ಬಿಎಸ್​​ಇ ಸೆನ್ಸೆಕ್ಸ್​​ಗೆ ಇಂದು ಬಿಇಎಲ್, ಟ್ರೆಂಟ್ ಸೇರ್ಪಡೆ; ಇಂಡಸ್​​ಇಂಡ್, ನೆಸ್ಲೆ ಹೊರಕ್ಕೆ; ಹೇಗೆ ಈ ಬದಲಾವಣೆ?

BSE Sensex30 Index updates: ಬಾಂಬೆ ಸ್ಟಾಕ್ ಎಕ್ಸ್​​ಚೇಂಜ್​ನ ಪ್ರಧಾನ ಸೂಚ್ಯಂಕವಾದ ಸೆನ್ಸೆಕ್ಸ್​​ಗೆ ಬಿಇಎಲ್ ಮತ್ತು ಟ್ರೆಂಟ್ ಸಂಸ್ಥೆಗಳು ಸೇರ್ಪಡೆಯಾಗುತ್ತಿವೆ. ನೆಸ್ಲೆ ಮತ್ತು ಇಂಡಸ್​​ಇಂಡ್ ಬ್ಯಾಂಕ್​ನ ಷೇರುಗಳು ಈ ಇಂಡೆಕ್ಸ್​​ನಿಂದ ಹೊರಹೋಗುತ್ತಿವೆ. ಸೆನ್ಸೆಕ್ಸ್​ನಂತಹ ಇಂಡೆಕ್ಸ್​ಗೆ ಸೇರ್ಪಡೆಯಾಗಲು ಮಾನದಂಡವೇನು? ಅದರಿಂದ ಉಪಯೋಗವೇನು? ಇತ್ಯಾದಿ ವಿವರ ಇಲ್ಲಿದೆ.

ಬಿಎಸ್​​ಇ ಸೆನ್ಸೆಕ್ಸ್​​ಗೆ ಇಂದು ಬಿಇಎಲ್, ಟ್ರೆಂಟ್ ಸೇರ್ಪಡೆ; ಇಂಡಸ್​​ಇಂಡ್, ನೆಸ್ಲೆ ಹೊರಕ್ಕೆ; ಹೇಗೆ ಈ ಬದಲಾವಣೆ?
ಷೇರು

Updated on: Jun 20, 2025 | 12:30 PM

ನವದೆಹಲಿ, ಜೂನ್ 20: ಬೆಂಗಳೂರಿನ ಬಿಇಎಲ್ ಹಾಗೂ ಟಾಟಾ ಒಡೆತನದ ಟ್ರೆಂಟ್ ಲಿಮಿಟೆಡ್ ಸಂಸ್ಥೆಗಳ ಷೇರುಗಳು ಬಿಎಸ್​​ಇ ಸೆನ್ಸೆಕ್ಸ್ ಇಂಡೆಕ್ಸ್​​ಗೆ (BSE Sensex) ಇಂದು ಸೇರ್ಪಡೆಯಾಗುತ್ತಿವೆ. ಸೆನ್ಸೆಕ್ಸ್ ಭಾರತದ ಅಗ್ರಗಣ್ಯ ಷೇರು ಸೂಚ್ಯಂಕವಾಗಿದ್ದು, ಇದರಲ್ಲಿರುವ 30 ಸ್ಟಾಕ್​​ಗಳ ಪಟ್ಟಿಯಿಂದ ನೆಸ್ಲೆ ಮತ್ತು ಇಂಡಸ್​​ಇಂಡ್ ಬ್ಯಾಂಕ್ ಷೇರುಗಳನ್ನು ತೆಗೆದುಹಾಕಲಾಗುತ್ತಿದೆ.

