ತೆರಿಗೆ ವಿನಾಯಿತಿ 5 ಲಕ್ಷಕ್ಕೆ, ಡಿಡಕ್ಷನ್ 1 ಲಕ್ಷಕ್ಕೆ ಏರಿಕೆ? ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ

Income tax exemption and deduction limit: ಟ್ಯಾಕ್ಸ್ ಡಿಡಕ್ಷನ್ ಮಿತಿಯನ್ನು 50,000 ರೂನಿಂದ 1,00,000 ರೂಗೆ ಹೆಚ್ಚಿಸಬಹುದು. ತೆರಿಗೆ ವಿನಾಯಿತಿ ಅಥವಾ ಬೇಸಿಕ್ ಟ್ಯಾಕ್ಸ್ ಎಕ್ಸೆಂಪ್ಷನ್ ಅನ್ನು ಐದು ಲಕ್ಷ ರೂಗೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. 15 ಲಕ್ಷ ರೂನಿಂದ 20 ಲಕ್ಷ ರೂವರೆಗಿನ ಸ್ಲ್ಯಾಬ್​ ದರದಲ್ಲಿ ತುಸು ಇಳಿಕೆ ಆಗುವ ನಿರೀಕ್ಷೆಯೂ ಇದೆ. ಜುಲೈ 23ರಂದು ಬಜೆಟ್ ಮಂಡನೆ ಆಗಲಿದೆ.

ತೆರಿಗೆ ವಿನಾಯಿತಿ 5 ಲಕ್ಷಕ್ಕೆ, ಡಿಡಕ್ಷನ್ 1 ಲಕ್ಷಕ್ಕೆ ಏರಿಕೆ? ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ
ಆದಾಯ ತೆರಿಗೆ,
Follow us
|

Updated on: Jul 10, 2024 | 10:57 AM

ನವದೆಹಲಿ, ಜುಲೈ 10: ಈ ಬಾರಿಯ ಕೇಂದ್ರ ಮುಂಗಡ ಪತ್ರದಲ್ಲಿ (Union Budget 2024) ಆದಾಯ ತೆರಿಗೆ ಪಾವತಿದಾರರಿಗೆ, ಅದರಲ್ಲೂ ಸಂಬಳದಾರರಿಗೆ ಸರ್ಕಾರದಿಂದ ರಿಲೀಫ್ ಸಿಗುವ ನಿರೀಕ್ಷೆ ಇದೆ. ಆದಾಯ ತೆರಿಗೆ ವಿನಾಯಿತಿ ಅಥವಾ ಟ್ಯಾಕ್ಸ್ ಎಕ್ಸೆಂಪ್ಷನ್, ಮತ್ತು ಟ್ಯಾಕ್ಸ್ ಡಿಡಕ್ಷನ್, ಈ ಎರಡನ್ನೂ ಇಳಿಸಬೇಕೆನ್ನುವುದು ತೆರಿಗೆ ಪಾವತಿದಾರರ ಸತತ ಮನವಿಯಾಗಿದೆ. ಕಳೆದ ಬಾರಿಯ ಬಜೆಟ್​ನಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್ ಅನ್ನು ಎರಡೂವರೆ ಲಕ್ಷ ರೂನಿಂದ ಮೂರು ಲಕ್ಷ ರೂಗೆ ಹೆಚ್ಚಿಸಲಾಗಿತ್ತು. ಈಗ ಈ ಡಿಡಕ್ಷನ್ ಲಿಮಿಟ್ ಅನ್ನು ಇನ್ನಷ್ಟು ಹೆಚ್ಚಿಸಬೇಕು ಎನ್ನುವ ಒತ್ತಾಯ ಇದೆ. ಬಜೆಟ್​ನಲ್ಲಿ ಇದನ್ನು ಪರಿಗಣಿಸಬಹುದು ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ ತೆರಿಗೆ ವಿನಾಯಿತಿ ಅಥವಾ ಟ್ಯಾಕ್ಸ್ ಎಕ್ಸೆಂಪ್ಷನ್ ಲಿಮಿಟ್ ಅನ್ನು 3 ಲಕ್ಷ ರೂನಿಂದ 5 ಲಕ್ಷ ರೂಗೆ ಹೆಚ್ಚಿಸಬಹುದು. ಹಾಗೆಯೇ, ಮೂಲ ಟ್ಯಾಕ್ಸ್ ಡಿಡಕ್ಷನ್ ಅನ್ನು ಈಗಿರುವ 50,000 ರೂನಿಂದ ಒಂದು ಲಕ್ಷ ರೂಗೆ ಹೆಚ್ಚಿಸಬಹುದು. ಅಷ್ಟೇ ಅಲ್ಲ, ಆದಾಯ ತೆರಿಗೆ ಸ್ಲ್ಯಾಬ್ ದರದಲ್ಲಿ ತುಸು ಬದಲಾವಣೆ ಆಗಬಹುದು. ಅಧಿಕ ಆದಾಯದ ಸ್ಲ್ಯಾಬ್​ನ ದರವನ್ನು ತುಸು ಇಳಿಸಬಹುದು. ಅದರಲ್ಲೂ ಮುಖ್ಯವಾಗಿ 15 ಲಕ್ಷ ರೂನಿಂದ 20 ಲಕ್ಷ ರೂ ಆದಾಯದ ಸ್ಲ್ಯಾಬ್​ಗೆ ಶೇ. 20ರಷ್ಟು ತೆರಿಗೆ ಇದೆ. ಇದನ್ನು ಸ್ವಲ್ಪ ಇಳಿಸಬಹುದು ಎನ್ನಲಾಗುತ್ತಿದೆ.

