BSNL Offer: ಬಿಎಸ್ಎನ್ಎಲ್ನಿಂದ ಹೊಸ ಭರ್ಜರಿ ಪ್ಲಾನ್ ಬಿಡುಗಡೆ; ಜಿಯೋ, ಏರ್ಟೆಲ್ನಿಂದ ಗ್ರಾಹಕರ ವಲಸೆ?
BSNL cheaper recharge plans: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ ಅಥವಾ ಬಿಎಸ್ಎನ್ಎಲ್ ಸದ್ದಲ್ಲೇ 4ಜಿ ನೆಟ್ವರ್ಕ್ಗೆ ಅಪ್ಗ್ರೇಡ್ ಆಗುತ್ತಿದೆ. ಈ ಮಧ್ಯೆ ಆಕರ್ಷಕ ಬೆಲೆಗಳಿರುವ ಭರ್ಜರಿ ರೀಚಾರ್ಜ್ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ. 200 ರೂಗೂ ಕಡಿಮೆ ಬೆಲೆಗೆ ದಿನಕ್ಕೆ 2ಜಿಬಿ ಡಾಟಾ ಕೊಡುವಂತಹ ಪ್ಲಾನ್ ಕೂಡ ಇದೆ.
ನವದೆಹಲಿ, ಜುಲೈ 11: ಕಳೆದ ಎರಡು ವರ್ಷದಿಂದ ಬಹುತೇಕ ನಿಷ್ಕ್ರಿಯಗೊಂಡಂತಿದ್ದ ಬಿಎಸ್ಎನ್ಎಲ್ ಮರಳಿ ಫಾರ್ಮ್ಗೆ ಬರುತ್ತಿದೆ. ಸದ್ಯ 3ಜಿ ನೆಟ್ವರ್ಕ್ ಹೊಂದಿರುವ ಬಿಎಸ್ಎನ್ಎಲ್ ಸದ್ಯದಲ್ಲೇ ದೇಶಾದ್ಯಂತ 4ಜಿ ನೆಟ್ವರ್ಕ್ಗೆ ಅಪ್ಡೇಟ್ ಆಗಲಿದೆ. ಇದರ ಜೊತೆಗೆ ಆಕರ್ಷಕ ಡಾಟಾ ಪ್ಲಾನ್ಗಳನ್ನು ಬಿಎಸ್ಎನ್ಎಲ್ ಬಿಡುಗಡೆ ಮಾಡಿದೆ. ರಿಲಾಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಬೆಲೆಗಳನ್ನು ತೀವ್ರವಾಗಿ ಹೆಚ್ಚಳ ಮಾಡಿದ ಬಳಿಕ ಟೆಲಿಕಾಂ ಗ್ರಾಹಕರಿಂದ ಘರ್ ವಾಪ್ಸಿ, ಬಾಯ್ಕಾಟ್ ಟ್ರೆಂಡ್ ಶುರುವಾಗಿದೆ. ಜಿಯೋ ಮತ್ತು ಏರ್ಟೆಲ್ನಿಂದ ಬಹಳಷ್ಟು ಗ್ರಾಹಕರು ಬಿಎಸ್ಎನ್ಎಲ್ ಕಡೆ ಮುಖ ಮಾಡತೊಡಗಿದ್ದಾರೆ.
395 ದಿನಗಳ ರೀಚಾರ್ಜ್ ಪ್ಲಾನ್
ಬಿಎಸ್ಎನ್ಎಲ್ ತನ್ನ ಎಲ್ಲಾ ಪ್ರೀಪೇಡ್ ಪ್ಲಾನ್ಗಳನ್ನು ಪರಿಷ್ಕರಿಸಿದೆ. ಅದರಲ್ಲಿ ಗಮನ ಸೆಳೆದದ್ದು 395 ದಿನಗಳ ಒಂದು ಪ್ಲಾನ್. 13 ತಿಂಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ ಬೆಲೆ ಕೇವಲ 2,399 ರೂ ಮಾತ್ರ. ಅಂದರೆ ತಿಂಗಳಿಗೆ ಸುಮಾರು 184 ರೂ ಮಾತ್ರವೇ.
ಈ ಪ್ಲಾನ್ನಲ್ಲಿ ಗ್ರಾಹಕರು ದಿನಕ್ಕೆ 2ಜಿಬಿಯಷ್ಟು ಹೈಸ್ಪೀಡ್ ಡೇಟಾ ಪಡೆಯುತ್ತಾರೆ. ದಿನಕ್ಕೆ 100 ಎಸ್ಸೆಮ್ಮೆಸ್ ಕಳುಹಿಸುವ ಅವಕಾಶ ಇರುತ್ತದೆ. ಜಿಂಗ್ ಮ್ಯೂಸಿಕ್, ಹಾರ್ಡಿ ಗೇಮ್ಸ್ ಇತ್ಯಾದಿ ವಿವಿಧ ಹೆಚ್ಚುವರಿ ಉಚಿತ ಸರ್ವಿಸ್ ಸಿಗುತ್ತದೆ.
