Sovereign Gold Bond: ಸವರನ್ ಗೋಲ್ಡ್​ ಬಾಂಡ್​ ಮಾರಾಟ ಮಾಡಿ 2015-16ರಿಂದ ಈವರೆಗೆ 31,290 ಕೋಟಿ ರೂ. ಸಂಗ್ರಹ

2015-16ರಿಂದ ಆರಂಭವಾಗಿ ಇಲ್ಲಿಯ ತನಕ ಸವರನ್ ಗೋಲ್ಡ್ ವಿತರಣೆ ಮೂಲಕ ಕೇಂದ್ರ ಸರ್ಕಾರವು 31200 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

Sovereign Gold Bond: ಸವರನ್ ಗೋಲ್ಡ್​ ಬಾಂಡ್​ ಮಾರಾಟ ಮಾಡಿ 2015-16ರಿಂದ ಈವರೆಗೆ 31,290 ಕೋಟಿ ರೂ. ಸಂಗ್ರಹ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Aug 09, 2021 | 7:12 PM

2015ರಿಂದ ಆರಂಭವಾದ ಮೇಲೆ ಸವರನ್ ಗೋಲ್ಡ್ ಬಾಂಡ್ (Sovereign Gold Bond) ವಿತರಣೆಯಿಂದ 31,290 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರವು 31,290 ಕೋಟಿ ರೂಪಾಯಿ ಸಂಗ್ರಹ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್​ನಲ್ಲಿ ಮಾಹಿತಿ ನೀಡಿದ್ದಾರೆ. ಭೌತಿಕವಾದ ಚಿನ್ನ ಖರೀದಿ/ಶೇಖರಣೆ ಬದಲಿಗೆ ಹಾಗೂ ಪರ್ಯಾಯ ಆರ್ಥಿಕ ಆಸ್ತಿ ಸೃಷ್ಟಿಗಾಗಿ ಭಾರತ ಸರ್ಕಾರದಿಂದ ಸವರನ್ ಗೋಲ್ಡ್ ಬಾಂಡ್ ಸ್ಕೀಮ್ ಅಧಿಸೂಚನೆಯನ್ನು ನವೆಂಬರ್ 5, 2015ರಲ್ಲಿ ಹೊರಡಿಸಲಾಯಿತು ಎಂದು ಹಣಕಾಸು ಸಚಿವೆ ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. 2015-16ರಿಂದ ಇಲ್ಲಿಯ ತನಕ ಸವರನ್ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ಸಾರ್ವಜನಿಕರಿಂದ 31,290 ಕೋಟಿ ರೂಪಾಯಿ ಸಂಗ್ರಹ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಯೋಜನೆ ಲಕ್ಷಣಗಳ ಬಗ್ಗೆ ವಿವರಿಸಿದ ನಿರ್ಮಲಾ ಸೀತಾರಾಮನ್, ಭಾರತದ ರೂಪಾಯಿ ಲೆಕ್ಕದಲ್ಲಿ ಪಾವತಿ ಮಾಡಿದಲ್ಲಿ ಈ ಬಾಂಡ್​ಗಳನ್ನು ವಿತರಿಸಲಾಗುತ್ತದೆ. ಚಿನ್ನವನ್ನು ಗ್ರಾಮ್​ ಲೆಕ್ಕದಲ್ಲಿ ನೀಡಲಾಗುತ್ತದೆ. ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತರಣೆ ಮಾಡುತ್ತಿದ್ದು, ಸವರನ್ ಗ್ಯಾರಂಟಿ ಇದೆ. “ಬಾಂಡ್​ಗಳನ್ನು ಭಾರತದಲ್ಲಿ ಇರುವ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡಬೇಕು ಎಂಬ ನಿರ್ಬಂಧ ಇದೆ. ಒಂದು ಹಣಕಾಸು ವರ್ಷಕ್ಕೆ ಹೂಡಿಕೆ ಮಿತಿ ವಯಕ್ತಿಕ ಹಾಗೂ ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೇಜಿ ಇದೆ. ಟ್ರಸ್ಟ್ ಹಾಗೂ ಆ ರೀತಿಯ ಸಂಸ್ಥೆಗಳಿಗೆ ಒಂದು ವರ್ಷಕ್ಕೆ 20 ಕೇಜಿ ಗರಿಷ್ಠ ಮಿತಿ ಇದೆ. ಆರ್ಥಿಕ ವರ್ಷದ ಆಧಾರದಲ್ಲಿ (ಏಪ್ರಿಲ್​ನಿಂದ ಮಾರ್ಚ್​ ತನಕ) ಮಿತಿಯನ್ನು ಹಾಕಲಾಗುತ್ತದೆ. ಸೆಕೆಂಡರಿ ಮಾರ್ಕೆಟ್​ನಲ್ಲಿ ವಹಿವಾಟು ನಡೆಸುವಾಗ ಖರೀದಿ ಮಾಡಬಹುದು,” ಎಂದು ಅವರು ಹೇಳಿದ್ದಾರೆ.

ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಕೊಲ್ಯಾಟರಲ್ ಎಂದು ಇರಿಸಿಕೊಂಡಿರುವ ಹೋಲ್ಡಿಂಗ್ಸ್ ಅನ್ನು ಹೂಡಿಕೆ ಮೇಲಿನ ಮಿತಿಯು ಒಳಗೊಂಡಿರುವುದಿಲ್ಲ. ಇನ್ನು ಇವುಗಳ ಮೇಲೆ ಆರು ತಿಂಗಳಿಗೆ ಒಮ್ಮೆ ವಾರ್ಷಿಕ ಶೇ 2.5ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಅನ್ವಯ ಬಡ್ಡಿ ಮೇಲೆ ತೆರಿಗೆಯನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಸವರನ್ ಗೋಲ್ಡ್​ ಬಾಂಡ್​ ರಿಡಂಪ್ಷನ್​ನಿಂದ ಬರುವ ಕ್ಯಾಪಿಟಲ್ ಗೇಯ್ಸ್ನ್ ತೆರಿಗೆಗಳಿಂದ ವಯಕ್ತಿಕ ತೆರಿಗೆದಾರರಿಗೆ ವಿನಾಯಿತಿ ಇದೆ.

ಈ ಮಧ್ಯೆ ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2021-22 ಸಿರೀಸ್ V ಸಬ್​ಸ್ಕ್ರಿಪ್ಷನ್ ಸೋಮವಾರದಿಂದ ಶುರುವಾಗಿದೆ. ಆಗಸ್ಟ್ 13ರ ತನಕ ಇರುತ್ತದೆ. ವಿಲೇವಾರಿ ದಿನಾಂಕ ಆಗಸ್ಟ್ 17, 2021 ಇದೆ. ಸಬ್​ಸ್ಕ್ರಿಪ್ಷನ್ ಅವಧಿಯಲ್ಲಿ ಬಾಂಡ್ ವಿತರಣೆ ದರ ಪ್ರತಿ ಗ್ರಾಮ್​ಗೆ ರೂ. 4790 ನಿಗದಿ ಆಗಿದೆ.

ಇದನ್ನೂ ಓದಿ: Sovereign Gold Bonds V: ಸವರನ್ ಗೋಲ್ಡ್​ ಬಾಂಡ್​ V ಇಂದಿನಿಂದ ಸಬ್​ಸ್ಕ್ರಿಪ್ಷನ್; ಗ್ರಾಮ್​ಗೆ 4740 ರೂ. ನಿಗದಿ

(Central Government Collected Rs 31200 Crores Through Sovereign Gold Bond Issue Starting From 2015-16)

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