AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜಿಟಲ್ ಪೇಮೆಂಟೇ ಎಲ್ಲಾ; ಅತಿಹೆಚ್ಚು ಜನಬಳಕೆಯಲ್ಲಿ ಯುಪಿಐ, ಅತಿಹೆಚ್ಚು ಪಾವತಿ ಮೌಲ್ಯದಲ್ಲಿ ಆರ್​ಟಿಜಿಎಸ್ ನಂ. 1

India's Digital Payment Surge: ಭಾರತದಲ್ಲಿ ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿದ್ದು, ಆರ್‌ಬಿಐ ದತ್ತಾಂಶವು ಇದನ್ನು ದೃಢಪಡಿಸಿದೆ. ಸಣ್ಣ ಮೊತ್ತದ ದೈನಂದಿನ ವ್ಯವಹಾರಗಳಿಗೆ ಯುಪಿಐ ಅತ್ಯಂತ ಜನಪ್ರಿಯವಾಗಿದ್ದರೆ, ದೊಡ್ಡ ಮೊತ್ತದ ಸಾಂಸ್ಥಿಕ ವಹಿವಾಟುಗಳಿಗೆ ಆರ್‌ಟಿಜಿಎಸ್ ಪ್ರಮುಖ ಮಾಧ್ಯಮವಾಗಿದೆ. ಭಾರತದ ಡಿಜಿಟಲ್ ಆರ್ಥಿಕತೆಯು ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ವಿಕಸನಗೊಳ್ಳುತ್ತಿರುವುದನ್ನು ಈ ಪ್ರವೃತ್ತಿಗಳು ಎತ್ತಿ ತೋರಿಸುತ್ತವೆ.

ಡಿಜಿಟಲ್ ಪೇಮೆಂಟೇ ಎಲ್ಲಾ; ಅತಿಹೆಚ್ಚು ಜನಬಳಕೆಯಲ್ಲಿ ಯುಪಿಐ, ಅತಿಹೆಚ್ಚು ಪಾವತಿ ಮೌಲ್ಯದಲ್ಲಿ ಆರ್​ಟಿಜಿಎಸ್ ನಂ. 1
ಡಿಜಿಟಲ್ ಪೇಮೆಂಟ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 19, 2026 | 4:16 PM

Share

ನವದೆಹಲಿ, ಮೇ 19: ಭಾರತದಲ್ಲಿ ಡಿಜಿಟಲ್ ಪೇಮೆಂಟ್​ಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನೂರಕ್ಕೆ ನೂರು ಡಿಜಿಟಲ್ ಪಾವತಿಯಾಗುವ ದಿನಗಳು ದೂರ ಇಲ್ಲ ಎನ್ನುವಂತಿದೆ ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶ. ಭಾರತದಲ್ಲಿ ಪೇಮೆಂಟ್ ಟ್ರಾನ್ಸಾಕ್ಷನ್ಗಳು (Payment transactions) ನಾಲ್ಕು ವರ್ಷದ ಹಿಂದಕ್ಕೆ ಹೋಲಿಸಿದರೆ ಶೇ. 316ರಷ್ಟು ಹೆಚ್ಚಿದೆ. ಇದರಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಪಾಲು ಅತಿಹೆಚ್ಚು ಇದೆ. ಆದರೆ, ಪಾವತಿ ಮೌಲ್ಯದ (payment value) ವಿಚಾರಕ್ಕೆ ಬಂದರೆ ಆರ್ಟಿಜಿಎಸ್ ನಂಬರ್ ಒನ್ ಎನಿಸಿದೆ.

ಸುದ್ದಿಯ ಮುಖ್ಯಾಂಶಗಳು

  • ಪಾವತಿ ವಿಚಾರದಲ್ಲಿ ಅತಿಹೆಚ್ಚು ಜನರು ಯುಪಿಐ ಬಳಸುತ್ತಾರೆ. ಶೇ 97ಕ್ಕೂ ಅಧಿಕ ಡಿಜಿಟಲ್ ಪಾವತಿಗಳು ಯುಪಿಐ ಮೂಲಕ ಆಗುತ್ತವೆ
  • ಹೆಚ್ಚಿನ ಮೊತ್ತದ ಪೇಮೆಂಟ್​ಗಳಿಗೆ ಆರ್​ಟಿಜಿಎಸ್ ಬಳಕೆ ಆಗುತ್ತಿದೆ. ಶೇ. 65ಕ್ಕೂ ಅಧಿಕ ಮೌಲ್ಯದ ಪಾವತಿಗಳು ಆರ್​ಟಿಜಿಎಸ್ ಮೂಲಕ ಆಗುತ್ತವೆ.
  • ಆರ್​ಟಿಜಿಎಸ್ ಮತ್ತು ನೆಫ್ಟ್ ಮೂಲಕ ಅತಿಹೆಚ್ಚಿನ ಮೊತ್ತದ ಪೇಮೆಂಟ್​ಗಳು ಆಗುತ್ತವೆ.

