Fuel Credit Cards: ಕ್ರೆಡಿಟ್​ ಕಾರ್ಡ್​ ಬಳಸಿ ಪುಕ್ಕಟೆ ಪೆಟ್ರೋಲ್- ಡೀಸೆಲ್ ಕೂಡ ಪಡೆಯೋದು ಹೇಗೆಂದು ಗೊತ್ತಾ?

ಫ್ಯುಯೆಲ್ ಕ್ರೆಡಿಟ್ ಕಾರ್ಡ್​ ಅನ್ನು ಅತ್ಯುತ್ತಮ ರೀತಿಯಲ್ಲಿ ಬಳಕೆ ಮಾಡುವುದು ಹೇಗೆ ಎಂಬುದರ ವಿವರ ಈ ಲೇಖನದಲ್ಲಿ ಇದೆ.

Fuel Credit Cards: ಕ್ರೆಡಿಟ್​ ಕಾರ್ಡ್​ ಬಳಸಿ ಪುಕ್ಕಟೆ ಪೆಟ್ರೋಲ್- ಡೀಸೆಲ್ ಕೂಡ ಪಡೆಯೋದು ಹೇಗೆಂದು ಗೊತ್ತಾ?
ಕ್ರೆಡಿಟ್ ಕಾರ್ಡ್ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Srinivas Mata

Updated on: Aug 09, 2021 | 5:02 PM

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್​ಗಳ ರಿವಾರ್ಡ್​ ಪಾಯಿಂಟ್ಸ್​ ಹಾಗೂ ಕ್ಯಾಶ್​ಬ್ಯಾಕ್​ಗಳು ಉತ್ತೇಜನ ನೀಡುವಂತಿವೆ. ಅದರಲ್ಲೂ ಪೆಟ್ರೋಲ್- ಡೀಸೆಲ್ ದರ ಲೀಟರ್​ಗೆ 100 ರೂಪಾಯಿಯ ಗಡಿ ದಾಟಿದ ಮೇಲಂತೂ ಫ್ಯುಯೆಲ್ ಕ್ರೆಡಿಟ್ ಕಾರ್ಡ್​ಗಳ ಸಹಾಯದಿಂದ ಪುಕ್ಕಟೆ ಇಂಧನ ಪಡೆಯುವ ಆಲೋಚನೆ ಸೂಪರ್ ಎನಿಸುತ್ತದೆ. ಇದು ನಿಜವಾಗಲೂ ಸಾಧ್ಯವಾ ಎನಿಸುತ್ತಿದೆಯಾ? ತಾಂತ್ರಿಕವಾಗಿ ಹೇಳಬೇಕೆಂದರೆ, ಹೌದು. ಆದರೆ ಆ ಬಗ್ಗೆ ಗೊತ್ತಿರಬೇಕು. ರಿವಾರ್ಡ್ ಪಾಯಿಂಟ್ಸ್​ಗಳನ್ನು ಹಾಗೂ ಕ್ಯಾಶ್​ಬ್ಯಾಕ್​ಗಳನ್ನು ವಿಮಾನ ಟಿಕೆಟ್​ಗಳು, ಗಿಫ್ಟ್​ ವೋಚರ್​ಗಳು ಅಥವಾ ಆಯ್ದ ಮಳಿಗೆಗಳಲ್ಲಿನ ರಿಯಾಯಿತಿಗೆ ಬಳಸಿಕೊಳ್ಳುತ್ತೀರಿ. ಆದರೆ ಈಗ ಹೇಳಲು ಹೊರಟಿರುವ ವಿಚಾರ ಅಂದುಕೊಂಡಷ್ಟು ಸಲೀಸಿಲ್ಲ. ಗಣಿತ ಲೆಕ್ಕಾಚಾರ ತಿಳಿಯುವುದು ಬಹಳ ಮುಖ್ಯ. ಉದಾಹರಣೆಯೊಂದನ್ನು ಕೇಳಿ: ಒಂದು ಪ್ರಾಜೆಕ್ಟ್​ನಲ್ಲಿ ಕ್ರೆಡಿಟ್ ಕಾರ್ಡ್ ಗ್ರಾಹಕರು ತಮ್ಮ ರಿವಾರ್ಡ್ ಪಾಯಿಂಟ್​ಗಳನ್ನು ಶೇಖರಣೆ ಮಾಡುತ್ತಾ ಹೋಗಿದ್ದರು. ಅವರಿಗೆ ಏನಿತ್ತು ಅಂದರೆ, ಒಂದು ಮಿಲಿಯನ್ ಪಾಯಿಂಟ್ಸ್ ರಿಡೀಮ್ ಮಾಡಿದರೆ ಸೂಪರ್ ಮಾಡೆಲ್​ ಜತೆಗೆ ಡಿನ್ನರ್ ಮೀಟಿಂಗ್ ಮಾಡಬಹುದು. ಸೂಪರ್ ಮಾಡೆಲ್​ನ ಒಬ್ಬರೇ ಭೇಟಿ ಅಗಬಹುದು ಎಂಬ ಭಾವನೆ ಅವರದು. ಆದರೆ ಅಷ್ಟು ಪಾಯಿಂಟ್ಸ್​ಗೆ ಕಾರ್ಡ್​ ಮೇಲೆ ಅವರು ಖರ್ಚು ಮಾಡಬೇಕಾಗಿದ್ದ ಮೊತ್ತವನ್ನು ಊಹೆ ಮಾಡುವುದಕ್ಕೂ ಸ್ವಲ್ಪ ಕಷ್ಟವೇ ಎನ್ನುತ್ತಾರೆ ಇದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ.

