
ಬೆಂಗಳೂರು, ಏಪ್ರಿಲ್ 28: ಮುಂಬರುವ ಮೇ ತಿಂಗಳಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ಬ್ಯಾಂಕುಗಳಿಗೆ 13 ರಜಾ ದಿನಗಳಿವೆ. ಇಲ್ಲಿ ಪ್ರದೇಶವಾರು ರಜೆಗಳು (Bank holidays list) ಬೇರೆ ಬೇರೆ ಇವೆ. ಕಾರ್ಮಿಕರ ದಿನ, ರವೀಂದ್ರನಾಥ್ ಠಾಗೋರ್ ಜಯಂತಿ, ಬುದ್ಧ ಪೂರ್ಣಿಮಾ, ಕಾಜಿ ನಸರುಲ್ ಜಯಂತಿ ಇತ್ಯಾದಿ ದಿನಗಳು ಮೇ ತಿಂಗಳಲ್ಲಿವೆ. ಕಾರ್ಮಿಕ ದಿನಕ್ಕೆ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ರಜೆ ಇರುತ್ತದೆ. ಇದು ಬಿಟ್ಟರೆ ನಾಲ್ಕು ಭಾನುವಾರ ಹಾಗೂ ಎರಡು ಶನಿವಾರಗಳ ನಿಯಮಿತ ರಜೆಗಳೂ ಮೇ ತಿಂಗಳಲ್ಲಿ ಇವೆ.
ಕರ್ನಾಟಕದಲ್ಲಿ ಭಾನುವಾರ, ಶನಿವಾರಗಳ ಆರು ದಿನಗಳನ್ನು ಹೊರತುಪಡಿಸಿದರೆ, ಕಾರ್ಮಿಕ ದಿನಕ್ಕೆ ಮಾತ್ರವೇ ರಜೆ ಇದೆ. ಹೀಗಾಗಿ, ಮೇ ತಿಂಗಳಲ್ಲಿ ಕರ್ನಾಟಕಕ್ಕೆ ಏಳು ದಿನ ಮಾತ್ರವೇ ಬ್ಯಾಂಕುಗಳು ಬಂದ್ ಆಗಿರುತ್ತವೆ.
ಇದನ್ನೂ ಓದಿ: ಭಾರತದ್ದೇ ಸ್ವಂತ ಎಐ ಫೌಂಡೇಶನ್ ಮಾಡಲ್ ನಿರ್ಮಾಣಕ್ಕೆ ಸರ್ವಮ್ ಸಂಸ್ಥೆ ಆಯ್ಕೆ
ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಕಾರ್ಯಗಳನ್ನು ಎಟಿಎಂ, ನೆಟ್ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ಮಾಡಬಹುದು. ಇವು ಯಾವುದೇ ದಿನವಾದರೂ ತೆರೆದೇ ಇರುತ್ತವೆ. ದೊಡ್ಡ ಮೊತ್ತದ ವಹಿವಾಟು ಮಾಡಲು, ಡಿಡಿ ಪಡೆಯಲು, ಸಾಲಕ್ಕೆ ಅರ್ಜಿ ಸಲ್ಲಿಸಲು ಇತ್ಯಾದಿ ಕೆಲ ಕಾರ್ಯಗಳಿಗೆ ಬ್ಯಾಂಕ್ ಕಚೇರಿಗೆ ಹೋಗುವುದು ಅನಿವಾರ್ಯವಾಗಬಹುದು. ಅಂಥ ಕೆಲಸಗಳನ್ನು ಹೊಂದಿರುವವರು ಮುಂಚಿತವಾಗಿ ರಜಾದಿನಗಳು ಯಾವತ್ತೆಂದು ತಿಳಿದಿರುವುದು ಉತ್ತಮ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