ಸಣ್ಣ ಮೊತ್ತದ ಪಾವತಿಗಳಲ್ಲಿ ಯುಪಿಐ (UPI) ಕಿಂಗ್

ದೇಶದಲ್ಲಿ ನಡೆಯುವ ಒಟ್ಟು ಸಣ್ಣ ಮೊತ್ತದ (ಚಿಲ್ಲರೆ/Retail) ಡಿಜಿಟಲ್ ಪಾವತಿಗಳ ಪೈಕಿ ಯುಪಿಐ ಬರೋಬ್ಬರಿ ಶೇ. 85.5 ರಷ್ಟು ಪಾಲನ್ನು ಹೊಂದುವ ಮೂಲಕ ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿದೆ.

ದಿನಸಿ ಖರೀದಿ, ತರಕಾರಿ, ಸಣ್ಣ ಪುಟ್ಟ ಅಂಗಡಿಗಳು ಮತ್ತು ದೈನಂದಿನ ವೈಯಕ್ತಿಕ ವ್ಯವಹಾರಗಳಿಗೆ ಜನರು ಯುಪಿಐ ಅನ್ನು ಅತಿ ಹೆಚ್ಚಾಗಿ ಅವಲಂಬಿಸಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.

ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

ದೊಡ್ಡ ಮೊತ್ತದ ವರ್ಗಾವಣೆಯಲ್ಲಿ ಆರ್‌ಟಿಜಿಎಸ್ (RTGS) ಕಿಂಗ್

ದೊಡ್ಡ ಮೊತ್ತದ (High-value) ಅಥವಾ ಸಗಟು ಹಣ ವರ್ಗಾವಣೆಯ ಮೌಲ್ಯದ ವಿಷಯಕ್ಕೆ ಬಂದರೆ ಆರ್‌ಟಿಜಿಎಸ್ ಶೇ. 68.6 ರಷ್ಟು ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ.

ಉದ್ಯಮಗಳು, ದೊಡ್ಡ ಕಂಪನಿಗಳು ಮತ್ತು ಸಂಸ್ಥೆಗಳ ನಡುವೆ ನಡೆಯುವ ಭಾರಿ ಪ್ರಮಾಣದ ಆರ್ಥಿಕ ವಹಿವಾಟುಗಳಿಗೆ ಆರ್‌ಟಿಜಿಎಸ್ ವ್ಯವಸ್ಥೆಯನ್ನೇ ಪ್ರಮುಖವಾಗಿ ಬಳಸಲಾಗುತ್ತಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯ ವಿಕಸನ

ಭಾರತದಲ್ಲಿ ಡಿಜಿಟಲ್ ಪಾವತಿ ಇಕೋಸಿಸ್ಟಂ (Digital Payments Ecosystem) ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿಧ ಪ್ಲಾಟ್​ಫಾರ್ಮ್​ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆರ್‌ಬಿಐ ವರದಿ ಉಲ್ಲೇಖಿಸಿದೆ.

ಸಣ್ಣ ಮತ್ತು ರಿಯಲ್ಟೈಮ್ ಪಾವತಿಗಳಿಗೆ ಯುಪಿಐ ಸುಲಭ ಹಾಗೂ ವೇಗದ ಆಯ್ಕೆಯಾಗಿದ್ದರೆ, ಸುರಕ್ಷಿತ ಹಾಗೂ ದೊಡ್ಡ ಮೊತ್ತದ ಸಾಂಸ್ಥಿಕ ವರ್ಗಾವಣೆಗೆ ಆರ್‌ಟಿಜಿಎಸ್ ಭರವಸೆಯ ಮಾಧ್ಯಮವಾಗಿದೆ. ಹಾಗೆಯೇ, ಯುಪಿಐ ಪಾವತಿಯಲ್ಲಿ ಹಣದ ಮೊತ್ತ ಮತ್ತು ಅವಧಿಗೆ ಮಿತಿ ಇರುವುದರಿಂದ ದೊಡ್ಡ ಮೌಲ್ಯದ ವಹಿವಾಟುಗಳಿಗೆ ಆರ್​ಟಿಜಿಎಸ್ ಬಳಸುವುದು ಜನರಿಗೆ ಅನಿವಾರ್ಯ ಹೌದು.