ಪ್ರತಿ ಕ್ರೆಡಿಟ್ ಕಾರ್ಡ್ ಕೂಡ ವಿಭಿನ್ನ. ಕೆಲವು ಕಾರ್ಡ್​ಗಳಿಗೆ ಪ್ರತಿ 100 ರೂಪಾಯಿ ಖರ್ಚು ಮಾಡಿದಲ್ಲಿ 1 ಪಾಯಿಂಟ್ ಬಂದರೆ, ಇನ್ನೂ ಕೆಲವಕ್ಕೆ 40 ರೂಪಾಯಿ ಖರ್ಚಿಗೆ 1 ಪಾಯಿಂಟ್ ಸಿಗುತ್ತದೆ. ಕೆಲವಕ್ಕೆ ವಾರ್ಷಿಕ ಶುಲ್ಕ ಇದ್ದರೆ, ಮತ್ತೆ ಕೆಲವಕ್ಕೆ ಇಲ್ಲ. ಅಥವಾ ಆ ಶುಲ್ಕ ಮನ್ನಾ ಆಗುವ ವ್ಯವಸ್ಥೆ ಇರುತ್ತದೆ. ಕೆಲವು ಕಾರ್ಡ್​ಗಳನ್ನು ಅದರ ಕೋ ಬ್ರ್ಯಾಂಡ್ ಫ್ಯುಯೆಲ್ ಸ್ಟೇಷನ್​ಗಳಲ್ಲೇ ಬಳಸಬೇಕು ಮತ್ತು ಕೆಲವು ಕಾರ್ಡ್​ಗಳನ್ನು ಎಲ್ಲೆಡೆ ಬಳಸಬಹುದು. ಇನ್ನು ನಿರ್ದಿಷ್ಟ ಮೊತ್ತದ ಖರೀದಿ ಮಾಡಿದ ನಂತರವಷ್ಟೇ ರಿವಾರ್ಡ್ ಪಾಯಿಂಟ್ಸ್ ಪಡೆಯಲು ಸಾಧ್ಯವಿರುತ್ತದೆ. ಆದ್ದರಿಂದ ಈ ಲೆಕ್ಕಾಚಾರ ಮಾಡಿಕೊಳ್ಳಬೇಕು. ಫ್ಯುಯೆಲ್ ಕಾರ್ಡ್​ಗಳು ಅನುಕೂಲ ಆಗಬಹುದಾದ್ದು ಯಾವಾಗೆಂದರೆ, ಒಂದು ನಿರ್ದಿಷ್ಟ ಜಾಲದ ಪೆಟ್ರೋಲ್​ ಪಂಪ್​ಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾಗ. ಉದಾಹರಣೆಗೆ, ಎಚ್​ಪಿಸಿಎಲ್​, ಬಿಪಿಸಿಎಲ್​ ಮುಂತಾದವು. ಗರಿಷ್ಠ ಮಟ್ಟದ ಅನುಕೂಲ ಬೇಕು ಅಂತಾದರೆ ಪದೇ ಪದೇ ಅದೇ ಜಾಲದಲ್ಲಿನ ಪೆಟ್ರೋಲ್​ ಪಂಪ್​ನಲ್ಲೇ ಇಂಧನ ತುಂಬಿಸಿರಬೇಕು.

