ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ 150ನೇ ಸಂಸ್ಥಾಪನಾ ದಿನ; ಏಷ್ಯಾದ ಮೊದಲ ಸ್ಟಾಕ್ ಎಕ್ಸ್​ಚೇಂಜ್​ನ ಕುತೂಹಲದ ಕಥೆ

Bombay Stock Exchange founded on 1875 July 9th: ಮುಂಬೈನ ದಲಾಲ್ ಸ್ಟ್ರೀಟ್​ನಲ್ಲಿರುವ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸ್ಥಾಪನೆಯಾಗಿದ್ದು 1875ರ ಜುಲೈ 9ರಂದು. ಬಿಎಸ್​ಇ ಭಾರತದ ಮತ್ತು ಏಷ್ಯಾದ ಮೊದಲ ಷೇರು ವಿನಿಮಯ ಕೇಂದ್ರ. ಇದು ಸ್ಥಾಪನೆಯಾಗಿ ಮೂರು ವರ್ಷದ ಬಳಿಕ ಜಪಾನ್​ನಲ್ಲಿ ಸ್ಟಾಕ್ ಎಕ್ಸ್​ಚೇಂಜ್ ಆರಂಭವಾಯಿತು. 1855ರಲ್ಲಿ ಆಲದ ಮರದ ಕೆಳಗೆ ಕೆಲವೇ ವರ್ತಕರಿಂದ ನಡೆಯುತ್ತಿದ್ದ ವ್ಯವಹಾರ ಈಗ ಬೃಹತ್ ಆಗಿ ವಿಸ್ತರಿಸಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ 150ನೇ ಸಂಸ್ಥಾಪನಾ ದಿನ; ಏಷ್ಯಾದ ಮೊದಲ ಸ್ಟಾಕ್ ಎಕ್ಸ್​ಚೇಂಜ್​ನ ಕುತೂಹಲದ ಕಥೆ
ಬಿಎಸ್​ಇ
Follow us
|

Updated on:Jul 10, 2024 | 12:43 PM

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸ್ಥಾಪನೆಯಾಗಿ 149 ವರ್ಷ ಗತಿಸಿ, 150ನೇ ವರ್ಷಕ್ಕೆ ಕಾಲಿಟ್ಟಿದೆ. 1875ರ ಜುಲೈ 9ರಂದು ಇದರ ಸ್ಥಾಪನೆಯಾಗಿದೆ. ಇದು ಭಾರತದ ಮೊದಲ ಷೇರು ವಿನಿಮಯ ಕೇಂದ್ರವಾಗಿದೆ. ಭಾರತ ಮಾತ್ರವಲ್ಲ ಏಷ್ಯಾದ ಚೊಚ್ಚಲ ಸ್ಟಾಕ್ ಮಾರ್ಕೆಟ್ ಕೂಡ ಹೌದು. ವಿಶ್ವದ 10ನೇ ಅತಿ ಹಳೆಯ ಮಾರುಕಟ್ಟೆ ಅದು. ಆಲದ ಮರದ ಕೆಳಗೆ ಆರಂಭವಾದ ಬಿಎಸ್​ಇ ಇವತ್ತು ವಿಶ್ವದ ಪ್ರಮುಖ ಷೇರು ವಿನಿಮಯ ಕೇಂದ್ರಗಳಲ್ಲಿ ಒಂದಾಗಿದೆ. ಬಿಎಸ್​ಇ ಬಳಿಕ ದೇಶದಲ್ಲಿ ಹಲವು ಸ್ಟಾಕ್ ಎಕ್ಸ್​ಚೇಂಜ್​ಗಳು ಸ್ಥಾಪನೆಯಾದವರಾದರೂ ಅಂತಿಮವಾಗಿ ಈಗ ಬಿಎಸ್​ಇ ಮತ್ತು ಎನ್​ಎಸ್​ಇ ಮಾತ್ರವೇ ಉಳಿದುಕೊಂಡಿರುವುದು.

