AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Higher Pension: ಇಪಿಎಫ್: ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು 3ನೇ ಬಾರಿಗೆ ಗಡುವು ವಿಸ್ತರಣೆ, ಜುಲೈ 11ರ ವರೆಗೆ ಅವಕಾಶ

Last Date To Apply for Higher Pension: ಹೆಚ್ಚುವರಿ ಪಿಂಚಣಿಗೆ ಅರ್ಜಿ ಸಲ್ಲಿಸಲು ಇಪಿಎಸ್ ಸದಸ್ಯರಿಗೆ ನೀಡಲಾಗಿದ್ದ ಗಡುವನ್ನು ಮೂರನೇ ಬಾರಿಗೆ ವಿಸ್ತರಣೆ ಮಾಡಲಾಗಿದ್ದು, ಜುಲೈ 11ಕ್ಕೆ ನಿಗದಿಪಡಿಸಲಾಗಿದೆ.

Higher Pension: ಇಪಿಎಫ್: ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು 3ನೇ ಬಾರಿಗೆ ಗಡುವು ವಿಸ್ತರಣೆ, ಜುಲೈ 11ರ ವರೆಗೆ ಅವಕಾಶ
ಇಪಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Ganapathi Sharma

Updated on:Jun 26, 2023 | 9:09 PM

ನವದೆಹಲಿ: ಇಪಿಎಫ್​ಒ ಹೊರಡಿಸಿದ ಪ್ರಕಟಣೆ ಪ್ರಕಾರ ಇಪಿಎಫ್ ಸದಸ್ಯರು ಹೆಚ್ಚುವರಿ ಪಿಂಚಣಿಗೆ (Higher Pension) ಅರ್ಜಿ ಸಲ್ಲಿಸಲು 2023 ಜೂನ್ 26ಕ್ಕೆ ಕೊನೆಯ ದಿನವಾಗಿತ್ತು. ಆದರೆ, ಪಿಂಚಣಿದಾರರಿಗೆ ಸಿಹಿ ಸುದ್ದಿ ನೀಡಿರುವ ಸರ್ಕಾರ, ಇದೀಗ ಮೂರನೇ ಬಾರಿಗೆ ಗಡುವು ವಿಸ್ತರಣೆ ಮಾಡಿದೆ. ಹೀಗಾಗಿ ಪಿಂಚಣಿದಾರರಿಗೆ ಜುಲೈ 11ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ. ಈ ಹಿಂದೆ ಎರಡು ಬಾರಿ ಗಡುವು ವಿಸ್ತರಿಸಲಾಗಿತ್ತು.

ಮೂಲ ಪ್ರಕಟಣೆ ಪ್ರಕಾರ 2023ರ ಮಾರ್ಚ್ 3ಕ್ಕೆ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ಇತ್ತು. ಅದನ್ನು 2023ರ ಮೇ 3ಕ್ಕೆ ವಿಸ್ತರಿಸಲಾಯಿತು. ನಂತರ ಎರಡನೇ ಬಾರಿ ಗಡುವು ವಿಸ್ತರಣೆ ಆಗಿ ಜೂನ್ 26ಕ್ಕೆ ಡೆಡ್​ಲೈನ್ ಎಂದು ನಿಗದಿಯಾಗಿತ್ತು. ಆದರೆ, ಬಹಳ ಉದ್ಯೋಗಿಗಳು ಆನ್​ಲೈನ್​ನಲ್ಲಿ ಹೆಚ್ಚುವರಿ ಪೆನ್ಷನ್​ಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ತಾಂತ್ರಿಕ ತೊಂದರೆ ಎದುರಾಗಿದೆ ಎಂದು ಕಳೆದ ವಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಈ ಕಾರಣಕ್ಕೆ ಮೂರನೇ ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ.

ಏನಿದು ಹೆಚ್ಚುವರಿ ಪಿಂಚಣಿ?

