AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

Know how Google Maps finds out which vehicles you used to travel: ಸ್ಮಾರ್ಟ್​ಫೋನ್​ನ ಲೊಕೇಶನ್ ಆನ್ ಆಗಿದ್ದುಬಿಟ್ಟರೆ ಸಾಕು, ಮೊಬೈಲ್ ಹಿಡಿದು ಎಲ್ಲೆಲ್ಲಿ, ಹೇಗೆಲ್ಲಾ ಸಾಗುತ್ತೀರಿ ಎಂಬುದೆಲ್ಲವೂ ಗೂಗಲ್ ಮ್ಯಾಪ್ಸ್​ನಲ್ಲಿ ದಾಖಲಾಗಿರುತ್ತದೆ. ಮ್ಯಾಪ್ಸ್​ನ ನಿಮ್ಮ ಟೈಮ್​ಲೈನ್​ನಲ್ಲಿ ನೀವಿದನ್ನು ನೋಡಬಹುದು. ಮೊಬೈಲ್​ನ ಜಿಪಿಎಸ್, ಬ್ಲೂಟೂಥ್, ಚಲನೆಯ ವೇಗ, ಅಲುಗಾಟ ಇತ್ಯಾದಿ ದತ್ತಾಂಶವನ್ನು ಬಳಸಿ ನೀವು ಯಾವ ವಾಹನದಲ್ಲಿ ಹೋಗಿರಬಹುದು ಎಂದು ಅದು ಅಂದಾಜಿಸುತ್ತದೆ.

ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?
ಗೂಗಲ್ ಮ್ಯಾಪ್ಸ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 18, 2026 | 4:07 PM

Share

ತಂತ್ರಜ್ಞಾನ, ದತ್ತಾಂಶ ಮತ್ತು ಬುದ್ಧಿಮತ್ತೆ ಸೇರಿದರೆ ಅದ್ಭುತ ಸೇವೆ ಸೃಷ್ಟಿಯಾಗುತ್ತದೆ. ಅದುವೇ ಗೂಗಲ್ ಮ್ಯಾಪ್ಸ್. ಬಹುತೇಕ ಮೊಬೈಲ್ ಬಳಕೆದಾರರು ಮ್ಯಾಪ್ಸ್ ಬಳಸುತ್ತಾರೆ. ಅಷ್ಟರಮಟ್ಟಿಗೆ ಗೂಗಲ್​ನ ಈ ನಕ್ಷೆಯ ಆ್ಯಪ್ (Google Maps) ಉಪಯುಕ್ತ ಎನಿಸಿದೆ. ಗೂಗಲ್ ಈ ಭೂಮಿಯ ಮೂಲೆ ಮೂಲೆಯನ್ನೂ ಹೊಕ್ಕಿ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಸೆಟಿಲೈಟ್, ವಿಮಾನ, ಸ್ಟ್ರೀಟ್​ವ್ಯೂ ವಾಹನಗಳು ಸೆರೆಹಿಡಿಯುವ ಚಿತ್ರಗಳನ್ನು ಬಳಸುತ್ತದೆ. ಅದರ ಜೊತೆಗೆ ಏಜೆನ್ಸಿ ಫೀಡ್​ಗಳು, ಸರ್ಕಾರಗಳು ಒದಗಿಸುವ ದತ್ತಾಂಶ, ಮೊಬೈಲ್ ಬಳಕೆದಾರರ ಲೊಕೇಶನ್ ಮಾಹಿತಿ ಇತ್ಯಾದಿ ಅಗಾಧ ದತ್ತಾಂಶವನ್ನು ಬಹಳ ಜಾಣತನದಿಂದ ಬಳಸಿ ಅದ್ಬುತವಾದ ಸೇವೆ ಒದಗಿಸುತ್ತದೆ ಗೂಗಲ್ ಮ್ಯಾಪ್ಸ್.

