ಐಟಿ ರಿಟರ್ಸ್ ಸಲ್ಲಿಕೆಗೆ ಸೆ. 15 ಡೆಡ್ಲೈನ್; ಈ ವಿಷಯಗಳು ತಿಳಿದಿರಲಿ
Income tax updates: ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸೆಪ್ಟೆಂಬರ್ 15ರವರೆಗೆ ಕಾಲಾವಕಾಶ ಇದೆ. ಈ ಡೆಡ್ಲೈನ್ನೊಳಗ ಐಟಿಆರ್ ಸಲ್ಲಿಸುವುದು ಅಗತ್ಯ. ಒಂದು ವೇಳೆ ವಿಳಂಬ ಮಾಡಿದರೆ ಲೇಟ್ ಫೀ ಹಾಗೂ ಬಡ್ಡಿ ತೆರಬೇಕಾಗುತ್ತದೆ. ನೀವು ಕಳೆದ ಹಣಕಾಸು ವರ್ಷದಲ್ಲಿ ಹೆಚ್ಚಿನ ತೆರಿಗೆ ಪಾವತಿಸಿದ್ದರೆ ಅದರ ರೀಇಂಬರ್ಸ್ಮೆಂಟ್ ಪಡೆಯಲು ಐಟಿಆರ್ ಸಲ್ಲಿಸುವುದು ಅಗತ್ಯ.

ನವದೆಹಲಿ, ಸೆಪ್ಟೆಂಬರ್ 7: ಇನ್ಕಮ್ ಟ್ಯಾಕ್ಸ್ (Income Tax) ಪಾವತಿಸುವುದು ಪ್ರತಿಯೊಬ್ಬ ವ್ಯಕ್ತಿಗೂ ಇರುವ ಪ್ರಮುಖ ಕರ್ತವ್ಯಗಳಲ್ಲಿ ಒಂದು. ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ಆದಾಯ ಗಳಿಸುವ ಪ್ರತಿಯೊಬ್ಬರೂ ಕೂಡ ಐಟಿ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯ. ಈ ವರ್ಷ ಬೇರೆ ಬೇರೆ ಕಾರಣಕ್ಕೆ ಐಟಿಆರ್ ಸಲ್ಲಿಕೆಗೆ ಡೆಡ್ಲೈನ್ ಅನ್ನು ಜುಲೈ 31ರ ಬದಲು ಸೆಪ್ಟೆಂಬರ್ 15ಕ್ಕೆ ನಿಗದಿ ಮಾಡಲಾಗಿದೆ. ಈ ಡೆಡ್ಲೈನ್ ಕೂಡ ಸಮೀಪಿಸುತ್ತಿದ್ದು, ಒಂದು ವಾರ ಮಾತ್ರವೇ ಬಾಕಿ ಇದೆ.
ಈ ಕಾಲಮಿತಿಯೊಳಗೆ ಐಟಿಆರ್ ಸಲ್ಲಿಸದಿದ್ದರೆ ದಂಡ, ಬಡ್ಡಿ ಇತ್ಯಾದಿಯನ್ನು ತೆರಬೇಕಾಗುತ್ತದೆ. ಅಕೌಂಟ್ಗಳ ಆಡಿಟಿಂಗ್ ಅವಶ್ಯಕತೆ ಇರುವವರಿಗೆ ಬೇರೆ ಕಾಲಾವಕಾಶ ಇದೆ. ಉಳಿದವರಿಗೆ ಸೆ. 15 ಡೆಡ್ಲೈನ್ ಇದೆ. ನೀವಿನ್ನೂ ಐಟಿ ರಿಟರ್ನ್ಸ್ ಫೈಲ್ ಮಾಡಿರದೇ ಹೋದರೆ ತಪ್ಪದೇ ಮಾಡಿ. ಫೈಲಿಂಗ್ ಮಾಡುವ ಪ್ರಕ್ರಿಯೆ ವರ್ಷದಿಂದ ವರ್ಷಕ್ಕೆ ಸರಳಗೊಳ್ಳುತ್ತಲೇ ಇದೆ. ಐಟಿಆರ್ ಫಾರ್ಮ್ಗಳನ್ನು ಭರ್ತಿ ಮಾಡುವುದು ಬಹಳ ಸುಲಭ. ನೀವೇ ಸ್ವತಃ ರಿಟರ್ನ್ ಫೈಲ್ ಮಾಡಬಹುದು.
ಯಾವ ವರ್ಷಕ್ಕೆ ಆದಾಯ ತೆರಿಗೆ?
ಈ ವರ್ಷ ನೀವು ಐಟಿಆರ್ ಸಲ್ಲಿಸುವುದು 2024-25ರ ವರ್ಷಕ್ಕೆ. ಆ ಹಣಕಾಸು ವರ್ಷದಲ್ಲಿ, ಅಂದರೆ, 2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರವರೆಗೆ ನೀವು ಎಲ್ಲಾ ಮೂಲಗಳಿಂದ ಗಳಿಸಿರುವ ಆದಾಯಗಳ ಮಾಹಿತಿಯನ್ನು ನಿಗದಿತ ಫಾರ್ಮ್ಗಳಲ್ಲಿ ಭರ್ತಿ ಮಾಡಬೇಕು.
