Recession: 2023ರ ಅಂತ್ಯದಲ್ಲಿ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ ಬ್ರಿಟನ್; ರಿಸಿಶನ್ ಎಂದು ಪರಿಗಣಿಸಲು ಲೆಕ್ಕಾಚಾರ ಏನು? ಇಲ್ಲಿದೆ ಡೀಟೇಲ್ಸ್

UK in Recession: ಬ್ರಿಟನ್ ಆರ್ಥಿಕ ಬೆಳವಣಿಗೆ 2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಮೈನಸ್ 0.3 ಪ್ರತಿಶತದಷ್ಟು ದಾಖಲಾಗಿದೆ. ಸತತ ಎರಡು ಕ್ವಾರ್ಟರ್ ಅವಧಿಗಳಲ್ಲಿ ಜಿಡಿಪಿ ನೆಗಟಿವ್ ಗ್ರೋತ್ ತೋರಿಸಿದೆ. ಮಾಧ್ಯಮಗಳ ಪ್ರಕಾರ ಬ್ರಿಟನ್ ತಾಂತ್ರಿಕವಾಗಿ ಆರ್ಥಿಕ ಹಿಂಜರಿತದ ಸ್ಥಿತಿಗೆ ಬಂದಿದೆ. 2024ರಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ.

Recession: 2023ರ ಅಂತ್ಯದಲ್ಲಿ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ ಬ್ರಿಟನ್; ರಿಸಿಶನ್ ಎಂದು ಪರಿಗಣಿಸಲು ಲೆಕ್ಕಾಚಾರ ಏನು? ಇಲ್ಲಿದೆ ಡೀಟೇಲ್ಸ್
ಬ್ರಿಟನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 15, 2024 | 2:32 PM

ಲಂಡನ್, ಫೆಬ್ರುವರಿ 15: ಬ್ರಿಟನ್ ದೇಶ ಆರ್ಥಿಕ ಹಿಂಜರಿತಕ್ಕೆ (recession) ಸಿಲುಕಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸರ್ಕಾರದಿಂದಲೇ ಅಧಿಕೃತವಾಗಿ ಬಿಡುಗಡೆ ಮಾಡಲಾಗಿರುವ ಅಂಕಿ ಅಂಶದ ಪ್ರಕಾರ ಬ್ರಿಟನ್ ಆರ್ಥಿಕ ಬೆಳವಣಿಗೆ (Britail economic growth) ಸತತ ಎರಡು ಅವಧಿ ನಕಾರಾತ್ಮಕವಾಗಿದೆ. 2023ರ ಕೊನೆಯ ಆರು ತಿಂಗಳು ಬ್ರಿಟನ್ ಆರ್ಥಿಕತೆ ನೆಗಟಿವ್ ರೇಖೆಯಲ್ಲಿದೆ. 2023ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇ. 0.1ರಷ್ಟು ಕುಸಿತ ಕಂಡಿದ್ದ ಬ್ರಿಟನ್ ಆರ್ಥಿಕತೆ, ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಶೇ. 0.3ರಷ್ಟು ಕುಸಿತ ಕಂಡಿದೆ. ಯುಕೆ ಸರ್ಕಾರ ನಿನ್ನೆ ಬುಧವಾರ ಪ್ರಕಟಿಸಿದ ಅಧಿಕೃತ ದತ್ತಾಂಶದಿಂದ ಇದು ತಿಳಿದುಬಂದಿದೆ.

ಕಳೆದ ವಾರ ರಾಯ್ಟರ್ಸ್ ನಡೆಸಿದ ಆರ್ಥಿಕ ತಜ್ಞರ ಸಮೀಕ್ಷೆಯಲ್ಲಿ ಬ್ರಿಟನ್ ಜಿಡಿಪಿಯ ಸರಾಸರಿ ಬೆಳವಣಿಗೆ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಶೇ. 0.1ರಷ್ಟು ಕುಸಿತ ಕಾಣಬಹುದು ಎಂದು ನಿರೀಕ್ಷಿಸಲಾಗಿತ್ತು. ಅದನ್ನೂ ಮೀರಿಸಿ ಆರ್ಥಿಕತೆ ಹೆಚ್ಚು ಕುಸಿತ ಕಂಡಿದೆ. ಅಮೆರಿಕ ಮೊದಲಾದ ಕೆಲ ಮುಂದುವರಿದ ದೇಶಗಳು ಉತ್ತಮವಾಗಿ ಚೇತರಿಸಿಕೊಂಡಿದ್ದರೂ ಬ್ರಿಟನ್ ಇನ್ನೂ ನೆಗಟಿವ್ ಗ್ರೋತ್ ಸುಳಿಗೆ ಸಿಲುಕಿರುವುದು ಅಚ್ಚರಿ ಮೂಡಿಸಿದೆ.

