AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐ ಹೊಸ ಆರ್​ಡಿ ಸ್ಕೀಮ್ ಹರ್ ಘರ್ ಲಖಪತಿ; ಎಫ್​ಡಿಯಷ್ಟೇ ಸಿಗುತ್ತೆ ರಿಟರ್ನ್ಸ್

SBI special RD scheme: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ರೆಕರಿಂಗ್ ಡೆಪಾಸಿಟ್ ಸ್ಕೀಮ್ ಆರಂಭಿಸಿದೆ. ಹರ್ ಘರ್ ತಿರಂಗಾ ಎನ್ನುವ ರೀತಿಯಲ್ಲಿ ಹರ್ ಘರ್ ಲಖಪತಿ ಎಂಬ ಹೆಸರಿನಲ್ಲಿ ಆರ್​ಡಿ ಪ್ಲಾನ್ ಇದು. 60 ವರ್ಷದೊಳಗಿನ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕವಾಗಿ ಶೇ. 6.75ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ಎಸ್​ಬಿಐ ಹೊಸ ಆರ್​ಡಿ ಸ್ಕೀಮ್ ಹರ್ ಘರ್ ಲಖಪತಿ; ಎಫ್​ಡಿಯಷ್ಟೇ ಸಿಗುತ್ತೆ ರಿಟರ್ನ್ಸ್
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 23, 2025 | 4:43 PM

Share

ಬಹಳ ಸರ್ವೇ ಸಾಮಾನ್ಯವಾಗಿ ಜನರು ಬಳಸುವ ಸೇವಿಂಗ್ಸ್ ಸ್ಕೀಮ್​ಗಳಲ್ಲಿ ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಇತ್ಯಾದಿ ಇವೆ. ಎಫ್​ಡಿ ಅಥವಾ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಒಮ್ಮೆಗೇ ಡೆಪಾಸಿಟ್ ಇಡುತ್ತೀರಿ. ಆರ್​ಡಿ ಸ್ಕೀಮ್​ನಲ್ಲಿ ನೀವು ಮಾಸಿಕವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಕಟ್ಟುತ್ತಾ ಹೋಗಬಹುದು. ಎಫ್​ಡಿಯಲ್ಲಿ ಸಿಗುವ ರಿಟರ್ನ್​ಗಿಂತ ಆರ್​ಡಿಯಲ್ಲಿ ಸಿಗುವುದು ತುಸು ಕಡಿಮೆ. ಆದರೆ, ಪ್ರತೀ ತಿಂಗಳು ಕಡಿಮೆ ಕಡಿಮೆ ಮೊತ್ತದ ಹಣವನ್ನು ಕಟ್ಟುತ್ತಾ ಹೋಗುವ ದೊಡ್ಡ ಅನುಕೂಲ ಆರ್​ಡಿಗೆ ಇದೆ. ಇದೇ ವೇಳೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆರ್​ಡಿ ಸ್ಕೀಮ್​ವೊಂದನ್ನು ಆರಂಭಿಸಿದೆ. ಈ ಪ್ಲಾನ್ ಹೆಸರು ಹರ್ ಘರ್ ಲಖಪತಿ. ಅಂದರೆ ಪ್ರತೀ ಮನೆಯಲ್ಲೂ ಲಕ್ಷಾಧಿಪತಿ ಸೃಷ್ಟಿಯಾಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾದ ರಿಕರಿಂಗ್ ಡೆಪಾಸಿಟ್ ಪ್ಲಾನ್ ಇದು.

ಎಸ್​ಬಿಐ ಆರ್​ಡಿ ಸ್ಕೀಮ್​ನಲ್ಲಿ ಎಷ್ಟು ಬಡ್ಡಿ?

ಎಸ್​​ಬಿಐನ ಹರ್ ಘರ್ ಲಖಪತಿ ಆರ್​ಡಿ ಸ್ಕೀಮ್​ನಲ್ಲಿ ಉತ್ತಮ ಬಡ್ಡಿ ಸಿಗುತ್ತದೆ. ಆರ್​ಡಿ ಅವಧಿ ಮೂರರಿಂದ ನಾಲ್ಕು ವರ್ಷದ್ದಿರುತ್ತದೆ. ಸಾಮಾನ್ಯ ಗ್ರಾಹರಿಗೆ ವಾರ್ಷಿಕವಾಗಿ ಶೇ. 6.77ರಷ್ಟು ಬಡ್ಡಿ ಸಿಗುತ್ತದೆ. ಇದು ಪೋಸ್ಟ್ ಆಫೀಸ್​ನ ಆರ್​​ಡಿ ಪ್ಲಾನ್​ಗೆ ಸಿಗುವಷ್ಟೇ ಬಡ್ಡಿಯಾಗಿದೆ.

