ಜೂನ್​ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು

Stock market updates: ಜೂನ್ ತಿಂಗಳಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಅಕೌಂಟ್​​ಗಳ ರಚನೆ ಆಗಿರುವುದು ಡೆಪಾಸಿಟರಿ ಸಂಸ್ಥೆಗಳ ದತ್ತಾಂಶದಿಂದ ಗೊತ್ತಾಗಿದೆ. ಷೇರು ಮಾರುಕಟ್ಟೆ ಇತಿಹಾಸದಲ್ಲಿ ಒಂದು ತಿಂಗಳಲ್ಲಿ ಹೊಸ ಡೀಮ್ಯಾಟ್ ಅಕೌಂಟ್​ಗಳ ಸಂಖ್ಯೆ 40 ಲಕ್ಷ ದಾಟಿದ್ದು ಇದು ನಾಲ್ಕನೇ ಬಾರಿ. ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ, ಸತತ ಮೂರು ತಿಂಗಳು ಆ ಮೈಲಿಗಲ್ಲು ಮುಟ್ಟಲಾಗಿತ್ತು.

ಜೂನ್​ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 05, 2024 | 7:03 PM

ನವದೆಹಲಿ, ಜುಲೈ 5: ಭಾರತದಲ್ಲಿ ಷೇರು ಮಾರುಕಟ್ಟೆಯ ಬುಲ್ ರನ್ ಜೋರಾಗುತ್ತಿರುವಂತೆಯೇ ಹೊಸ ಡೀಮ್ಯಾಟ್ ಖಾತೆಗಳು ಪ್ರವಾಹೋಪಾದಿಯಲ್ಲಿ ಸೃಷ್ಟಿಯಾಗುತ್ತಿವೆ. ಜೂನ್ ತಿಂಗಳಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆಗಳು ರಚನೆ ಆಗಿವೆ ಎಂದು ಸೆಂಟ್ರಲ್ ಡೆಪಾಸಿಟರಿ ಸರ್ವಿಸ್ (CDSL) ಮತ್ತು ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟಿರಿ (NSDL) ಬಿಡುಗಡೆ ಮಾಡಿದ ದತ್ತಾಂಶದಿಂದ ಗೊತ್ತಾಗಿದೆ. ಒಂದು ತಿಂಗಳಲ್ಲಿ 40 ಲಕ್ಷಕ್ಕಿಂತ ಹೆಚ್ಚು ಡೀಮ್ಯಾಟ್ ಅಕೌಂಟ್ ತೆರೆಯಲ್ಪಟ್ಟಿರುವುದು ಭಾರತದ ಷೇರುಮಾರುಕಟ್ಟೆ ಇತಿಹಾಸದಲ್ಲೇ ಇದು ನಾಲ್ಕನೇ ಬಾರಿ. 2023ರ ಡಿಸೆಂಬರ್, 2024ರ ಜನವರಿ ಮತ್ತು ಫೆಬ್ರುವರಿಯಲ್ಲಿ ಈ ಮೈಲಿಗಲ್ಲು ಮುಟ್ಟಲಾಗಿತ್ತು.

ಮೇ ತಿಂಗಳಲ್ಲಿ 36 ಲಕ್ಷ ಹೊಸ ಡೀಮ್ಯಾಟ್ ಅಕೌಂಟ್ಸ್ ರಚನೆಯಾಗಿದ್ದವು. 2023ರ ಜೂನ್ ತಿಂಗಳಲ್ಲಿ 23.6 ಲಕ್ಷ ಹೊಸ ಖಾತೆಗಳನ್ನು ಆರಂಭಿಸಲಾಗಿತ್ತು. ವರ್ಷದ ಹಿಂದಿನದಕ್ಕೆ ಹೋಲಿಸಿದರೆ ಈ ಬಾರಿಯ ಜೂನ್​ನಲ್ಲಿ ಶೇ. 34.66ರಷ್ಟು ಹೆಚ್ಚು ಡೀಮ್ಯಾಟ್ ಖಾತೆಗಳು ರಚನೆಯಾಗಿವೆ. ಇಲ್ಲಿಯವರೆಗೆ ರಚನೆಯಾಗಿರುವ ಡೀಮ್ಯಾಟ್ ಖಾತೆಗಳ ಸಂಖ್ಯೆ 16.2 ಕೋಟಿ ಆಗಿದೆ.

