವಾರದ ರಜೆಗಳೂ ಒಳಗೊಂಡಿವೆ.
ಕೆಲ ರಜೆಗಳು ಕೆಲ ಪ್ರದೇಶಗಳಿಗೆ ಸೀಮಿತವಾಗಿವೆ. ಮಿಝೋರಾಮ್ ರಾಜ್ಯೋತ್ಸವ ದಿನದಂದು ಆ ರಾಜ್ಯದಲ್ಲಿರುವ ಬ್ಯಾಂಕುಗಳಿಗೆ ಮಾತ್ರ ರಜೆ ಇರುತ್ತದೆ. ಮಹಾಶಿವರಾತ್ರಿಯಂದು ತಮಿಳುನಾಡು, ಬಿಹಾರ, ಈಶಾನ್ಯ ರಾಜ್ಯಗಳ ಇತ್ಯಾದಿ ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಕಡೆ ರಜೆ ಇರುತ್ತದೆ. ಫೆ, 11ರಂದು ಇರುವ ತೈಪುಶಮ್ ಹಬ್ಬ ತಮಿಳುನಾಡಿನ ವೈಶಿಷ್ಟ್ಯವಾಗಿದ್ದು ಅಲ್ಲಿ ಮಾತ್ರ ರಜೆ ಇರುತ್ತದೆ.
ಇದನ್ನೂ ಓದಿ: Gold Silver Price on 24th January: ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಏರಿಕೆ; ಇಲ್ಲಿದೆ ದರಪಟ್ಟಿ
2025ರ ಫೆಬ್ರುವರಿ ತಿಂಗಳ ಬ್ಯಾಂಕ್ ರಜೆ ದಿನಗಳು
- ಫೆ. 2: ಭಾನುವಾರ
- ಫೆ. 3, ಸೋಮವಾರ: ವಸಂತ ಪಂಚಮಿ, ಸರಸ್ವತಿ ಪೂಜೆ (ಹರ್ಯಾಣ, ಒಡಿಶಾ, ಪಂಜಾಬ್, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯಗಳಲ್ಲಿ ರಜೆ)
- ಫೆ. 8: ಎರಡನೇ ಶನಿವಾರ
- ಫೆ. 9: ಭಾನುವಾರ
- ಫೆ. 11, ಮಂಗಳವಾರ: ತೈಪುಶಮ್ ಹಬ್ಬ (ತಮಿಳುನಾಡಿನಲ್ಲಿ ರಜೆ)
- ಫೆ. 12, ಬುಧವಾರ: ಸಂತ ರವಿದಾಸ್ ಜಯಂತಿ (ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಲ್ಲಿ ರಜೆ)
- ಫೆ. 15, ಶನಿವಾರ: ಲುಯ್ ನಾಗಾಯ್ ನೀ ಹಬ್ಬ (ಮಣಿಪುರ ರಾಜ್ಯದಲ್ಲಿ ರಜೆ)
- ಫೆ. 16: ಭಾನುವಾರ
- ಫೆ. 19, ಬುಧವಾರ: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಮಹಾರಾಷ್ಟ್ರದಲ್ಲಿ ರಜೆ)
- ಫೆ. 20, ಗುರುವಾರ: ರಾಜ್ಯೋತ್ಸವ (ಮಿಝೋರಾಮ್, ಅರುಣಾಚಲ ಪ್ರದೇಶದಲ್ಲಿ ರಜೆ)
- ಫೆ. 22: ನಾಲ್ಕನೇ ಶನಿವಾರ
- ಫೆ. 23: ಭಾನುವಾರ
- ಫೆ. 26, ಬುಧವಾರ: ಮಹಾಶಿವರಾತ್ರಿ ಹಬ್ಬ (ಕರ್ನಾಟಕ ಸೇರಿ ಹೆಚ್ಚಿನ ಕಡೆ ರಜೆ)
- ಫೆ. 28, ಶುಕ್ರವಾರ: ಲೋಸರ್ ಹಬ್ಬ (ಸಿಕ್ಕಿಂ ರಾಜ್ಯದಲ್ಲಿ ರಜೆ)
ಇದನ್ನೂ ಓದಿ: ಎಸ್ಬಿಐ ಹೊಸ ಆರ್ಡಿ ಸ್ಕೀಮ್ ಹರ್ ಘರ್ ಲಖಪತಿ; ಎಫ್ಡಿಯಷ್ಟೇ ಸಿಗುತ್ತೆ ರಿಟರ್ನ್ಸ್
ಫೆಬ್ರುವರಿಯಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು
- ಫೆ. 2: ಭಾನುವಾರ
- ಫೆ. 8: ಎರಡನೇ ಶನಿವಾರ
- ಫೆ. 9: ಭಾನುವಾರ
- ಫೆ. 16: ಭಾನುವಾರ
- ಫೆ. 22: ನಾಲ್ಕನೇ ಶನಿವಾರ
- ಫೆ. 23: ಭಾನುವಾರ
- ಫೆ. 26, ಬುಧವಾರ: ಮಹಾಶಿವರಾತ್ರಿ ಹಬ್ಬ
ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ದಿನ 24 ಗಂಟೆಯೂ ಆನ್ಲೈನ್ನಲ್ಲಿ ಲಭ್ಯ ಇರುತ್ತವೆ. ಹಣ ವರ್ಗಾವಣೆ, ಹಣ ಪಾವತಿ ಇತ್ಯಾದಿ ಹಲವು ಕಾರ್ಯಗಳನ್ನು ನೆಟ್ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ಮಾಡಬಹುದು. ಕ್ಯಾಷ್ ಪಡೆಯಲು ಎಟಿಎಂಗಳಿರುತ್ತವೆ. ಡಿಡಿ ಪಡೆಯುವುದು, ಆರ್ಟಿಜಿಎಸ್, ಅರ್ಜಿ ಸಲ್ಲಿಕೆ ಇತ್ಯಾದಿ ಕೆಲ ವಿಶೇಷ ಬ್ಯಾಂಕಿಂಗ್ ಕೆಲಸಗಳಿಗೆ ಬ್ಯಾಂಕ್ ಕಚೇರಿಗೆ ಹೋಗುವ ಅವಶ್ಯಕತೆ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