Blue Aadhaar Card: ನೀಲಿ ಆಧಾರ್ ಕಾರ್ಡ್ ಯಾಕೆ? ಇದನ್ನು ಯಾರು ಮತ್ತು ಹೇಗೆ ಮಾಡಿಸಬಹುದು? ಇಲ್ಲಿದೆ ಡೀಟೇಲ್ಸ್

| Updated By: Digi Tech Desk

Updated on: Oct 17, 2023 | 11:31 AM

Blue Aadhaar Card: 2018ರಲ್ಲಿ ಬ್ಲೂ ಆಧಾರ್ ನೀಡುವುದನ್ನು ಆರಂಭಿಸಲಾಯಿತು. ಎಳೆಯ ಮಕ್ಕಳ ಹೆಸರಿನಲ್ಲಿ ಸರ್ಕಾರದ ಯೋಜನೆಗಳು ಇರುವುದರಿಂದ ಫಲಾನುಭವಿಗಳನ್ನು ಗುರುತಿಸಲು ಸಹಾಯವಾಗಲೆಂದು ಬ್ಲೂ ಆಧಾರ್ ತರಲಾಯಿತು. ಆಗಷ್ಟೇ ಹುಟ್ಟಿದ ಮಗುವಿನಿಂದ ಹಿಡಿದು 5 ವರ್ಷದವರೆಗಿನ ವಯಸ್ಸಿನ ಮಕ್ಕಳಿಗೆ ಬ್ಲೂ ಆಧಾರ್ ನೀಡಲಾಗುತ್ತದೆ. ಈ ಆಧಾರ್ ಕಾರ್ಡ್ ನೀಲಿ ಬಣ್ಣದಾದ್ದರಿಂದ ಇದಕ್ಕೆ ಬ್ಲೂ ಆಧಾರ್ ಕಾರ್ಡ್ ಎನ್ನಲಾಗುತ್ತದೆ. ಇದನ್ನು ಮಾಡಿಸುವುದು ಹೇಗೆ ಎಂಬ ವಿವರ ಇಲ್ಲಿದೆ...

Blue Aadhaar Card: ನೀಲಿ ಆಧಾರ್ ಕಾರ್ಡ್ ಯಾಕೆ? ಇದನ್ನು ಯಾರು ಮತ್ತು ಹೇಗೆ ಮಾಡಿಸಬಹುದು? ಇಲ್ಲಿದೆ ಡೀಟೇಲ್ಸ್
ಆಧಾರ್ ಕಾರ್ಡ್
Follow us on

ಆಧಾರ್ ಕಾರ್ಡ್ ಈಗ ಬಹಳಷ್ಟು ಕಾರ್ಯಗಳಿಗೆ ಪ್ರಮುಖ ದಾಖಲೆಯಾಗಿದೆ. ವಿಳಾಸ ಪುರಾವೆ (address proof), ಗುರುತು ಪುರಾವೆ (ID proof) ಇತ್ಯಾದಿಗಳಿಗೆ ಇದು ದಾಖಲೆಯಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ಬ್ಯಾಂಕ್ ಖಾತೆ ಇತ್ಯಾದಿ ಅನೇಕ ಕಾರ್ಯಗಳಿಗೆ ಆಧಾರ್ ಅವಶ್ಯಕ ಎನಿಸಿದೆ. ಇದೇ ವೇಳೆ, ಬ್ಲೂ ಆಧಾರ್ ಹೆಸರು ನೀವು ಕೇಳಿರಬಹುದು. ಈ ನೀಲಿ ಆಧಾರ್ ಅದನ್ನು ಬಾಲ್ ಆಧಾರ್ ಎಂದೂ ಕರೆಯಲಾಗುತ್ತದೆ. ಈ ನಮೂನೆಯ ಆಧಾರ್ ಕಾರ್ಡ್ ನೀಲಿ ಬಣ್ಣದಿರುವುದರಿಂದ ಬ್ಲೂ ಆಧಾರ್ (blue aadhaar) ಎನ್ನುತ್ತಾರೆ. 5 ವರ್ಷದ ವಯಸ್ಸಿನೊಳಗಿನ ಮಕ್ಕಳಿಗೆ ಇದನ್ನು ನೀಡುವುದರಿಂದ ಬಾಲ್ ಆಧಾರ್ ಎಂದೂ ಕರೆಯಲಾಗುತ್ತದೆ.

2018ರಲ್ಲಿ ಬ್ಲೂ ಆಧಾರ್ ನೀಡುವುದನ್ನು ಆರಂಭಿಸಲಾಯಿತು. ಎಳೆಯ ಮಕ್ಕಳ ಹೆಸರಿನಲ್ಲಿ ಸರ್ಕಾರದ ಯೋಜನೆಗಳು ಇರುವುದರಿಂದ ಫಲಾನುಭವಿಗಳನ್ನು ಗುರುತಿಸಲು ಸಹಾಯವಾಗಲೆಂದು ಬ್ಲೂ ಆಧಾರ್ ತರಲಾಯಿತು. ಆಗಷ್ಟೇ ಹುಟ್ಟಿದ ಮಗುವಿನಿಂದ ಹಿಡಿದು 5 ವರ್ಷದವರೆಗಿನ ವಯಸ್ಸಿನ ಮಕ್ಕಳಿಗೆ ಬ್ಲೂ ಆಧಾರ್ ನೀಡಲಾಗುತ್ತದೆ.