ಕಾರ್ಡ್​ಗಳಿಂದ ಪೂರ್ತಿ ಅನುಕೂಲ ಪಡೆಯಬೇಕು ಅಂದಾಗ ಇಂಧನ ಖರೀದಿ ಆಯ್ಕೆ ಬಗ್ಗೆಯೂ ಯೋಜನೆ ಹಾಕಿಕೊಳ್ಳುವುದು ಮುಖ್ಯ. ಇದೇ ಸಂದರ್ಭದಲ್ಲಿ ಇನ್ನೂ ಒಂದು ಮಾತು ತಿಳಿಸಬೇಕು. ಕಾರ್ಡ್​ಗಳ ಸೇರ್ಪಡೆ ಶುಲ್ಕ ಮತ್ತು ವಾರ್ಷಿಕ ಶುಲ್ಕದ ಲೆಕ್ಕಾಚಾರವನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಕೆಲವು ಕಾರ್ಡ್​ಗಳಿಗೆ ವರ್ಷಕ್ಕೆ 2ರಿಂದ 5 ಸಾವಿರ ರೂಪಾಯಿ ತನಕ ವಾರ್ಷಿಕ ಶುಲ್ಕ ಇದೆ. ಜತೆಗೆ ಷರತ್ತು ಸಹ ಇರುತ್ತದೆ. ಒಂದು ವೇಳೆ 1 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಕ್ರೆಡಿಟ್ ಕಾರ್ಡ್​ ಮೂಲಕ ಖರ್ಚು ಮಾಡಿದಲ್ಲಿ ಮಾತ್ರ ಅದು ರೀಎಂಬರ್ಸ್ ಆಗುತ್ತದೆ. ಅಷ್ಟು ಮೊತ್ತವನ್ನು ಕ್ರೆಡಿಟ್​ ಕಾರ್ಡ್ ಮೂಲಕ ಬಳಸುವಂತಿದ್ದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಫ್ಯುಯೆಲ್ ಕ್ರೆಡಿಟ್​ ಕಾರ್ಡ್​ಗಳನ್ನು ಪಡೆಯುವುದು ತಪ್ಪಲ್ಲ. ಆದರೆ ಅದನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತೀರಿ ಎಂಬುದು ಮುಖ್ಯ.

ಇದನ್ನೂ ಓದಿ: Credit score: ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಪಾವತಿಸಿದರೂ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆ ಆಗುತ್ತೆ?

ಇದನ್ನೂ ಓದಿ: LIC Credit Card: ಎಲ್​ಐಸಿ- ಐಡಿಬಿಐಯಿಂದ ಹೊಸದಾಗಿ ಎರಡು ಕ್ರೆಡಿಟ್​ ಕಾರ್ಡ್​ ಬಿಡುಗಡೆ; ಏನೆಲ್ಲ ಅನುಕೂಲ ಗೊತ್ತೆ?

(How To Make Best Use Of Fuel Credit Card Here Is An Explainer)

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