ಇದನ್ನೂ ಓದಿ: ದೇಶದ ಹಣದ ಕೊರತೆ ಐದೇ ನಿಮಿಷದಲ್ಲಿ ಬಗೆಹರಿಸ್ತೀನಿ: 13 ವರ್ಷದ ಹಿಂದೆ ವಾರನ್ ಬಫೆಟ್ ಹೇಳಿದ ಮಾತು ಈಗ ವೈರಲ್
ಬಿಎಸ್ಎನ್ಎಲ್ 365 ದಿನದ ಪ್ಲಾನ್
ಬಿಎಸ್ಎನ್ಎಲ್ನ ಪ್ಲಾನ್ಗಳಲ್ಲಿ ಗಮನ ಸೆಳೆದ ಇನ್ನೊಂದೆಂದರೆ 365 ದಿನದ ಪ್ಲಾನ್. ಇದರಲ್ಲಿ ದೈನಂದಿನ ಡಾಟಾ ಮಿತಿ ಬದಲು ಒಟ್ಟಾರೆ 600 ಜಿಬಿಯಷ್ಟು ಡಾಟಾವನ್ನು ಕೊಡಲಾಗುತ್ತದೆ. ಇದರ ಬೆಲೆ 1,999 ರೂ ಮಾತ್ರವೇ.
ಇತರ ಪ್ರಮುಖ ಪ್ಲಾನ್ಗಳಲ್ಲಿ 997 ರೂನದ್ದಿದೆ. 160 ದಿನಗಳ ವ್ಯಾಲಿಡಿಟಿಯ ಈ ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡಾಟಾ ಸಿಗುತ್ತದೆ. 599 ರೂ ಪ್ಲಾನ್ನಲ್ಲಿ ದಿನಕ್ಕೆ 3ಜಿಬಿ ಡಾಟಾ ಸಿಗಲಿದ್ದು, 84 ದಿನ ವ್ಯಾಲಿಡಿಟಿ ಇದೆ.
30 ದಿನಗಳ ವ್ಯಾಲಿಡಿಟಿ ಇರುವ ಡಾಟಾ ಪ್ಲಾನ್ 199 ರೂಗೆ ಸಿಗುತ್ತದೆ. ಬಿಎಸ್ಎನ್ಎಲ್ನಿಂದ ಇನ್ನೂ ಕೆಲ ಆಕರ್ಷಕ ಡಾಟಾ ಪ್ಲಾನ್ಗಳು ಬಿಡುಗಡೆ ಆಗಿವೆ. ಏರ್ಟೆಲ್, ಜಿಯೋ, ವಿಐಗೆ ಹೋಲಿಸಿದರೆ ಬಿಎಸ್ಎನ್ಎಲ್ ಪ್ಲಾನ್ಗಳು ಬಹಳ ಅಗ್ಗದ ದರ ಹೊಂದಿವೆ.
ಇದನ್ನೂ ಓದಿ: Airtel Recharge Plan: ರಿಲಯನ್ಸ್ ಜಿಯೋ ಬಳಿಕ ಏರ್ಟೆಲ್ ರೀಚಾರ್ಜ್ ಪ್ಲ್ಯಾನ್ ಬೆಲೆಯಲ್ಲಿ ಹೆಚ್ಚಳ
ಬಿಎಸ್ಎನ್ಎಲ್ಗೆ ಪೋರ್ಟ್ ಆಗುವುದು ಹೇಗೆ?
ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜಿಯೋ, ಏರ್ಟೆಲ್ ಮತ್ತು ವಿಐ ಗ್ರಾಹಕರು ಬಿಎಸ್ಎನ್ಎಲ್ನತ್ತ ಮುಖ ಮಾಡುತ್ತಿದ್ದಾರೆ. ಅಂದಹಾಗೆ, ಈಗ ಒಂದು ಟೆಲಿಕಾಂ ಆಪರೇಟರ್ನಿಂದ ಮತ್ತೊಂದಕ್ಕೆ ವರ್ಗಾವಣೆ ಅಥವಾ ಪೋರ್ಟ್ ಆಗುವುದು ಸುಲಭ. ಬಿಎಸ್ಎನ್ಎಲ್ಗೆ ಹೇಗೆ ಪೋರ್ಟ್ ಆಗುವುದು, ಕ್ರಮ ಇಲ್ಲಿದೆ:
ಮೊದಲಿಗೆ ನಿಮ್ಮ ಮೊಬೈಲ್ನಿಂದ ‘Port <10 ಅಂಕಿ ಮೊಬೈಲ್ ನಂಬರ್>’ ಟೈಪಿಸಿ 1900 ನಂಬರ್ಗೆ ಎಸ್ಸೆಮ್ಮೆಸ್ ಕಳುಹಿಸಬೇಕು. (ಉದಾ: Port 9895600426). ಆಗ ಯುಪಿಸಿ ನಂಬರ್ ಅಥವಾ ಯೂನಿಕ್ ಪೋರ್ಟಿಂಗ್ ಕೋಡ್ ಸಿಗುತ್ತದೆ. ಈ ಕೋಡ್ 15 ದಿನ ವ್ಯಾಲಿಡಿಟಿ ಹೊಂದಿರುತ್ತದೆ. ಅಷ್ಟರೊಳಗೆ ನೀವು ಯಾವುದೇ ಬಿಎಸ್ಎನ್ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಅಥವಾ ಅಧಿಕೃತ ಬಿಎಸ್ಎನ್ಎಲ್ ಫ್ರಾಂಚೈಸಿಗೆ ಹೋಗಿ ಅಲ್ಲಿ ಅರ್ಜಿ ತುಂಬಿಸಿಬೇಕು. ಆಗ ಅಲ್ಲಿರುವ ಆಪರೇಟರ್ಗಳು ನಿಮ್ಮ ನಂಬರ್ ಅನ್ನು ಹೊಸ ಸಿಮ್ಗೆ ಪೋರ್ಟ್ ಮಾಡಿಕೊಡುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Thu, 11 July 24