Bank Holidays in July 2023: ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ ಯಾವ್ಯಾವತ್ತು ರಜಾ ದಿನ? ಕರ್ನಾಟಕದಲ್ಲಿ 9 ದಿನ ರಜೆ; ಇಲ್ಲಿದೆ ಪಟ್ಟಿ

|

Updated on: Jun 26, 2023 | 12:06 PM

Banks In Karnataka Close for 9 Days In July 2023: ಆರ್​ಬಿಐ ಪ್ರಕಟಿಸಿದ ರಜಾದಿನಗಳ ಕ್ಯಾಲೆಂಡರ್ ಪ್ರಕಾರ ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೂ ರಜೆ ಇದೆ. ಕರ್ನಾಟಕದಲ್ಲಿ 9 ದಿನಗಳ ಕಾಲ ಬ್ಯಾಂಕುಗಳು ಬಂದ್ ಆಗಿರುತ್ತವೆ. ಇದರಲ್ಲಿ ಶನಿವಾರ ಮತ್ತು ಭಾನುವಾರದ ರಜಾ ದಿನಗಳೂ ಸೇರಿವೆ.

Bank Holidays in July 2023: ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ ಯಾವ್ಯಾವತ್ತು ರಜಾ ದಿನ? ಕರ್ನಾಟಕದಲ್ಲಿ 9 ದಿನ ರಜೆ; ಇಲ್ಲಿದೆ ಪಟ್ಟಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಮುಂದಿನ ತಿಂಗಳು, 2023 ಜುಲೈನಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೂ ರಜೆ ಇದೆ. ಆರ್​ಬಿಐ (RBI- Reserve Bank of India) ಪ್ರಕಟಿಸಿದ ಕ್ಯಾಲೆಂಡರ್​ನಲ್ಲಿ 15 ದಿನಗಳ ರಜಾಪಟ್ಟಿದೆ. ಇದರಲ್ಲಿ ಭಾನುವಾರದ ವಾರದ ರಜೆ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆಗಳೂ ಒಳಗೊಂಡಿವೆ. ಹಾಗೆಯೇ ಪ್ರಾದೇಶಿಕ ರಜೆಗಳೂ ಇದರಲ್ಲಿ ಸೇರಿವೆ. ಕೆಲ ಪ್ರದೇಶಗಳಲ್ಲಿ ಬ್ಯಾಂಕಗಳಿಗೆ ಹೆಚ್ಚು ದಿನ ರಜೆ ಇದ್ದರೆ ಇನ್ನೂ ಕೆಲ ರಾಜ್ಯಗಳಲ್ಲಿ ಕಡಿಮೆ ರಜೆ ಇದೆ. ಕರ್ನಾಟಕದಲ್ಲಿ ವಾರದ ರಜೆಗಳನ್ನು ಬಿಟ್ಟರೆ ಒಂದು ರಜೆ ಮಾತ್ರವೇ ಇರುವುದು. ಆರ್​ಬಿಐ ಪ್ರಕಟಿಸಿದ ರಜಾ ದಿನಗಳ ಪಟ್ಟಿಯು ಸರ್ಕಾರಿ ಮತ್ತು ಖಾಸಗಿ ಎರಡೂ ವಲಯದ ಬ್ಯಾಂಕುಗಳಿಗೂ ಅನ್ವಯ ಆಗುತ್ತದೆ.

ವಿಶೇಷತೆ ಎಂದರೆ ಜುಲೈ ತಿಂಗಳಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳೇ 8 ಇವೆ. ಐದು ಭಾನುವಾರ ಹಾಗೂ ಮೂರು ಶನಿವಾರ ರಜೆಗಳಿವೆ. ಕರ್ನಾಟಕದಲ್ಲಿ ಒಟ್ಟು 9 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇದೆ. ಈ ತಿಂಗಳಾದ ಜೂನ್​ನಲ್ಲಿ 29ರಂದು ಈದ್ ಪ್ರಯುಕ್ತ ಕರ್ನಾಟಕದಲ್ಲಿ ರಜೆ ಇದೆ.