ಆಲದ ಮರದ ಕೆಳಗೆ ಶುರುವಾದ ಷೇರುಪೇಟೆ

ಭಾರತದಲ್ಲಿ ಷೇರು ಮಾರುಕಟ್ಟೆಯ ಹುಟ್ಟಿನ ಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ. 1855ರಲ್ಲಿ 22 ಮಂದಿ ಕಾಟನ್ ಮಾರಾಟಗಾರರು ಮುಂಬೈನ ಟೌನ್ ಹಾಲ್ ಸಮೀಪ ಸಂತೆಯ ರೀತಿಯಲ್ಲಿ ಸೇರಿ ವ್ಯವಹಾರ ನಡೆಸತೊಡಗದರು. ಕ್ರಮೇಣ ವರ್ತಕರ ಸಂಖ್ಯೆ ಹೆಚ್ಚತೊಡಗಿತು. ಸ್ಥಳ ಬದಲಾವಣೆ ಮಾಡಲಾಯಿತು. 20 ವರ್ಷದ ಬಳಿಕ 1875ರ ಜುಲೈ 9ರಂದು ನೇಟಿವ್ ಶೇರ್ ಅಂಡ್ ಸ್ಟಾಕ್ ಬ್ರೋಕರ್ಸ್ ಅಸೋಸಿಯೇಶನ್ ಸಂಸ್ಥೆ ಸ್ಥಾಪನೆ ಆಯಿತು. ಈ ರೀತಿಯಲ್ಲಿ ಷೇರು ವಿನಿಮಯ ಕೇಂದ್ರವೊಂದು ಸ್ಥಾಪನೆ ಆಯಿತು.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಎಫ್ ಅಂಡ್ ಒ ವ್ಯವಹಾರಕ್ಕೆ ಕಡಿವಾಣ ಹಾಕಲು ಸೆಬಿ ಕ್ರಮ; ಹೊಸ ನಿಯಮಗಳು ಸದ್ಯದಲ್ಲೇ ಜಾರಿ

318 ಆರಂಭಿಕ ಸದಸ್ಯರು

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಆರಂಭವಾದಾಗ ನೊಂದಾಯಿತ ಸದಸ್ಯರ ಸಂಖ್ಯೆ 318 ಇತ್ತು. ಆಗ ಪ್ರವೇಶ ಶುಲ್ಕ ಒಂದು ರೂ ಇತ್ತು. 1895ರವರೆಗೂ ಅಧಿಕೃತ ಕಚೇರಿ ಎಂಬುದಿರಲಿಲ್ಲ. 1928ರಲ್ಲಿ ದಲಾಲ್ ಸ್ಟ್ರೀಟ್​ನಲ್ಲಿ ಈಗಿರುವ ಬಿಎಸ್​ಇ ಕಚೇರಿ ಸ್ಥಳವನ್ನು ಖರೀದಿಸಲಾಯಿತು. ಈಗಿರುವ ಸ್ಟಾಕ್ ಎಕ್ಸ್​ಚೇಂಜ್ ಕಟ್ಟಡ ನಿರ್ಮಾಣ ಆಗಿದ್ದು 1930ರಲ್ಲಿ.

ಫಿರೋಜ್ ಜೀಜೀಭಾಯ್ ಟವರ್ ಹೆಸರು ಯಾಕೆ?

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಅನ್ನು ಮೂಲತಃ ಸ್ಥಾಪನೆ ಮಾಡಿದ್ದು ಪ್ರೇಮ್​ಚಂದ್ ರಾಯ್​ಚಂದ್ ಎಂಬುವರು. ಈಗಿರುವ ಷೇರು ವಿನಿಮಯ ಕೇಂದ್ರದ ಕಟ್ಟಡಕ್ಕೆ ಫಿರೋಜ್ ಜೀಜೀಭಾಯ್ ಟವರ್ ಎಂದು ಹೆಸರಿಸಲಾಗಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಮಾಜಿ ಛೇರ್ಮನ್ ಫಿರೋಜ್ ಜಮ್​ಶೆಡ್​ಜಿ ಜೀಜೀಭಾಯ್ ಅವರ ಸ್ಮರಣಾರ್ಥವಾಗಿ ಈ ಕಟ್ಟಡಕ್ಕೆ ಆ ಹೆಸರು ಇಡಲಾಗಿದೆ.

ಇದನ್ನೂ ಓದಿ: ಜೂನ್​ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು

1,000 ಅಂಕದಿಂದ 80,000 ಅಂಕಗಳವರೆಗೆ

ಬಿಎಸ್​ಇ ಸೆನ್ಸೆಕ್ಸ್ ಎಂಬುದು ನಿರ್ದಿಷ್ಟ ಷೇರುಗಳ ಮೌಲ್ಯ ಒಳಗೊಂಡಿರುವ ಸೂಚ್ಯಂಕವಾಗಿದೆ. ಇದು ಭಾರತದ ಮೊದಲ ಷೇರು ಸೂಚ್ಯಂಕವಾಗಿದೆ. 1986ರಲ್ಲಿ ಸೆನ್ಸೆಕ್ಸ್ ಮೊದಲಿಗೆ ಅನಾವರಣಗೊಂಡಿತು. ಆಗ ಇದಕ್ಕೆ ಮೂಲಾಂಕವಾಗಿ 1,000 ಇತ್ತು. ಈ ಮಟ್ಟವನ್ನು ದಾಟಲು ನಾಲ್ಕು ವರ್ಷ ಬೇಕಾಯಿತು. ಈಗ 80,000 ಅಂಕಗಳ ಗಡಿ ದಾಟಿದೆ. ಇನ್ನೊಂದು ವರ್ಷದಲ್ಲಿ ಸೆನ್ಸೆಕ್ಸ್ 1,00,000 ಅಂಕಗಳ ಗಡಿ ದಾಟಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Wed, 10 July 24

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್