ಈ ಸೇರ್ಪಡೆಯಿಂದ ಬಿಇಎಲ್ ಷೇರುಗಳಿಗೆ 378 ಮಿಲಿಯನ್ ಡಾಲರ್ ಹೂಡಿಕೆ ಬರಬಹುದು. ಟ್ರೆಂಟ್ ಸಂಸ್ಥೆಗೆ 330 ಮಿಲಿಯನ್ ಡಾಲರ್ ಹೂಡಿಕೆ ಬರುವ ನಿರೀಕ್ಷೆ ಇದೆ ಎಂದು ನುವಮ ಆಲ್ಟರ್ನೇಟಿವ್ ಅಂಡ್ ಕ್ವಾಂಟಿಟೇಟಿವ್ ರಿಸರ್ಚ್ ಸಂಸ್ಥೆ ಅಂದಾಜು ಮಾಡಿದೆ. ಇಂಡೆಕ್ಸ್​ನಿಂದ ಹೊರಬರುವ ಪರಿಣಾಮವಾಗಿ ನೆಸ್ಲೆ ಮತ್ತು ಇಂಡಸ್​​ಇಂಡ್ ಬ್ಯಾಂಕ್​​ನಿಂದ ಕ್ರಮವಾಗಿ 230 ಹಾಗೂ 145 ಮಿಲಿಯನ್ ಡಾಲರ್ ಹೂಡಿಕೆ ಹೊರಹೋಗುವ ನಿರೀಕ್ಷೆ ಇದೆ.

ಏನಿದು ಸೆನ್ಸೆಕ್ಸ್ ಇಂಡೆಕ್ಸ್?

ಎನ್​​ಎಸ್​​ಇನಲ್ಲಿ ನಿಫ್ಟಿ50 ಇಂಡೆಕ್ಸ್ ಇರುವಂತೆ ಬಿಎಸ್​​ಇನಲ್ಲಿ ಸೆನ್ಸೆಕ್ಸ್ ಪ್ರಧಾನ ಇಂಡೆಕ್ಸ್ ಆಗಿದೆ. ಇದರಲ್ಲಿ ಅಗ್ರಗಣ್ಯ 30 ಸ್ಟಾಕ್​​ಗಳಿರುತ್ತವೆ. ಫ್ರೀ ಫ್ಲೋಟ್ ಷೇರುಗಳ ಮೊತ್ತದ ಆಧಾರದ ಮೇಲೆ ಇಂಡೆಕ್ಸ್​​ಗೆ ಒಂದು ಸ್ಟಾಕ್ ಅನ್ನು ಆಯ್ಕೆ ಮಾಡಲಾಗುತ್ತದೆ. ಫ್ರೀ ಫ್ಲೋಟ್ ಷೇರು ಎಂದರೆ, ಮಾಲೀಕರದ್ದಲ್ಲದ, ಸಾರ್ವಜನಿಕವಾಗಿ ಲಭ್ಯ ಇರುವ ಒಟ್ಟು ಷೇರುಗಳು. ಇದರಲ್ಲಿ ರೀಟೇಲ್ ಹೂಡಿಕೆದಾರರು, ಮ್ಯೂಚುವಲ್ ಫಂಡ್ ಇತ್ಯಾದಿ ಡಿಐಐಗಳು, ವಿದೇಶೀ ಹೂಡಿಕೆದಾರರು ಇತ್ಯಾದಿಯವರು ಸೇರುತ್ತಾರೆ.

ಇದನ್ನೂ ಓದಿ
ವಿದ್ಯುತ್ ಉತ್ಪಾದನೆ ಹೆಚ್ಚಳದಲ್ಲಿ ಭಾರತದ ವೇಗದ ಬೆಳವಣಿಗೆ
ಐಐಟಿ ಡೆಲ್ಲಿ ಭಾರತದ ನಂ. 1; ಎಂಐಟಿ ವಿಶ್ವದಲ್ಲೇ ಬೆಸ್ಟ್
ಇಸ್ರೇಲೀ ಷೇರುಪೇಟೆಗೆ ಕ್ಷಿಪಣಿ ಬಡಿದರೂ ಗರಿಗೆದರಿದ ಷೇರುಗಳು
ವರ್ಷದಲ್ಲಿ ಶೇ. 30ರಷ್ಟು ಇಳಿಯುತ್ತಾ ಚಿನ್ನದ ಬೆಲೆ?