ಭಾರತದ ಮೂಲದ ರಿಷಿ ಸುನಕ್ ಪ್ರಧಾನಿಯಾಗಿದ್ದು, ಬಹಳ ಒತ್ತಡಕ್ಕೆ ಸಿಲುಕುವಂತಾಗಿದೆ. ಈ ವರ್ಷವೇ ಬ್ರಿಟನ್​ನಲ್ಲಿ ಚುನಾವಣೆ ಇದ್ದು, ಮತದಾರರು ರಿಪಬ್ಲಿಕನ್ ಪಾರ್ಟಿ ಬಿಟ್ಟು ಲಿಬರಲ್ ಪಾರ್ಟಿಗೆ ಬೆಂಬಲ ನೀಡಿದರೆ ಅಚ್ಚರಿ ಪಡಬೇಕಿಲ್ಲ. 2022ರ ಅಕ್ಟೋಬರ್ ತಿಂಗಳಲ್ಲಿ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿದ್ದು. ಆ ಸಂದರ್ಭದಲ್ಲಿ ಬ್ರಿಟನ್ ಆರ್ಥಿಕತೆ ಚಿಂತಾಜನಕ ಸ್ಥಿತಿಯಲ್ಲಿತ್ತು. ಸುನಕ್ ಒಂದಷ್ಟು ಚೇತರಿಕೆ ನೀಡಿದ್ದರು.

ಇದನ್ನೂ ಓದಿ: ಚುನಾವಣಾ ಬಾಂಡ್, ಇಲ್ಲಿಯವರೆಗೆ ಸಂಗ್ರಹವಾದ ಹಣ ಎಷ್ಟು? ರಾಜಕೀಯ ಪಕ್ಷಗಳಿಗೆ ಚಿನ್ನದ ಮೊಟ್ಟೆಯಾಗಿದ್ದ ಈ ಬಾಂಡ್​ಗೆ ಸುಪ್ರೀಂ ಕೊಕ್ಕೆ

ಇದೇ ವೇಳೆ, ಬ್ರಿಟನ್​ನ ಸೆಂಟ್ರಲ್ ಬ್ಯಾಂಕ್ ಎನಿಸಿದ ಬ್ಯಾಂಕ್ ಆಫ್ ಇಂಗ್ಲೆಂಡ್ ಪ್ರಕಾರ ದೇಶದ ಆರ್ಥಿಕತೆ ಈ ವರ್ಷ (2024) ಪುಟಿದೇಳುವ ನಿರೀಕ್ಷೆ ಇದೆ. ಬ್ರಿಟನ್ ಚುನಾವಣೆ ಈ ವರ್ಷಾಂತ್ಯದಲ್ಲಿ ಆಗುವ ಸಾಧ್ಯತೆ ಇದೆ. ಅಷ್ಟರೊಳಗೆ ಮೊದಲೆರಡು ಕ್ವಾರ್ಟರ್​ನ ಆರ್ಥಿಕ ಪ್ರಗತಿಯ ವರದಿ ಬರಬಹುದಾಗಿದ್ದು, ರಿಷಿ ಸುನಕ್ ಅವರ ರಿಯಲ್ ಸ್ಕೋರ್ ಕಾರ್ಡ್ ಅದಾಗಿರಲಿದೆ.

ರಿಸಿಶನ್ ಎಂದರೇನು?

ಆರ್ಥಿಕತೆಯ ಎಲ್ಲಾ ವಿಭಾಗಗಳು ಸತತವಾಗಿ ದುರ್ಬಲ ಸ್ಥಿತಿಯಲ್ಲಿದ್ದಾಗ ಅದನ್ನು ಹಿಂಜರಿತ ಅಥವಾ ರಿಸಿಶನ್ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಥಂಬ್ ರೂಲ್ ಪ್ರಕಾರ ಸತತ ಎರಡು ಕ್ವಾರ್ಟರ್​ನಲ್ಲಿ ಜಿಡಿಪಿ ಬೆಳವಣಿಗೆ ಮೈನಸ್​ನಲ್ಲಿ ಇದ್ದರೆ ಆಗ ರಿಸಿಶನ್ ಇದೆ ಎಂದು ಭಾವಿಸಬಹುದು.

ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಓಡೋ ಕುದುರೆ ಗುರುತಿಸೋದು ಹೇಗೆ? ಇಪಿಎಸ್, ಪಿಇ ರೇಶಿಯೋ ಇತ್ಯಾದಿ ತಂತ್ರಗಳನ್ನು ತಿಳಿದಿರಿ

ಕೆಲವರು ನಿರುದ್ಯೋಗ ದರ ಏರಿಕೆಯನ್ನು ರಿಸಿಶನ್ ಮಾನದಂಡವಾಗಿ ಇಡುತ್ತಾರೆ. ನಿರ್ದಿಷ್ಟ ಅವಧಿಯವರೆಗೆ ನಿರುದ್ಯೋಗ ದರ ತೀರಾ ಏರುಮುಖವಾಗಿದ್ದರೆ ಆರ್ಥಿಕ ಹಿಂಜರಿತದ ಲಕ್ಷಣ ಎಂದು ಪರಿಗಣಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Thu, 15 February 24