Sign In

By signing in or creating an account, you agree with Associated Broadcasting Company's Terms & Conditions and Privacy Policy.

DA Hike: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳದ ಬಗ್ಗೆ ಮುಂದಿನ ವಾರ ನಿರ್ಧಾರ ಸಾಧ್ಯತೆ

ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳ ಮಾಡುವ ಬಗ್ಗೆ ಮುಂದಿನ ವಾರ ಕೇಂದ್ರದಿಂದ ನಿರ್ಧಾರ ಮಾಡುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

DA Hike: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳದ ಬಗ್ಗೆ ಮುಂದಿನ ವಾರ ನಿರ್ಧಾರ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 11, 2022 | 5:51 PM

ಕೇಂದ್ರ ಸರ್ಕಾರಿ ನೌಕರರಿಗೆ ಈ ತಿಂಗಳು ತುಟ್ಟಿ ಭತ್ಯೆ ಅಥವಾ ಡಿಎ (DA) ಹೆಚ್ಚಳ ಮಾಡುವ ಸಾಧ್ಯತೆ ಇದೆ. ತೈಲ, ಎಣ್ಣೆ ದರಗಳ ಸತತ ಏರಿಕೆಯಿಂದ ಹೊರಬರುವುದಕ್ಕೆ ಈ ಬೆಳವಣಿಗೆಯು ಸ್ವಲ್ಪ ಮಟ್ಟಿಗೆ ಸಹಾಯ ಮಾಡಬಹುದು. ಮಾರ್ಚ್ 16ನೇ ತಾರೀಕಿನಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಡಿಎ ಹಾಗೂ ಡಿಆರ್​ (ಡಿಯರ್​ನೆಸ್​ ರಿಲೀಫ್​) ಬಗ್ಗೆ ಚರ್ಚೆ ನಡೆಸಬಹುದು ಎಂದು ವಿವಿಧ ಮಾಧ್ಯಮ ವರದಿಗಳು ತಿಳಿಸಿವೆ. 2021ರ ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರವು ಆ ವರೆಗೆ ಇದ್ದ ಶೇ 17ರ ಡಿಎ ಮತ್ತು ಡಿಆರ್​ ಅನ್ನು ಶೇ 28ಕ್ಕೆ ಹೆಚ್ಚಳ ಮಾಡಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಹತ್ತಿರಹತ್ತಿರ ಒಂದೂವರೆ ವರ್ಷ ಡಿಎ ಏರಿಕೆಯನ್ನು ನಿಲ್ಲಿಸಿತ್ತು. 2021ರ ಅಕ್ಟೋಬರ್​ನಲ್ಲಿ ಮತ್ತೊಮ್ಮೆ ಶೇ 3ರಷ್ಟು ಹೆಚ್ಚಳ ಮಾಡಿ, ಕೇಂದ್ರ ಸರ್ಕಾರಿ ನೌಕರರ ಡಿಎ ಶೇ 31ಕ್ಕೆ ತಲುಪಿತು. ಕೇಂದ್ರ ಸರ್ಕಾರಿ ನೌಕರರಿಗೆ ಪರಿಷ್ಕೃತ ಡಿಎ 2021ರ ಜುಲೈನಿಂದ ಜಾರಿಗೆ ಬಂದಿತು. ಆದೇ ಸಮಯಕ್ಕೆ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಯರ್​ನೆಸ್ ರಿಲೀಫ್ ಶೇ 31ಕ್ಕೆ ಏರಿತು.

ಡಿಎ ಹೆಚ್ಚಳ ಅಂದರೆ ಈ ಬಾರಿ ಏನನ್ನು ನಿರೀಕ್ಷಿಸಬಹುದು? ಈಗಿನ ವರದಿಯಂತೆ, ಕೇಂದ್ರ ಸರ್ಕಾರದಿಂದ ಶೇ 3ರಷ್ಟು ಡಿಎ ಹೆಚ್ಚಳ ಮಾಡಬಹುದು. ಈಗಿನ ಹೊಸ ಹೆಚ್ಚಳದಿಂದ ಮೂಲ ವೇತನದ ಶೇ 34ರಷ್ಟು ಆಗುತ್ತದದೆ ಡಿಎ. ಈ ನಿರ್ಧಾರದಿಂದ 50 ಲಕ್ಷದಷ್ಟು ಸರ್ಕಾರಿ ನೌಕರರಿಗೆ ಮತ್ತು 65 ಲಕ್ಷ ಪಿಂಚಣಿದಾರರಿಗೆ ಅನುಕೂಲ ಆಗಲಿದೆ.