ಇದನ್ನೂ ಓದಿ: ಫ್ರಾನ್ಸ್​ನ ಏರೋಸ್ಪೇಸ್ ಕಂಪನಿ ಲಾವುಕ್ ಗ್ರೂಪ್ ಅನ್ನು ಖರೀದಿಸಲಿರುವ ವಿಪ್ರೋ

ಸದ್ಯ ಸೆನ್ಸೆಕ್ಸ್​​ನಲ್ಲಿ ಯಾವ್ಯಾವ ಸ್ಟಾಕ್​​ಗಳಿವೆ?

  1. ಎಚ್​​ಡಿಎಫ್​​ಸಿ ಬ್ಯಾಂಕ್
  2. ಐಸಿಐಸಿಐ ಬ್ಯಾಂಕ್
  3. ರಿಲಾಯನ್ಸ್ ಇಂಡಸ್ಟ್ರೀಸ್
  4. ಇನ್ಫೋಸಿಸ್
  5. ಭಾರ್ತಿ ಏರ್ಟೆಲ್
  6. ಲಾರ್ಸನ್ ಅಂಡ್ ಟೌಬ್ರೋ
  7. ಐಟಿಸಿ
  8. ಟಿಸಿಎಸ್
  9. ಎಕ್ಸಿಸ್ ಬ್ಯಾಂಕ್
  10. ಕೋಟಕ್ ಮಹೀಂದ್ರ
  11. ಎಸ್​​ಬಿಐ
  12. ಮಹೀಂದ್ರ ಅಂಡ್ ಮಹೀಂದ್ರ
  13. ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್
  14. ಬಜಾಜ್ ಫೈನಾನ್ಸ್
  15. ಎಚ್​​ಸಿಎಲ್ ಟೆಕ್
  16. ಸನ್ ಫಾರ್ಮಾ
  17. ಎಟರ್ನಲ್
  18. ಎನ್​​ಟಿಪಿಸಿ
  19. ಟೈಟಾನ್ ಕಂಪನಿ
  20. ಟಾಟಾ ಮೋಟಾರ್ಸ್
  21. ಅಲ್ಟ್ರಾಟೆಕ್ ಸಿಮೆಂಟ್
  22. ಪವರ್ ಗ್ರಿಡ್ ಕಾರ್ಪೊರೇಶನ್
  23. ಟಾಟಾ ಸ್ಟೀಲ್
  24. ಬಜಾಜ್ ಫಿನ್​ಸರ್ವ್
  25. ಟೆಕ್ ಮಹೀಂದ್ರ
  26. ಏಷ್ಯನ್ ಪೇಂಟ್ಸ್
  27. ಅದಾನಿ ಪೋರ್ಟ್ಸ್
  28. ನೆಸ್ಲೆ
  29. ಇಂಡಸ್​​ಇಂಡ್ ಬ್ಯಾಂಕ್

ಈ ಮೇಲಿನ ಪಟ್ಟಿಯಿಂದ ನೆಸ್ಲೆ ಮತ್ತು ಇಂಡಸ್​​ಇಂಡ್ ಬ್ಯಾಂಕ್ ಅನ್ನು ತೆಗೆಯಲಾಗುತ್ತದೆ. ಅವುಗಳ ಜಾಗಕ್ಕೆ ಬಿಇಎಲ್ ಮತ್ತು ಟ್ರೆಂಟ್ ಸೇರ್ಪಡೆಯಾಗುತ್ತವೆ.

