AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bloomberg Billionaires Index: ವಿಶ್ವದ ಶ್ರೀಮಂತರ ಪಟ್ಟಿ; ಅಗ್ರ ಹತ್ತರಿಂದ ಗೌತಮ್ ಅದಾನಿ ಔಟ್

ಗೌತಮ್ ಅದಾನಿ ಅವರ ಸಂಪತ್ತು ಈಗ 84.4 ಶತಕೋಟಿ ಡಾಲರ್ ಆಗಿದ್ದರೆ, ಜೆಫ್ ಬೆಜೋಸ್ ಸಂಪತ್ತು 124 ಶತಕೋಟಿ ಡಾಲರ್ ಆಗಿದೆ. 189 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಬರ್ನಾರ್ಡ್ ಅರ್ನಾಲ್ಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

Bloomberg Billionaires Index: ವಿಶ್ವದ ಶ್ರೀಮಂತರ ಪಟ್ಟಿ; ಅಗ್ರ ಹತ್ತರಿಂದ ಗೌತಮ್ ಅದಾನಿ ಔಟ್
ಗೌತಮ್ ಅದಾನಿImage Credit source: Reuters
Ganapathi Sharma
|

Updated on: Jan 31, 2023 | 11:42 AM

Share

ನವದೆಹಲಿ: ಏಷ್ಯಾದ ಅತ್ಯಂತ ಶ್ರೀಮಂತ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿದ್ದ ಉದ್ಯಮಿ ಗೌತಮ್ ಅದಾನಿ (Gautam Adani) ಅವರ ಸಂಪತ್ತಿನಲ್ಲಿ ಕಳೆದ ಕೆಲವು ದಿನಗಳಲ್ಲಿ ಭಾರೀ ಕುಸಿತವಾಗಿದೆ. ಪರಿಣಾಮವಾಗಿ ಅವರು ‘ಬ್ಲೂಮ್​ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕ​ (Bloomberg Billionaires Index)’ದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರ 10ರಿಂದ ಹೊರಬಿದ್ದಿದ್ದಾರೆ. ಪಟ್ಟಿಯಲ್ಲಿ ಅದಾನಿ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜನವರಿ 24ರಂದು ಅದಾನಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು. ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಮೂರನೇ ಸ್ಥಾನಕ್ಕೇರಿದ್ದರು. ಇದರ ಬೆನ್ನಲ್ಲೇ ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ಸಂಸ್ಥೆ ಮಾಡಿರುವ ಆರೋಪ ಅದಾನಿ ಸಂಪತ್ತು ಕರಗಲು ಕಾರಣವಾಗಿದೆ.

ಗೌತಮ್ ಅದಾನಿ ಅವರ ಸಂಪತ್ತು ಈಗ 84.4 ಶತಕೋಟಿ ಡಾಲರ್ ಆಗಿದ್ದರೆ, ಜೆಫ್ ಬೆಜೋಸ್ ಸಂಪತ್ತು 124 ಶತಕೋಟಿ ಡಾಲರ್ ಆಗಿದೆ. 189 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಬರ್ನಾರ್ಡ್ ಅರ್ನಾಲ್ಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 8.21 ಶತಕೋಟಿ ಡಾಲರ್ ಕುಸಿತವಾಗಿದೆ. ಒಟ್ಟಾರೆಯಾಗಿ ವಾರ್ಷಿಕ 36.1 ಶತಕೋಟಿ ಡಾಲರ್ ಕುಸಿತವಾಗಿದೆ ಎಂದು ಬ್ಲೂಮ್​ಬರ್ಗ್ ಸೂಚ್ಯಂಕದಿಂದ ತಿಳಿದುಬಂದಿದೆ.

ಇದನ್ನೂ ಓದಿ: LIC: ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆ ಎಷ್ಟು? ಕೊನೆಗೂ ಸ್ಪಷ್ಟನೆ ನೀಡಿದ ಎಲ್​ಐಸಿ

ಬ್ಲೂಮ್​ಬರ್ಗ್​ ಕೋಟ್ಯಧಿಪತಿಗಳ ಸೂಚ್ಯಂಕ ಪ್ರತಿ ದಿನದ ರ್ಯಾಂಕಿಂಗ್ ಆಗಿದೆ. ಜಗತ್ತಿನ ಅತ್ಯಂತ ಶ್ರೀಮಂತ 500 ಮಂದಿಯ ಹೆಸರು ಒಳಗೊಂಡ ಪಟ್ಟಿ ಇದಾಗಿದೆ. 2012ರಲ್ಲಿ ಮೊದಲು ಈ ಪಟ್ಟಿ ಪ್ರಕಟಗೊಂಡಿತ್ತು. ಆಗ ಅತ್ಯಂತ ಶ್ರೀಮಂತರ 20 ಹೆಸರುಗಳನ್ನು ಪಟ್ಟಿ ಒಳಗೊಂಡಿತ್ತು. ಕ್ರಮೇಣ ಸಂಖ್ಯೆಯನ್ನು 100, 200 ಹೀಗೆ ಹೆಚ್ಚಿಸುತ್ತಾ 2016ರಲ್ಲಿ 500ಕ್ಕೆ ನಿಗದಿಪಡಿಸಲಾಗಿದೆ.

ಹಿಂಡನ್​​ಬರ್ಗ್ ವರದಿಗೆ ತತ್ತರಿಸಿದ ಅದಾನಿ

ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆ ತಿರುಚಿದ ವಿಷಯಕ್ಕೆ ಸಂಬಂಧಿಸಿ ಅದಾನಿ ಸಮೂಹದ ವಿರುದ್ಧ ಹಿಂಡನ್​ಬರ್ಗ್ ರಿಸರ್ಚ್ ಕಳೆದ ವಾರ ಮಾಡಿದ್ದ ಆರೋಪವು ಕಂಪನಿಯ ಷೇರು ವಹಿವಾಟಿನ ಮೇಲೆ ಭಾರೀ ಪ್ರಭಾವ ಬೀರಿದೆ. ಜನವರಿ 27ರ ನಂತರ ಈವರೆಗೆ ಒಟ್ಟಾರೆಯಾಗಿ ಅದಾನಿ ಸಮೂಹದ ಕಂಪನಿಗಳು 5.56 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿವೆ. ಪರಿಣಾಮವಾಗಿ ಅದಾನಿ ಸಂಪತ್ತಿನಲ್ಲಿ ಕುಸಿತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್