ಇದನ್ನೂ ಓದಿ: ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಬೇಸಿಕ್ ಎಕ್ಸೆಂಪ್ಷನ್ ಮಿತಿಯಾದ 3,00,000 ರೂಗಿಂತ ಹೆಚ್ಚಿನ ವಾರ್ಷಿಕ ಆದಾಯ ಇರುವವರೆಗೂ ಐಟಿಆರ್ ಸಲ್ಲಿಸಬೇಕು. ನೀವು ಆದಾಯ ತೆರಿಗೆ ಪಾವತಿಸುವ ಬಾಧ್ಯತೆ ಇಲ್ಲದಿದ್ದರೂ ಕೂಡ ಆಟಿಆರ್ ಸಲ್ಲಿಸುವುದು ಅಗತ್ಯ.
ಐಟಿಆರ್ ಮತಿನ್ಯಾಕೆ ಉಪಯೋಗ?
ನಿಮ್ಮ ಆದಾಯಕ್ಕೆ ಕಾನೂನು ಪ್ರಕಾರ ತೆರಿಗೆ ಪಾವತಿಸಬೇಕು. ಸದ್ಯ ಒಂದಷ್ಟು ಮಟ್ಟದ ಆದಾಯಕ್ಕೆ ಸರ್ಕಾರ ತೆರಿಗೆ ವಿನಾಯಿತಿ ಮತ್ತು ರಿಯಾಯಿತಿಗಳನ್ನು ನೀಡಿದೆ. ನೀವು ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ ಟಿಡಿಎಸ್ ಇತ್ಯಾದಿ ಆದಾಯ ತೆರಿಗೆ ಪಾವತಿಸಿದ್ದು, ಮತ್ತು ನಿಮ್ಮ ಒಟ್ಟಾರೆ ಆದಾಯವು ವಿನಾಯಿತಿ ಮಿತಿಯೊಳಗೆ ಇದ್ದಾಗ ನೀವು ಅದಾಗಲೇ ಕಟ್ಟಿರುವ ಆದಾಯ ತೆರಿಗೆ ಹಣವನ್ನು ರೀಇಂಬರ್ಸ್ಮೆಂಟ್ಗೆ ಮನವಿ ಮಾಡಬಹುದು. ಈ ರೀತಿ ನೀವು ರಿಟರ್ನ್ ಪಡೆಯಲು ಐಟಿಆರ್ ಏಕೈಕ ದಾರಿ.
ಮತ್ತೊಂದು ಉಪಯೋಗವೆಂದರೆ, ನಿಮಗೆ ಬ್ಯಾಂಕ್ ಸಾಲ, ವೀಸಾ ಅರ್ಜಿ ಅಥವಾ ಕೆಲ ಹಣಕಾಸು ವಹಿವಾಟುಗಳಿಗೆ ಇನ್ಕಮ್ ಪ್ರೂಫ್ ಬೇಕಾಗುತ್ತದೆ. ಅದಕ್ಕೆ ಐಟಿಆರ್ ಪ್ರಮುಖ ದಾಖಲೆಯಾಗುತ್ತದೆ.
ಇದನ್ನೂ ಓದಿ: ಈಕ್ವಿಟಿಯಿಂದ ಡೆಟ್ ಫಂಡ್ವರೆಗೆ ವಿವಿಧ ಮ್ಯುಚುವಲ್ ಫಂಡ್ಗಳಿಗೆ ವಿಭಿನ್ನ ಟ್ಯಾಕ್ಸ್ ಅನ್ವಯ; ಇಲ್ಲಿದೆ ಡೀಟೇಲ್ಸ್
ಡೆಡ್ಲೈನ್ನೊಳಗೆ ಐಟಿಆರ್ ಸಲ್ಲಿಸದಿದ್ದರೆ ಎಷ್ಟು ದಂಡ?
ಕಾಲಮಿತಿಯೊಳಗೆ ನೀವು ಐಟಿ ರಿಟರ್ನ್ ಸಲ್ಲಿಸದೇ ಹೋದಾಗ ದಂಡ ಹಾಗೂ ಬಡ್ಡಿ ವಿಧಿಸಲಾಗುತ್ತದೆ. ನಿಯಮದ ಪ್ರಕಾರ 5,000 ರೂ ಶುಲ್ಕ ತೆರಬೇಕು. ಒಂದು ವೇಳೆ, ನಿಮ್ಮ ಆದಾಯವು 5 ಲಕ್ಷ ರೂಗಿಂತ ಕಡಿಮೆ ಇದ್ದರೆ ಆಗ ಲೇಟ್ ಫೀ 1,000 ಮಾತ್ರವೇ.
ತಡಪಾವತಿ ಶುಲ್ಕ ಮಾತ್ರವಲ್ಲ, ನೀವು ತೆರಿಗೆ ಬಾಧ್ಯತೆ ಉಳಿಸಿಕೊಂಡಿದ್ದರೆ ಆ ಮೊತ್ತಕ್ಕೆ ತಿಂಗಳಿಗೆ ಶೇ. 1ರ ಬಡ್ಡಿಯಂತೆ ಶುಲ್ಕ ಕಟ್ಟಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




