ಡಿಎ ಮತ್ತು ಡಿಆರ್ ಶೇ. 3 ಹೆಚ್ಚಳ ಸಾಧ್ಯತೆ; ಸಂಬಳ ಏರಿಕೆ ಎಷ್ಟಾಗಬಹುದು?
3% DA hike likely: ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಜುಲೈನ ಡಿಎ ಮತ್ತು ಡಿಆರ್ ಏರಿಕೆಯನ್ನು ಸದ್ಯದಲ್ಲೇ ಪ್ರಕಟಿಸಬಹುದು. ವರದಿಗಳ ಪ್ರಕಾರ ಈ ಬಾರಿ ಶೇ. 3ರಷ್ಟು ಡಿಎ ಮತ್ತು ಡಿಆರ್ ಹೆಚ್ಚಬಹುದು. ಡಿಎ ಅಥವಾ ಡಿಯರ್ನೆಸ್ ಅಲೋಯನ್ಸ್ ಅನ್ನು ಉದ್ಯೋಗಿಗಳಿಗೆ ನೀಡಲಾಗುತ್ತದೆ. ಡಿಆರ್ ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ.

ನವದೆಹಲಿ, ಸೆಪ್ಟೆಂಬರ್ 7: ಎಂಟನೇ ವೇತನ ಆಯೋಗದ ರಚನೆಗೆ ನಿರೀಕ್ಷಿಸುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಮತ್ತೊಂದು ಸುತ್ತಿನ ತುಟ್ಟಿಭತ್ಯೆ (DA- Dearness Allowance) ಮತ್ತು ತುಟ್ಟಿಪರಿಹಾರದ (DR- Dearness Relief) ಏರಿಕೆ ಆಗುತ್ತಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3ರಷ್ಟು ಡಿಎ ಹೆಚ್ಚಬಹುದು. ಪಿಂಚಣಿದಾರರಿಗೂ ಡಿಆರ್ ಶೇ. 3ರಷ್ಟು ಹೆಚ್ಚಬಹುದು. ದೀಪಾವಳಿ ಹಬ್ಬಕ್ಕೆ ಕೇಂದ್ರದಿಂದ ಉಡುಗೊರೆ ಯಾವಾಗ ಬೇಕಾದರೂ ಪ್ರಕಟವಾಗಬಹುದು.
ದೇಶಾದ್ಯಂತ ಕೇಂದ್ರ ಸರ್ಕಾರದ ಅಡಿಯಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ಉದ್ಯೋಗಿಗಳು ಮತ್ತು ಪಿಂಚಣಿದಾರರಿದ್ದಾರೆ. ಇವರಿಗೆ ಸದ್ಯ ಡಿಎ ಮತ್ತು ಡಿಆರ್ ಶೇ. 55ರಷ್ಟಿದೆ. ಈ ಬಾರಿ ಇದು ಶೇ. 58ಕ್ಕೆ ಏರುವ ಸಾಧ್ಯತೆ ಇದೆ.
ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರವನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಜನವರಿ ಹಾಗು ಜುಲೈನಲ್ಲಿ ಇವು ಜಾರಿಗೆ ಬರುತ್ತವೆ. ರಾಷ್ಟ್ರವ್ಯಾಪಿ ಹಣದುಬ್ಬರಕ್ಕೆ ಅನುಗುಣವಾಗಿ ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲಾಗುತ್ತದೆ. ಈ ಟ್ರೆಂಡ್ ಪ್ರಕಾರ, 2025ರ ಜುಲೈಗೆ ಡಿಎ ಏರಿಕೆ ಶೇ. 3-4ರಷ್ಟಿರಬಹುದು. ಈಗ ಇದು ಪ್ರಕಟವಾದರೂ ಏರಿಕೆಯು ಜುಲೈನಿಂದಲೇ ಅನ್ವಯ ಆಗುತ್ತದೆ.
ಇದನ್ನೂ ಓದಿ: ಐಟಿ ರಿಟರ್ಸ್ ಸಲ್ಲಿಕೆಗೆ ಸೆ. 15 ಡೆಡ್ಲೈನ್; ಈ ವಿಷಯಗಳು ತಿಳಿದಿರಲಿ
ಈಗ ಸೆಪ್ಟೆಂಬರ್ನಲ್ಲಿ ಡಿಎ ಹೆಚ್ಚಳ ಪ್ರಕಟಿಸಿದರೆ, ಅಕ್ಟೋಬರ್ನಲ್ಲಿ ಬರುವ ಸಂಬಳದಲ್ಲಿ ಜುಲೈನಿಂದ ಆರಂಭಿಸಿ ಮೂರು ತಿಂಗಳ ಅರಿಯರ್ಸ್ ಸಮೇತ ಸಂಬಳ ಬಿಡುಗಡೆ ಆಗುತ್ತದೆ.
ಡಿಎ ಹೆಚ್ಚಳದ ಲೆಕ್ಕಾಚಾರ
ಕಾರ್ಮಿಕ ಸಚಿವಾಲಯವು ಪ್ರತೀ ತಿಂಗಳು ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ ಬಿಡುಗಡೆ ಮಾಡುತ್ತದೆ. ಇದರ ಆಧಾರವಾಗಿ ಡಿಎ ಎಷ್ಟು ಹೆಚ್ಚಿಸಬೇಕು ಎಂದು ಲೆಕ್ಕ ಮಾಡಲಾಗುತ್ತದೆ. ಕಳೆದ 12 ತಿಂಗಳ ಸರಾಸರಿ ದತ್ತಾಂಶವನ್ನು ಏಳನೇ ವೇತನ ಆಯೋಗ ನೀಡಿದ ಸೂತ್ರ ಬಳಸಿ ಡಿಎ ಏರಿಕೆ ಎಷ್ಟೆಂದು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: ವಯಸ್ಸಾದವರಿಗೆ ಶೇ. 8.5ರವರೆಗೆ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್; ಇಲ್ಲಿವೆ ವಿವಿಧ ಬ್ಯಾಂಕುಗಳ ಎಫ್ಡಿ ದರಗಳು
ಒಂದು ವೇಳೆ ಶೇ. 3ರಷ್ಟು ಡಿಎ ಏರಿಕೆ ಮಾಡಲಾಯಿತು ಭಾವಿಸೋಣ. ಆಗ 18,000 ಮೂಲ ವೇತನ ಇರುವ ಉದ್ಯೋಗಿಯ ಸಂಬಳ 540 ರೂನಷ್ಟು ಏರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