ಹಾಗೆಯೇ, ಸೆನ್ಸೆಕ್ಸ್​​ನಲ್ಲಿರುವ ಸ್ಟಾಕ್​​ಗಳ ವೈಟೇಜ್​​ಗಳಲ್ಲೂ ಬದಲಾವಣೆ ಆಗುವ ಸಾಧ್ಯತೆ ಇದೆ. ಬಿರ್ಲಾ ಗ್ರೂಪ್​​ಗೆ ಸೇರಿದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಷೇರಿನ ವೈಟೇಜ್ ಹೆಚ್ಚಬಹುದು. ಎಚ್​ಡಿಎಫ್​ಸಿ ಬ್ಯಾಂಕ್, ಭಾರ್ತಿ ಏರ್ಟೆಲ್, ರಿಲಾಯನ್ಸ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಸನ್ ಫಾರ್ಮಾ, ಎಲ್ ಅಂಡ್ ಟಿ, ಟಿಸಿಎಸ್ ಇತ್ಯಾದಿ ಕೆಲ ಷೇರುಗಳ ವೈಟೇಜ್ ಕಡಿಮೆ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಇಸ್ರೇಲ್ ಸ್ಟಾಕ್ ಎಕ್ಸ್​​ಚೇಂಜ್ ಕಟ್ಟಡಕ್ಕೆ ಬಡಿದ ಇರಾನ್ ಕ್ಷಿಪಣಿ; ಆದರೂ ನಿಲ್ಲದ ಟ್ರೇಡಿಂಗ್; ವರ್ಷದ ಗರಿಷ್ಠ ಮಟ್ಟಕ್ಕೇರಿದ ಷೇರು

ಷೇರುಗಳ ವೈಟೇಜ್ ಅಥವಾ ತೂಕದಿಂದ ಏನು ಪರಿಣಾಮ?

ಇಂಡೆಕ್ಸ್​​ಗಳಲ್ಲಿ ಹೂಡಿಕೆ ಮಾಡುವ ಇಟಿಎಫ್, ಮ್ಯೂಚುವಲ್ ಫಂಡ್​​ಗಳಿರುತ್ತವೆ. ಇವು ಇಂಡೆಕ್ಸ್ ಫಂಡ್​​ಗಳು. ಸೆನ್ಸೆಕ್ಸ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುವ ಫಂಡ್​ಗಳಿರುತ್ತವೆ. ಇವು ಸೆನ್ಸೆಕ್ಸ್​​ನಲ್ಲಿರುವ ಷೇರುಗಳ ಮೇಲೆ ಅವುಗಳ ವೈಟೇಜ್​​ಗೆ ಅನುಗುಣವಾಗಿ ಹೂಡಿಕೆ ಮಾಡುತ್ತವೆ.

ಉದಾಹರಣೆಗೆ, ಇಂಡೆಕ್ಸ್ ಫಂಡ್​​ವೊಂದು ಸೆನ್ಸೆಕ್ಸ್​ನಲ್ಲಿ 100 ಕೋಟಿ ರೂ ಹೂಡಿಕೆ ಮಾಡಿತ್ತೆಂದಾದರೆ, ಶೇ. 15.61 ವೈಟೇಜ್ ಇರುವ ಎಚ್​​ಡಿಎಫ್​ಸಿ ಬ್ಯಾಂಕ್​​ನಲ್ಲಿ ಶೇ. 15.61ರಷ್ಟು ಹಣ ಹೂಡಿಕೆ ಆಗುತ್ತದೆ. ಉಳಿದೆಲ್ಲಾ ಸ್ಟಾಕುಗಳ ಮೇಲೆ ಅವುಗಳ ವೈಟೇಜ್​​ಗೆ ಅನುಗುಣವಾಗಿ ಹೂಡಿಕೆ ಹರಡುತ್ತದೆ.

ಷೇರುಗಳ ವೈಟೇಜ್ ಹೇಗೆ ನಿರ್ಧಾರ ಆಗುತ್ತದೆ?

ಇಂಡೆಕ್ಸ್​​ನಲ್ಲಿ ಒಂದು ಷೇರಿಗೆ ಎಷ್ಟು ವೈಟೇಜ್ ಎಂದು ನಿರ್ಧರಿಸಲು ಸಿಂಪಲ್ ಫಾರ್ಮುಲಾ ಇದೆ. ಒಂದು ಸ್ಟಾಕ್​​ನ ಫ್ರೀ ಫ್ಲೋಟ್ ಷೇರುಗಳ ಮೌಲ್ಯ ಹಾಗೂ ಇಂಡೆಕ್ಸ್​ನಲ್ಲಿರುವ ಎಲ್ಲಾ 30 ಸ್ಟಾಕುಗಳ ಮೌಲ್ಯದ ಆಧಾರದ ಮೇಲೆ ತೂಕ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