ಯಾವ ವಾಹನದಲ್ಲಿ ಹೋಗಿದ್ದು ಎಂದು ಮ್ಯಾಪ್ಸ್​ಗೆ ಹೇಗೆ ಗೊತ್ತಾಗುತ್ತದೆ?

ನೀವು ಗೂಗಲ್ ಮ್ಯಾಪ್ಸ್​ನನಲ್ಲಿನ ನಿಮ್ಮ ಪ್ರೊಫೈಲ್​ನಲ್ಲಿರುವ ಟೈಮ್​ಲೈನ್​ಗೆ ಹೋದಾಗ ನಿಮ್ಮ ಟ್ರಾವಲ್ ಹಿಸ್ಟರಿಯೇ ಅಲ್ಲಿರುತ್ತದೆ. ನೀವು ಲೊಕೇಶನ್ ಆನ್ ಮಾಡಿಕೊಂಡಿದ್ದರೆ ಇದು ದಾಖಲಾಗಿರುತ್ತದೆ. ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಎಷ್ಟು ಹೊತ್ತಿಗೆ ಹೋದಿರಿ, ಯಾವ ವಾಹನದಲ್ಲಿ ಹೋದಿರಿ ಎಂದೆಲ್ಲಾ ವಿವರವನ್ನು ದಾಖಲು ಮಾಡಿಕೊಳ್ಳುತ್ತದೆ.

ಇದನ್ನೂ ಓದಿ: ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಗಳು; ರಿಲಾಯನ್ಸ್ ನಂತರ ಏರ್ಟೆಲ್; ಎಚ್​ಡಿಎಫ್​ಸಿಯನ್ನು ಹಿಂದಿಕ್ಕಿದ ಭಾರತೀಯ ಟೆಲಿಕಾಂ ಕಂಪನಿ

ಸೈಕಲ್, ದ್ವಿಚಕ್ರ ವಾಹನ, ಕಾರು, ಬಸ್ಸು, ರೈಲುಗಳಲ್ಲಿ ಪ್ರಯಾಣ ಮಾಡಿದರೆ ಅದನ್ನು ಬಹುತೇಕ ನಿಖರವಾಗಿ ತಿಳಿಸುತ್ತದೆ. ಅದು ಹೇಗೆ ಸಾಧ್ಯ? ಇದೆಲ್ಲವೂ ಕೂಡ ಬಹುತೇಕ ನಿಮ್ಮ ಫೋನ್​ನ ಜಿಪಿಎಸ್ ಬಳಸಿ ಮಾಡಲಾಗುವ ಅಂದಾಜು. ಆದರೂ ಕೂಡ ಯಾವ ವಾಹನದಲ್ಲಿ ಪ್ರಯಾಣಿಸಿದ್ದು ಎಂದು ಹೇಗೆ ಪತ್ತೆ ಮಾಡುತ್ತೆ? ಇದು ಬಹಳ ಕುತೂಹಲದ ಸಂಗತಿ.

ಪ್ರಯಾಣದ ವೇಗ, ಅಲುಗಾಟ, ಮಾರ್ಗ ಇತ್ಯಾದಿ ಗಮನಿಸುವ ಗೂಗಲ್ ಮ್ಯಾಪ್ಸ್

ಪ್ರಯಾಣದ ವೇಗದ ಮೇಲೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದಿರಿ ಎಂದು ಗೂಗಲ್ ಅಂದಾಜು ಮಾಡುತ್ತದೆ. 6-8 ಕಿಮೀ ವೇಗದಲ್ಲಿ ಆಗಿದ್ದರೆ ಸೈಕಲ್ ಎಂದು, 15-25 ಕಿಮೀ ವೇಗವಿದ್ದರೆ ಅದು ದ್ವಿಚಕ್ರ ವಾಹನ ಎಂದು ಬಗೆಯುತ್ತದೆ. ಇನ್ನೂ ಹೆಚ್ಚಿನ ವೇಗವಾದರೆ ಕಾರು, ಬಸ್ಸು ಇತ್ಯಾದಿ ಎಂದು ಭಾವಿಸುತ್ತದೆ.

