ಪಿಂಚಣಿದಾರರು ಹಾಸಿಗೆ ಹಿಡಿದಿದ್ದರೆ ಮನೆ ಬಾಗಿಲಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ಪಡೆಯಿರಿ: ಬ್ಯಾಂಕುಗಳಿಗೆ ಕೇಂದ್ರ ನಿರ್ದೇಶನ

|

Updated on: Sep 28, 2023 | 1:02 PM

Life Certificate of Pensioners: ಪಿಂಚಣಿದಾರರು ಹಾಸಿಗೆ ಹಿಡಿದಿದ್ದರೆ ಅಥವಾ ಆಸ್ಪತ್ರೆಗೆ ದಾಖಲಾಗಿದ್ದರೆ, ಅವರಿರುವ ಸ್ಥಳಕ್ಕೆ ಎಕ್ಸಿಕ್ಯೂಟಿವ್​ಗಳನ್ನು ಕಳುಹಿಸಿ ಲೈಫ್ ಸರ್ಟಿಫಿಕೇಟ್ ಪಡೆಯುವ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಡಿಜಿಟಲ್ ಆಗಿ ಲೈಫ್ ಸರ್ಟಿಫಿಕೇಟ್ ನೀಡುವ ವ್ಯವಸ್ಥೆ ಬಗ್ಗೆ ವಯೋವೃದ್ಧರಲ್ಲಿ ಅರಿವು ಮೂಡಿಸಬೇಕು ಎಂದೂ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ.

ಪಿಂಚಣಿದಾರರು ಹಾಸಿಗೆ ಹಿಡಿದಿದ್ದರೆ ಮನೆ ಬಾಗಿಲಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ಪಡೆಯಿರಿ: ಬ್ಯಾಂಕುಗಳಿಗೆ ಕೇಂದ್ರ ನಿರ್ದೇಶನ
ಪಿಂಚಣಿದಾರರು
Follow us on

ನವದೆಹಲಿ, ಸೆಪ್ಟೆಂಬರ್ 28: ಪಿಂಚಣಿದಾರರು (Pensioners) ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೆ ಅಥವಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಅವರಿರುವ ಸ್ಥಳಕ್ಕೆ ಹೋಗಿ ಅವರಿಂದ ಲೈಫ್ ಸರ್ಟಿಫಿಕೇಟ್ (Life Certificate) ಪಡೆಯಬೇಕು ಎಂದು ಬ್ಯಾಂಕುಗಳಿಗೆ ಕೇಂದ್ರ ನಿರ್ದೇಶನ ನೀಡಿದೆ. ಹಾಗೆಯೇ, ಡಿಜಿಟಲ್ ಆಗಿ ಲೈಫ್ ಸರ್ಟಿಫಿಕೇಟ್ ನೀಡುವ ವ್ಯವಸ್ಥೆ ಬಗ್ಗೆ 80 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಯೋವೃದ್ಧರಿಗೆ ಅರಿವು ಮೂಡಿಸಬೇಕು ಎಂದೂ ಕೇಂದ್ರ ಸರ್ಕಾರದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ಎಲ್ಲಾ ಬ್ಯಾಂಕುಗಳಿಗೂ ತಿಳಿಸಿದೆ.

ಏನಿದು ಲೈಫ್ ಸರ್ಟಿಫಿಕೇಟ್?

ಲೈಫ್ ಸರ್ಟಿಫಿಕೇಟ್ ಎಂಬುದು ಒಬ್ಬ ವ್ಯಕ್ತಿ ತಾನು ಜೀವಂತವಾಗಿದ್ದೇನೆ ಎಂದು ತಿಳಿಸುವ ಒಂದು ಪ್ರಮಾಣಪತ್ರ. ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳು ಪ್ರತೀ ವರ್ಷವೂ ಲೈಫ್ ಸರ್ಟಿಫಿಕೇಟ್ ಕೊಡಬೇಕು. ಪಿಂಚಣಿ ವಿತರಿಸುವ ಬ್ಯಾಂಕುಗಳು ಈ ಪಿಂಚಣಿದಾರರಿಂದ ಪ್ರತೀ ವರ್ಷ ಲೈಫ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು. ಒಂದು ವೇಳೆ, ಪಿಂಚಣಿದಾರರು ವರ್ಷಕ್ಕೊಮ್ಮೆ ಲೈಫ್ ಸರ್ಟಿಫಿಕೇಟ್ ಕೊಡದೇ ಹೋದರೆ ಪಿಂಚಣಿಯ ವಿತರಣೆ ಸ್ಥಗಿತಗೊಳ್ಳುತ್ತದೆ.

