ಆರ್​ಬಿಐ ಹೊಸ ವ್ಯವಸ್ಥೆ: ಚೆಕ್ ಡೆಪಾಸಿಟ್ ಆಗಲು 2 ದಿನ ಕಾಯಬೇಕಿಲ್ಲ; ಕೆಲವೇ ಗಂಟೆಯಲ್ಲಿ ಹಣ ಬರುತ್ತೆ

New mechanism for fast disposal of cheques: ನೀವು ಬ್ಯಾಂಕಿಗೆ ಚೆಕ್ ಪ್ರೆಸೆಂಟ್ ಮಾಡಿದಾಗ ಅದು ಕ್ಲಿಯರ್ ಆಗಲು ಒಂದು ಅಥವಾ ಎರಡು ದಿನ ಆಗುತ್ತದೆ. ಅಕ್ಟೋಬರ್ 4ರಿಂದ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದ್ದು, ಚೆಕ್ ಕೆಲವೇ ಗಂಟೆಗಳಲ್ಲಿ ಕ್ಲಿಯರೆನ್ಸ್ ಆಗುತ್ತದೆ. ಚೆಕ್ ಸಲ್ಲಿಸಿದ ತಕ್ಷಣ ಅದನ್ನು ಸ್ಕ್ಯಾನ್ ಮಾಡಿ ಕಳುಹಿಸಲಾಗುತ್ತದೆ. ಮೂರು ಗಂಟೆಯೊಳಗೆ ಚೆಕ್ ಪರಿಶೀಲನೆ ಆಗಿ ಅನುಮೋದನೆ ಆಗಬೇಕು. ಅಥವಾ ತಿರಸ್ಕೃತ ಆಗಬೇಕು.

ಆರ್​ಬಿಐ ಹೊಸ ವ್ಯವಸ್ಥೆ: ಚೆಕ್ ಡೆಪಾಸಿಟ್ ಆಗಲು 2 ದಿನ ಕಾಯಬೇಕಿಲ್ಲ; ಕೆಲವೇ ಗಂಟೆಯಲ್ಲಿ ಹಣ ಬರುತ್ತೆ
ಆರ್​ಬಿಐ

Updated on: Aug 14, 2025 | 3:29 PM

ಮುಂಬೈ, ಆಗಸ್ಟ್ 14: ಬ್ಯಾಂಕುಗಳಲ್ಲಿ ನೀವು ಚೆಕ್ ಹಾಕಿದರೆ ಅದು ಪ್ರೋಸಸ್ (cheque clearance) ಆಗಿ ನಿಮ್ಮ ಅಕೌಂಟ್​​ಗೆ ಹಣ ಜಮೆ ಆಗಲು ಒಂದು ಅಥವಾ ಎರಡು ಕಾರ್ಯ ದಿನಗಳಾಗುತ್ತವೆ. ಈ ಅವಧಿಯನ್ನು ಕಡಿಮೆ ಮಾಡಲು ಆರ್​ಬಿಐ (RBI) ಹೊಸ ಕ್ರಮ ತೆಗೆದುಕೊಳ್ಳುತ್ತಿದೆ. ಅದಕ್ಕಾಗಿ ಹೊಸ ವ್ಯವಸ್ಥೆ ರೂಪಿಸಿದೆ. ಕೆಲವೇ ಗಂಟೆಗಳೊಳಗೆ ಚೆಕ್ ಕ್ಲಿಯರೆನ್ಸ್ ಆಗುವಂತಹ ವ್ಯವಸ್ಥೆ ಅಕ್ಟೋಬರ್ 4ರಿಂದ ಜಾರಿಗೆ ಬರಲಿದೆ.

ಸದ್ಯ ಇರುವ ವ್ಯವಸ್ಥೆಯಲ್ಲಿ ಚೆಕ್ ಕ್ಲಿಯರೆನ್ಸ್ ಸೈಕಲ್ ಟಿ+1 ದಿನವಾಗಿದೆ. ಚೆಕ್​ಗಳನ್ನು ಪ್ರೋಸಸ್ ಮಾಡಲು ಚೆಕ್ ಟ್ರುಂಕೇಶ್ ಸಿಸ್ಟಂ ಇದೆ. ಬ್ಯಾಚ್ ಪ್ರೋಸಸಿಂಗ್ ವಿಧಾನದಲ್ಲಿ ಚೆಕ್ ಕ್ಲಿಯರ್ ಆಗಲು ಎರಡು ಕಾರ್ಯದಿನಗಳು ಆಗುತ್ತವೆ.

