AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್​ನಲ್ಲಿ ಸರ್ಕಾರ ಬದಲಾವಣೆ; ಭಾರತದ ಆರ್ಥಿಕತೆ ಮತ್ತು ಮಾರುಕಟ್ಟೆ ಮೇಲಿನ ಪರಿಣಾಮಗಳೇನು?

UK govt change effects on India: ಬ್ರಿಟನ್ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಹೀನಾಯ ಸೋಲುಂಡಿದೆ. ಪ್ರಧಾನಿ ರಿಷಿ ಸುನಕ್ ಸ್ಥಾನವನ್ನು ಕೇರ್ ಸ್ಟಾರ್ಮರ್ ತುಂಬುತ್ತಿದ್ದಾರೆ. ಭಾರತ ಮತ್ತು ಬ್ರಿಟನ್ ನಡುವಿನ ವ್ಯಾವಹಾರಿಕ ಸಂಬಂಧದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಆದರೆ, ಕೆಲ ನೀತಿಗಳಲ್ಲಿ ಸ್ವಲ್ಪ ವ್ಯತ್ಯಯವಾಗಬಹುದು. ಅದರ ಸಂಭಾವ್ಯ ಪರಿಣಾಮಗಳ ಒಂದು ನೋಟ ಇಲ್ಲಿದೆ...

ಬ್ರಿಟನ್​ನಲ್ಲಿ ಸರ್ಕಾರ ಬದಲಾವಣೆ; ಭಾರತದ ಆರ್ಥಿಕತೆ ಮತ್ತು ಮಾರುಕಟ್ಟೆ ಮೇಲಿನ ಪರಿಣಾಮಗಳೇನು?
ಕೇರ್ ಸ್ಟಾರ್ಮರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 05, 2024 | 5:30 PM

Share

ಯುನೈಟೆಡ್ ಕಿಂಗ್ಡಂನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಾರ್ಟಿ ಸೋಲನುಭವಿಸಿದೆ. ಲೇಬರ್ ಪಾರ್ಟಿ 14 ವರ್ಷದ ಬಳಿಕ ಅಧಿಕಾರಕ್ಕೆ ಮರಳುತ್ತಿದೆ. ಭಾರತ ಮೂಲದ ರಿಷಿ ಸುನಕ್ ಪ್ರಧಾನಿಯಾಗಿದ್ದರಿಂದ ಭಾರತಕ್ಕೆ ತುಸು ಸಮಾಧಾನದ ಸಂಗತಿಯಾಗಿತ್ತು. ಈಗ ಕೇರ್ ಸ್ಟಾರ್ಮರ್ ಪ್ರಧಾನಿಯಾಗುತ್ತಿದ್ದಾರೆ. ಬ್ರಿಟನ್​ನಲ್ಲಿ ಯಾವುದೇ ಸರ್ಕಾರ ಬಂದರೂ ಎರಡೂ ದೇಶಗಳ ಮಧ್ಯೆ ರಾಜಕೀಯ, ವ್ಯಾವಹಾರಿಕ ಸಂಬಂಧದಲ್ಲಿ ಹೆಚ್ಚಿನ ವ್ಯತ್ಯಯ ಆಗುವ ಸಾಧ್ಯತೆ ಇಲ್ಲ. ಆದರೆ, ಕೆಲವೊಂದು ನೀತಿಗಳಲ್ಲಿ ಸಣ್ಣಪುಟ್ಟ ಬದಲಾವಣೆ ಆಗುವ ಸಾಧ್ಯತೆ ಇದೆ.

ಫ್ರೀ ಟ್ರೇಡ್ ಅಗ್ರೀಮೆಂಟ್

ಭಾರತ ಮತ್ತು ಬ್ರಿಟನ್ ಮಧ್ಯೆ ಕಳೆದ ಎರಡು ವರ್ಷದಿಂದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ನಡೆಯುತ್ತಿದೆ. ಈವರೆಗೆ 14 ಸುತ್ತುಗಳ ಮಾತುಕತೆ ಆಗಿದೆ. ಇನ್ನೇನು ಸಹಿ ಬೀಳುವ ಸಾಧ್ಯತೆ ಇತ್ತು. ಈ ಹಂತದಲ್ಲಿ ಸರ್ಕಾರ ಬದಲಾಗುತ್ತಿದೆ.

ವಿಪಕ್ಷದಲ್ಲಿದ್ದಾಗ ಲೇಬರ್ ಪಾರ್ಟಿ ಈ ಎಫ್​ಟಿಎಯಲ್ಲಿ ಕೆಲ ಅಂಶಗಳು ಬದಲಾಗಬೇಕು ಎಂದು ಒತ್ತಾಯಿಸುತ್ತಿತ್ತು. ಈಗ ಅದು ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಫ್ರೀ ಟ್ರೇಡ್ ಅಗ್ರೀಮೆಂಟ್​ನಲ್ಲಿ ಕೆಲ ಅಂಶಗಳನ್ನು ಬದಲಾಯಿಸಲು ಮುಂದಾಗಬಹುದು. ಇದರಿಂದ ಒಪ್ಪಂದಕ್ಕೆ ಅಂಕಿತ ಬೀಳುವುದು ತಡವಾಗಬಹುದು.