ವಿಶೇಷ ಎಂದರೆ ಬೇರೆ ಆಧಾರ್​ನಲ್ಲಿ ವ್ಯಕ್ತಿಯ ಬೆರಳ ಗುರುತು ಪಡೆಯಲಾಗುತ್ತದೆ. ಮತ್ತು ಕಣ್ಣಿನ ಐರಿಸ್ ಸ್ಕ್ಯಾನ್ ಮಾಡಲಾಗುತ್ತದೆ. ಬ್ಲೂ ಆಧಾರ್​ನಲ್ಲಿ ಮಕ್ಕಳ ಬೆರಳಚ್ಚು ಪಡೆಯಲಾಗುವುದಿಲ್ಲ. ಮುಖದ ಫೋಟೋ, ವಿಳಾಸ ಇತ್ಯಾದಿ ಮಾಹಿತಿ ಪಡೆಯಲಾಗುತ್ತದೆ.

ಇದನ್ನೂ ಓದಿ: ಬ್ಯಾಂಕುಗಳಿಗಿಂತ ಎನ್​ಬಿಎಫ್​ಸಿಗಳಲ್ಲಿ ಠೇವಣಿ ದರ ಯಾಕೆ ಹೆಚ್ಚು? ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎಸ್​ಬಿ ಖಾತೆ ತೆರೆಯಲು ಯಾಕೆ ಸಾಧ್ಯವಿಲ್ಲ?

5 ವರ್ಷ ವಯಸ್ಸಿನ ಬಳಿಕ ಆಧಾರ್ ಬಯೋಮೆಟ್ರಿಕ್ ಅಪ್​ಡೇಟ್…

ಮಗುವಿಗೆ ಬ್ಲೂ ಆಧಾರ್ ಕಾರ್ಡ್ ಮಾಡಿಸಿದ ಬಳಿಕ ಅದರ ವಯಸ್ಸು 5 ವರ್ಷ ದಾಟುತ್ತಲೇ
ಅಧಾರ್​ನ ಬಯೋಮೆಟ್ರಿಕ್ ಅಪ್​ಡೇಟ್ ಮಾಡಿಸಬೇಕು. 5 ವರ್ಷ ಮತ್ತು 15 ವರ್ಷ ವಯಸ್ಸಿನಲ್ಲಿ ಎರಡು ಬಾರಿ ಅದು ಅಪ್​ಡೇಟ್ ಆಗಬೇಕು. ಇಲ್ಲದಿದ್ದರೆ ಮಗುವಿನ ಆಧಾರ್ ಕಾರ್ಡ್ ಅಸಿಂಧು ಎನಿಸುತ್ತದೆ.

ಆನ್​ಲೈನ್​ನಲ್ಲಿ ಬ್ಲೂ ಆಧಾರ್ ಕಾರ್ಡ್ ಮಾಡಿಸುವ ಕ್ರಮಗಳು

  • ಯುಐಡಿಎಐ ವೆಬ್​ಸೈಟ್​ಗೆ ಹೋಗಿ:
  • ವೆಬ್​ಸೈಟ್​ನಲ್ಲಿ ಆಧಾರ್ ಕಾರ್ಡ್ ರಿಜಿಸ್ಟ್ರೇಶನ್ ಆಯ್ಕೆ ಆರಿಸಿಕೊಳ್ಳಿ
  • ಮಗುವಿನ ಹೆಸರು, ಪೋಷಕರ ಫೋನ್ ನಂಬರ್ ಮತ್ತಿತರ ಮಾಹಿತಿ ನೀಡಿ
  • ಆಧಾರ್ ಕಾರ್ಡ್ ರಿಜಿಸ್ಟ್ರೇಶನ್​ಗೆ ಅಪಾಯಿಂಟ್ಮೆಂಟ್ ಆಯ್ಕೆ ಆರಿಸಿಕೊಳ್ಳಿ.
  • ಸಮೀಪದ ಎನ್​ರೋಲ್ಮೆಂಟ್ ಸೆಂಟರ್ ಆಯ್ಕೆ ಮಾಡಿಕೊಂಡು ಅಪಾಯಿಂಟ್ಮೆಂಟ್ ಪಡೆಯಿರಿ.
  • ಪೋಷಕರು ತಮ್ಮ ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣಪತ್ರ, ರೆಫರೆನ್ಸ್ ನಂಬರ್ ಇತ್ಯಾದಿ ದಾಖಲೆ ಮತ್ತು ಮಾಹಿತಿಯೊಂದಿಗೆ ಆಧಾರ್ ಎನ್ರೋಲ್​ಮೆಂಟ್ ಸೆಂಟರ್​ಗೆ ಹೋಗಬೇಕು.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್​ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?

ಬ್ಲೂ ಆಧಾರ್ ಕಾರ್ಡ್ ಆದ ಬಳಿಕ ಎಲ್ರೋಲ್ಮೆಂಟ್ ಸೆಂಟರ್​ನಲ್ಲಿರುವ ಸಿಬ್ಬಂದಿ ನಿಮಗೆ ಅಕ್ನಾಲೆಜ್ಮೆಂಟ್ ನಂಬರ್ ಕೊಡುತ್ತಾರೆ. ನಿಮ್ಮ ಮೊಬೈಲ್​ಗೂ ಈ ನಂಬರ್ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:22 am, Tue, 17 October 23