ಇದನ್ನೂ ಓದಿBlocking Debit Card: ಎಸ್​ಬಿಐ ಡೆಬಿಟ್ ಕಾರ್ಡ್ ಕಳೆದುಹೋಗಿದೆಯೇ? ಬ್ಲಾಕ್ ಮಾಡುವ ಸುಲಭ ವಿಧಾನಗಳಿವು

2023ರ ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ

  • ಜುಲೈ 2 (ಭಾನುವಾರ): ವಾರದ ರಜೆ (ಎಲ್ಲೆಡೆ)
  • ಜುಲೈ 5 (ಬುಧವಾರ): ಗುರು ಹರಗೋಬಿಂದ್​ಜಿ ಜನ್ಮದಿನ (ಜಮ್ಮು ಮತ್ತು ಶ್ರೀನಗರದಲ್ಲಿ ರಜೆ)
  • ಜುಲೈ 6 (ಗುರುವಾರ): ಎಂಎಚ್​ಐಪಿ ದಿನ (ಮಿಝೋರಾಮ್​ನಲ್ಲಿ ರಜೆ)
  • ಜುಲೈ 8 (ಶನಿವಾರ): ಎರಡನೇ ಶನಿವಾರ (ಎಲ್ಲೆಡೆ ರಜೆ)
  • ಜುಲೈ 9 (ಭಾನುವಾರ): ಎಲ್ಲೆಡೆ ರಜೆ
  • ಜುಲೈ 13 (ಗುರುವಾರ): ಭಾನು ಜಯಂತಿ (ಸಿಕ್ಕಿಂನಲ್ಲಿ ರಜೆ)
  • ಜುಲೈ 15: ನಾಲ್ಕನೇ ಶನಿವಾರ
  • ಜುಲೈ 16: ಭಾನುವಾರ
  • ಜುಲೈ 17: ಯು ತಿರೋತ್ ಸಿಂಗ್ ದಿನ (ಮೇಘಾಲಯದಲ್ಲಿ ರಜೆ)
  • ಜುಲೈ 21: ದ್ರುಪಕಾ ಶೆ ಝಿ (ಸಿಕ್ಕಿಂನಲ್ಲಿ ರಜೆ)
  • ಜುಲೈ 23: ಭಾನುವಾರ
  • ಜುಲೈ 28: ಅಶೂರಾ (ಜಮ್ಮು ಮತ್ತು ಶ್ರೀನಗರದಲ್ಲಿ ರಜೆ)
  • ಜುಲೈ 29: ಮೊಹರಂ (ಬಹುತೇಕ ರಾಜ್ಯಗಳಲ್ಲಿ ರಜೆ)
  • ಜುಲೈ 29: ಶನಿವಾರ
  • ಜುಲೈ 30: ಭಾನುವಾರ

ಇದನ್ನೂ ಓದಿEPF Withdrawal: ಉಮಂಗ್ ಆ್ಯಪ್ ಮೂಲಕ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಬಹಳ ಸುಲಭ; ಇಲ್ಲಿದೆ ವಿವರ

ಕರ್ನಾಟಕದಲ್ಲಿ 2023ರ ಜುಲೈ ತಿಂಗಳಲ್ಲಿ ರಜಾ ದಿನಗಳು

  • ಜುಲೈ 2: ಭಾನುವಾರ
  • ಜುಲೈ 8: ಎರಡನೇ ಶನಿವಾರ
  • ಜುಲೈ 9: ಭಾನುವಾರ
  • ಜುಲೈ 15: ನಾಲ್ಕನೇ ಶನಿವಾರ
  • ಜುಲೈ 16: ಭಾನುವಾರ
  • ಜುಲೈ 23: ಭಾನುವಾರ
  • ಜುಲೈ 29: ಮೊಹರಂ
  • ಜುಲೈ 29: ಶನಿವಾರ
  • ಜುಲೈ 30: ಭಾನುವಾರ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