AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bloomberg Billionaires Index: ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮತ್ತಷ್ಟು ಕುಸಿತ ಕಂಡ ಗೌತಮ್ ಅದಾನಿ, ಅಂಬಾನಿ ಆಸ್ತಿ ಮೌಲ್ಯದಲ್ಲೂ ಕುಸಿತ

ಏಷ್ಯಾದ ಅತ್ಯಂತ ಶ್ರೀಮಂತ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿದ್ದ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ ಕಳೆದ ಕೆಲವು ದಿನಗಳಲ್ಲಿ ಭಾರೀ ಕುಸಿತ ಕಾಣುತ್ತಿದೆ. ಟಾಪ್ 10 ಸ್ಥಾನದಿಂದ ಹೊರಬಿದ್ದು 11ನೇ ಸ್ಥಾನದಲ್ಲಿದ್ದ ಗೌತಮ್ ಇದೀಗ 15ನೇ ಸ್ಥಾನಕ್ಕೆ ಇಳಿದಿದ್ದಾರೆ.

Bloomberg Billionaires Index: ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮತ್ತಷ್ಟು ಕುಸಿತ ಕಂಡ ಗೌತಮ್ ಅದಾನಿ, ಅಂಬಾನಿ ಆಸ್ತಿ ಮೌಲ್ಯದಲ್ಲೂ ಕುಸಿತ
ಗೌತಮ್ ಅದಾನಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Feb 01, 2023 | 7:19 PM

Share

ಏಷ್ಯಾದ ಅತ್ಯಂತ ಶ್ರೀಮಂತ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿದ್ದ ಉದ್ಯಮಿ ಗೌತಮ್ ಅದಾನಿ (Gautam Adani) ಅವರ ಸಂಪತ್ತಿನಲ್ಲಿ ಕಳೆದ ಕೆಲವು ದಿನಗಳಲ್ಲಿ ಭಾರೀ ಕುಸಿತವಾಗುತ್ತಿದೆ. ಪರಿಣಾಮವಾಗಿ ಅವರು ‘ಬ್ಲೂಮ್​ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕ​ (Bloomberg Billionaires Index)’ದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರ 10ರಿಂದ ಹೊರಬಿದ್ದು 11ನೇ ಸ್ಥಾನಕ್ಕೆ ಕುಸಿದಿದ್ದರು. ಇದೀಗ ಅವರ ಸಂಪತ್ತಿನ ಮೌಲ್ಯ ಮತ್ತೆ ಕುಸಿದ ಪರಿಣಾಮ ಅವರ ಸ್ಥಾನ 15ಕ್ಕೆ ಕುಸಿತಗೊಂಡಿದೆ. ಇನ್ನು ಮುಖೇಶ್ ಅಂಬಾನಿ 9ನೇ ಸ್ಥಾನದಲ್ಲಿದ್ದಾರೆ.

ಶ್ರೀಮಂತರ ಪಟ್ಟಿಯಲ್ಲಿ ಟಾಪ್ 1ರಲ್ಲಿ ಇರುವ ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬದ ಸಂಪತ್ತಿನ ಮೌಲ್ಯ ಇಂದು 73 ಮಿಲಿಯನ್ ಡಾಲರ್ ಕುಸಿತಗೊಂಡಿದೆ. ಅದಾಗ್ಯೂ ಒಟ್ಟು ಸಂಪತ್ತಿನ ಮೌಲ್ಯ 213.3 ಶತಕೋಟಿ ಡಾಲರ್​ ಆಗಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಎಲಾನ್ ಮಸ್ಕ್, ಸಂಪತ್ತಿನ ಮೌಲ್ಯ 178.3 ಶತಕೋಟಿ ಡಾಲರ್, 3ನೇ ಸ್ಥಾನದಲ್ಲಿರುವ ಜೆಫ್ ಬೆಜೋಸ್ ಸಂಪತ್ತಿನ ಮೌಲ್ಯ 126.3 ಶತಕೋಟಿ ಡಾಲರ್ ಇದೆ. ಇನ್ನು, ಮುಖೇಶ್ ಅಂಬಾನಿ ಸಂಪತ್ತಿನ ಮೌಲ್ಯ ಇಂದು 463 ಮಿಲಿಯನ್ ಡಾಲರ್ ಕುಸಿತಗೊಂಡು ಒಟ್ಟು 83.7 ಶತಕೋಟಿ ಡಾಲರ್​ನೊಂದಿಗೆ 9ನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಸಂಪತ್ತಿನ ಮೌಲ್ಯ ಇಂದು 13.1 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಅದರಂತೆ 75.1 ಶತಕೋಟಿ ಡಾಲರ್​​ನೊಂದಿಗೆ ಅವರು 15ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Income Tax Slabs: ಆದಾಯ ತೆರಿಗೆ ಸ್ಲ್ಯಾಬ್​ ಬದಲಾವಣೆ; ಗೊಂದಲವಿದೆಯಾ? ಇಲ್ಲಿದೆ ಹಳೆದು, ಹೊಸದರ ನಡುವಣ ಪೂರ್ಣ ವ್ಯತ್ಯಾಸ

ಬ್ಲೂಮ್​ಬರ್ಗ್​ ಕೋಟ್ಯಧಿಪತಿಗಳ ಸೂಚ್ಯಂಕ ಪ್ರತಿ ದಿನದ ರ್ಯಾಂಕಿಂಗ್ ಆಗಿದೆ. ಜಗತ್ತಿನ ಅತ್ಯಂತ ಶ್ರೀಮಂತ 500 ಮಂದಿಯ ಹೆಸರು ಒಳಗೊಂಡ ಪಟ್ಟಿ ಇದಾಗಿದೆ. 2012ರಲ್ಲಿ ಮೊದಲು ಈ ಪಟ್ಟಿ ಪ್ರಕಟಗೊಂಡಿತ್ತು. ಆಗ ಅತ್ಯಂತ ಶ್ರೀಮಂತರ 20 ಹೆಸರುಗಳನ್ನು ಪಟ್ಟಿ ಒಳಗೊಂಡಿತ್ತು. ಕ್ರಮೇಣ ಸಂಖ್ಯೆಯನ್ನು 100, 200 ಹೀಗೆ ಹೆಚ್ಚಿಸುತ್ತಾ 2016ರಲ್ಲಿ 500ಕ್ಕೆ ನಿಗದಿಪಡಿಸಲಾಗಿದೆ.

ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆ ತಿರುಚಿದ ವಿಷಯಕ್ಕೆ ಸಂಬಂಧಿಸಿ ಅದಾನಿ ಸಮೂಹದ ವಿರುದ್ಧ ಹಿಂಡನ್​ಬರ್ಗ್ ರಿಸರ್ಚ್ ಕಳೆದ ವಾರ ಮಾಡಿದ್ದ ಆರೋಪವು ಕಂಪನಿಯ ಷೇರು ವಹಿವಾಟಿನ ಮೇಲೆ ಭಾರೀ ಪ್ರಭಾವ ಬೀರಿದೆ. ಜನವರಿ 27ರ ನಂತರ ಈವರೆಗೆ ಒಟ್ಟಾರೆಯಾಗಿ ಅದಾನಿ ಸಮೂಹದ ಕಂಪನಿಗಳು 5.56 ಲಕ್ಷ ಕೋಟಿಗೂ ಅಧಿಕ ನಷ್ಟ ಅನುಭವಿಸಿವೆ. ಪರಿಣಾಮವಾಗಿ ಅದಾನಿ ಸಂಪತ್ತಿನಲ್ಲಿ ಕುಸಿತವಾಗಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Wed, 1 February 23

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