ದೇಶದ ಹಣದ ಕೊರತೆ ಐದೇ ನಿಮಿಷದಲ್ಲಿ ಬಗೆಹರಿಸ್ತೀನಿ: 13 ವರ್ಷದ ಹಿಂದೆ ವಾರನ್ ಬಫೆಟ್ ಹೇಳಿದ ಮಾತು ಈಗ ವೈರಲ್

Warren Buffet solution to fiscal deficit problem: ಅಮೆರಿಕದಲ್ಲಿ ಇರುವ ಪ್ರಮುಖ ಆರ್ಥಿಕ ಸಮಸ್ಯೆಗಳಲ್ಲಿ ಅದರ ವಿತ್ತೀಯ ಕೊರತೆಯೂ ಒಂದು. ಕಳೆದ ವರ್ಷದಂದು ಅಮೆರಿಕದಲ್ಲಿ ಫಿಸ್ಕಲ್ ಡೆಫಿಸಿಟ್ 1.91 ಟ್ರಿಲಿಯನ್ ಡಾಲರ್, ಅಥವಾ 160 ಲಕ್ಷ ಕೋಟಿ ರೂನಷ್ಟಿತ್ತು. ವಿತ್ತೀಯ ಕೊರತೆಯ ಸಮಸ್ಯೆ ನೀಗಿಸಲು ತನಗೆ ಐದೇ ನಿಮಿಷ ಸಾಕು ಎಂದು ಖ್ಯಾತ ಹೂಡಿಕೆದಾರ ವಾರನ್ ಬಫೆಟ್ 13 ವರ್ಷದ ಹಿಂದೊಮ್ಮೆ ಹೇಳಿದ್ದರು.

ದೇಶದ ಹಣದ ಕೊರತೆ ಐದೇ ನಿಮಿಷದಲ್ಲಿ ಬಗೆಹರಿಸ್ತೀನಿ: 13 ವರ್ಷದ ಹಿಂದೆ ವಾರನ್ ಬಫೆಟ್ ಹೇಳಿದ ಮಾತು ಈಗ ವೈರಲ್
ವಾರನ್ ಬಫೆಟ್
Follow us
|

Updated on: Jul 10, 2024 | 2:01 PM

ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಅಮೆರಿಕದಲ್ಲಿ ವಿತ್ತೀಯ ಕೊರತೆಯೂ ಅಗಾಧವಾಗಿದೆ. ಅಮೆರಿಕದ ಫಿಸ್ಕಲ್ ಡೆಫಿಸಿಟ್ ಅಥವಾ ವಿತ್ತೀಯ ಕೊರತೆ ಅದರ ಜಿಡಿಪಿಯ ಶೇ. 6ರಿಂದ 7ರಷ್ಟು ಇದೆ. ಹಣದ ಲೆಕ್ಕದಲ್ಲಿ 2023ರಲ್ಲಿ ಬರೋಬ್ಬರಿ 1.91 ಟ್ರಿಲಿಯನ್ ಡಾಲರ್​ನಷ್ಟು ವಿತ್ತೀಯ ಕೊರತೆ ಸೃಷ್ಟಿಯಾಗಿತ್ತು. ಅಂದರೆ, ಬರೋಬ್ಬರಿ 160 ಲಕ್ಷ ಕೋಟಿ ರೂಪಾಯಿಯಷ್ಟು ಹಣದ ಕೊರತೆಯಾಗಿದೆ. ಬಹುತೇಕ ಅಷ್ಟು ಮೊತ್ತದ ಹಣವನ್ನು ಅದು ಸಾಲವಾಗಿ ಪಡೆಯುವಂತಾಗುತ್ತದೆ. ಅಮೆರಿಕಕ್ಕೆ ಈ ವಿತ್ತೀಯ ಕೊರತೆ ಸಮಸ್ಯೆ ಇವತ್ತು, ನಿನ್ನೆಯದಲ್ಲ, ದಶಕಗಳಿಂದಲೂ ಈ ಬಾಧೆ ಇದೆ. ಈ ಫಿಸ್ಕಲ್ ಡೆಫಿಸಿಟ್ ಅನ್ನು ಕಡಿಮೆ ಮಾಡಲು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಇದೇ ವೇಳೆ, ವಿಶ್ವಖ್ಯಾತ ಹೂಡಿಕೆದಾರ ಎನಿಸಿರುವ ವಾರನ್ ಬಫೆಟ್ ತಾನು ಅಮೆರಿಕದ ಈ ವಿತ್ತೀಯ ಕೊರತೆ ಸಮಸ್ಯೆಯನ್ನು ಕೇವಲ ಐದು ನಿಮಿಷದಲ್ಲಿ ಪರಿಹರಿಸುವುದಾಗಿ 2011ರಲ್ಲಿ ಹೇಳಿದ ಮಾತು ಈಗ ವೈರಲ್ ಆಗುತ್ತಿದೆ.