2014 ಸೆಪ್ಟಂಬರ್ 1ಕ್ಕೆ ಅಥವಾ ಅದಕ್ಕೆ ಮುಂಚಿನಿಂದಲೂ ಇಪಿಎಫ್ ಮತ್ತು ಇಪಿಎಸ್​ಗೆ ಸದಸ್ಯರಾದವರು ಹೆಚ್ಚುವರಿ ಇಪಿಎಸ್​ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ. ಇಪಿಎಸ್​ನಲ್ಲಿ ಸಂಬಳ ಮಿತಿ 15,000 ರೂ ಇತ್ತು. ಅದಕ್ಕಿಂತ ಹೆಚ್ಚಿನ ಸಂಬಳಕ್ಕೆ ಇದು ಸಿಗುವುದಿಲ್ಲ. 15,000 ರೂಗಿಂತ ಹೆಚ್ಚು ಸಂಬಳ ಪಡೆಯುತ್ತಿರುವವರಿಗೂ ಹೆಚ್ಚುವರಿ ಪಿಂಚಣಿ ಅವಕಾಶ ಕೊಡುವಂತೆ ಸುಪ್ರೀಂಕೋರ್ಟ್ ಕಳೆದ ವರ್ಷ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ 2014ರ ಸೆಪ್ಟಂಬರ್ 1 ಮತ್ತು ಅದಕ್ಕಿಂತ ಮುಂಚಿನಿಂದ ಇಪಿಎಫ್ ಮತ್ತು ಇಪಿಎಸ್ ಸದಸ್ಯರಾದವರು ಹೆಚ್ಚುವರಿ ಪಿಂಚಣಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿEPF Withdrawal: ಉಮಂಗ್ ಆ್ಯಪ್ ಮೂಲಕ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಬಹಳ ಸುಲಭ; ಇಲ್ಲಿದೆ ವಿವರ

ಇಪಿಎಫ್ ಮತ್ತು ಇಪಿಎಸ್ ವ್ಯತ್ಯಾಸವೇನು?

ಇಪಿಎಫ್ ಎಂದರೆ ಎಂಪ್ಲಾಯೀ ಪ್ರಾವಿಡೆಂಟ್ ಫಂಡ್. ಇಪಿಎಸ್ ಎಂಬುದು ಎಂಪ್ಲಾಯೀ ಪೆನ್ಷನ್ ಸ್ಕೀಮ್. ಇಪಿಎಫ್​ನ ಹೆಚ್ಚುವರಿ ಜೋಡಣೆ ಇಪಿಎಸ್. ಇಪಿಎಫ್ ಸ್ಕೀಮ್​ನಲ್ಲಿ ಉದ್ಯೋಗಿಯ ಮೂಲವೇತನ ಮತ್ತು ಡಿಎ ಸೇರಿ ಒಟ್ಟು ಮೊತ್ತದ ಶೇ. 12ರಷ್ಟು ಭಾಗವನ್ನು ಉದ್ಯೋಗಿಯ ಸಂಬಳದಿಂದ ಕಡಿತಗೊಳಿಸಿ ಇಪಿಎಫ್ ಖಾತೆಗೆ ಪ್ರತೀ ತಿಂಗಳು ಜಮೆ ಮಾಡಲಾಗುತ್ತದೆ. ಉದ್ಯೋಗದಾತ ಸಂಸ್ಥೆಯಿಂದಲೂ ಶೇ. 12ರಷ್ಟು ಹಣದ ಕೊಡುಗೆ ಇರುತ್ತದೆ. 15,000 ರೂ ಮತ್ತು ಅದಕ್ಕಿಂತ ಕಡಿಮೆ ಸಂಬಳ ಇದ್ದವರು ಇಪಿಎಫ್ ಜೊತೆಗೆ ಇಪಿಎಸ್ ಸ್ಕೀಮ್ ಸಿಗುತ್ತದೆ. ಸಂಸ್ಥೆ ಕೊಡುವ ಶೇ. 12ರಷ್ಟು ಹಣದಲ್ಲಿ ಇಪಿಎಫ್​ಗೆ ಶೇ. 3.67ರಷ್ಟು ಹೋಗುತ್ತದೆ, ಇನ್ನುಳಿದ ಶೇ. 8.33ರಷ್ಟು ಹಣ ಇಪಿಎಸ್​ಗೆ ಹೋಗುತ್ತದೆ.

ಇಪಿಎಸ್ ಎಂಬುದು ಕಟ್ಟುನಿಟ್ಟಾದ ಪಿಂಚಣಿ ಸ್ಕೀಮ್. ಇದನ್ನು ಉದ್ಯೋಗಿ ನಿವೃತ್ತರಾದ ಬಳಿಕ ಪಿಂಚಣಿಗೆ ಮಾತ್ರ ಅನ್ವಯ ಆಗುವಂಥದ್ದು. ಈಗ ಇಪಿಎಸ್ ಖಾತೆಗೆ ಹೆಚ್ಚು ಹಣ ಹಾಕುವ ಅವಕಾಶ ಉದ್ಯೋಗಿಗೆ ಸಿಕ್ಕಿದೆ. ಆದರೆ, 2014ರ ಸೆಪ್ಟಂಬರ್ 1ರಿಂದಲೂ ಅವರು ಇಪಿಎಫ್ ಮತ್ತು ಇಪಿಎಸ್​ನ ಸದಸ್ಯರಾಗಿರಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 9:05 am, Mon, 26 June 23

Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