ಗೂಗಲ್ ಕೇವಲ ವೇಗವೊಂದನ್ನೇ ನೆಚ್ಚಿಕೊಳ್ಳುವುದಿಲ್ಲ. ನಡೆಯುವಾಗ ಆಗುವ ಅಲುಗಾಟ, ಬೈಕ್ ಓಡಿಸುವಾಗಿನ ಅಲುಗಾಟ, ಕಾರ್ ಎಂಜಿನ್​ನ ವೈಬ್ರೇಶನ್​ನಲ್ಲಿ ಕುಳಿತಾಗಿನ ಅಲುಗಾಟ ಇವೆಲ್ಲವೂ ಪರಿಸ್ಪರ ಭಿನ್ನವಾಗಿರುತ್ತದೆ.

ಇದನ್ನೂ ಓದಿ: ಪೇಟಿಎಂನಲ್ಲಿ ಹೊಸ ಫೀಚರ್; ಪೋಷಕರಿಂದ ಮಕ್ಕಳು ಪಡೆಯಬಹುದು ಆನ್​ಲೈನ್ ಪಾಕೆಟ್ ಮನಿ

ಇಷ್ಟು ಮಾತ್ರವಲ್ಲ, ನೀವು ಯಾವ ಮಾರ್ಗದಲ್ಲಿ ಹೋಗುತ್ತಿದ್ದೀರಿ ಎಂಬುದರ ಮೇಲೆ ನೀವಿರುವ ವಾಹನವನ್ನು ಅಂದಾಜಿಸಬಲ್ಲುದು. ರೈಲ್ವೆ ಟ್ರ್ಯಾಕ್​ನಾದ್ಯಂತ ನಿಮ್ಮ ಪ್ರಯಾಣ ಇದ್ದರೆ ನೀವು ರೈಲಿನಲ್ಲಿ ಹೋಗುತ್ತಿದ್ದಿರಬಹುದು. ಬಸ್ ಮಾರ್ಗದಲ್ಲಿ ಹೋಗುವುದು, ಬಸ್ ನಿಲ್ದಾಣಗಳಲ್ಲಿ ನಿಲ್ಲುವುದು ಇತ್ಯಾದಿ ಇದ್ದಾಗ ನೀವು ಬಸ್​ನಲ್ಲಿ ಪ್ರಯಾಣಿಸಿದ್ದಿರಬಹುದು ಎಂದು ಗೆಸ್ ಮಾಡುತ್ತೆ ಗೂಗಲ್.

ಹೀಗಾಗಿ, ಗೂಗಲ್ ಮ್ಯಾಪ್ಸ್​ನಲ್ಲಿ ನಿಮ್ಮ ಟೈಮ್​ಲೈನ್​ಗೆ ಹೋದಾಗ ಟ್ರಾವಲ್ ಹಿಸ್ಟರಿಯ ವಿವರ ಕಂಡು ನಿಮಗೆ ಅಚ್ಚರಿ ಆಗದೇ ಇರದು. ಬೆಂಗಳೂರಿನಲ್ಲಿ ಗೂಗಲ್ ಮ್ಯಾಪ್ಸ್ ಹೆಚ್ಚು ಕನ್​ಫ್ಯೂಸ್ ಮಾಡಿಕೊಳ್ಳುವುದು ಬೈಕ್ ಮತ್ತು ಸೈಕಲ್ ವಿಚಾರಕ್ಕೆ. ನಗರದ ಟ್ರಾಫಿಕ್​ನಲ್ಲಿ ಬೈಕ್​ನಲ್ಲಿ ಪ್ರಯಾಣಿಸುವ ವೇಗ ಬಹುತೇಕ ಸೈಕಲ್​ನಷ್ಟೇ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​
RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​