ವಿತ್ತೀಯ ಕೊರತೆ ಎಂದರೇನು?

ವಿತ್ತೀಯ ಕೊರತೆಗೆ ವಾರನ್ ಬಫೆಟ್ ಬಳಿ ಏನು ಪರಿಹಾರ ಇದೆ ಎಂದು ತಿಳಿಯುವ ಮುನ್ನ ಈ ವಿತ್ತೀಯ ಕೊರತೆ ಎಂದರೇನು ಎಂಬುದನ್ನು ತಿಳಿಯುವುದು ಅವಶ್ಯಕ. ಸರ್ಕಾರ ತನಗೆ ಬರುವ ಆದಾಯದ ಹಣವನ್ನು ಜನಕಲ್ಯಾಣ ಮತ್ತಿತರ ಕಾರ್ಯಗಳಿಗೆ ವೆಚ್ಚ ಮಾಡುತ್ತದೆ. ಆದಾಯ ಮತ್ತು ವೆಚ್ಚದಲ್ಲಿ ಆಗುವ ವ್ಯತ್ಯಾಸವೇ ವಿತ್ತೀಯ ಕೊರತೆ. ಆದಾಯಕ್ಕಿಂತ ವೆಚ್ಚ ಹೆಚ್ಚಾದರೆ ವಿತ್ತೀಯ ಕೊರತೆ ಹೆಚ್ಚುತ್ತದೆ.

ಇದನ್ನೂ ಓದಿ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ 150ನೇ ಸಂಸ್ಥಾಪನಾ ದಿನ; ಏಷ್ಯಾದ ಮೊದಲ ಸ್ಟಾಕ್ ಎಕ್ಸ್​ಚೇಂಜ್​ನ ಕುತೂಹಲದ ಕಥೆ

ಐದು ನಿಮಿಷದಲ್ಲಿ ಹೇಗೆ ಪರಿಹಾರ?

‘ಯಾವುದೇ ಸಂದರ್ಭದಲ್ಲಾದರೂ ಸರಿ, ಜಿಡಿಪಿಯ ಶೇ. 3ಕ್ಕಿಂತಲೂ ಹೆಚ್ಚು ವಿತ್ತೀಯ ಕೊರತೆ ಸೃಷ್ಟಿಯಾದರೆ ಸಂಸತ್ತಿನ ಎಲ್ಲಾ ಸದಸ್ಯರೂ ಮತ್ತೆ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸುವ ಕಾನೂನು ಜಾರಿ ಮಾಡಬೇಕು,’ ಎಂದು ವಾರನ್ ಬಫೆಟ್ ಹೇಳುತ್ತಾರೆ. 2011ರಲ್ಲಿ ಸಿಎನ್​ಬಿಸಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಈ ಸಲಹೆ ನೀಡಿದ್ದರು.