ಇದನ್ನೂ ಓದಿ: ಜಿಯೋ ದರ ಹೆಚ್ಚಳ ಬೆನ್ನಲ್ಲೇ ಷೇರುಪೇಟೆಯಲ್ಲಿ ಆರ್​ಐಎಲ್ ಮಿಂಚು; ಮಾರುಕಟ್ಟೆ ಬಂಡವಾಳ ದಾಖಲೆಯ 21 ಲಕ್ಷ ಕೋಟಿ ರೂಗೆ ಏರಿಕೆ

ಹಿಂದಿನ ಸರ್ಕಾರವೇ ಮುಂದುವರಿದಿರುವುದರಿಂದ ಆರ್ಥಿಕ ನೀತಿಗಳೂ ಮುಂದುವರಿಯುವುದು ಖಾತ್ರಿಯಾದ್ದರಿಂದ ಹೂಡಿಕೆದಾರರು ಆಕರ್ಷಿತರಾಗುತ್ತಿದ್ದಾರೆ. ಇದು ಹೊಸ ಡೀಮ್ಯಾಟ್ ಖಾತೆಗಳ ರಚನೆಗೆ ಒಂದು ಕಾರಣವಾದರೆ, ಮತ್ತೊಂದು ಕಾರಣವು ಷೇರು ಮಾರುಕಟ್ಟೆ ಭರ್ಜರಿಯಾಗಿ ಬೆಳೆಯುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದ ಮಾರುಕಟ್ಟೆ ಅದ್ವಿತೀಯ ವೇಗದಲ್ಲಿ ಹಿಗ್ಗುತ್ತಿದೆ. ಹೀಗಾಗಿ ಈಕ್ವಿಟಿ ಮಾರುಕಟ್ಟೆಯತ್ತ ಹೂಡಿಕೆದಾರರು ದೌಡಾಯಿಸುತ್ತಿರುವುದು ಹೆಚ್ಚಾಗಿದೆ.

ತಜ್ಞರ ಪ್ರಕಾರ ಇನ್ನಷ್ಟು ಡೀಮ್ಯಾಟ್ ಅಕೌಂಟ್​ಗಳ ರಚನೆಗೆ ಅವಕಾಶ ಇದೆ. ಐಪಿಒಗಳಿಗೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಹಲವು ಷೇರುಗಳು ಶೇ. 50ಕ್ಕಿಂತಲೂ ಹೆಚ್ಚು ವೇಗದಲ್ಲಿ ಮೌಲ್ಯ ಹೆಚ್ಚಿಸಿಕೊಳ್ಳುತ್ತಿವೆ. ಈ ಸುಗ್ಗಿಯಲ್ಲಿ ಲಾಭದಿಂದ ದೂರ ಉಳಿಯಲು ಹೇಗೆ ಸಾಧ್ಯ? ಅಂತೆಯೇ ಹೊಸ ಹೂಡಿಕೆದಾರರು ಹುಮ್ಮಸ್ಸಿನಿಂದ ಈಕ್ವಿಟಿ ಕಡೆಗೆ ವಾಲುತ್ತಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಸಿಲ್ವರ್ ಇಟಿಎಫ್ ಹೊಸ ಟ್ರೆಂಡ್; ನಿಮ್ಮ ಹೂಡಿಕೆ ಹೆಚ್ಚು ಲಾಭದಾಯಕ, ಹೆಚ್ಚು ಸುರಕ್ಷಿತ

ಚುನಾವಣೆ ಬಳಿಕ ಷೇರು ಮಾರುಕಟ್ಟೆ 70,000 ದಿಂದ 80,000ಕ್ಕೆ ಹೆಚ್ಚಾಗಿದೆ. ಇಷ್ಟು ಅಮೋಘವಾಗಿ ಮಾರುಕಟ್ಟೆಯ ಓಟ ಸಾಗಿದೆ. ಇದೇ ರೀತಿ ಮಾರುಕಟ್ಟೆ ನಡೆಯುತ್ತಿದ್ದಲ್ಲಿ ಡೀಮ್ಯಾಟ್ ಅಕೌಂಟ್ ರಚನೆಯ ವೇಗ ಕೂಡ ಹಾಗೇ ಮುಂದುವರಿಯುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?