Old Notes: ಹಳೇ ನೋಟುಗಳಿಗೆ ಭರ್ಜರಿ ಬೇಡಿಕೆ; ರೂಪಾಯಿ ನೋಟಿಗೂ ಸಾವಿರಗಟ್ಟಲೆ ಹಣ
ನಿಮ್ಮ ಬಳಿ ಹಳೇ 1 ರೂಪಾಯಿ ನೋಟಿನ ಬಂಡಲ್ ಇದೆಯಾ? ಹಾಗಿದ್ದಲ್ಲಿ ಈ ಸುದ್ದಿಯನ್ನು ಒಮ್ಮೆ ಗಮನ ಇಟ್ಟು ಓದಿ ನೋಡಿ. ಸಾವಿರಗಟ್ಟಲೆ ಹಣ ಗಳಿಸುವ ದಾರಿ ಕಾಣಿಸಲಿದೆ.
ದುಡ್ಡಿನ ವಿಚಾರ ಅಂತ ಬಂದಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಹಳೇ ನೋಟು- ನಾಣ್ಯಗಳನ್ನು ಸಂಗ್ರಹಿಸುವಂಥ ಹವ್ಯಾಸ ಇರುವವರು, ಅಪರೂಪದ ನೋಟು- ನಾಣ್ಯಗಳು ಇರುವಂಥವರಿಗೆ ತಮ್ಮ ಬಳಿ ಇರುವುದು ಅದೆಷ್ಟು ಅಮೂಲ್ಯವಾದದ್ದು ಎಂಬುದಂತೂ ಗೊತ್ತಿರಲೇಬೇಕು. ನಿಮಗೆ ಗೊತ್ತಾ? 1 ರೂಪಾಯಿ ನೋಟಿನ ಬಂಡಲ್ ಅನ್ನು 45 ಸಾವಿರ ರೂಪಾಯಿ ತನಕ ಮಾರಬಹುದು. ನಿಮ್ಮ ಬಳಿ 1 ರೂಪಾಯಿಯ ಹಳೇ ನೋಟಿನ ಬಂಡಲ್ ಇದ್ದಲ್ಲಿ ಆನ್ಲೈನ್ನಲ್ಲಿ ಮಾರಬಹುದು. ಒಂದು ರೂಪಾಯಿ ನೋಟಿನ ಬಂಡಲ್ 1957ರಲ್ಲಿ ಬಿಡುಗಡೆ ಆಗಿದ್ದು, ಕೇಂದ್ರದ ಮಾಜಿ ಹಣಕಾಸು ಸಚಿವರಾದ ಹೀರೂಭಾಯಿ ಎಂ. ಪಟೇಲ್ ಸಹಿ ಮಾಡಿದ್ದಾರೆ. ಅದರಲ್ಲಿ 123456 ಸಂಖ್ಯೆಗೆ ಭಾರೀ ಬೇಡಿಕೆ. ಕಾಯಿನ್ಬಜಾರ್ ಎಂಬ ವೆಬ್ಸೈಟ್ನಲ್ಲಿ ಈ ನೋಟು 44,999 ರೂಪಾಯಿಗೆ ಮಾರಾಟ ಆಗಿದೆ.
“ಸಂಗ್ರಹಕಾರರಿಗೆ ವಿಪರೀತ ಅಪರೂಪದ 1957ರ ಒಂದು ರೂಪಾಯಿ ಬಂಡಲ್ಗೆ ಎಚ್.ಎಂ. ಪಟೇಲ್ ಸಹಿ ಮಾಡಿದ ನೋಟು, 123456 ಸಂಖ್ಯೆಯ ಅಪರೂಪದ್ದು ಇದು,” ಎಂದು ವೆಬ್ಸೈಟ್ನ ಮಾಹಿತಿ ವಿವರದಲ್ಲಿ ಇದೆ. 1 ರೂಪಾಯಿ ನೋಟು ಬಂಡಲ್ನ ನೋಟು ಬೆಲೆ ರೂ. 49,999. ಆದರೆ ವೆಬ್ಸೈಟ್ನಿಂದ ರಿಯಾಯಿತಿ ನಂತರ ರೂ. 44,999ಕ್ಕೆ ಮಾರಾಟ ಆಗುತ್ತಿದೆ. ಕಾಯಿನ್ಬಜಾರ್ ವೆಬ್ಸೈಟ್ಗೆ ತೆರಳಿ, ಶಾಪ್ ವಿಭಾಗಕ್ಕೆ ಹೋಗಬೇಕು. ಅಲ್ಲಿ “ನೋಟ್ ಬಂಡಲ್” ಕೆಟಗಿರಿಯಲ್ಲಿ ಎಲ್ಲ ಮಾಹಿತಿ ಸಿಗುತ್ತದೆ.
ಇಲ್ಲಿ ಹಳೇ 50 ರೂಪಾಯಿ ನೋಟನ್ನು ರೂ. 8200, ರೂ. 10 ಹಾಗೂ 5 ಅನ್ನು ರೂ. 2999ಕ್ಕೆ, ರೂ. 2ಕ್ಕೆ 4999 ಮತ್ತು 100 ರೂಪಾಯಿಗೆ ಖರೀದಿ ಮಾಡಬಹುದು. ನಿಮ್ಮ ಬಳಿ ಇರುವುದನ್ನೂ ವೆಬ್ಸೈಟ್ನಲ್ಲಿ ಮಾರಾಟ ಮಾಡಿ, ಹಣ ಗಳಿಸಬಹುದು. ಅದಕ್ಕಾಗಿ ಕಾಯಿನ್ಬಜಾರ್ ವೆಬ್ಸೈಟ್ಗೆ ಹೋಗಬೇಕು. ಅಲ್ಲಿ “Start Selling With Us” ವಿಭಾಗಕ್ಕೆ ತೆರಳಬೇಕು. ಇದರಲ್ಲಿ ಯೂಸರ್ ನೇಮ್, ಇ-ಮೇಲ್, ವೆರಿಫಿಕೇಷನ್ ಕೋಡ್, ಮೊದಲ ಹೆಸರು, ಕೊನೆ ಹೆಸರು, ಮಳಿಗೆ ಹೆಸರು, ವಿಳಾಸ 1, ವಿಳಾಸ 2, ದೇಶ, ನಗರ ಅಥವಾ ಪಟ್ಟಣ, ರಾಜ್ಯ, ಪಿನ್ಕೋಡ್ ಮತ್ತು ಇತರ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಇದನ್ನೂ ಓದಿ: ನಿಮ್ಮ ಬಳಿ ಇರುವ 1 ರೂಪಾಯಿಯ ಹಳೆ ನೋಟು ಸಹ ಲಕ್ಷ ಲಕ್ಷ ಗಳಿಸಿಕೊಡಬಹುದು; ಖರ್ಚು ಮಾಡೋ ಮುಂಚೆ ಈ ಲೇಖನ ಓದಿ
(If You Have Old Rs 1 Bundle Can Earn Thousands Of Rupees For That)