ಇದನ್ನೂ ಓದಿ: ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಇಲ್ಲದಿದ್ದರೆ ದಂಡ ಎಷ್ಟು ಕಟ್ಟಬೇಕು? ಶೂನ್ಯ ಬ್ಯಾಲನ್ಸ್ ಇದ್ದರೆ ಏನಾಗುತ್ತದೆ? ಇಲ್ಲಿದೆ ಡೀಟೇಲ್ಸ್

ಏನಿದು ಫೇಸ್ ಅಥೆಂಟಿಕೇಶನ್?

ಫೇಸ್ ಅಥೆಂಟಿಕೇಶನ್ ಅಥವಾ ಚಹರೆ ಗುರುತು ತಂತ್ರಜ್ಞಾನದ ಮೂಲಕ ಡಿಜಿಟಲ್ ಆಗಿಯೂ ಲೈಫ್ ಸರ್ಟಿಫಿಕೇಟ್ ನೀಡಬಹುದು. ತಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ನೀಡಲು ಸಾಧ್ಯ. ಬ್ಯಾಂಕ್ ಕಚೇರಿಯಲ್ಲೂ ಫೇಸ್ ಅಥೆಂಟಿಕೇಶನ್ ವ್ಯವಸ್ಥೆ ಇರುತ್ತದೆ.

ಈ ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿ ಬಳಸಿ ಲೈಫ್ ಸರ್ಟಿಫಿಕೇಟ್ ನೀಡುವ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಪಿಂಚಣಿದಾರರಿಗೆ ತಿಳಿಸಲು ಬ್ಯಾಂಕುಗಳು ಪ್ರಯತ್ನಿಸಬೇಕು. ಪಿಂಚಣಿದಾರರು ಹಾಸಿಗೆ ಹಿಡಿದಿದ್ದರೆ ಅಥವಾ ಆಸ್ಪತ್ರೆಗೆ ದಾಖಲಾಗಿದ್ದರೆ, ಅವರಿರುವ ಸ್ಥಳಕ್ಕೆ ಎಕ್ಸಿಕ್ಯೂಟಿವ್​ಗಳನ್ನು ಕಳುಹಿಸಿ ಲೈಫ್ ಸರ್ಟಿಫಿಕೇಟ್ ಪಡೆಯುವ ಅವಕಾಶ ಕಲ್ಪಿಸಬೇಕು ಎಂದು ಪಿಂಚಣಿದಾರರ ಕಲ್ಯಾಣ ಇಲಾಖೆ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಚೀನಾದ ಎವರ್​ಗ್ರಾಂಡೆ ದಯನೀಯ ಸ್ಥಿತಿ; ಛೇರ್ಮನ್ ಬಂಧನದ ಬೆನ್ನಲ್ಲೇ ಷೇರು ಸ್ಥಗಿತ; ಭಾರತದಿಂದ ಕಲಿಯಲಿ ಎಂದ ಉದಯ್ ಕೋಟಕ್

ಬ್ಯಾಂಕ್​ಗೆ ಬರಲಾಗದ ಸ್ಥಿತಿಯಲ್ಲಿ ಪಿಂಚಣಿದಾರರು ಇದ್ದರೆ ಅವರಿಗೆ ಎಸ್ಸೆಮ್ಮೆಸ್ ಅಥವಾ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಫೇಸ್ ಅಥೆಂಟಿಕೇಶನ್ ಕೈಗೊಳ್ಳಲು ಲಿಂಕ್ ಕಳುಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