ಇದನ್ನೂ ಓದಿ: ನವೆಂಬರ್​ನಲ್ಲಿ 14 ಲಕ್ಷದಷ್ಟು ಹೆಚ್ಚಿದ ಇಪಿಎಫ್ ಸದಸ್ಯರ ಸಂಖ್ಯೆ; ಉದ್ಯೋಗಾವಕಾಶವೂ ಹೆಚ್ಚಳ

ಹಾಗೆಯೇ, ಹಿರಿಯ ನಾಗರಿಕರಿಗೆ ವಾರ್ಷಿಕ ಶೇ. 7.25 ಬಡ್ಡಿ ಸಿಗುತ್ತದೆ. ಇದು ಎಸ್​ಬಿಐನ ಗರಿಷ್ಠ ಎಫ್​ಡಿ ದರಕ್ಕೆ ಸಮವಾಗಿದೆ. ಎಸ್​ಬಿಐನ ಇತರ ರೆಗ್ಯುಲರ್ ಆರ್​ಡಿ ಸ್ಕೀಮ್​ಗಳಲ್ಲಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಶೇ. 6.50; ಹಾಗೂ ಹಿರಿಯ ನಾಗರಿಕರಿಗೆ ಶೇ. 7 ಬಡ್ಡಿ ಇದೆ. ಹರ್ ಘರ್ ಲಖಪತಿ ಸ್ಕೀಮ್​ನಲ್ಲಿ 25 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ರೆಗ್ಯುಲರ್ ಆರ್​ಡಿ ಸ್ಕೀಮ್​ಗಳಲ್ಲಿ ಆರು ತಿಂಗಳಿಂದ ಠೇವಣಿ ಅವಧಿ ಆರಂಭವಾಗುತ್ತದೆ. ಎಸ್​ಬಿಐ ಹರ್ ಘರ್ ಲಖಪತಿ ಸ್ಕೀಮ್​ನಲ್ಲಿ ಕನಿಷ್ಠ ಅವಧಿ 12 ತಿಂಗಳಿಂದ ಆರಂಭವಾಗುತ್ತದೆ. 10 ವರ್ಷದವರೆಗೂ ಆರ್​ಡಿ ಅವಕಾಶ ಇದೆ. ಪ್ರತೀ ವರ್ಷ ಮಕ್ಕಳ ಶಾಲೆಗೆ ಶುಲ್ಕ ಹೊಂದಿಸಲು ಇತ್ಯಾದಿ ನಿಯಮವಾದ ಫಿಕ್ಸೆಡ್ ಎಕ್ಸ್​ಪೆನ್ಸ್​ಗೆ ಈ ರೀತಿಯ ಆರ್​ಡಿಯನ್ನು ಪ್ಲಾನ್ ಮಾಡುವುದು ಸಮಂಜಸ ಎನಿಸುತ್ತದೆ.

ಇದನ್ನೂ ಓದಿ: ಪರ್ಸನಲ್ ಲೋನ್: ನಿಶ್ಚಿತ ಬಡ್ಡಿದರ ಆಯ್ಕೆಗೆ ಅವಕಾಶ ಇರಬೇಕು: ಆರ್​ಬಿಐ ನಿಯಮ

ಆರ್​ಡಿ ಸ್ಕೀಮ್​ಗಳಲ್ಲೂ ಲಾಕಿನ್ ಪೀರಿಯಡ್ ಇರುತ್ತದೆ. ಈ ಲಾಕ್ ಇನ್ ಪೀರಿಯಡ್​ನೊಳಗೆ ನೀವು ಹಣ ಹಿಂಪಡೆಯಲು ಆಗುವುದಿಲ್ಲ. ಹಾಗೊಂದು ವೇಳೆ ಹಿಂಪಡೆಯುವುದಾದರೆ ಶೇ. 0.5ರಿಂದ 1ರವರೆಗೆ ಪೆನಾಲ್ಟಿ ಕಟ್ಟಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