ಗಮನಿಸಬೇಕಾದ ಸಂಗತಿ ಎಂದರೆ ಈ ಮೇಲಿನ ಮೂರು ಬದಲಾವಣೆಗಳು ಹೊಸ ಟ್ಯಾಕ್ಸ್ ರೆಜಿಮೆಗೆ ಮಾತ್ರವೇ ಜಾರಿಯಾಗಬಹುದು. ಹಳೆಯ ಟ್ಯಾಕ್ಸ್ ರೆಜಿಮೆಯ ಸ್ಲ್ಯಾಬ್ ದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಈಗಲೂ ಕೂಡ ಹೆಚ್ಚಿನ ಐಟಿ ಪಾವತಿದಾರರು ಓಲ್ಡ್ ಟ್ಯಾಕ್ಸ್ ರೆಜಿಮೆಯನ್ನೇ ಅನುಸರಿಸುತ್ತಿದ್ದಾರೆ. ಸರ್ಕಾರ ಹೊಸ ತೆರಿಗೆ ವ್ಯವಸ್ಥೆಗೆ ಒತ್ತು ಕೊಡುತ್ತಿದೆ. ಹೀಗಾಗಿ, ಹಳೆಯ ಟ್ಯಾಕ್ಸ್ ಸಿಸ್ಟಂನಿಂದ ಹೊಸದಕ್ಕೆ ಜನರನ್ನು ಕರೆತರುವ ಗುರಿ ಸರ್ಕಾರದ್ದು. ಹೀಗಾಗಿ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ರಿಯಾಯಿತಿಗಳನ್ನು ಕೊಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಜು. 22ಕ್ಕೆ ಸಂಸತ್ ಅಧಿವೇಶನ, ಜು.23ಕ್ಕೆ ಬಜೆಟ್ ಮಂಡನೆ: ​​ ಸಚಿವ ಕಿರಣ್ ರಿಜಿಜು

ಒಂದು ವೇಳೆ, ಟ್ಯಾಕ್ಸ್ ಎಕ್ಸೆಂಪ್ಷನ್ ಮತ್ತು ಡಿಡಕ್ಷನ್ ಹೆಚ್ಚಾದಲ್ಲಿ ಅಧಿಕ ಆದಾಯ ಗುಂಪಿನ ಜನರಿಗೂ ಅನುಕೂಲವಾಗಲಿದೆ. ಸದ್ಯ ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ ರಿಬೇಟ್ ಅನ್ನು ಪರಿಗಣಿಸಿದರೆ ವರ್ಷಕ್ಕೆ ಏಳೂವರೆ ಲಕ್ಷ ರೂ ಆದಾಯ ಹೊಂದಿರುವ ಜನರಿಗೆ ತೆರಿಗೆಯ ಹೊರೆ ಇರುವುದಿಲ್ಲ. ಜುಲೈ 23ರಂದು ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿರುವ 2024ರ ಬಜೆಟ್​ನಲ್ಲಿ ಈ ನಿರೀಕ್ಷೆಗಳನ್ನು ಈಡೇರಿಸಲಾಗುತ್ತದಾ ನೋಡಬೇಕು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಚಡ್ಡಿ ಗ್ಯಾಂಗ್ ಪ್ರತ್ಯಕ್ಷ; ಹಾಸನ ಜಿಲ್ಲೆಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಚಡ್ಡಿ ಗ್ಯಾಂಗ್ ಪ್ರತ್ಯಕ್ಷ; ಹಾಸನ ಜಿಲ್ಲೆಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ
ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?
ಶಿರೂರು ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ಆಗೋದು ಸಾಧ್ಯವೇ ಇಲ್ಲ
ಶಿರೂರು ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ಆಗೋದು ಸಾಧ್ಯವೇ ಇಲ್ಲ
ವಿಡಿಯೋ: ವಿಜಯಲಕ್ಷ್ಮಿ ದರ್ಶನ್ ಭೇಟಿಯ ಬಗ್ಗೆ ಡಿಕೆ ಶಿವಕುಮಾರ್ ಮಾತು
ವಿಡಿಯೋ: ವಿಜಯಲಕ್ಷ್ಮಿ ದರ್ಶನ್ ಭೇಟಿಯ ಬಗ್ಗೆ ಡಿಕೆ ಶಿವಕುಮಾರ್ ಮಾತು
ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಸಿಟ್ಟಿಗೆದ್ದ ಬಿಜೆಪಿ ಶಾಸಕರು
ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಸಿಟ್ಟಿಗೆದ್ದ ಬಿಜೆಪಿ ಶಾಸಕರು
ಶಿರೂರು ಗುಡ್ಡ ಕುಸಿತ; ಉಳುವೆರೆ ಗ್ರಾಮದಲ್ಲಿ ದಿಕ್ಕಾಪಾಲಾಗಿ ಓಡಿದ ಜನ
ಶಿರೂರು ಗುಡ್ಡ ಕುಸಿತ; ಉಳುವೆರೆ ಗ್ರಾಮದಲ್ಲಿ ದಿಕ್ಕಾಪಾಲಾಗಿ ಓಡಿದ ಜನ
ನಗುವನ ತೋಟದ ತಡೆಗೋಡೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಬಾರದೇ?
ನಗುವನ ತೋಟದ ತಡೆಗೋಡೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಬಾರದೇ?
ಉಪ ಮುಖ್ಯಮಂತ್ರಿ ಶಿವಕುಮಾರ್ ಮನೆಗೆ ಬಂದ ಚಿತ್ರನಟ ದರ್ಶನ್ ಪತ್ನಿ, ಸಹೋದರ
ಉಪ ಮುಖ್ಯಮಂತ್ರಿ ಶಿವಕುಮಾರ್ ಮನೆಗೆ ಬಂದ ಚಿತ್ರನಟ ದರ್ಶನ್ ಪತ್ನಿ, ಸಹೋದರ