ಇದನ್ನೂ ಓದಿ: ದೇವಸ್ಥಾನಗಳ ಚಿನ್ನದ ನಗದೀಕರಣದ ಯಾವ ಯೋಜನೆಯೂ ಇಲ್ಲ; ವೈರಲ್ ಸುದ್ದಿ ಕೇವಲ ವದಂತಿ: ಕೇಂದ್ರ ಸರ್ಕಾರ ಸ್ಪಷ್ಟನೆ

ಭಾರತದಲ್ಲಿ ಪೇಮೆಂಟ್ ವಿವರ

2021ರ ಕ್ಯಾಲಂಡರ್ ವರ್ಷದಲ್ಲಿ 6,437 ಕೋಟಿ ಸಂಖ್ಯೆಯಷ್ಟು ಪೇಮೆಂಟ್ ಟ್ರಾನ್ಸಾಕ್ಷನ್ ಆಗಿತ್ತು. 2025ರಲ್ಲಿ ಅದು 26,819 ಕೋಟಿಗೆ ಹಗಿದೆ. ಇನ್ನು, ಇದೇ ಅವಧಿಯಲ್ಲಿ ಪೇಮೆಂಟ್ ಟ್ರಾನ್ಸಾಕ್ಷನ್ ಮೌಲ್ಯದ ವಿಚಾರಕ್ಕೆ ಬಂದರೆ 2021ರಲ್ಲಿ 1,741 ಲಕ್ಷ ಕೋಟಿ ರೂ ಮೌಲ್ಯದ ಪೇಮೆಂಟ್​ಗಳಾಗಿವೆ. 2025ರಲ್ಲಿ ಅದು 3,215 ಲಕ್ಷ ಕೋಟಿ ರೂಗೆ ಏರಿದೆ.

2025ರ ಜುಲೈನಿಂದ ಡಿಸೆಂಬರ್​ವರೆಗೆ ಆದ ಸಂಖ್ಯಾವಾರ ಪಾವತಿಗಳ ಪ್ರಮಾಣ ಹೀಗಿದೆ:

  • ಯುಪಿಐ: ಶೇ. 85.5
  • ಪಿಪಿಐ: ಶೇ. 3.6
  • ನೆಫ್ಟ್: ಶೇ. 3.6
  • ನ್ಯಾಕ್ (NACH- National Automated Clearing House): ಶೇ. 2.7
  • ಕಾರ್ಡ್ ಪೇಮೆಂಟ್: ಶೇ. 2.6
  • ಐಎಂಪಿಎಸ್: ಶೇ. 1.8
  • ಆರ್​ಟಿಜಿಎಸ್: ಶೇ. 0.1
  • ಚೆಕ್: ಶೇ. 0.2

ಪೇಮೆಂಟ್ ಮೌಲ್ಯದಲ್ಲಿ ವಿವಿಧ ಪ್ಲಾಟ್​ಫಾರ್ಮ್​ಗಳ ಪಾಲು

  • ಆರ್​ಟಿಜಿಎಸ್: ಶೇ. 68.6
  • ನೆಫ್ಟ್: ಶೇ. 14.9
  • ಯುಪಿಐ: ಶೇ. 9.5
  • ಐಎಂಪಿಎಸ್: ಶೇ. 2.3
  • ಚೆಕ್: ಶೇ. 2.1
  • ನ್ಯಾಕ್: ಶೇ. 1.6
  • ಪಿಪಿಐ: ಶೇ. 0.1

ಇದನ್ನೂ ಓದಿ: ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್​ಗಳು; ಯಾಕಿದು ಪ್ರತಿಭಟನೆ?

ಆರ್‌ಬಿಐನ ಪೇಮೆಂಟ್ಸ್ ಸಿಸ್ಟಂ ರಿಪೋರ್ಟ್​ನ ಈ ದತ್ತಾಂಶವು ಭಾರತೀಯ ಆರ್ಥಿಕತೆಯಲ್ಲಿ ಡಿಜಿಟಲ್ ಕ್ರಾಂತಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಸಾಮಾನ್ಯ ನಾಗರಿಕನ ಚಹಾದ ಅಂಗಡಿಯ ಪಾವತಿಯಿಂದ ಹಿಡಿದು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಕೋಟ್ಯಂತರ ರೂಪಾಯಿಗಳ ವ್ಯವಹಾರದವರೆಗೆ ಎಲ್ಲವೂ ಡಿಜಿಟಲ್ ವ್ಯವಸ್ಥೆಯಡಿ ಸುರಕ್ಷಿತವಾಗಿ ಹಂಚಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!