ಇದನ್ನೂ ಓದಿ: ಭಾರತೀಯರು ಹೆಚ್ಚು ಹಾಟ್ ಡ್ರಿಂಕ್ಸ್ ಕುಡಿಯೋದು ಯಾಕೆ ಗೊತ್ತಾ? ಲಿಕ್ಕರ್ ಉದ್ಯಮದವರು ಹೇಳೋದಿದು

ಎಫ್​ಟಿಎಯಿಂದ ಭಾರತದ ಐಟಿ, ಎಲೆಕ್ಟ್ರಿಕಲ್ ಮತ್ತು ಉಡುಪು ಉದ್ಯಮಕ್ಕೆ ಲಾಭ ಇದೆ. ಬ್ರಿಟನ್​ನಿಂದ ಕಡಿಮೆ ಬೆಲೆಗೆ ಮದ್ಯ ಸರಬರಾಜು ಆಗಬಹುದಾದ್ದರಿಂದ ಭಾರತದ ಲಿಕ್ಕರ್ ಉದ್ಯಮ ಹೆಚ್ಚು ಪೈಪೋಟಿ ಎದುರಿಸಬೇಕಾಗಬಹುದು.

ವೀಸಾ ನಿಯಮದಲ್ಲಿ ಬದಲಾವಣೆ ಆಗುತ್ತಾ?

ಬ್ರಿಟನ್ ದೇಶದಲ್ಲಿ ಐಟಿ ಮತ್ತು ಫೈನಾನ್ಸ್ ಸೆಕ್ಟರ್​ನಲ್ಲಿ ಕೆಲಸಕ್ಕೆ ಹೋಗಬಯಸುವ ಭಾರತೀಯರಿಗೆ ಯಂಗ್ ಪ್ರೊಫೆಷನಲ್ಸ್ ಸ್ಕೀಮ್ ಇದೆ. ಈ ಸ್ಕೀಮ್​ನ ಕೆಲ ಕಠಿಣ ಷರುತ್ತುಗಳಲ್ಲಿ ಸಡಿಲಿಕೆ ಆಗಬೇಕು. ಬ್ರಿಟನ್​ಗೆ ಹೋದ ಬಳಿಕ ಅಲ್ಲಿ ಕೆಲಸ ಬದಲಿಸುವ ಪ್ರಕ್ರಿಯೆಯೂ ಕೂಡ ಸರಳಗೊಳ್ಳಬೇಕು ಎಂದು ಭಾರತ ಸರ್ಕಾರ ಕೆಲ ವರ್ಷಗಳಿಂದಲೂ ಮನವಿ ಮಾಡುತ್ತಿದೆ. ಇದಕ್ಕೆ ಬ್ರಿಟನ್ ಸರ್ಕಾರ ಬಹುತೇಕ ಒಪ್ಪಿಕೊಂಡಿತ್ತು. ಈಗ ಸರ್ಕಾರವೇ ಬದಲಾಗಿ ಹೋಗಿದೆ. ಈ ವಿಚಾರದ ಬಗ್ಗೆ ಸರ್ಕಾರದ ನಿಲುವು ಬದಲಾಗುತ್ತದಾ ನೋಡಬೇಕು.

ಇದನ್ನೂ ಓದಿ: ಕೀರ್ ಸ್ಟಾರ್ಮರ್‌ ಗೆಲುವಿಗೆ ನರೇಂದ್ರ ಮೋದಿ ಅಭಿನಂದನೆ; ರಿಷಿ ಸುನಕ್‌ಗೆ ಥ್ಯಾಂಕ್ಸ್​ ಎಂದ ಪ್ರಧಾನಿ

ಕಾರ್ಬನ್ ಟ್ಯಾಕ್ಸ್

ಬ್ರಿಟನ್ ದೇಶಕ್ಕೆ ಭಾರತ ಮಾಡುವ ರಫ್ತಿಗೆ ಹೆಚ್ಚು ಕಾರ್ಬನ್ ಟ್ಯಾಕ್ಸ್ ವಿಧಿಸಲಾಗುತ್ತಿದೆ. ಯೂರೋಪಿಯನ್ ಯೂನಿಯನ್ ರೀತಿಯಲ್ಲಿ ತೆರಿಗೆ ಹೇರಿಕೆ ಮಾಡುತ್ತಿದೆ. ಇದರ ಪ್ರಮಾಣ ಕಡಿಮೆ ಮಾಡುವಂತೆ ಭಾರತ ಸರ್ಕಾರ ಮನವಿ ಮಾಡುತ್ತಿದೆ. ಲೇಬರ್ ಪಾರ್ಟಿ ನೇತೃತ್ವದ ಹೊಸ ಸರ್ಕಾರದ ನೀತಿ ಹೇಗಿರುತ್ತೆ ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!