ಜರ್ಮನಿಯಲ್ಲಿ ಇಂಥದ್ದೊಂದು ಕಾನೂನು ಇದೆ. ಅಮೆರಿಕದಲ್ಲಿ ಇದು ಜಾರಿ ಮಾಡಬೇಕೆಂದು ಬಫೆಟ್ ಒತ್ತಾಯಿಸುತ್ತಾರೆ. ವಿತ್ತೀಯ ಕೊರತೆ ಸತತವಾಗಿ ಇದ್ದರೆ ಅದನ್ನು ನೀಗಿಸಲು ಸಾಲ ಮಾಡಬೇಕಾಗುತ್ತದೆ. ಅಮೆರಿಕ ಸರ್ಕಾರ ಹಣದ ಕೊರತೆಯಾದಾಗ ಸಾಮಾನ್ಯವಾಗಿ ಹೆಚ್ಚುವರಿ ನೋಟುಗಳನ್ನು ಮುದ್ರಿಸುತ್ತದೆ. ಇದರಿಂದ ಹಣದುಬ್ಬರ, ಬಡ್ಡಿದರ ನಿಯಂತ್ರಣಕ್ಕೆ ಬರುವುದು ಕಷ್ಟವಾಗುತ್ತದೆ. ಅಮೆರಿಕದ ಡಾಲರ್ ಪ್ರಮುಖ ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಉಳಿದಿರುವುದರಿಂದ ಕರೆನ್ಸಿ ಮೌಲ್ಯ ಉಳಿದುಕೊಂಡು ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಶಿಷ್ಯ ವಿನೋದ್ ದೋಂಡಾಳೆ ನಿಧನ, ಭಾವುಕರಾದ ಟಿಎನ್ ಸೀತಾರಾಂ
ಶಿಷ್ಯ ವಿನೋದ್ ದೋಂಡಾಳೆ ನಿಧನ, ಭಾವುಕರಾದ ಟಿಎನ್ ಸೀತಾರಾಂ
ನಿರಂತರ ಮಳೆಗೆ ಸಿಎಂ ತವರಲ್ಲಿ ಮುಖ್ಯರಸ್ತೆಯಲ್ಲೇ ಭೂಕುಸಿತ: ಸಂಚಾರಕ್ಕೆ ಅಡ್ಡ
ನಿರಂತರ ಮಳೆಗೆ ಸಿಎಂ ತವರಲ್ಲಿ ಮುಖ್ಯರಸ್ತೆಯಲ್ಲೇ ಭೂಕುಸಿತ: ಸಂಚಾರಕ್ಕೆ ಅಡ್ಡ
ಶಾಸಕರ ಮನೆಗಳಲ್ಲಿ ಸಭೆ ನಡೆಸಕೂಡದೆಂದು ಎಲ್ಲರಿಗೆ ತಿಳಿಸಲಾಗಿದೆ: ಶಿವಕುಮಾರ್
ಶಾಸಕರ ಮನೆಗಳಲ್ಲಿ ಸಭೆ ನಡೆಸಕೂಡದೆಂದು ಎಲ್ಲರಿಗೆ ತಿಳಿಸಲಾಗಿದೆ: ಶಿವಕುಮಾರ್
ಮೂರು ಹೆಣ್ಣುಮಕ್ಕಳ ತಂದೆ ಜಗನ್ನಾಥ ಮಣ್ಣಿನಡಿ ಸಿಲುಕಿ ಪ್ರಾಣ ತೆತ್ತರೇ?
ಮೂರು ಹೆಣ್ಣುಮಕ್ಕಳ ತಂದೆ ಜಗನ್ನಾಥ ಮಣ್ಣಿನಡಿ ಸಿಲುಕಿ ಪ್ರಾಣ ತೆತ್ತರೇ?
ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ನೆರವಿಗೆ ಕಾದಿರಲಿಲ್ಲ: ಕುಮಾರಸ್ವಾಮಿ
ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ನೆರವಿಗೆ ಕಾದಿರಲಿಲ್ಲ: ಕುಮಾರಸ್ವಾಮಿ
ಹಗರಣ ಮೈ ಸುತ್ತಿಕೊಂಡಾಗ ಸರ್ಕಾರಕ್ಕೆ ಗುಡ್ಡ ಕುಸಿತ, ಮಳೆ ನೆನಪಾಗಿದೆ: ಅಶೋಕ
ಹಗರಣ ಮೈ ಸುತ್ತಿಕೊಂಡಾಗ ಸರ್ಕಾರಕ್ಕೆ ಗುಡ್ಡ ಕುಸಿತ, ಮಳೆ ನೆನಪಾಗಿದೆ: ಅಶೋಕ
ಶಿರೂರು ಗುಡ್ಡ ಕುಸಿತದಂಥ ದುರ್ಘಟನೆ ಮಂಗಳೂರಲ್ಲೂ ನಡೆಯಬಾರದು!
ಶಿರೂರು ಗುಡ್ಡ ಕುಸಿತದಂಥ ದುರ್ಘಟನೆ ಮಂಗಳೂರಲ್ಲೂ ನಡೆಯಬಾರದು!
ಒಪ್ಪೊ ರೆನೋ 12 ಪ್ರೊ 5G ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಎಂಟ್ರಿ
ಒಪ್ಪೊ ರೆನೋ 12 ಪ್ರೊ 5G ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಎಂಟ್ರಿ
ನದಿ ಮಧ್ಯೆ ಇರುವ ಕಟೀಲು ಕ್ಷೇತ್ರದ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆ
ನದಿ ಮಧ್ಯೆ ಇರುವ ಕಟೀಲು ಕ್ಷೇತ್ರದ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆ
ಶಾಸಕ ಸೈಲ್ ಮತ್ತು ಸಚಿವ ಮಂಕಾಳ್ ನಡುವೆ ನಡೆದ ವಾಗ್ವಾದ ಡಿಸಿಎಂಗೆ ಗೊತ್ತಿಲ್ಲ
ಶಾಸಕ ಸೈಲ್ ಮತ್ತು ಸಚಿವ ಮಂಕಾಳ್ ನಡುವೆ ನಡೆದ ವಾಗ್ವಾದ ಡಿಸಿಎಂಗೆ ಗೊತ್ತಿಲ್ಲ