ಹೊಸ ವ್ಯವಸ್ಥೆಯಲ್ಲಿ, ಚೆಕ್​ಗಳನ್ನು ಸ್ಕ್ಯಾನ್ ಮಾಡಿ ಕೆಲವೇ ಗಂಟೆಗಳಲ್ಲಿ ಪಾಸ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯು ವರ್ಕಿಂಗ್ ದಿನಗಳಲ್ಲಿ ನಿರಂತರವಾಗಿ ಚಾಲೂ ಇರುತ್ತದೆ.

ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್​ನಲ್ಲಿ ಮಿನಿಮಮ್ ಅಕೌಂಟ್ ಬ್ಯಾಲನ್ಸ್ 50,000 ರೂ ಅಲ್ಲ, 15,000 ರೂ

‘ಈಗಿರುವ ಚೆಕ್ ಟ್ರಂಕೇಶನ್ ಸಿಸ್ಟಂ (ಸಿಟಿಎಸ್) ನಿಂದ ಎರಡು ಹಂತದಲ್ಲಿ ನಿರಂತರ ಕ್ಲಿಯರಿಂಗ್ ಮತ್ತು ಸೆಟಲ್ಮೆಂಟ್ ಆನ್ ರಿಯಲೈಸೇಶನ್ ವ್ಯವಸ್ಥೆಗೆ ಬದಲಾಯಿಸಲು ನಿರ್ಧರಿಸಲಾಗಿದೆ. ಮೊದಲ ಹಂತವು 2025ರ ಅಕ್ಟೋಬರ್ 4ರಿಂದ ಜಾರಿಗೆ ಬರುತ್ತದೆ. ಎರಡನೇ ಹಂತವು 2026ರ ಜನವರಿ 3ರಿಂದ ಜಾರಿಗೆ ಬರುತ್ತದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಬ್ಯಾಂಕ್ ಬ್ರ್ಯಾಂಕ್​ಗೆ ಹೋಗಿ ನೀವು ಚೆಕ್ ಸಲ್ಲಿಸಿದಾಗ, ಕೂಡಲೇ ಅದನ್ನು ಸ್ಕ್ಯಾನ್ ಮಾಡಿ ಕ್ಲಿಯರಿಂಗ್ ಹೌಸ್​ಗೆ ಕಳುಹಿಸಲಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಸಿಂಗಲ್ ಪ್ರೆಸೆಂಟೇಶನ್ ಸೆಷನ್​ನಲ್ಲಿ ಈ ಪ್ರಕ್ರಿಯೆ ನಿರಂತರವಾಗಿರುತ್ತದೆ. ಪ್ರತಿಯೊಂದು ಚೆಕ್ ಅನ್ನು ಸಲ್ಲಿಸಿದಾಗ, ಆ ಚೆಕ್​ನ ಬ್ಯಾಂಕ್ ಸ್ಪಂದಿಸಬೇಕು. ಸ್ವೀಕೃತವೋ ಅಥವಾ ತಿರಸ್ಕೃತವೋ ಎಂಬುದನ್ನು ಮೂರು ಗಂಟೆಯೊಳಗೆ ಅದು ಖಚಿತಪಡಿಸಬೇಕು.

ಇದನ್ನೂ ಓದಿ: ತಿಂಗಳಿಗೆ 11,000 ಹೂಡಿಕೆ; 9 ಕೋಟಿ ರೂ ಮೊತ್ತಕ್ಕೆ ಎಷ್ಟು ವರ್ಷ ಬೇಕು?

ಏನೂ ಸ್ಪಂದಿಸದೇ ಇದ್ದರೆ ಚೆಕ್ ಊರ್ಜಿತ ಎಂದು ಪರಿಗಣಿಸಲಾಗುತ್ತದೆ. ಆಗ ಆ ಚೆಕ್ ಅನ್ನು ಕ್ಲಿಯರೆನ್ಸ್ ಮಾಡಲಾಗುತ್ತದೆ. ಇಲ್ಲಿ ಡ್ರಾಯೀ ಬ್ಯಾಂಕುಗಳಿಗೆ (ಚೆಕ್ ಇರುವ ಬ್ಯಾಂಕ್) ಜವಾಬ್ದಾರಿ ಹೆಚ್ಚಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