AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲ್ವರ್ ಇಟಿಎಫ್ ಹೊಸ ಟ್ರೆಂಡ್; ನಿಮ್ಮ ಹೂಡಿಕೆ ಹೆಚ್ಚು ಲಾಭದಾಯಕ, ಹೆಚ್ಚು ಸುರಕ್ಷಿತ

Silver ETFs in trending: ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಟಿಎಫ್​ಗಳು ಜನಪ್ರಿಯತೆ ಪಡೆಯುತ್ತಿವೆ. ಇದರಲ್ಲೂ ಈಕ್ವಿಟಿ, ಡೆಟ್, ಗೋಲ್ಡ್ ಇತ್ಯಾದಿ ಬೇರೆ ಬೇರೆ ಅಸೆಟ್​ಗಳ ಇಟಿಎಫ್​ಗಳಿವೆ. ಇವುಗಳಲ್ಲಿ ಸಿಲ್ವರ್ ಇಟಿಎಫ್ ಟ್ರೆಂಡಿಂಗ್​ನಲ್ಲಿದೆ. ಎರಡೂವರೆ ವರ್ಷದ ಹಿಂದೆ ಆರಂಭವಾದ ಸಿಲ್ವರ್ ಇಟಿಎಫ್ ಫಂಡ್​ಗಳಲ್ಲಿ ಈಗಾಗಲೇ 5,400 ಕೋಟಿ ರೂ ಮೊತ್ತದಷ್ಟು ಹೂಡಿಕೆಗಳಾಗಿವೆ.

ಸಿಲ್ವರ್ ಇಟಿಎಫ್ ಹೊಸ ಟ್ರೆಂಡ್; ನಿಮ್ಮ ಹೂಡಿಕೆ ಹೆಚ್ಚು ಲಾಭದಾಯಕ, ಹೆಚ್ಚು ಸುರಕ್ಷಿತ
ಸಿಲ್ವರ್ ಇಟಿಎಫ್​
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 21, 2024 | 2:36 PM

Share

ನವದೆಹಲಿ, ಜೂನ್ 21: ಇಟಿಎಫ್ ಫಂಡ್​ಗಳ ವಿಸ್ತಾರ ಮತ್ತು ವ್ಯಾಪ್ತಿ ಹೆಚ್ಚುತ್ತಿದೆ. ಜನಪ್ರಿಯತೆಯೂ ಹೆಚ್ಚುತ್ತಿದೆ. ಚಿನ್ನ, ಬೆಳ್ಳಿ ಇತ್ಯಾದಿ ಕಮಾಡಿಟೀಸ್​ಗಳ ಇಟಿಎಫ್​ಗೆ ಬೇಡಿಕೆ ಹೆಚ್ಚುತ್ತಿದೆ. ಚಿನ್ನ ಇಟಿಎಫ್, ಬೆಳ್ಳಿ ಇಟಿಎಫ್ ಫಂಡ್​ಗಳು ಮಾರುಕಟ್ಟೆ ಹಿನ್ನಡೆಯಾದರೂ ಹೂಡಿಕೆದಾರರಿಗೆ ನಷ್ಟ ತರುವಂತಹವಲ್ಲ. ಗೋಲ್ಡ್ ಇಟಿಎಫ್​ನಂತೆ ಸಿಲ್ವರ್ ಇಟಿಎಫ್​ಗಳೂ (Silver ETF) ಕೂಡ ಸುರಕ್ಷಿತವಾಗಿವೆ. ಲಾಭ ತರುವುದರಲ್ಲಿ ಬೆಳ್ಳಿಯೂ ಮುಂಚೂಣಿಯಲ್ಲಿದೆ. 2024ರಲ್ಲಿ ಇಲ್ಲಿಯವರೆಗೆ ಸಿಲ್ವರ್ ಇಟಿಎಫ್​ಗಳು ಶೇ. 19.7ರಷ್ಟು ಬೆಳೆದಿವೆ.