ಡಿಎ ಲೆಕ್ಕಾಚಾರ ಹೇಗೆ? ಡಿಎ ಎಂಬುದು ಸರ್ಕಾರ ನೌಕರರ ವೇತನ ಹಾಗೂ ಪೆನ್ಷನ್​ದಾರರ ಪಿಂಚಣಿಯ ಭಾಗ. ಹಣದುಬ್ಬರದ ಪರಿಣಾಮವನ್ನು ಎದುರಿಸಲು ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಇದನ್ನು ನೀಡಲಾಗುತ್ತದೆ. ನಿಯಮಿತವಾಗಿ ಡಿಎ ಹೆಚ್ಚಳವನ್ನು ಮಾಡಲಾಗುತ್ತದೆ. ವರ್ಷದಲ್ಲಿ ಎರಡುಬಾರಿ- ಜನವರಿ ಹಾಗೂ ಜುಲೈನಲ್ಲಿ ಪರಿಷ್ಕರಣೆ ಆಗುತ್ತದೆ. ಉದ್ಯೋಗಿಗಳು ನಗರ ಪ್ರದೇಶದಲ್ಲಿ ಅಥವಾ ಅರೆಪಟ್ಟಣ ಅಥವಾ ಗ್ರಾಮೀಣ ಪ್ರದೇಶದಲ್ಲಿ ಎಲ್ಲಿ ಕೆಲಸ ಮಾಡುತ್ತಾರೆ ಎಂಬುದರ ಆಧಾರದಲ್ಲಿ, ಜೀವನ ನಿರ್ವಹಣೆ ವೆಚ್ಚದ ಮೇಲೆ ಡಿಎ ಬದಲಾವಣೆ ಆಗುತ್ತದೆ. 2006ರಲ್ಲಿ ಕೇಂದ್ರ ಸರ್ಕಾರವು ನೌಕರರಿಗೆ ಮತ್ತು ಪಿಂಚಣಿದಾರರಿಗೆ ಡಿಎ ಲೆಕ್ಕಾಚಾರ ಹಾಕಲು ಫಾರ್ಮುಲಾ ಬದಲಾವಣೆ ಮಾಡಿತು.

ಅದು ಹೀಗಿದೆ: ತುಟ್ಟಿ ಭತ್ಯೆ %= (ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕ (ಮೂಲ ವರ್ಷ 2001= 100) ಕಳೆದ ಮೂರು ತಿಂಗಳಿಗೆ- 126.33)/126.33)*100

ಇದೀಗ, ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕ, ಕೇಂದ್ರ ಸರ್ಕಾರಿ ನೌಕರರು ತಮ್ಮ ತುಟ್ಟಿ ಭತ್ಯೆಯಲ್ಲಿ ಶೇ 3ರಷ್ಟು ಏರಿಕೆಯನ್ನು ಎದುರು ನೋಡುತ್ತಿದ್ದಾರೆ.

ಡಿಯರ್​ನೆಸ್ ಅಲೋವೆನ್ಸ್ ಹೆಚ್ಚಳ: ಎಷ್ಟು ವೇತನ ಜಾಸ್ತಿ ಆಗುತ್ತದೆ? ತಿಂಗಳಿಗೆ 18 ಸಾವಿರ ರೂಪಾಯಿ ವೇತನ ಪಡೆಯು ಕೇಂಸ್ರ ಸರ್ಕಾರಿ ನೌಕರರಿಗೆ ಶೇ 3ರಷ್ಟು ಟೇಕ್​ ಹೋಮ್ ಸ್ಯಾಲರಿ ಹೆಚ್ಚಳ ಆಗುತ್ತದೆ. 34ರಷ್ಟು ಡಿಎ ಜತೆಗೆ ವೇತನವು 6,120 ರೂಪಾಯಿ ಹೆಚ್ಚಾಗುತ್ತದೆ. ಡಿಎ ಎಂಬುದು ಬೇಸಿಕ್ ಸ್ಯಾಲರಿಗೆ ಜೋಡಣೆ ಆಗಿರುತ್ತದೆ. ಡಿಎ ಹೆಚ್ಚಳ ಆದಲ್ಲಿ ತಿಂಗಳ ಪಿಎಫ್​, ಗ್ರಾಚ್ಯುಟಿ ಕೂಡ ಹೆಚ್ಚಾಗುತ್ತದೆ. ಆದ್ದರಿಂದ ಪಿಎಫ್​, ಟ್ರಾವೆಲ್​ ಅಲೋವೆನ್ಸ್ ಮತ್ತು ಗ್ರಾಚ್ಯುಟಿ ಹೆಚ್ಚಾಗುತ್ತದೆ. ಇದು ನೌಕರರು ಹಾಗೂ ಪಿಂಚಣಿದಾರರಿಗೆ ಅನ್ವಯಿಸುತ್ತದೆ.

ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರ ಎಕ್ಸ್​ಗ್ರೇಷಿಯಾ ಇಡಿಗಂಟು ಪಾವತಿಯಲ್ಲಿ ಭಾರೀ ಬದಲಾವಣೆ

ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