AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Of Baroda: ಬ್ಯಾಂಕ್​ ಆಫ್ ಬರೋಡಾದಿಂದ ಹಬ್ಬದ ಋತುವಿಗಾಗಿ ಹೌಸಿಂಗ್​ ಲೋನ್, ಕಾರಿನ ಲೋನ್ ಆಫರ್

ಹಬ್ಬದ ಋತುವಿಗಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಆದ ಬ್ಯಾಂಕ್​ ಆಫ್ ಬರೋಡಾದಿಂದ ಗೃಹ ಸಾಲ ಹಾಗೂ ಕಾರು ಸಾಲದ ಮೇಲೆ ಆಫರ್ ನೀಡಲಾಗುತ್ತಿದೆ.

Bank Of Baroda: ಬ್ಯಾಂಕ್​ ಆಫ್ ಬರೋಡಾದಿಂದ ಹಬ್ಬದ ಋತುವಿಗಾಗಿ ಹೌಸಿಂಗ್​ ಲೋನ್, ಕಾರಿನ ಲೋನ್ ಆಫರ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 16, 2021 | 11:34 PM

Share

ಹಬ್ಬದ ಋತುವಿನ ಪ್ರಯುಕ್ತ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾದಿಂದ ಗುರುವಾರ ಸಾಲದ ಆಫರ್​ಗಳನ್ನು ಘೋಷಿಸಲಾಗಿದೆ. ಈ ಆಫರ್ ಅಡಿಯಲ್ಲಿ, ಮನೆ ಮತ್ತು ಕಾರು ಸಾಲದ ದರಗಳನ್ನು ಕಡಿತ ಮಾಡಲಾಗಿದೆ. ಪರಿಷ್ಕೃತ ದರಗಳ ಪ್ರಕಾರ, ಬ್ಯಾಂಕ್ ಆಫ್ ಬರೋಡಾದಿಂದ ಗೃಹ ಮತ್ತು ಕಾರು ಸಾಲಗಳಿಗೆ ಈಗಿರುವ ಅನ್ವಯವಾಗುವ ದರಗಳಲ್ಲಿ ಶೇ 0.25 ಕಡಿತ ಮಾಡಲಾಗಿದೆ. ಅದರ ಜೊತೆಗೆ ಬ್ಯಾಂಕ್ ಗೃಹ ಸಾಲಗಳಲ್ಲಿ ಪ್ರೊಸೆಸಿಂಗ್ ಫೀ ಮನ್ನಾ ಮಾಡುತ್ತಿದೆ. ಈಗ ಗೃಹ ಸಾಲದ ದರಗಳು ಶೇ 6.75ರಲ್ಲಿ ಮತ್ತು ಕಾರು ಸಾಲದ ದರಗಳು ಶೇ 7ರಿಂದ ಆರಂಭವಾಗುತ್ತವೆ.

“ಗ್ರಾಹಕರು ಪ್ರಕ್ರಿಯೆಗಳು ವೇಗವಾಗಿ ಆಗಲಿ ಎಂದುಕೊಳ್ಳಬಹುದು ಮತ್ತು ಮನೆಬಾಗಿಲಿಗೇ ಸೇವೆಗಳನ್ನು ಎದುರು ನೋಡಬಹುದು ಮತ್ತು ಶೀಘ್ರ ಮಂಜೂರಾತಿಗಾಗಿ “bob world”/ ಮೊಬೈಲ್ ಬ್ಯಾಂಕಿಂಗ್ ಅಥವಾ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು” ಎಂದು ಬ್ಯಾಂಕ್​ ಆಫ್ ಬರೋಡಾದಿಂದ ತಿಳಿಸಲಾಗಿದೆ. ಮನೆ ಮತ್ತು ಕಾರು ಸಾಲದ ದರಗಳ ಪರಿಷ್ಕರಣೆ ಬಗ್ಗೆ ಅಡಮಾನ ಮತ್ತು ಇತರ ರೀಟೇಲ್ ಆಸ್ತಿಗಳ ಜನರಲ್ ಮ್ಯಾನೇಜರ್ ಎಚ್​.ಟಿ.ಸೋಲಂಕಿ ಮಾತನಾಡಿ, “ಈ ಹಬ್ಬದ ಋತುಗಾಗಿ ರೀಟೇಲ್ ಸಾಲದ ಕೊಡುಗೆಗಳನ್ನು ಪರಿಚಯಿಸುವುದರೊಂದಿಗೆ ನಮ್ಮ ನಿಷ್ಠಾವಂತ ಗ್ರಾಹಕರಲ್ಲಿ ಹಬ್ಬದ ಮೆರುಗು ತರಲು ಉದ್ದೇಶಿಸಿದ್ದೇವೆ. ಈಗಾಗಲೇ ಇರುವ ಗ್ರಾಹಕರು ಮತ್ತು ಹೊಸದಾಗಿ ಬ್ಯಾಂಕ್ ಗ್ರಾಹಕರಿಗೆ ಗೃಹ ಸಾಲಗಳು ಹಾಗೂ ಕಾರು ಸಾಲಗಳನ್ನು ಪಡೆಯಲು ಆಕರ್ಷಕವಾದ ಆಫರ್ ನೀಡಲಾಗುತ್ತದೆ. ಕಡಿಮೆ ದರಗಳು ಮತ್ತು ಪ್ರೊಸೆಸಿಂಗ್ ಶುಲ್ಕದ ಮನ್ನಾ ಅನುಕೂಲ ದೊರೆಯುತ್ತದೆ,” ಎಂದಿದ್ದಾರೆ.

ಈ ಮಧ್ಯೆ, ದೇಶದ ಅತಿದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಗೃಹ ಸಾಲದ ಗ್ರಾಹಕರಿಗೆ ವಿವಿಧ ಹಬ್ಬದ ಕೊಡುಗೆಗಳನ್ನು ಘೋಷಿಸಿದೆ. ಸಾಲದ ಮೊತ್ತದ ಮಿತಿಯನ್ನು ಲೆಕ್ಕಿಸದೆ, ಕ್ರೆಡಿಟ್ ಸ್ಕೋರ್-ಆಧಾರಿತ ಗೃಹ ಸಾಲಗಳು ಶೇಕಡಾ 6.70ರಿಂದ ಪ್ರಾರಂಭವಾಗುತ್ತದೆ. ಈ ಹಿಂದೆ 75 ಲಕ್ಷ ರೂಪಾಯಿಗಿಂತ ಹೆಚ್ಚಿನ ಗೃಹ ಸಾಲವನ್ನು ಪಡೆಯುವವರು ಶೇ 7.15ರ ಬಡ್ಡಿದರವನ್ನು ಪಾವತಿಸಬೇಕಾಗಿತ್ತು. ಹೊಸ ಆಫರ್​ ಪರಿಚಯಿಸುವುದರೊಂದಿಗೆ ಸಾಲಗಾರರಿಗೆ ಈಗ ಶೇ 6.70ಗಿಂತ ಕಡಿಮೆ ದರದಲ್ಲಿ ಗೃಹ ಸಾಲವನ್ನು ಪಡೆಯಬಹುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: SBI home loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ ಬಡ್ಡಿ ದರ ಕಡಿತ, ಪ್ರೊಸೆಸಿಂಗ್ ಫೀ ಮನ್ನಾ

(Bank Of Baroda Offering Home Loan And Car Loan Rate Cut For Festival Season)