ಚಿನ್ನದಂತೆ ಬೆಳ್ಳಿಯ ಬೆಲೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಚಿನಿವಾರ ಮಾರುಕಟ್ಟೆಯಲ್ಲಿ ಈ ವರ್ಷ ಚಿನ್ನಕ್ಕಿಂತಲೂ ಬೆಳ್ಳಿ ಬೆಲೆ ಹೆಚ್ಚಾಗಿದೆ. ಜನವರಿಯಿಂದ ಈಚೆ ಆಭರಣ ಚಿನ್ನದ ಬೆಲೆ ಶೇ. 12.8ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಬೆಳ್ಳಿ ಬೆಲೆ ಶೇ. 19ಕ್ಕಿಂತಲೂ ಹೆಚ್ಚಾಗಿದೆ.

ಬೆಳ್ಳಿಯನ್ನು ಬಡವರ ಚಿನ್ನ ಎಂದೇ ಕೆಲವರು ಕರೆಯುತ್ತಾರೆ. ಚಿನ್ನವನ್ನು ಖರೀದಿಸುವಷ್ಟು ಸ್ಥಿತಿವಂತರಲ್ಲದವರು ಬೆಳ್ಳಿಯನ್ನಾದರೂ ಪಡೆದು ತೃಪ್ತಿ ಪಟ್ಟುಕೊಳ್ಳುವುದಿದೆ. ಅಂತಾರಾಷ್ಟ್ರೀಯವಾಗಿಯೂ ಹೂಡಿಕೆದಾರರು ಚಿನ್ನದ ಜೊತೆಗೆ ಬೆಳ್ಳಿಯನ್ನೂ ಖರೀದಿಸಿ ಇಟ್ಟುಕೊಳ್ಳಲಾಗುತ್ತಿದೆ. ಹಣದುಬ್ಬರ, ಆರ್ಥಿಕ ಅನಿಶ್ಚಿತ ಸ್ಥಿತಿ ವಿರುದ್ಧವಾಗಿ ಚಿನ್ನದಂತೆ ಬೆಳ್ಳಿಯೂ ಹೆಡ್ಜ್ ಅಥವಾ ಸೆಕ್ಯೂರಿಟಿಯಾಗಿರಬಹುದು ಎನ್ನುವ ನಂಬಿಕೆ ಇದೆ.

ಇದನ್ನೂ ಓದಿ: Gold Rates: ತೀರುತ್ತಿಲ್ಲ ಸೆಂಟ್ರಲ್ ಬ್ಯಾಂಕ್​ಗಳ ಚಿನ್ನದ ದಾಹ; ಈ ವರ್ಷ ಬೆಲೆ ಬಹಳ ಹೆಚ್ಚಾಗುವ ಭೀತಿ

ಹಾಗೆಯೇ, ಬೆಳ್ಳಿಯು ಅಲಂಕಾರದ ವಸ್ತುವಾಗಿ ಮಾತ್ರವೇ ಬಳಕೆಯಲ್ಲಿಲ್ಲ, ಹಲವು ಔದ್ಯಮಿಕ ಉತ್ಪನ್ನಗಳಿಗೆ ಅದರ ಅಗತ್ಯವಿದೆ. ಹೀಗಾಗಿ, ಚಿನ್ನಕ್ಕಿಂತ ಬೆಳ್ಳಿ ಬೆಲೆ ಹೆಚ್ಚು ವೇಗವಾಗಿ ಹೆಚ್ಚಾಗುತ್ತಿರುವುದು.

ಕೆಲ ವರ್ಷಗಳ ಹಿಂದಿನವರೆಗೂ ಸಿಲ್ವರ್ ಇಟಿಎಫ್ ಫಂಡ್​ಗಳ ಕಲ್ಪನೆ ಇರಲಿಲ್ಲ. ಎರಡೂವರೆ ವರ್ಷಗಳ ಹಿಂದೆ ಇದರ ಎಕ್ಸ್​ಚೇಂಜ್ ಟ್ರೇಡ್ ಫಂಡ್ ಆರಂಭವಾಗಿದೆ. ಎರಡು ಸಿಲ್ವರ್ ಇಟಿಎಫ್​ಗಳು ಈಗಾಗಲೇ 5,400 ಕೋಟಿ ರೂ ಮೊತ್ತದ ಹೂಡಿಕೆಯನ್ನು ಆಕರ್ಷಿಸಿವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